ಸಂಸ್ಕೃತಿ ಸಂಗಾತಿ
ಸುಮತಿ ಪಿ. ಅವರ ಲೇಖನ
ಕರ್ನಾಟಕದ ಬಹು ಸಂಸ್ಕೃತಿಯ
ಪರಂಪರೆಗೆ ಕರಾವಳಿ ಕರ್ನಾಟಕದ
ಕೊಡುಗೆಗಳು ಮತ್ತು
ವರ್ತಮಾನದ ಸವಾಲುಗಳು’
*ಕರ್ನಾಟಕದ ಬಹು ಸಂಸ್ಕೃತಿಯ ಪರಂಪರೆಗೆ ಕರಾವಳಿ ಕರ್ನಾಟಕದ ಕೊಡುಗೆಗಳು ಮತ್ತು ವರ್ತಮಾನದ ಸವಾಲುಗಳು *
ಸಾವಿರಾರು ವರ್ಷಗಳಿಂದ ಬಾಳಿ ಬದುಕಿನಲ್ಲಿ ಬಿಳಲು ಬಿಟ್ಟು ವಿಸ್ತಾರವಾಗಿ ಬೆಳೆದು ನೆರಳನ್ನೀಯುತ್ತ ಸಾರ್ಥಕ ಮಾರ್ಗದಲ್ಲಿ ನಡೆಯುತ್ತಿರುವ ಕರ್ನಾಟಕದ ಬಹುಸಂಸ್ಕೃತಿ ಒಂದು ಸನಾತನ ವೃಕ್ಷದಂತೆ .ಕಾಲದಿಂದ ಮತ್ತು ತತ್ವದಿಂದ ಅದು ಸನಾತನ ಕರ್ನಾಟಕದ ಬಹು ಸಂಸ್ಕೃತಿಯ ಪರಂಪರೆಯಲ್ಲಿ ಒಟ್ಟು ಜನಜೀವನದ ಅಂತರಂಗದ ಅನುಭವದ ಪ್ರಧಾನ ಅಂಶವಾಗಿ ಗೋಚರಿಸುತ್ತದೆ. ಅದು ನಿತ್ಯ ನೂತನವಾಗಿ ಅರಳುತ್ತದೆ
ಕರ್ನಾಟಕದ ಸಂಕೀರ್ಣ ಸಂಸ್ಕೃತಿಯ ಪರಂಪರೆಗೆ ಕರಾವಳಿ ಕರ್ನಾಟಕದ ಕೊಡುಗೆ ಬಹಳಷ್ಟು ಇದೆ. ಕರಾವಳಿ ಕರ್ನಾಟಕದ ಸಂಸ್ಕೃತಿ ಬೇರೆಯಲ್ಲ ಭಾರತದ ಸಂಸ್ಕೃತಿ ಬೇರೆಯಲ್ಲ. ವೈವಿಧ್ಯತೆಯಲ್ಲಿ ಏಕತೆಯನ್ನು ಬಿಂಬಿಸುವಂತಹ ಬಹು ಸುಂದರ ಸಂಸ್ಕೃತಿ ಕರಾವಳಿ ಕರ್ನಾಟಕದ್ದು.
ಸಂಸ್ಕೃತಿ ಎಂದರೆ ಜೀವನಕ್ರಮ.
ಸಂಸ್ಕೃತಿ ಎನ್ನುವುದು ಮಾನವ ಸಮಾಜಗಳಲ್ಲಿ ಕಂಡುಬರುವ ಸಾಮಾಜಿಕ ನಡವಳಿಕೆ ,ಸಂಸ್ಥೆಗಳು ಮತ್ತು ರೂಢಿಗಳನ್ನು ಒಳಗೊಂಡಿರುವ ಒಂದು ಪರಿಕಲ್ಪನೆಯಾಗಿದೆ , ಜೊತೆಗೆ ಜ್ಞಾನ , ನಂಬಿಕೆಗಳು , ಕಲೆಗಳು , ಕಾನೂನುಗಳು , ಪದ್ಧತಿಗಳು , ಸಾಮರ್ಥ್ಯಗಳು ಇವೆಲ್ಲವನ್ನೂ ಒಳಗೊಂಡಿರುತ್ತದೆ.
ಕರಾವಳಿ ಕರ್ನಾಟಕದಲ್ಲಿ ವಿವಿಧ ಧರ್ಮಗಳಿಗೆ ಸೇರಿರುವ,ವಿವಿಧ ಭಾಷೆಗಳನ್ನಾಡುವ, ವಿವಿಧ ಜಾತಿಯ, ವಿವಿಧ ಸಂಸ್ಕೃತಿಯ ಜನರು ತಮ್ಮದೇ ಆದ ಕೊಡುಗೆಗಳಿಂದ ರಾಜ್ಯದ ಸಂಸ್ಕೃತಿಯನ್ನು ಶ್ರೀಮಂತ ಗೊಳಿಸಿದ್ದಾರೆ
ಕರಾವಳಿ ಪ್ರದೇಶದ ಪುರಾತನ ಇತಿಹಾಸ, ಅನನ್ಯ ಭೌಗೋಳಿಕ ರಚನೆ, ವೈವಿಧ್ಯಮಯ ಜನ ಸಮುದಾಯ, ವಿಭಿನ್ನ ಸಂಪ್ರದಾಯಗಳು ಮತ್ತು ಆಚರಣೆಗಳು, ಪ್ರಾಚೀನ ಪರಂಪರೆ ಪ್ರಭಾವಗಳು ಕರ್ನಾಟಕದ ಸಂಕೀರ್ಣ ಸಂಸ್ಕೃತಿಯನ್ನು ರೂಪಿಸಿವೆ.
ನಮ್ಮ ಕರಾವಳಿ ಭಾಗದಲ್ಲಿದ್ದಂತಹ ಯಕ್ಷಗಾನ, ಕಂಬಳ, ಕೋಲ, ದಕ್ಷಿಣ ಕನ್ನಡದ ಸುಳ್ಯದಲ್ಲಿ ಹೆಚ್ಚಾಗಿ ಕಾಣುವ ಆಟಿಯಲ್ಲಿ ಬರುವ ಆಟಿಕಳೆಂಜ ದೀಪಾವಳಿ ಹಬ್ಬದಲ್ಲಿ ಬರುವ ಮಾಂಕಾಳಿ ಕುಣಿತ,ಹುಲಿ ಕುಣಿತ,ಗೋಂದುಳು ಕುಣಿತ,ಜಾತ್ರೆ,ಉತ್ಸವ ನಾಗಾರಾಧನೆ,ಹೋಳಿ ಕುಣಿತ,ಇವೆಲ್ಲಾ ಕರಾವಳಿ ಕರ್ನಾಟಕದ ಜನರ ನಂಬಿಕೆ, ನಡವಳಿಕೆ, ಆಚರಣೆಯನ್ನು ಬಿಂಬಿಸುವಂತಹ ಸಾಂಸ್ಕೃತಿಕ ಲೋಕಕ್ಕೆ ಮೆರುಗನ್ನು ನೀಡುವಂತಹ ಅಂಶಗಳಾಗಿವೆ .
ಇನ್ನೂ ಉದ್ಯಮದಲ್ಲಿ ಹೇಳುವುದಾದರೆ ಗೃಹ ಕೈಗಾರಿಕೆಗಳು.ಗೃಹ ಕೈಗಾರಿಕೆಗಳು ಬೀಡಿ ಉದ್ಯಮ , ಗೇರುಬೀಜ ಕಾರ್ಖಾನೆ ಜನರಿಗೆ ಉದ್ಯೋಗವನ್ನು ನೀಡುತ್ತಿವೆ .
ಚಲನಚಿತ್ರಕ್ಕೆ ಸಂಬಂಧಿಸಿದಂತೆ ಕರಾವಳಿ ಕರ್ನಾಟಕದಿಂದ ಅನೇಕ ಚಲನಚಿತ್ರಗಳು ಲೋಕಾರ್ಪಣೆಯಾಗಿದ್ದು ರಾಷ್ಟ್ರಪ್ರಶಸ್ತಿ ವಿಜೇತ ಆಗಿರುವುದು ಹೆಮ್ಮೆಯ ವಿಷಯ. ಜೀವನ ಕ್ರಮದಲ್ಲಿ ಹೇಳುವುದಾದರೆ ಕರಾವಳಿ ಕರ್ನಾಟಕದ ಜನರು ಸಹನಾಮಯಿಗಳು, ಶ್ರಮಜೀವಿಗಳು, ಕೃಷಿಕರು, ಕೈಗಾರಿಕೋದ್ಯಮಿಗಳು ಹೀಗೆ ಎಲ್ಲಾ ಉತ್ಪಾದನಾ ಕ್ಷೇತ್ರದಲ್ಲೂ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.ಇನ್ನು ಕಲೆ ಮತ್ತು ವಾಸುಶಿಲ್ಪದಲ್ಲಿ ಹೇಳುವುದಾದರೆ ಕರಾವಳಿ ಕರ್ನಾಟಕದ ಕೆಲವೊಂದು ದೇವಸ್ಥಾನಗಳು, ಗೊಮ್ಮಟೇಶ್ವರ ಮೂರ್ತಿ, ದೈವಸ್ಥಾನಗಳು ಕಲೆ ಮತ್ತು ವಾಸ್ತುಶಿಲ್ಪದ ಮೆರುಗನ್ನು ಹೆಚ್ಚಿಸಿವೆ. ಕರಾವಳಿ ಕರ್ನಾಟಕದಲ್ಲಿ ಕನ್ನಡಿಗರ ಸಂಸ್ಕೃತಿ,ತುಳುವ ಸಂಸ್ಕೃತಿ ಬಹಳಷ್ಟು ಶ್ರೀಮಂತವಾಗಿದೆ. ಕೆಲವೊಂದು ಆಚರಣೆಗಳು,ರೂಡಿಗಳು ಸಂಪ್ರದಾಯಗಳು ಸಂಕೀರ್ಣ ಸಂಸ್ಕೃತಿಗೆ ಕೊಡುಗೆಯಾಗಿ ಕಾಣಸಿಗುತ್ತವೆ.
ಸಾಹಿತ್ಯ ಕ್ಷೇತ್ರದಲ್ಲಿ ಹೇಳುವುದಾದರೆ ಮೂಡಬಿದಿರೆಯ ರತ್ನಾಕರವರ್ಣಿ, ಕಾರ್ಕಳದ ವೀರಪ್ಪ ಮೊಯ್ಲಿ, ಕೋಟದ ಶಿವರಾಮ ಕಾರಂತರು ಹೀಗೆ ಅನೇಕ ಸಾಹಿತಿಗಳು, ಬರಹಗಾರರು ನಮ್ಮ ಕರಾವಳಿ ಕರ್ನಾಟಕವನ್ನು ಬೌದ್ಧಿಕವಾಗಿ ಬೆಳೆಸಿದವರು.ರಾಜಕೀಯ ಕ್ಷೇತ್ರದಲ್ಲಿ ಕೂಡ ಕರಾವಳಿ ಕರ್ನಾಟಕದ ಇಂದು ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ
ಒಟ್ಟಿನಲ್ಲಿ ಹೇಳುವುದಾದರೆ ಕರ್ನಾಟಕದ ಸಾಂಸ್ಕೃತಿಕ ಪರಂಪರೆಗೆ ಕರಾವಳಿ ಕರ್ನಾಟಕದ
ವಿಶಿಷ್ಟವಾದದ್ದು ಹಾಗೂ ವಿಶೇಷವಾದದ್ದು
ಇಂತಹ ಸುಸಂಸ್ಕೃತ ಸಂಸ್ಕೃತಿಗೆ ಇರುವ ವರ್ತಮಾನದ ಸವಾಲುಗಳ ಬಗ್ಗೆ ಹೇಳುವುದಾದರೆ ನಮ್ಮ ಈ ಸುಸಂಸ್ಕೃತ ಸಂಸ್ಕೃತಿಗೆ ಧಕ್ಕೆ ಆಗುತ್ತಿದೆ.ಪರಂಪರಾಗತವಾಗಿ ಬೆಳೆದು ಬಂದ ಜೀವನ ಕ್ರಮಗಳು, ಕೈಗಾರಿಕೆಗಳು,ರೂಡಿಗಳು ಸಂಪ್ರದಾಯಗಳು ಎಲ್ಲವೂ ಬದಲಾವಣೆಯನ್ನು ಕಾಣುತ್ತಿವೆ. ಸಂಕೀರ್ಣ ಸಂಸ್ಕೃತಿಯಲ್ಲಿ ಗೊಂದಲ ಘರ್ಷಣೆಗಳು, ಉಂಟಾಗುತ್ತಿವೆ ನಮ್ಮ ಸಂಸ್ಕೃತಿಯಿಂದ ದೂರ ಉಳಿದು ವಿದೇಶ ಸಂಸ್ಕೃತಿಯನ್ನು ಅನುಸರಿಸುವ ಧಾವಂತದಲ್ಲಿ ಅನೇಕ ಎಡವಟ್ಟುಗಳು ಆಗುತ್ತಿವೆ. ಆಧುನಿಕತೆಯ ದೃಷ್ಟಿಯಲ್ಲಿ ನಮ್ಮ ಮೂಲ ಸಂಸ್ಕೃತಿಯ ಸಾರವನ್ನು ಮರೆತುಬಿಟ್ಟು ಗೊಂದಲವನ್ನು ಅನುಭವಿಸುವಂತಹ ಪರಿಸ್ಥಿತಿ ಇದೆ .
ಪರಂಪರಾನುಗತವಾಗಿ ಬಂದಂತಹ ಕಲೆಗಳು ಇರಬಹುದು ಆಚರಣೆಗಳು ಇರಬಹುದು ಕೆಲವೊಂದು ಉದ್ಯೋಗಗಳು ಇರಬಹುದು ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿವೆ. ಇದರಿಂದ ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ಆಗುತ್ತಿದೆ ಎಂದು ಹೇಳಬಹುದು.ಅನೇಕ ಜಾತಿ ಆಧಾರಿತ, ಧರ್ಮ ಆಧಾರಿತ ಸಂಘ ಸಂಸ್ಥೆಗಳು ಹುಟ್ಟಿಕೊಂಡಿವೆ. ಬಹುಸಂಸ್ಕೃತಿಯು ಕೆಲವು ಗುಂಪುಗಳ ಒಳಿತಿಗೆ ಸವಲತ್ತುಗಳನ್ನು ನೀಡುತ್ತದೆ.ಆ ಮೂಲಕ ಅಲ್ಪಸಂಖ್ಯಾತರ ಹಿತಾಸಕ್ತಿಯ ಪರವಾಗಿ ಸಾಮಾನ್ಯ ಒಳಿತನ್ನು ಸಂಭಾವ್ಯವಾಗಿ ನಾಶಪಡಿಸುತ್ತದೆ . ಜನರು ತಮ್ಮನ್ನು ಒಂದು ಸಾಮಾನ್ಯ ನಾಗರಿಕರಂತೆ ನೋಡುವುದಕ್ಕಿಂತ ಹೆಚ್ಚಾಗಿ ಜನಾಂಗೀಯ ಅಥವಾ ಜನಾಂಗೀಯ ಗುಂಪುಗಳ ಸದಸ್ಯರಂತೆ ನೋಡಿದರೆ ಏಕತೆ ಅಸಾಧ್ಯವಾಗಬಹುದು. ಬಹುಸಾಂಸ್ಕೃತಿಕತೆಯು ಸಮಾನ ವೈಯಕ್ತಿಕ ಹಕ್ಕುಗಳ ಕಲ್ಪನೆಯನ್ನು ದುರ್ಬಲಗೊಳಿಸುತ್ತದೆ,
ಆದುದರಿಂದ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಕರ್ತವ್ಯ ಬಹಳಷ್ಟಿದೆ ಇಂದಿನ ಯುವಕರಾದ ನಾವು ನಮ್ಮ ಈ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಕೊಡುಗೆಗಳ ಅಗತ್ಯವನ್ನು ಮನಗಂಡು ಅದರ ಮಹತ್ವವನ್ನು ಹೆಚ್ಚಿಸುತ್ತಾ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ನಾವು ಕಟ್ಟಿಬದ್ಧರಾಗೋಣವೇ?
ಡಾ.ಸುಮತಿ ಪಿ