ಅಪ್ಪಂದಿರ ದಿನದ ವಿಶೇಷ-
ಭಾರತಿ ರವೀಂದ್ರ
ಮಾತನಾಡುವ ಹಕ್ಕಿ

ಮಾತನಾಡುವ ಹಕ್ಕಿ ಮೌನವಾದಾಗ ವೈದ್ಯರು ಹೇಳಿದ್ದು ‘ಅವರು ಕೋಮಾದಲ್ಲಿ ಇದ್ದಾರೆ ‘ ಬರ ಸಿಡಿಲು ಬಡಿದು ಹೋಗಿತ್ತು ಆ ಕ್ಷಣ, ಅಪ್ಪ ಅದೇ ಮೌನದಲ್ಲಿ ನೀವು ಹದಿನೈದು ದಿನ ಕಳೆದು ಹಾಗೆಯೆ ಮಾತನಾಡದೆ ಮರಳಿ ಬಾರದ ಲೋಕಕ್ಕೆ ಹೋಗಿದ್ದು, ಯಾಕಪ್ಪ ಇಷ್ಟು ಅವಸರ ಏನಿತ್ತು,
ಅಪ್ಪ ಅಮ್ಮ ಬಾಳಿಗೆರಡು ಕಣ್ಣುಗಳು, ಹ್ಯಾಗೆ ನೋಡಲಿ ಈ ಜಗವನ್ನು, ನಿಮ್ಮ ಸತ್ಯ ಪರ,ಶಿಸ್ತು ಚೂರು ಅನ್ಯಾಯ ಕಂಡಲ್ಲಿ, ಕೆಂಡ ವಾಗೋ ಪರಿ, ಅವೆಲ್ಲ ನಮ್ಮಲ್ಲಿ ಬರಲಿ, ಇದ್ದಿದ್ದರ ಲ್ಲಿ ಪಡುವ ಖುಷಿ, ನೀವು ಶಿಕ್ಷಕರಾಗಿದ್ದು ಎಷ್ಟು ಕಟ್ಟು ನಿಟ್ಟಿನ ಗುರುಗಳು, ಆದರೆ ಅದೇ ನೀವು ಎಷ್ಟೊಂದು ಬಡ ಮಕ್ಕಳಿಗೆ ಯಾರಿಗೂ ತಿಳಿಯದೆ ಮಾಡುವ ಸಹಾಯ, ನಿಮ್ಮ ನಂತರ ನಮಗೆ ಗೊತ್ತಾಗಿದ್ದು, ಒರಟು ಹಲಸಿನ ಹಣ್ಣಿನ ತರಹ ಮೇಲೆ ಕಠಿಣ ಮೃದು ಮನಸ್ಸಿನ ನೀವು, ಮನೆಗೆ ನೀವು ದೊಡ್ಡವ ರಾಗಿ ನಿಮ್ಮ ಸಹೋದರ ಸಹೋದರಿ ಯರ ಮೇಲೆ ಇರುವ ಪ್ರೀತಿಗೆ ನಾವೇ ಬೆರಗು,ಅವರೆಲ್ಲರ ಜೊತೆಗೆ ನಾವು ಕೂಡ ನಿಮ್ಮನ್ನು *ಅಣ್ಣಾ* ಅಂತಲೇ ಕರಿತಾ ಇದ್ದಿದ್ದು, ಸಣ್ಣ ಸಣ್ಣದಕ್ಕೆ ಸಂತಸ ಪಡುವ ನಿಮ್ಮ ಗುಣ,,
ಎಲ್ಲಕ್ಕೂ ಮಿಗಿಲಾಗಿ ನಿಮ್ಮ ಓದುವ ಅಭಿರುಚಿ ನಿಜ ಅಪ್ಪ ಅದು ನಿಮ್ಮಿಂದಲೆ ನನಗೆ ಸಿಕ್ಕ ಬಳುವಳಿ, ಚಿಕ್ಕವರಿದ್ದಾಗ ನಿಮ್ಮ ಶಿಸ್ತು ಕ್ರಮಕ್ಕೆ ನಾವೆಲ್ಲ ಎಷ್ಟೊಂದು ಮಾತನಾಡಲು ಹೆದರಿ ಹೇಳದೆ ಉಳಿದ ಮಾತುಗಳು ಹಲವು ಅವನೇಲ್ಲ ಕೇಳಲು ನೀವು ಇರಬೇಕಿತ್ತು ನಮಗಿನ್ನು ನೀವು ಬೇಕಿತ್ತು ಅಪ್ಪ, ಅಮ್ಮನ ಹಣೆಯ ಕಾಸಿನಗಲ ಕುಂಕುಮ ವಾಗಿ ಇರಬೇಕಿತ್ತು ಅಪ್ಪ,
——————–
ಭಾರತಿ ರವೀಂದ್ರ