ಶಂಕರಾನಂದ ಹೆಬ್ಬಾಳ ಅವರ ಗಜಲ್

ಅನುರಾಗ ಮೂಡಿಸಿ ಅನುಬಂಧಕೆ ಮುನ್ನುಡಿ
ಬರೆದೆಯಲ್ಲ
ಅನುಮಾನ ತೊರೆದು ಬಾಳಕಾವ್ಯದಿ ಪ್ರೇಮಪುಟ
ತೆರೆದೆಯಲ್ಲ

ಅನುಕ್ಷಣವೂ ಜೊತೆಗಿದ್ದು ಎದೆಯ ಪೀಠದಿ
ನಗುವೆಯೇಕೆ
ಅನನ್ಯತೆಯ ತೋರುತ ಹೃದಯ ಮಂದಿರದಿ
ಮೆರೆದೆಯಲ್ಲ

ಅನುಮತಿಯ ಬೇಡದೆ ನಲ್ಲನ ನು ವರಿಸುತ
ಕುಳಿತಿರುವೆ
ಅನುಪಮ ಚೆಲುವಿನಲಿ ಚುಂಬನದ ಸವಿಯ
ಎರೆದೆಯಲ್ಲ

ಅನುರೂಪ ಜೋಡಿಯ ಅಹರ್ನಿಶಿ ಬಯಸಿ
ನಿಂತಿರುವೆಯಲ್ಲ
ಅನುವಾಗುತ ಸರ್ವ ಸಮಯದಿ ಪ್ರೀತಿಗಾಗಿ
ಮೊರೆದೆಯಲ್ಲ

ಅನ್ಯೋನ್ಯ ಭಾವದಿ ಅಭಿನವನ ಅರಿಯುವ
ಮನೋಹರಿ
ಅನುನಯದಿ ಮನವರಿತು ವಿರಾಮದಿ ವಿಲಾಸಕೆ
ಕರೆದೆಯಲ್ಲ

—————————————–

Leave a Reply

Back To Top