ವಿಶೇಷ ಬರಹ
‘ಸೂಟು ಬೂಟು’
ಸಾಮಾಜಿಕ ಸ್ಥಾನಮಾನದೊಂದಿಗೆ
ತನ್ನನ್ನು ತುಳಿದ ಸಮಾಜದ ವಿರುದ್ಧ
ತೊಡೆ ತಟ್ಟಿ ನಿಲ್ಲುವ
ಸ್ವಾಭಿಮಾನದ ಸಂಕೇತವಾಗಿಬಿಡ್ತು.
ಸಿದ್ದಾರ್ಥ ಟಿ ಮಿತ್ರಾ
‘ಸೂಟು ಬೂಟು’ಸಾಮಾಜಿಕ ಸ್ಥಾನಮಾನದೊಂದಿಗೆ ತನನ್ನು ತುಳಿದ ಸಮಾಜದ ವಿರುದ್ಧ ತೊಡೆ ತಟ್ಟಿ ನಿಲ್ಲುವ ಸ್ವಾಭಿಮಾನದ ಸಂಕೇತವಾಗಿಬಿಡ್ತು.
ಬ್ರಿಟಿಷರ ಎರಡು ನೂರು ವರ್ಷಗಳ ಆಳ್ವಿಕೆ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಗಾಂಧೀಜಿ ಬಂಡಾಯ ಎದ್ದರೆ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರು ಈ ನೆಲದ ಸಾವಿರಾರು ವರ್ಷಗಳ ವೈದಿಕಶಾಹಿ ತುಳಿತ ಶೋಷಣೆ ಬಹಿಷ್ಕಾರದ ವಿರುದ್ಧ ಬಂಡಾಯ ಸಾರಿದವರು. ಅದೆ ಗಾಂಧೀಜಿ ಅವರು ಅನುಸರಿಸಿಕೊಂಡು ಬಂದ ಸನಾತನ ಧಾರ್ಮಿಕ ವಿಧಿವಿಧಾನ ಮೌಲ್ಯಗಳ ವಿರುದ್ಧವೇ ಅಂಬೇಡ್ಕರ್ ನಿಲ್ಲುತ್ತಿದ್ದರು.ಗಾಂಧೀಜಿ ಭಾರತೀಯ ಪ್ರಜ್ಞೆಯ ಪ್ರತೀಕರಾದರೆ ಅಂಬೇಡ್ಕರ್ ಅವರು ದಲಿತ ಪ್ರಜ್ಞೆಯ ಪರವಾದ ಸ್ಪೊಟಕವಾಗಿ ಹೊರಹೊಮ್ಮುತ್ತಾರೆ.ಗಾಂಧೀಜಿ ಹಿಂದೂ ಮಹಾಸಭಾದೊಂದಿಗೆ ಯಾವತ್ತೂ ಕೂಡ ಗುರುತಿಸಿಕೊಂಡಿಲ್ಲಾ ಎಂಬ ನೈಜ ಸಂಗತಿ ಸಹ ಮರೆಯಬಾರದು.
ಎಂತಹಾ ವೈಚಾರಿಕತೆ ನಮಗೆ ಬೇಕು,ನವ ಸಮಾಜ ನಿರ್ಮಾಣದ ಕನಸು ಕಂಡವರಿಗೆ ಸದಾ ಇಂತಹ ಸ್ಥಿತಿ ಗತಿಗಳು ಸನ್ನಿವೇಶಗಳು ಕಾಡುತ್ತವೆ.ಈಗಿನ ಸಾಮಾಜಿಕ,ಆರ್ಥಿಕ ಮತ್ತು ಸಾಂಸ್ಕೃತಿಕ ವ್ಯೆವಸ್ಥೆಗಳು ಸರಿಪಡಿಸಲು ಹೊಸ ಚಿಂತನಾ ಕ್ರಮಗಳನ್ನು ರೂಪಿಸಿಕೊಳ್ಳಬೇಕಾಗಿದೆ.ಇಂತಹ ವ್ಯವಸ್ಥೆಯ ವಿರುದ್ಧ ಬಂಡಾಯ ಸಾರಿದವರ ಚಿಂತನಾಕ್ರಮಗಳು ನಮ್ಮಲ್ಲೆರ ಕಣ್ಣೆದುರಿಗೆ ಇವೆ.ಬುದ್ದ ಬಸವ ಅಂಬೇಡ್ಕರ್ ಕಾರ್ಲ್ ಮಾರ್ಕ್ಸ್, ಜ್ಯೋತಿಬಾ ಫುಲೆ , ಕುವೆಂಪು ಕಬೀರ್ ದಾಸರು ಅಂಥವರು ತಮ್ಮ ಅವಧಿಯಲ್ಲಿ ಸಾಮಾಜಿಕ ಪರಿಮಿತಿ ಗಳಲ್ಲಿ ಈ ವ್ಯವಸ್ಥೆಯನ್ನು ಸರಿಪಡಿಸಲು ಮತ್ತು ಬದಲಾಯಿಸಲು ಸಾಧ್ಯವಾದಷ್ಟರ ಮಟ್ಟಿಗೆ ಚಿಂತನಾ ಕ್ರಮಗಳನ್ನು ಹೋರಾಟದ ಮೂಲಕವೇ ರೂಪಿಸಿಕೊಂಡವರು ಇಂತಹ ಮಹಾನ ಚೇತನಗಳ ವಿಚಾರಗಳನ್ನು ನಾವು ನಮ್ಮ ಕಾಲಕ್ಕೆ ತಕ್ಕಂತೆ ಹೇಗೆ ಅಳವಡಿಸಿಕೊಂಡು ಮಹತ್ವಪೂರ್ಣವಾದ ವೈಚಾರಿಕತೆಯ ಹಿನ್ನೆಲೆಯಲ್ಲಿ ಬದುಕುತ್ತಿದ್ದೆವೆ ಎಂಬ ಪ್ರಶ್ನೆಯಲ್ಲಿಯೇ ಪರಂಪರೆ ಎಂಬ ಸುಳಿಯಲ್ಲಿ ಹೇಗೆ ಪ್ರಸ್ತುತಗೊಳಿಸಿಕೊಳ್ಳುತ್ತಿದ್ದೆವೆ .? ನಮಗೆ ಗಾಂಧಿ ವಿಚಾರಧಾರೆಗಳು ಬೇಕು ಅಂಬೇಡ್ಕರ್ ವಿಚಾರಧಾರೆಗಳು ಮಾರ್ಕ್ಸ್ ವಾದಿ ಚಿಂತನೆಗಳು ಬೇಕಾಗಿವೆ .
ಭಾರತೀಯ ಸಮಾಜದಲ್ಲಿ ಅಸ್ಪೃಶ್ಯತೆ ಬಹು ದೊಡ್ಡ ಕಳಂಕ ಮತ್ತು ಅದು ಭಾರತದ ಚರಿತ್ರೆಯಲ್ಲಿ ಒಂದು ಕಪ್ಪು ಚುಕ್ಕೆ ಗಾಂಧಿಜೀಗೆ ಮನವರಿಕೆ ಆಗಿದರ ಹಿಂದೆ ಅಂಬೇಡ್ಕರ್ ಅವರ ದಟ್ಟವಾದ ಹೊರಾಟದ ಪ್ರಭಾವವನ್ನು ಕಾಣಬಹುದು.
ಅಂಬೇಡ್ಕರ್ ಅವರು ಸೂಟು ಬೂಟು ಧಾರಿಯಾಗಲು ಆಂತರಿಕ ಸಾಮಾಜಿಕ ಸಾಂಸ್ಕೃತಿಕ ಒತ್ತಡಗಳ ಸಂಚಲನವೆ ಅವರಿಗೆ ಸ್ಫೂರ್ತಿಯಾಗಿ ಬರುತ್ತದೆ.ಅಂಬೇಡ್ಕರ್ ಮತ್ತು ಗಾಂಧೀಜಿಯ ನಡುವೆ ಏರ್ಪಟ್ಟ ಮುಖಾಮುಖಿ ಸಂಘರ್ಷವನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿಬೇಕಾಗಿದೆ.ಈ ಪೋಷಾಕುಗಳು ಅವರ ಕೇವಲ ಉಡುಗೆಗಳಷ್ಟೇ ಅಲ್ಲ ಅವು ಅವರಿಬ್ಬರ ವ್ಯಕ್ತಿತ್ವಗಳನ್ನು ಅವರ ಮತ್ತು ಅವರ ಆಳವಾದ ಸಾಮಾಜಿಕ ಕಾಳಜಿಯನ್ನು ಸಹ ಪ್ರತಿಬಿಂಬಿಸುತ್ತದೆ.
ಅದೇನೆ ಇರಲಿ ಅಂಬೇಡ್ಕರ್ ಅವರು ಮೊದಲಿಗೆ ಮಾರ್ಕ್ಸವಾದದ ನೆಲೆಗಟ್ಟಿನ ಮೇಲೆಯೇ ತಮ್ಮ ಚಿಂತನೆಗಳನ್ನು ರೂಪಿಸಿಕೊಂಡು ಆನಂತರ ಸಂದರ್ಭಕ್ಕೆ ಸರಿಯಾಗಿ ಅದನ್ನು ಒಗ್ಗಿಸಿಕೊಂಡು ತಮ್ಮ ವಿಶಿಷ್ಟ ವಿಚಾರಧಾರೆಗಳನ್ನು ಕಟ್ಟಿಕೊಳ್ಳುತ್ತಾ ಬಂದಿದ್ದಾರೆ.
ನಮ್ಮ ದೇಶದಲ್ಲಿ ಈಗ ಕಾಡುತ್ತಿರುವ ಸಾಮಾಜಿಕ ಸಾಂಸ್ಕೃತಿಕ ಅನಿಷ್ಟ ಪದ್ಧತಿಗಳನ್ನು ಓಡಿಸಬೇಕು ಎಂದರೆ ನಮಗೆ ಅಂಬೇಡ್ಕರ್ ವಾದವೂ ಬೇಕು ಗಾಂಧಿವಾದವು ಬೇಕು ಅದ್ ಈ ವಿಚಾರಗಳು ಉತ್ತಮ ವೈಚಾರಿಕತೆಯ ವಾತಾವರಣ ಬೇಕಾಗಿದೆ ಆಗ ಮಾತ್ರ ಪ್ರಜಾಸತ್ತಾತ್ಮಕ ಶಕ್ತಿಗಳ ಸಂಘಟನೆಗೆ ಹಾಗೂ ಸಾಂಸ್ಕೃತಿಕ ಸಂಘಟನೆಗೆ ಸರ್ವ ಶಕ್ತಿ ಮೂಡಬಲದ್ದು.
————————–
ಶ್ರೀ ಸಿದ್ದಾರ್ಥ ಟಿ ಮಿತ್ರಾ
ಇಂತಹ ಬರಹಗಳು ಬರದಿದ್ದರೆ ಸಮಾಜ ಎಷ್ಟೋ ನೆಮ್ಮದಿಯಿಂದ ಇರುತ್ತದೆ.
ಅಂಬೇಡ್ಕರ್ ಅವರು ಪೋಷಾಕಿನ ಮೂಲಕವೂ ತಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿದುದನ್ನು ಓದಿದಾಗ ಅವರ ಸೂಕ್ಷ್ಮ ಗ್ರಹಿಕೆಯ ಅರಿವಾಗುತ್ತದೆ. ಲೇಖನ ಚೆನ್ನಾಗಿದೆ.
ಎಚ್.ಮಂಜುಳಾ.