ಕಾವ್ಯ ಸಂಗಾತಿ
ಡಾ ಮೀನಾಕ್ಷಿ ಪಾಟೀಲ್
ಮಧುರ ನೆನಪು
ಒಂದು ಸಂಜೆ
ಹೀಗೆ ಭೇಟಿಯಾದೆವು
ಸುಖಾ ಸುಮ್ಮನೆ
ಏನೇನೋ ಹರಟೆ
ನಾ ನಿನ್ನ ಪ್ರೀತಿಸುವೆ
ನೀ ನನ್ನ ಒಪ್ಪುವೆಯಾ
ನೀ ಒಪ್ಪಿ ಅಪ್ಪಿದ ಮೇಲೆ
ತಪ್ಪೇನಿದೆ ಹೇಳು ಅಂದದ್ದು
ಹೀಗೆ ಆಡುತ್ತಾ
ಮಾತಾಡುತ್ತಾ
ಏನೇನೋ ಮಾಡುತ್ತ
ಮರೆತೆವು ಜಗವ
ಆಕಾಶದ ಚುಕ್ಕಿಗಳನೆಣಿಸುತ್ತಾ
ಚುಕ್ಕಿ ಚಂದ್ರಮರನ್ನು
ನಿನ್ನ ಮುಡುಗೇರಿಸಿ
ಅಲಂಕರಿಸುವೆ ಎಂದದ್ದು
ಹುಸಿಯಾದ ಮಾತು
ಹಸಿ ಉಳಿದ ಹೃದಯ
ಒಸರುವ ಪ್ರೀತಿ
ಭಾರವಾದ ಎದೆಗೆ ಎರವಿಲ್ಲ
ತುಂಬಿ ಬಂದ ನೆರೆ
ಇಳಿದು ಹೋದ ತೆರೆ
ಎಲ್ಲವೂ ಶಾಂತ
ಸ್ಕಲಿಸಿ ತಣ್ಣಗಾದಂತೆ
ಕ್ಷಣದ ಮಧುರತೆ
ನೆನಪಾಗಿ ಉಳಿಯುವುದು
ಎದೆಯ ಗೂಡಲ್ಲಿ
ಮಧುರ ನೆನಪು ನೀನಾಗಬಲ್ಲೆಯಾ
ಡಾ ಮೀನಾಕ್ಷಿ ಪಾಟೀಲ್
Good Poem