ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ದುಡಿಯುವ ಜೀವಕ್ಕೊಂದಿಷ್ಟು…

ಅವನು ಬೆಂಗಳೂರಿನ ಮಹಾನಗರದ ಮನೆಯಲ್ಲಿ  ಲಘುಬಗೆಯಿಂದ ಬೇಗ ಬೇಗನೆ ಸಿದ್ಧನಾಗುತ್ತಾನೆ. ಇನ್ನು  ಅವಸರದಲ್ಲಿಯೇ ತನ್ನ ಕಚೇರಿಗೆ  ಹೊರಡಲು ಎಂಟು ಗಂಟೆಗೆ  ಮನೆಬಿಟ್ಟು ಕಚೇರಿ ತಲುಪುವುದೋ 10:00 ಗಂಟೆಯ ಸುಮಾರು…!! ಎರಡು ತಾಸುಗಳ ಹೆವಿ ಟ್ರಾಫಿಕ್….ಕೆಲವು ಸಲ ಮೂರು ಗಂಟೆಯೂ ಆಗುತ್ತಿದೆ.  ಕಾರಿನಲ್ಲಿಯೇ ಉಪಹಾರ, ಬಾಸ್ ನಿಂದ ಮಂಗಳಾರುತಿ, ಮನೆಯಿಂದ ಬರುವಾಗ ಹೆಂಡತಿಯಿಂದ ನೂರಾರು ಬೇಡಿಕೆಗಳ ಪಟ್ಟಿ… ಅವಸರವಸರದ ಬದುಕು..!!

 ಅವಳು ಅಷ್ಟೇ.. ತನ್ನ ಕಚೇರಿಯ ಬಾಸ್ ಎಲ್ಲಿ ಬೈದುಬಿಡುತ್ತಾನೋ ಎನ್ನುವ ಆತಂಕಕ್ಕೆ ಒಳಗಾಗಿ ಮಕ್ಕಳನ್ನು ಶಾಲೆಗೆ ಸಿದ್ಧಮಾಡಲು ಆಗದೆ, ಮನೆಗೆಲಸಕ್ಕೆ ಬಂದ ನರಸಮ್ಮನಿಗೆ  ಮಕ್ಕಳನ್ನು ಶಾಲಾ ವಾಹನಕ್ಕೆ ಕಳುಹಿಸಲು ಹೇಳಿ, ಕೆಲವು ಸಲ ತಿಂಡಿಯೂ ತಿನ್ನದೆ ಇದ್ದರೂ ಸರಿಯಾಗಿ  10 ಗಂಟೆಯೊಳಗೆ ಕಚೇರಿ ತಲುಪದಿದ್ದರೆ ಬೈಗುಳಗಳ ಸುರಿಮಳೆ…!!

 ಹೀಗೆ…ಮತ್ತೆ ಕರ್ತವ್ಯದ ನಂತರ ಮರಳಿ  ಮನೆ  ಸಂಜೆ ಏಳು ಗಂಟೆ…!!

ಮನೆಯಿರುವುದು ಇವರಿಗೆ  ರಾತ್ರಿ ಮಾತ್ರ ತಂಗಲು, ವಿಶ್ರಾಂತಿಯ ತಾಣವಾಗಿದೆ ಎನ್ನಬಹುದು. ಇದು ನಗರ ಪ್ರದೇಶದ ಧಾವಂತದ ಬದುಕಿಗೆ ಒಂದು ಉದಾಹರಣೆ ಅಷ್ಟೇ..!!

 ಗ್ರಾಮೀಣ ಭಾಗದಲ್ಲಿಯೂ ಇತ್ತೀಚಿಗೆ ದುಡಿಯುವವರು ಸುಗ್ಗಿ ಬೆತ್ತಲೆ ಕಾಲ ಒಕ್ಕಲು ಕಾಲ ಹೀಗೆ ವಿವಿಧ ಹೊಲಗದಿಗಳಲ್ಲಿ ಕೆಲಸ ಮಾಡುವ ರೈತಪಿ ವರ್ಗದವರು ಬಿಡುವಿಲ್ಲದೆ ಮನೆಯ ಕೆಲಸವನ್ನು ಮಾಡಿಕೊಳ್ಳುವುದರ ಜೊತೆಗೆ ನಸುಕಿನಿಂದ ರಾತ್ರಿ 8 ಗಂಟೆಯವರೆಗೂ ಸದಾ ಕೆಲಸ ಕೆಲಸ ಕೆಲಸ…!!
ಮನುಷ್ಯನ ದೇಹವು ಹಲವಾರು ಅಂಗವ್ಯೂಹಗಳಿಂ ರಚನೆಯಾಗಿರುವ ಬಗ್ಗೆ ವೈದ್ಯಕೀಯ ಪರಿಭಾಷೆಯಲ್ಲಿದೆ. ಅದು ವಾಸ್ತವ ಸಂಗತಿಯೂ ಕೂಡ ಹೌದು.  ಈ ದೇಹವೂ  ಎಷ್ಟು ದುಡಿಯುವುದು ಅಷ್ಟೇ ಅಷ್ಟೇ ಮನಸ್ಸು ಆಯಾಸಗೊಳ್ಳುತ್ತದೆ. ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಅವಶ್ಯಕತೆ ಎಂದು ವೈದ್ಯಕೀಯ ಶಾಸ್ತ್ರ ಹೇಳಿದೆ.  ‘ವಿಶ್ರಾಂತಿ ಇಲ್ಲದ ನಿರಂತರ ಶ್ರಮದ ಬದುಕಿಗೆ ದೇಹ ದಣಿದುಕೊಳ್ಳುತ್ತದೆ’ ಮನುಷ್ಯನಿಗೆ ದೇಹ ಮನಸ್ಸು ಸದಾ ಆರೋಗ್ಯಕರವಾಗಿರಬೇಕು.  “ಎ ಸೌಂಡ್ ಮೈಂಡ್ ಇನ್ ಸೌಂಡ್ ಬಾಡಿ ” ಎನ್ನುವ  ಆರೋಗ್ಯಕರವಾದ ಗಾದೆ ಮಾತು ಹಿರಿಯರಿಂದ ಬಂದಿರುವುದು ಇದರಿಂದಾಗಿ. ಮನುಷ್ಯನ ಆರೋಗ್ಯಕರ ಬದುಕಿಗೆ ಒತ್ತು ನೀಡುವಂತಿದೆ.

ಸಂಪತ್ತು, ಹಣದ ವ್ಯಾಮೋಹಕ್ಕೆ ಬಿದ್ದು ಅದನ್ನು  ಗಳಿಸುವ ದೃಷ್ಟಿಯಿಂದ ಸದಾ ದುಡಿಮೆಯಲ್ಲಿ ತೊಡಗಿದರೆ, ಮನುಷ್ಯನಿಗೆ ಭಾವನಾತ್ಮಕ, ಕೌಟುಂಬಿಕ, ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಾನೆ.

ಕುಟುಂಬದಲ್ಲಿಯ ಸಂಬಂಧಗಳ ಮನುಸ್ತಾಪಗಳು, ಒತ್ತಡಗಳು, ಅವರನ್ನು ಧುತ್ತನೆ ಮೇಲೆರಗಿ ಅವನ ದಿನ ನಿತ್ಯದ ಬದುಕಿಗೆ ದೊಡ್ಡ ಪೆಟ್ಟು ಕೊಡುತ್ತದೆ. ಇಂತಹ ಒತ್ತಡದ ಬದುಕು ನಗರದಲ್ಲಿ, ಗ್ರಾಮೀಣ ಭಾಗದಲಿಯಾಗಲಿ ಸುತಾರ ಅದು ಒಳ್ಳೆಯದಲ್ಲ…!!

ಹಾಗಂತ ಸದಾ ಸೋಮಾರಿಯಾಗಿ ದುಡಿಯದೇ ಇರುವುದು ಕೂಡ ಆರೋಗ್ಯಕ್ಕೆ ತಕ್ಕದ್ದಲ್ಲ. ವ್ಯಕ್ತಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲನವಾದ ಕ್ರಿಯಾಶೀಲತೆ ಬೇಕೇ ಬೇಕು. ಕ್ರಿಯಾಶೀಲತೆ ಇಲ್ಲದ ಬದುಕು ಕೀಟದಿಂದ ಹಣ್ಣಿನಂತಾಗುತ್ತದೆ. ಒಂದು ಹಣ್ಣು ಯಾವಾಗ ಕೆಡುತ್ತದೆ ಎಂದರೆ ಕೀಟ ಅದನ್ನು ತಿಂದಾಗ ಮಾತ್ರ ; ಹಾಗೆ ನಮ್ಮ ದೇಹ ಸೋಮಾರಿ ಎಂಬ ಕೀಟವನ್ನು ತಿನ್ನಲು ಬಿಟ್ಟಾಗ ನಮ್ಮ ದೇಹ ಹಲವಾರು ರೋಗಗಳ ಮೂಟೆಯಾಗುತ್ತದೆ.

ಕೌಟುಂಬಿಕ ಸಮಸ್ಯೆಗಳಿಗಾಗಿಯೂ ಅಥವಾ ಆರ್ಥಿಕ ಸಮಸ್ಯೆಗಳಿಗಾಗಿಯೂ ದುಡ್ಡನ್ನು ಗಳಿಸುವ ಧಾವಂತದಲ್ಲಿ ಇಡೀ ರಾತ್ರಿ ನಿದ್ದೆಗೆಟ್ಟು ನೈಟ್ ಡ್ಯೂಟಿ (ರಾತ್ರಿ ಪಾಳೆ) ಮತ್ತೆ ಒಂದಿಷ್ಟೂ ಹೆಚ್ಚುವರಿ ಹಣ ಬರುತ್ತದೆ ಎಂದು ಹಗಲಿನಲ್ಲಿಯೂ ದುಡಿಯುವದು. ಅದು ಕಾರ್ಖಾನೆಯಲಿಯಾಗಿರಬಹುದು, ಕಚೇರಿಗಳಲ್ಲಿ ಅಥವಾ ಹೊಲಗದ್ದೆಗಳಲ್ಲಿ ಅಥವಾ ದೊಡ್ಡ ದೊಡ್ಡ ತಾಂತ್ರಿಕ ಕರ್ತವ್ಯಗಳಲ್ಲಿ ತಮ್ಮನ್ನು ಈ ರೀತಿಯಲ್ಲಿ ತೊಡಗಿಸಿಕೊಂಡಾಗ ದೇಹದ ಸಮತೋಲನ ಕಳೆದುಕೊಳ್ಳುತ್ತದೆ. ಯಾಕೆ ಈ ರೀತಿಯ ನಮ್ಮ ದೇಹ ಸಮತೋಲನ ಕಳೆದುಕೊಳ್ಳುತ್ತದೆ ಎನ್ನುವುದನ್ನು ನಾವು ತಿಳಿಯಬೇಕು.  

ಒಂದೇ ರೀತಿಯ ಅವಸರದ ಅಥವಾ ಜೋರಾದ ಹೃದಯ ಬಡಿತವು ಒಳಿತಲ್ಲ..!! ಅದಕ್ಕೊಂದಿಷ್ಟು  ಶಾಂತ ವಾತಾವರಣ  ಇರಲೇಬೇಕು. ವ್ಯಕ್ತಿ ಕ್ರಿಯಾಶೀಲನಾಗಿದ್ದು ದುಡಿಯುವಾಗ ಹೃದಯವು ಕೂಡ ಅಷ್ಟೇ ತೀವ್ರತರವಾದ ಬಡಿತಕ್ಕೆ ಒಳಪಡುತ್ತದೆ.  ರಾತ್ರಿ ಮಲಗಿದಾಗ ಹೃದಯ ಕೆಲಸ ಮಾಡಿದರೂ ಅದರ  ಒತ್ತಡ ಕಡಿಮೆ ಇರುತ್ತದೆ.  ಒತ್ತಡ ಕಡಿಮೆ ಇರುವುದೇ ಹೃದಯಕ್ಕೆ ವಿಶ್ರಾಂತಿ..! ಹಾಗೆಯೇ ದೇಹದ ಇತರ ಭಾಗಗಳಾದ ಮೂತ್ರ ಜನಕಾಂಗ, ಅದು ನಾವು ಕುಡಿದ ನೀರು, ದ್ರವ ಪದಾರ್ಥಗಳನ್ನು ಸದಾ ಮೂತ್ರಜನಕಾಂಗ ತನ್ನ ಕೆಲಸವನ್ನು ಮುಂದುವರಿಸುತ್ತದೆ. ಆದರೆ ಅತಿಯಾದರೆ ದೈಹಿಕವಾಗಿ ಬಳಲಿಕ್ಕೆ ಉಂಟಾಗುತ್ತದೆ.

ಹೀಗೆ ದೇಹದ ಪ್ರತಿಯೊಂದು ಚಯಾಪಚಯ ಕ್ರಿಯೆಯು ನಿಗಧಿತವಾಗಿ ನೆಡೆಯುವಂತೆ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು.

 ಹಾಗಾದರೆ ಅದಕ್ಕೆ ದುಡಿಯುವ ಜೀವಕೊಂದಿಷ್ಟು ವಿಶ್ರಾಂತಿ ಇರಲಿ..! ಅರೇ…!! ನಮ್ಮ ಹಿಂದಿನ ಕಾಲದ ಹಿರಿಯರು ಹಾಗಾಗಿ ಅಮವಾಸ್ಯೆ, ಹುಣ್ಣುಮೆ, ಜಾತ್ರೆ,ಉತ್ಸವಗಳು ಹಮ್ಮಿಕೊಂಡು ದುಡಿಯುವ ವರ್ಗದ ಜೀವಿಗಳಿಗೆ ವಿಶ್ರಾಂತಿ, ಆಹಾರದಲ್ಲಿ ಬದಲಾವಣೆಗಳನ್ನು ಮಾಡಲಾಯಿತು. ನಮ್ಮ ದುಡಿಯುವ ವರ್ಗವು ವಿಶ್ರಾಂತಿ ಪಡೆಯಲು ಆಡಳಿತ ಮಂಡಳಿಯ ವ್ಯವಸ್ಥೆ,  ಸರಕಾರ ಗಮನಹರಿಸಲಿ. ಎಲ್ಲರೂ  ಒತ್ತಡದ ಬದುಕಿನಿಂದ ಮುಕ್ತರಾಗೋಣ…


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

One thought on “

  1. ಸದ್ಯದ ಧಾವಂತ ಜೀವನ ಸೊಗಸಾಗಿ, ಅರ್ಥಪೂರ್ಣವಾಗಿ ಮೂಡಿಬಂದಿದೆ. ಕೂಲಿ-ನಾಲಿ ಮಾಡುವ ಗ್ರಾಮೀಣ ಜನತೆ(ಪುರುಷರು)ದುಡಿಮೆಯ ಒಂದಿಷ್ಟು ಸಮಯದ ನಂತರವಾದರೂ ವಿಶ್ರಾಂತಿ ಮಾಡಬಹುದು. ಆದರೆ ಆ ಸೌಲಭ್ಯ ಹೆಣ್ಣು ಮಕ್ಕಳಿಗಿಲ್ಲ. ಪುರುಷ ಎಂಟು ತಾಸು ಕೆಲಸ ಮಾಡಿದರೆ ಮಹಿಳೆಯರು ೧೨-೧೪ತಾಸು ಕರ್ತವ್ಯದಲ್ಲಿ ನಿರತರಾಗಿರುತ್ತಾರೆ. ನಗರದ ಜನರದಂತೂ ಯಾವಾಗಲೂ ಧಾವಂತದ ಬದುಕೇ.
    ಅಭಿನಂದನೆಗಳು.

Leave a Reply

Back To Top