ಕಾವ್ಯ ಸಂಗಾತಿ
ರುಕ್ಮಿಣಿ ನಾಯರ್ ರವರ ಕವಿತೆ
ಬುದ್ದನಾಗು!
ಬುದ್ದನಾಗಲು ಸಿದ್ದನಾಗು
ಆಸೆನಿರೀಕ್ಷೆಗಳ ಬದಿಗಿಟ್ಟಾಗ
ನೀನು ನಿನ್ನದೆಂಬುದೆಲ್ಲ
ಭ್ರಮೆಯ ಕಾಡುಮೇಡು
ಪಡೆಯುವೆಯೇನು
ಅದರೊಳಗೆ ಸುತ್ತಾಡಿ
ಬರಿ ಕಲ್ಲು ಮುಳ್ಳುಗಳಿಹವಲ್ಲಿ
ನಿನ್ನ ಬಳಸಿ ಗಿಡಗಂಟಿ
ಬೆಳೆದರೂ ಬೆದರದಿರು
ನಾನೆಂಬ ಮೋಹಕಳೆದು
ಜೊತೆಯಿರುವವು ನಿನ್ನ ಜೊತೆಯಾಗಿ
ಮೋಹವ ಕಳಚಿ
ನಿನ್ನವರೆಂಬ ಪರವಶತೆಯಿಂದ
ಹೊರಬಾ ದೃಢ ಮನಸಿನಿಂದ
ಬುದ್ದನಾಗಲು ಪ್ರಯತ್ನಿಸು
ನೆನಪಿರಲಿ ಬುದ್ದನಾಗುವುದಷ್ಟು
ಸರಳವೇನಲ್ಲ
ಮೊದಲು ತೊಡೆದು ಕಣ್ಣ ನೀರನ್ನು
ತುಂಬಿಕೊ ವೈರಾಗ್ಯ ಭಾವವನಲ್ಲಿ
ರುಕ್ಮಿಣಿ ನಾಯರ್
ಸಂಪಾದಕರಿಗೆ ಹೃದಯ ತುಂಬಿ ಧನ್ಯವಾದಗಳು..
ಅಭಿನಂದನೆಗಳು
ಧನ್ಯವಾದಗಳು
ಕವಿತೆ ಚೆನ್ನಾಗಿದೆ. ಅಭಿನಂದನೆಗಳು.
ಧನ್ಯವಾದಗಳು