ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿ

ಕಲಿಕಾ ಅಂತರಕ್ಕೆ ಕಾರಣವೇನು?

ಅಂದು ಎಲ್ಲರೂ SSLC  ಫಲಿತಾಂಶ ನೋಡಲು ಬಂದಿದ್ದರು. ಎಲ್ಲ ಪಾಲಕರು ಪೋಷಕರು ಹಾಗೂ ಮಕ್ಕಳಲ್ಲಿ ಭಯ , ಆತಂಕ ಹಾಗೂ ಕುತೂಹಲ ಇತ್ತು.  ಅಷ್ಟರಲ್ಲಿ ಮುಖ್ಯೋಪಾಧ್ಯಾಯರು ಫಲಿತಾಂಶ ಪಟ್ಟಿಯನ್ನು ನೋಟಿಸ್‌ ಬೋರ್ಡಗೆ ಹಾಕಿದರು ಅದನ್ನು ನೋಡಲು ಎಲ್ಲರೂ ತಾಮುಂದೆ ನಾಮುಂದೆ ಎಂದು ಎಲ್ಲರೂ ದಾವಿಸಿದರು. ಎಲ್ಲದರಲ್ಲೂ ಹೆಣ್ಣು ಮಕ್ಕಳೇ ಮುಂದೆ ಇರುವದನ್ನು ಹಾಗೂ ಹೆಚ್ಚು ಅಂಕಗಳನ್ನು ಗಳಿಸಿದ್ದರು. ಅದನ್ನು ನೋಡಿದ ಪಾಲಕರು ಪೋಷಕರು ತಮ್ಮ ಗಂಡು ಮಕ್ಕಳ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. ಹೆಣ್ಣು ಮಕ್ಕಳು ಎಲ್ಲದರಲ್ಲೂ ಉತ್ತಮ ಅಂಕ ಗಳಿಸಿದ್ದನ್ನು ಹಾಗೂ ಮನೆಯಲ್ಲಿ ಜವಾಬ್ದಾರಿಯಿಂದ ಕಾರ್ಯ ಮಾಡುತ್ತಿರುವದರ ಬಗ್ಗೆ ತುಂಬ ಹೃದಯದಿಂದ ಶ್ಲಾಘಿಸಿದರು. ಅಲ್ಲದೇ ತಮ್ಮ ಗಂಡು ಮಕ್ಕಳು ಮನೆಯಲ್ಲಿಯೂ ಯಾವ ಕೆಲಸವನ್ನೂ ಮಾಡುವುದಿಲ್ಲ, ಗುರುಹಿರಿಯರೊಂದಿಗೆ ವರ್ತನೆ ಸಹ ಸರಿಯಾಗಿಲ್ಲ, ಓದಿನಲ್ಲಿಯೂ ಉತ್ತಮ ಅಂಕ ತೆಗೆಯುತ್ತಿಲ್ಲ. ಇದಕ್ಕೆ ಏನು ಪರಿಹಾರ ಎಂದು ಮಾತನಾಡಲು, ಚರ್ಚಿಸಲು ಪ್ರಾರಂಭಿಸಿದರು, ಹಾಗಾದರೆ ಇದಕ್ಕೆ ಕಾರಣ ನಮ್ಮ ಲಾಲನೆ ಪಾಲನೆಯಲ್ಲಿ ತಪ್ಪಾಗುತ್ತಿದೆಯೇ? ಅಥವಾ ಶಿಕ್ಷಣ ವ್ಯವಸ್ಥೆಯಲ್ಲಿ ತಪ್ಪಾಗುತ್ತಿದೆಯೇ? ಎಂಬ ಗಹನವಾದ ಚರ್ಚೆ ಪ್ರಾರಂಭವಾಯಿತು. ಅಷ್ಟರಲ್ಲಿ ಶಾಲೆಯ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಹಾಗೂ ಊರಿನ ಹಿರಿಯರೂ ಸೇರಿದರು .

ಈ ಚರ್ಚೆ ಈಗ ಎಲ್ಲರ ಚರ್ಚೆಯಾಯಿತು. ಅಲ್ಲಿಯೇ ಇದ್ದ ಊರಿನ ಹಿರಿಯರೂ ಹಾಗೂ ಶಿಕ್ಷಣಪ್ರೇಮಿಗಳೊಬ್ಬರು ಈ ಕುರಿತು ಮಾತನಾಡಲು ಪ್ರಾರಂಭಿಸುತ್ತಾ, ಹೌದು ಶಿಕ್ಷಣ ಅಭಿವೃದ್ಧಿಯ ಕೀಲಿಕೈ. ಆದ್ದರಿಂದಲೇ ಅನೇಕ ವರ್ಷಗಳಿಂದ ಎಲ್ಲರಿಗೂ ಶಿಕ್ಷಣ ಎನ್ನುವ ಧ್ಯೇಯ ವಾಕ್ಯದ ಮೂಲಕ ಎಲ್ಲರನ್ನೂ ಒಳಗೊಳ್ಳುವ ಶಿಕ್ಷಣ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಪ್ರಮುಖ ಗುರಿಯನ್ನಾಗಿಸಿ ಪ್ರಗತಿಯತ್ತ ದಾಪುಗಾಲು ಹಾಕುತ್ತಿದ್ದೇವೆ. ಪ್ರಾರಂಭದಲ್ಲಿ ಶಿಕ್ಷಣದಲ್ಲಿ ಅನೇಕ ರೀತಿಯ ತಾರತಮ್ಯ ಹಾಗೂ ಬೇಧಗಳನ್ನು ಕಾಣಬಹುದಿತ್ತು. ಉದಾಹರಣೆಗೆ ದಲಿತರಿಗೆ, ಅಲ್ಪಸಂಖ್ಯಾತರಿಗೆ, ಹಾಗೂ ಹೆಣ್ಣುಮಕ್ಕಳಿಗೆ ಮತ್ತು ಬಡವರಿಗೆ ಶಿಕ್ಷಣ ಎಂಬುದು ಮರಚಿಕೆಯಾಗಿತ್ತು, ಕನಸಿನ ಮಾತಾಗಿತ್ತು ಆದರೆ ಇತ್ತೀಚಿಗೆ ಅನೇಕ ಯೋಜನೆಗಳ ಮೂಲಕ ಎಲ್ಲರನ್ನೂ ಒಳಗೊಂಡಂತೆ ಶಿಕ್ಷಣ ಪ್ರಾರಂಭವಾಯಿತು ಇದರಿಂದ ಪ್ರಾಥಮಿಕ ಶಿಕ್ಷಣ ಎಲ್ಲರಿಗೂ ಉಚಿತ ಹಾಗೂ ಕಡ್ಡಾಯವಾಯಿತು. ಎಲ್ಲರೂ ದಾಖಲಾತಿಯನ್ನೂ ಪಡೆದರು ಆದರೆ ಇತ್ತೀಚಿಗೆ ಕಲಿಕಾ ಅಂತರ ಸಮಸ್ಯೆ ಅಂದರೆ ಗಂಡು ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವ ಸಮಸ್ಯೆ ಪ್ರಾರಂಭವಾಯಿತು ಇದಕ್ಕೆ ಕಾರಣ ಏನು ಗೊತ್ತಾ?…ಎಂದು ತಿಳಿಸಲು ಪ್ರಾರಂಭಿಸಿದರು ಗಂಡು ಮಕ್ಕಳ ಮೇಲಿನ

1.  ಅತೀವ ಪ್ರೀತಿ, ಮಮತೆ ಹಾಗೂ ಕಾಳಜಿ ಹಾಗೂ ವಂಶಾಭಿವೃದ್ಧಿಗೆ ಮಗನೇ ಶ್ರೇಷ್ಟ

          ಎಂಬ ಭಾವನೆ

2. ಕೇಳಿದ ಎಲ್ಲ ವಸ್ತುವನ್ನು ನೀಡುತ್ತಿರುವುದು, ಉದಾ: ಮೋಬೈಲ್ ಹಾಗೂ ‌

        ಮೋಟಾರ ಸೈಕಲ್‌ ಇತ್ಯಾದಿ

3. ತಪ್ಪು ಮಾಡಿದಾಗ ಯಾವುದೇ ರೀತಿಯ ತಿದ್ದಿ ಹೇಳುವ ಕಾರ್ಯ ಆಗುತ್ತಿಲ್ಲ

3. ಮನೆಯಲ್ಲಿ ಹೆಣ್ಣು ಮಕ್ಕಳಂತೆ ಗಂಡು ಮಕ್ಕಳಿಗೆ ಕೆಲಸ ಹೇಳದೇ ಅವರಿಗೆ ಹೆಚ್ಚಿನ

     ಸಲುಗೆ ನೀಡುತ್ತಿರುವುದು.

4. ಸ್ನೇಹಿತರೊಂದಿಗೆ ದುಶ್ಚಟಗಳಿಗೆ ಬಲಿಯಾಗುತ್ತಿರುವ ಬಗ್ಗೆ ನಿಗಾ ವಹಿಸದೇ

     ಇರುವುದು

5. ಶಾಲೆಗಳಿಗೆ ನಿರಂತರ ಗೈರು ಆಗುತ್ತಿರುವ ಗಂಡು ಮಕ್ಕಳ ಬಗ್ಗೆ ಪಾಲಕರು

      ಗಮನಹರಿಸುತ್ತಿಲ್ಲ.

6 ಪಾಠ ಪ್ರವಚನಗಳ ಮನೆಗೆಲಸ (Homw work) ಮಾಡದ ಗಂಡು ಮಕ್ಕಳ ಬಗ್ಗೆ

   ಪಾಲಕರ ಪೋಷಕರ ಜವಾಬ್ದಾರಿ ಇಲ್ಲದಿರುವುದು̤

7 ನಿರಂತರ ಮಕ್ಕಳ ಪ್ರಗತಿ ನೋಡಲು, ಚರ್ಚಿಸಲು ಶಾಲೆಗೆ ಪಾಲಕರು ಹೋಗದೇ ಇರುವುದು

8 ಮೋಬೈಲ್‌, ಸಿನಿಮಾ, ತಂಬಾಕುಗಳಂತಹ ಚಟಗಳ ದಾಸರಾಗುತ್ತಿರುವದು

ಮೇಲಿನ ಅನೇಕ ಕಾರಣಗಳಿಂದ ಇಂದು ಗಂಡು ಮಕ್ಕಳನ್ನು ನಾವೇ ಹಾಳು ಮಾಡುತ್ತಿದ್ದೇವೆ ಎಂದು ಭಾಸವಾಗುತ್ತಿದೆ. ಹೆಣ್ಣು ಮಕ್ಕಳ ಮೇಲಿನ ಜವಾಬ್ದಾರಿಯಂತೆ ಗಂಡು ಮಕ್ಕಳನ್ನು ಸದಾ ನಿಗಾ ಇಟ್ಟು ಸಮನಾಗಿ  ನೋಡಿಕೊಳ್ಳಬೇಕು. ತಪ್ಪಿದಾಗ ತಿದ್ದಬೇಕು. ಸದಾ ಶಾಲೆಯಲ್ಲಿ ಯಾರೊಂದಿಗೆ ಸ್ನೇಹ ಇದೆ, ವರ್ತನೆ ಹೇಗೆ ಇದೆ, ಕಲಿಕೆಯಲ್ಲಿ ಹೇಗೆ ಸಾಗುತ್ತಿದ್ದಾನೆ ಎಂದು ಶಿಕ್ಷಕರೊಂದಿಗೆ  ಚರ್ಚಿಸಬೇಕು ಅಂದಾಗ ಮಾತ್ರ ಉತ್ತಮ ಜವಾಬ್ದಾರಿಯುತ ಪ್ರಜೆಯಾಗಿ ಹೊರಹೊಮ್ಮುತ್ತಾರೆ. ದೇಶದ ಶಿಸ್ತಿನ ಸಿಪಾಯಿ ಆಗುತ್ತಾರೆ. ಒಳ್ಳೆಯ ನಡೆ ನುಡಿ ಕಲಿಯುತ್ತಾರೆ ಅಲ್ಲವೇ? ಎಂದರು. ಆಗ ಎಲ್ಲರೂ ನಿಜ ಎಂದು ಒಪ್ಪಿದರು. ಇನ್ನು ಮುಂದೆ ನಾವೆಲ್ಲರೂ ಈ ಬಗ್ಗೆ ಕಾಳಜಿ ವಹಿಸುವದು ಅಗತ್ಯ ಇಲ್ಲವೆಂದರೆ ನಾಳೆ ನಮ್ಮ ಎಲ್ಲ ಹೆಣ್ಣು ಮಕ್ಕಳಿಗೆ ನೌಕರಿ ಸಿಗುತ್ತದೆ ಗಂಡು ಮಕ್ಕಳು House husband ಆಗುವ  ಪರಿಸ್ಥಿತಿ ಬರಬಹುದು ಎಂದು ನಗುತ್ತಾ, ಮನೆ ಕಡೆಗೆ ಹೆಜ್ಜೆ


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

One thought on “

  1. ಡಾಕ್ಟರ್ ದಾನಮ್ಮ ಜುಳಕಿ ಬರೆದಂತ ಅಂಕಣ ಎಲ್ಲರೂ ಯೋಚಿಸುವಂತೆ ಮಾಡಿದೆ

Leave a Reply

Back To Top