ಮಹಾವೀರ ಜಯಂತಿ ವಿಶೇಷ

ಮಹಾವೀರ ಜಯಂತಿ ವಿಶೇಷ

ಹಿಂಸೆಗೆ ಕಡಿವಾಣ ಹಾಕೋಣ,

ಮಹಾವೀರ ಜಯಂತಿ ಆಚರಿಸೋಣ

ಹುಟ್ಟು ಉಚಿತ ಸಾವು ಖಚಿತ. ಇದರ ನಡುವಿನ ಮೂರು ದಿನಗಳ ಪಯಣದಲಿ ಅನುಸರಿಸಬೇಕಾದದ್ದು/ ಕಾರ್ಯಗತವಾಗಬೇಕಾದದ್ದು ಹತ್ತು ಹಲವಾರು. ಸತ್ಯ, ಆಸ್ತೆಯ,ಬ್ರಹ್ಮಚರ್ಯ, ಅಪರಿಗ್ರಹದ ಜೊತೆಗೆ ಅಹಿಂಸೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಎಲ್ಲ ಜೀವಿಗಳಿಗೆ ಬದುಕುವ ಹಕ್ಕು ಇದೆ ಎಂದು ಸಾರಿ ಸಾರಿ ಹೇಳಿ ಅದನ್ನು ಪಾಲಿಸಿದ ಧರ್ಮಗಳಲ್ಲಿ ಜೈನ ಧರ್ಮ ಅಗ್ರಗಣ್ಯ. ರಾಗ ದ್ವೇಷಗಳನ್ನು ಮತ್ತು ಇಂದ್ರಿಯಗಳನ್ನು ಜಯಿಸಿ, ಜಗದ ಸಕಲ ಜೀವಿಗಳಿಗೆ ಹಾನಿಯುಂಟು ಮಾಡದೆ ಇದ್ದ ಜಾಗದಲ್ಲೇ ನಮೋಕಾರ ಮಂತ್ರಗಳನ್ನು ಜಪಿಸಿ ಮೋಕ್ಷ ಹೊಂದಿದ 24 ತೀರ್ಥಂಕರರಲ್ಲಿ ಮಹಾವೀರರು ಕೊನೆಯವರು.
ನೀವು ಬದುಕಿ ಮತ್ತು ಬದುಕಲು ಬಿಡಿ ಎಂಬ ತತ್ವವಾದವನ್ನು ತಾನು ಪಾಲಿಸಿ ಜಗಕ್ಕೂ ತಿಳಿಸಿ ಕಾಲವಾದ ವರ್ಧಮಾನರು ಹುಟ್ಟಿದ್ದು ಕ್ರಿಸ್ತಪೂರ್ವ 599 ರ ಚೈತ್ರ ಮಾಸ ಶುಕ್ಲ ಪಕ್ಷದಂದು. ಅರ್ಥಾತ್ 6 ನೆ ಶತಮಾನ. ಕೆಲವು ದಾಖಲೆಗಳ ಪ್ರಕಾರ ಇಸವಿ ಕ್ರೈಸ್ತ ಪೂರ್ವ 540 ಇದದ್ದು ಕಂಡು ಬರುತ್ತದೆ. ತಂದೆ ಸಿದ್ಧಾರ್ಥ, ತಾಯಿ ತ್ರಿಶಲಾದೇವಿ. ಇಂದಿನ ಬಿಹಾರ ರಾಜ್ಯದ ಪಾಟ್ನಾದ ಸಮೀಪದ ಕುಂಡಲಗ್ರಾಮ. ಆಗರ್ಭ ಶ್ರೀಮಂತ ಮನೆತನದಲ್ಲಿ ಜನಿಸಿದರು. ಓದಿನಲ್ಲಿ ಪರಿಣಿತನಾಗಿದ್ದರಿಂದ ಇವರು ಗುರುಗಳಿಗೆ ಅಚ್ಚುಮೆಚ್ಚು. ಗುರುಗಳು ಪ್ರೀತಿಯಿಂದ ಸನ್ಮತಿ ಎಂದು ಕರೆಯುತ್ತಿದ್ದರು. ದೇಶವನ್ನು ಸುತ್ತಿ, ಎಲ್ಲ ಜನರ ಸ್ಥಿತಿ ಗತಿಗಳನ್ನು , ಜೀವನದ ಸಾರವನ್ನು ತಿಳಿದು, ಸಕಲ ವೈಭೋಗ ಹೊಂದಿದ್ದರೂ, ಎಲ್ಲವನ್ನೂ ತಿರಸ್ಕರಿಸಿದರು. ಜೈನ ಧರ್ಮದ ಬಗ್ಗೆ ಅರಿತು ಕೊಂಡು, ಜೈನ ಧರ್ಮದ ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಾ, ಮನೆ ಮತ್ತು ಸಂಬಂಧಗಳನ್ನು ತೊರೆದು, ಹಲವು ವರ್ಷಗಳ ಕಾಲ ತಪಸ್ಸು ಮಾಡಿದರು. ಜ್ಞಾನೋದಯ ಪಡೆದು ಜನರಿಗೆ ಜೈನ ಧರ್ಮದ ಬಗ್ಗೆ ತಿಳಿಸಿ, ಹಿಂಸೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮಹಾವೀರರು ಹುಟ್ಟುವ ಎಷ್ಟೋ ವರ್ಷಗಳ ಮೊದಲು ಜೈನ ಧರ್ಮ ಇತ್ತಾದರೂ, ಮಹಾವೀರರಿಂದ ಜೈನ ಧರ್ಮ ಅತಿ ಹೆಚ್ಚು ಪ್ರಚಲಿತವಾಯಿತು.
ಇವರ ಭೋದನೆಯಿಂದ ಜನರಿಗೆ ಹೆಚ್ಚು ಹೆಚ್ಚು ಹತ್ತಿರವಾಯಿತು. ಇವರ ತತ್ವ ಮತ್ತು ಪರಿಕಲ್ಪನೆಗಳನ್ನು ಜನ ಮೆಚ್ಚಿ, ಜೈನ ಧರ್ಮದತ್ತ ವಲವು ತೋರಿಸಿ, ಹಿಂಸೆಗೆ ಕಡಿವಾಣ ಹಾಕಿದರು. ಇದರ ಪರಿಣಾಮ ಅಂದಿನಿಂದ ಇಂದಿನವರೆಗೂ ಜೈನರು ಸಸ್ಯಹಾರಿಯಾಗಿ ಉಳಿದು, ಅನೇಕ ಜೀವ ಸಂಕುಲವನ್ನು ಉಳಿಸಿದ್ದಾರೆ ಎಂದು ಗರ್ವದಿಂದ ಹೇಳಿದರು ತಪ್ಪಿಲ್ಲ. ಪರಿಶುದ್ಧತೆ , ನಿರ್ಮಲತೆ ಮತ್ತು ವ್ಯಸನ ಮುಕ್ತ ಚಟುವಟಿಕೆಗಳಿಗೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದಾರೆ. ಭಾರತದ ಕೆಲವು ಭಾಗಗಳಲ್ಲಿ ಅಂದರೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ, ರಾಜಸ್ತಾನ, ಬಿಹಾರ, ಜಾರ್ಖಂಡನಲ್ಲಿ ಜೈನರು ಹೆಚ್ಚಾಗಿ ಕಂಡು ಬರುತ್ತಾರೆ. ಹೆಮ್ಮೆ ಇಂದ ಹೇಳುವ ಮತ್ತೊಂದು ವಿಚಾರವೆಂದರೆ ಜೈನರ ಮನೆ ಮಾತು ಕನ್ನಡವಾಗಿರುವುದು ವಿಶೇಷ. ಹಿಂಸೆಯನ್ನು ಮಾಡದೆ ಬದುಕಿ; ಉಳಿದವರಿಗೂ ಬದುಕಲು ಅವಕಾಶ ಕಲ್ಪಿಸಿಕೊಡಿ. ಮಹಾವೀರರು ಮತ್ತು ಜೈನ ಧರ್ಮ ಹೇಳಿದ ತತ್ವ ಸಿದ್ಧಾಂತಗಳನ್ನು ಪಾಲಿಸುತ್ತಾ ಮಹಾವೀರರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ. ಎಲ್ಲ ಜೀವಿಗಳಿಗೆ ಬದುಕುವ ಹಕ್ಕು ಸಿಗಲಿ. ಎಲ್ಲರಿಗೂ ಮಹಾವೀರ ಜಯಂತಿಯ ಶುಭಾಶಯಗಳು.
ಬದುಕು, ಬದುಕಲು ಬಿಡಿ.

———————————————–


ಇರಾಜ ವೃಷಭ ಎ.

Leave a Reply

Back To Top