ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ನ್ಯಾಯದ ದಾರಿ

ಕಣ್ಣೊಳಗಿನ ಕನಸು ಕಣ್ಣಿರಾಗಿ
ಮನದೊಳಗಿನ ಆಸೆಗಳು ನುಚ್ಚು
ನೂರಾಗಿ ನಡೆಯೋ ದಾರಿಗೆ
ಮಾರಿಯಾಗಿ ನಿಂತಿರಲು ಈ ಬದುಕು
ಮುಳ್ಳಿನ ಹಾಸಿಗೆಯ ತವರು..!!

ಬೆಣ್ಣೆ ಕೈಯಲ್ಲಿದ್ದರು ತುಪ್ಪಕ್ಕೆ
ಅಲೆಯಬೇಕು ಅಲೆದಾಡಿ
ತುಪ್ಪವನ್ನ ತಂದರು
ತಿನ್ನೋಕೆ ಕಾಯಬೇಕು..!!

ಕಂಡಂತ ಕನಸು ನನಸಾದಾಗ
ಬದುಕು ಬೃಂದಾವನದ ಅರಮನೆಯಂತೆ
ಅದೆ ಕನಸು ಕ್ಷಣದಲ್ಲೇ ಚಿದ್ರವಾದರೆ
ಇದೆ ಬದುಕು ಪಾಪದ ಸೆರೆಮನೆಯಂತೆ..!!

ಮಾನವ ಹುಟ್ಟಿನಿಂದ ಮತ್ತೆ ಮಣ್ಣು
ಸೆರೋವರೆಗೂ ಅವನ ಬದುಕಿನಲ್ಲಿ
ಬಂದು ಹೋಗೋ ಎಲ್ಲಾ ಸಮಸ್ಯೆಗಳಿಗೆ
ಅವನೆ ಉತ್ತರ ಹೇಳಬೇಕು ತನ್ನ ಬದುಕಿಗೆ
ನ್ಯಾಯದ ದಾರಿ ಹುಡುಕಬೇಕು..!!

ಇದುವೇ ಸರಿಯಾದ ಬದುಕು ಅಲ್ವಾ


Leave a Reply

Back To Top