ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ ಕವಿತೆ-ಭಾವತರಂಗ

ಕಾವ್ಯ ಸಂಗಾತಿ

ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ

ಭಾವತರಂಗ

ರಾತ್ರಿಯ ನೀರವತೆಯಲಿ
ಮನದ ಅಂತರಂಗದಲಿ
ಭಾವನೆಗಳ ಅಲೆಗಳಲಿ
ಮನಸು ನಕ್ಕು ಅಳುವದು

ಲೋಕಾಂತದಲಿಯ ಮಾತು
ಏಕಾಂತದಲಿ ಮೆಲುಕು ಹಾಕಿ
ದುಃಖಾಂತವೊ ಸುಖಾಂತವೊ ಅರಿಯದೆ ಶಾಂತವಾಗುವವು

ಭಾವನೆಗಳೆ ಬದುಕು ನಡೆಸುವವು
ಕೈ ಹಿಡಿದು ಮುನ್ನೋಡಿಸುವವು
ಮಗುದೊಮ್ಮೆ ದಾರಿ ತಪ್ಪಿಸುವವು
ಬುದ್ಧಿಯ ಸಂಗಾತಿ ಬೆಳಗಿಸುವದು

ಭಾವತರಂಗಗಳಲಿ ಸಿಲುಕದೆ
ಅಂತರಂಗದಾಳದಲಿ ಇಳಿದು
ಗುರುವೇ ಅರಿವಿನ ಬಳಿನಿಂತಾಗ
ಶಾಂತಿಯಲೆಗಳು ಮೇಲೇರುವವು


Leave a Reply

Back To Top