ಕಾವ್ಯ ಸಂಗಾತಿ
ಸಂಧ್ಯಾರಾಗ
ಬದುಕು
ರಂಗೋಲಿ ಬಿಡಿಸೋದು ಅವಳಿಗೆ ಬಾಳೆಹಣ್ಣು ಸುಲಿದಷ್ಟು ಸರಳ
ಚುಕ್ಕೆಗಳ ಸಂಖ್ಯೆ ಅವಳಿಗೆ ನಿರರ್ಗಳ…
ಆದರೆ ಅವಳ ಬದುಕು ರಂಗೋಲಿಯ ತರಹ
ನೋಡೋರಿಗೆ ಸುಂದರ
ಒಳಗೊಳಗೆ ನೇರ ವಕ್ರ ರೇಖೆಗಳ ಹಂದರ…
ಎಲ್ಲಿ ಆರಂಭ ಎಲ್ಲಿ ಅಂತ್ಯ ಒಂದೂ ತಿಳಿಯದು
ಒಂದು ಚುಕ್ಕಿ ತಪ್ಪಿದರೂ ಚಿತ್ರ ಪೂರ್ಣವಾಗದು..
———————-
ಸಂಧ್ಯಾರಾಗ