ಕಥಾ ಸಂಗಾತಿ
ಸರೋಜಾ. ಗಡಾದ
“ಪ್ರತ್ಯಕ್ಷ ಕಂಡರೂ ಪ್ರಮಾಣಿ ಸಿ ನೋಡು,”
ನನ್ನ ಮಗಳು ವನಜಾಳ ಮದುವೆ ಸಂಭ್ತಮ. ಇವತ್ತು ಬಳೆ ತೊಡಿಸುವ ಕಾರ್ಯಕ್ರಮ. ಬಳೆ ತೊಡಿಸಿಕೊಳ್ಳಲು. ಬಂದ ಹಾಗೂ ಊರಿನಿಂದ ಬಂದಂತಹ ಹೆಂಗಳೆಯರ ಕಲ ಕಲ ಮಾತುಗಳ ಕಲರವ. ಬಳೆ ತೊಡಿಸುವವಳು ನನ್ನ ಮಗಳಿಗೆ ಬಳೆ ಹಾಕುತ್ತಿದ್ದಳು . ಇದನ್ನು ಕಂಡು ನಮ್ಮ ಊರಿನ ಬಳೆಗಾರನ ಮುಖ ನನ್ನ ಕಣ್ಣು ಮುಂದೆ ನಿಲ್ಲುತ್ತದೆ. ಅವನ ಮುಖದಲ್ಲಿ ಕಂಡು ಬಂದ ಭಯ! ಜುಗುಪ್ಸೆ ತುಂಬಿದ ಮುಖ. ಅವನ ಕಣ್ಣಲ್ಲಿ ನಾನು ಹೇಗೆ ಕಂಡಿರಬಹುದು. ಇಂದ್ರಿಯಗಳು ಕಂಡದ್ದನ್ನು ಕಾಣಿಸುವ ಕೇಳಿದ್ದನ್ನು ಕೇಳಿಸುವ ಕೆಲಸವನ್ನಷ್ಟೆ ಮಾಡುತ್ತವೆ. ಒಂದೊಂದು ಸಲ ಅದು ಸತ್ಯವಾಗಿರಬಹುದು. ಇಲ್ಲ ಸತ್ಯ ಬೇರೆಯೇ ಆಗಿರಬಹುದು. ಆದ್ದರಿಂದ ಹಿಂದಿನವರು “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು” ಎನ್ನುತ್ತಾರೆ. ಈಗಾದದ್ದು ಹಾಗೇ. ಅವನು ಕಂಡಿದ್ದು ಸತ್ಯವಲ್ಲ. ನನ್ನ ತಪ್ಪು ಇಲ್ಲದೆ ತಪ್ಪಿತಸ್ಥಳಾಗಿದ್ದೆ. ಮುಂದೆ ಯಾವಾಗಲೋ ಆಗುವ ಅಹಿತ ಘಟನೆ ಅವನ ಮೂಲಕ ದೇವರು ತಡೆದಿರಬಹುದು. ಆ ಸಮಯಲ್ಲಿ ನನ್ನ ತಾಯಿ ಬಂದಿದ್ದರೆ, ಆಕೆಯ ಮೂಲಕ ತಡೆದಿದ್ದರೆ ಒಳ್ಳೆಯದಿತ್ತು ಎಂದು ಈಗಲೂ ಅನ್ನಿಸುತ್ತಿದೆ. ಆಕೆ ನನ್ನ ಮೇಲೆ ಅನುಮಾನ ಪಡಲು ಸಾಧ್ಯವಿಲ್ಲ. ಅಷ್ಟು ನಂಬಿಕೆ ನನ್ನ ಮೇಲೆ. ಮೂವತ್ತೇಳು ವರ್ಷಗಳಾದರೂ ಆ ಘಟನೆ ನೆಪಾಗುತ್ತದೆ. ಬಳೆಯ ಸಂಧರ್ಭ ಬಂದಾಗಂತು ಅದು ನೆನಪಾಗುತ್ತದೆ. ಘಟನೆ ದೊಡ್ಡದೇನು ಅಲ್ಲ. ಒಬ್ಬ ಒಳ್ಳೆಯ ಮನುಷ್ಯನಿಗೆ ತಪ್ಪಾಗಿ ಕಾಣಿಸಿದೆನಲ್ಲ. ಎಂಬುದೇ ನೋವಿನ ಸಂಗತಿ. ಆಗಲೆ ನನ್ನ ತಾಯಿಗೆ ಈ ವಿಷಯ ತಿಳಿಸಿದ್ದರೆ. ಆಕೆ ಬೈಗಾರನಿಗೆ ನಿಜವಿಷಯವನ್ನು ಹೇಳುತ್ತಿದ್ದಳು. ನಾನು ಆ ಕೆಲಸವನ್ನೂ ಮಾಡಲಿಲ್ಲ. ಆ ಘಟನೆ!? ಸುಂದರ ಪರಿಸರವಿರುವ ಹಳ್ಳಿಯಲ್ಲಿ ಜನಸಿದವಳು, ಮೂರು ಜನ ಅಣ್ಣಂದಿರು, ಒಬ್ಬ ಅಕ್ಕ,ನಾನೇ ಕೊನೆಯವಳು. ಅಣ್ಣಂದಿರು ಬೇರೆ ಊರುಗಳಲ್ಲಿ ನೌಕರಿ ಮಾಡುತ್ತಿದ್ದರು, ಅಕ್ಕನಿಗೆ ಮದುವೆಯಾಗಿತ್ತು, ನಮ್ಮ ತಂದೆ ತೀರಿ ಕೊಂಡಿದ್ದರು, ನನಗಾಗ ಹದಿನಾಲ್ಕು , ಹದಿನೈದು ವಯಸ್ಸು ಇರಬಹುದು. ಹಳ್ಳಿಯಲ್ಲಿ ಅತ್ತೆ, ಅವ್ವ, ಅಕ್ಕ, ಅಮ್ಮ, ಎಂದು ಕರೆಯುತ್ತಾರೆ. ಅದರಂತೆ ನಮ್ಮ ತಾಯಿಗೂ ಕೂಡ, ಒಂದಿಬ್ಬರು, ಅಣ್ಣ, ತಮ್ಮ,ಇದ್ದರು, ಅವರು ನಮ್ಮ ತಾಯಿಗೆ ಅಕ್ಕ ಎಂದು ಕರೆಯುತ್ತಿದ್ದರು. ತಮ್ಮ, ನಮ್ಮ ತಂದೆ ಇದ್ದಾಗಿಂದ ಸಣ್ಣ ಪುಟ್ಟ ಕೆಲಸ ನೀರು ತಂದು ಹಾಕುವುದು ಭಾವಿ ಯಿಂದ, ಮನೆಗೆ ಬೇಕಾಗುವ ಸಾಮಗ್ರಿಗಳನ್ನು ತರುವುದು, ಮುಂತಾದವನ್ನು ಮಾಡುತ್ತಾರೆ. ತಮ್ಮ ಅಷ್ಟೊಂದು ತಮಾಷೆ ಮಾಡುತ್ತಿರಲಿಲ್ಲ. ಅಣ್ಣ ಹಾಗಲ್ಲ, ಅವನು, ಅವನ ,ತಮ್ಮ, ಹರಟೆ, ಮಾತು, ನಗು ಎಲ್ಲವೂ ಇರುತಿತ್ತು. ನಮ್ಮ ತಾಯಿ ಅಡುಗೆ ಮಾಡುತ್ತ ಅವರ ಮಾತಿನಲ್ಲಿ ಭಾಗಿಯಾಗುತಿದ್ದಳು . ನಾನು ಅಲ್ಲಿಯೆ ಇರುತಿದ್ದೆ. ನನಗೂ ಒಂದೊಂದು ಸಲ ತಮಾಷೆ ಮಾಡುತ್ತಾ ,”ಅಕ್ಕ ಈಕೆಯನ್ನು ಮದುವೆ ಯಾಗುತ್ತೇನೆ, ” ಎನ್ನುತಿದ್ದ, “”ನಾನು ಮದುವೆ ಆಗುವುದಿಲ್ಲ ನಿನ್ನನ್ನು ಮೊದಲೇ ಆಗುವುದಿಲ್ಲ”,” ಅಂದರೆ “ಇಲ್ಲ ನಿನ್ನನ್ನೇ ಮದುವೆಯಾಗುವುದು, “”ಎಂದು ರೇಗಿ ಸುತ್ತಿದ್ದ. “ನೋಡವ್ವ ಇವನನ್ನು, ನಮ್ಮ ತಾಯಿಗೆ ಹೇಳಿ ಅವನಿಗೆ ಹೊಡೆಯಲು ಹೋಗುತ್ತಿದ್ದೆ, “ತಮಾಷೆಗೆ ಅಂತಾನ, ನೀನ್ಯಾಕೆ ಬೇಸರ ಮಾಡಿಕೋತಿ,” ಎನ್ನು ತಿದ್ದರು, ಹೀಗೆ ನಡೆಯುತ್ತಿತ್ತು, ಅವನು ಬೇರೆ ಊರಿಗೆ ಕೆಲಸಕ್ಕೆಂದು ಹೋಗಿದ್ದ ಯಾವಾಗಾದರೂ ಊರಿಗೆ ಬಂದಾಗಲೆಲ್ಲಾ, ನಮ್ಮ ಮನೆಗೆ ಬರುತ್ತಿದ್ದ, ಊರಿನ ಸುದ್ದಿ ಹೇಳುವುದು ಹರಟೆ ಹೊಡೆಯುತ್ತಾ ಒಂದೊಂದು ಸಲ ನಮ್ಮ ತಾಯಿ ಇಲ್ಲದಾಗ ಅಕ್ಕ ಎಂದು ಕೇಳಿಕೊಂಡು ಬರುವ,” ಆಕೆ ಹೊಲಕ್ಕೆ ಹೋಗಿದ್ದಾರೆ “ಎಂದರೆ ನನ್ನೊಂದಿಗೆ ಹರಟುತ್ತಾ,ಕೂಡುತಿದ್ದ, ಹೀಗೆ ನಗು, ಮಾತು, , ಹೀಗೆ, ಮೂವತ್ತು ದಾಟಿ ದರೂ ಮದುವೆಯಾಗಿರಲಿಲ್ಲ , ಅವರಿಗೆ ತಂದೆ ತಾಯಿ, ಇಬ್ಬರೂ ತೀರಿ ಕೊಂಡಿ ದ್ದರು. ನಮ್ಮ ತಂದೆ ತಾಯಿ ಅವರಿಗೆ ಸಹಾಯ ಮಾಡುತಿದ್ಧರು, ನಮ್ಮ ಊರಿಗೆ ಬೇರೆ ಹಳ್ಳಿ ಯಿಂದ ಒಬ್ಬ ಬಳೆಗಾರ ಬರುತಿದ್ದ.ನಮ್ಮಮನೆಗೂ ಬಂದು ನಮ್ಮತಾಯಿಗೂ ನನಗು ಬಳೆ ತೊಡಿಸುತಿದ್ದ.ಬಹಳಷ್ಟು ಮಾತನಾಡುತಿದ್ದ “ತಂಗಿ ಯಾರಿಗೆ ಬಳೆ ತೊಡಿಸುವುದು ಬಹಳಸುಲಭ ಕೈ ಬಹಳ ಮೃದುವಾಗಿ ಇದಾವು ಒಂದು ಬಳೆ ಒಡಿಯೋದಿಲ್ಲ,” ಎನ್ನುತಿದ್ದ, ಅವನಿಗೂ ಇಪ್ಪತ್ತಾರು ವರ್ಷ ಇರಬಹುದು.ಊರಲ್ಲಿ ಮದುವೆ ಯಾವುದೇ ಶುಭ ಕಾರ್ಯಕ್ಕೆ ಅವನೇ ಬಳೆ ತೊಡಿಸುವುದು, ನನ್ನ ಕಂಡರೆ ವಿಶೇಷವಾದ ಪ್ರೀತಿ, ವಿಶ್ವಾಸ, ಕಾಳಜಿ, ಗೌರವ, ಅವನ ಮಾತಿನಲ್ಲಿ “ವ್ಯಕ್ತ ‘ಆಗುತಿತ್ತು, ಹೀಗೆ ಒಂದು ದಿನ ಅವನು ಬಂದಿದ್ದ ನಮ್ಮ ತಾಯಿ ಇಲ್ಲದಾಗ, ಒಂದು ನಾಲ್ಕೈದು ಬಾರಿ ಬಂದಿದ್ದ, ಅವತ್ತು ಹಾಗೆ ಮಾತನಾಡಲು ತೊಡಗಿ ದಾಗ ಅವನ ಯಾವುದೋ ಮಾತಿಗೆ ನಾನು ಜೋರಾಗಿ ನಗುತ್ತಾ ಮಾತಾಡುತ್ತಿದ್ದೆ. ಅದೇ ಸಮಯದಲ್ಲಿ ಬಳೆಗಾರ ಬಳೆ, ದುಡ್ಡು ಕೇಳಲು ಬಂದಿದ್ದ. ನಮ್ಮ ಜೋರಾದ ನಗು ಅಪಾರ್ಥಕ್ಕೆ ಎಡೆ ಮಾಡಿಕೊಟ್ಟಿತು
“ಬಳೆ ದುಡ್ಡು” ಅರ್ಧ ಶಬ್ದ ಹೊರ ಬಂತು.ಅವನ ಮುಖ ನಡುಗಿತು, ತಿರಸ್ಕಾರ, ಜಿಗುಪ್ಸೆ,ಭಯ, ಆತಂಕ,! ನನಗೆ ಏನೂ ಮಾಡಲು ತಿಳಿ ಯಲಿಲ್ಲ,ಯಾಕೆ? ಅವನ ಮುಖದಲ್ಲಿ ಇಷ್ಟೊಂದು ಭಾವನೆಗಳು ಅವನ್ಯಾಕೆ ನಮ್ಮನ್ನು ಹೀಗೆ ನೋಡುತ್ತಿದ್ದಾನೆ? ಹೀಗೆ ಇವನ ಜೊತೆ ಕುಳಿತದ್ದು ತಪ್ಪೆ? ಹೀಗೆ ಗರಬಡಿದಂತೆ ಆಯ್ತು’, ಆದರೂ ಸಾವರಿಸಿಕೊಂಡು, “ನಮ್ಮ ತಾಯಿ ಇಲ್ಲ ನಾಳೆ ಬಾ” ಎಂದೆ , ಆದರೂ ನಾನು ಗರ ಬಡಿದಂತೆ ಕುಳಿತಿದ್ದೆ . ಅವನು ಗಂಭೀರವಾಗಿ ಕುಳಿತಿದ್ದ ಆನಂತರ ಅವನು “ನಿಮ್ಮ ತಾಯಿಗೆ ಹೇಳಬೇಡ ನಾನು ಬಂದದ್ದು,” ಎಂದು ಎದ್ದು ಹೋದ .ನನಗಿನ್ನೂ ಶಾಕ್ ಆಯಿತು, ಹಾಗಿದ್ದರೆ, ಅವನ ಉದ್ದೇಶ ಕೆಟ್ಟದಿತ್ತು!? ಅವನ ಬಗ್ಗೆ ಜುಗುಪ್ಸೆ ಉಂಟಾಯಿತು , ಎಷ್ಟೋ ಸಮಯ ಹಾಗೆ ಕುಳಿತಿದ್ದೆ ಆ ಬಳೆಗಾರನ ಮುಖವೆ ನನ್ನ ಕಣ್ಣಿಗೆ ಕಟ್ಟಿದಂತೆ ಒಬ್ಬ ವ್ಯಕ್ತಿ ಹತ್ತಿರ ಯಾರು ಇಲ್ಲದಾಗ ಹಾಗೆ ಕುಳಿತುಕೊಂಡಿ ರುವುದು ತಪ್ಪೆ? ಹೀಗೆ ನಾನಾ ಬಗೆಯ ಭಾವನೆ ಗಳು ಭಯ ನನ್ನನ್ನು ಕಾಡಿತು.,ಪ್ರತಿಯೊಂದನ್ನು ನನ್ನ ತಾಯಿ ಮುಂದೆ ಹೇಳುವ ನಾನು ಇದನ್ನು ಹೇಳಲೇ ಇಲ್ಲ, ಯಾಕೋ ಗೊತ್ತಿಲ್ಲಾ, ಮುಂದೆ ಎಷ್ಟೋ ದಿನ ಭಯದಿಂದ ಕಳೆದೆ, ಎಲ್ಲಿ ಬಳೆಗಾರ ಹಣ ಕೇಳಲು ಬಳೆ ತೊಡಿಸಲು ಬರುತ್ತಾನೊ ಅವನ ಮುಖ ಹೇಗೆ ನೋಡಲಿ? ಹೇಗೆ ಎದುರಿಸಲಿ ಎಂದು. ಹೀಗೆ ಇರಲು ಬಳೆಗಾರ ಬರಲೇ ಇಲ್ಲ .ನಮ್ಮ ಊರಿಗೆ ಬರಲಿಲ್ಲ ನಮ್ಮ ಮನೆಗೆ ಅಷ್ಟೇ ಬರಲಿಲ್ಲವೋ ಗೊತ್ತಿಲ್ಲ. ನಾನು ನಿರಾಳವಾಗಿ ಉಸಿರು ಬಿಟ್ಟೆ ,ಇವನೂ ನಮ್ಮ ಮನೆಗೆ ಬರಲಿಲ್ಲ ತೊಲಗಿತು ಪೀಡೆ ಎಂದು ಕೊಂಡೆ , ಬಳೆಗಾರನಿಗೆ ನನ್ನ ಮೇಲೆ ಅಷ್ಟೊಂದು ನಂಬಿಕೆ ವಿಶ್ವಾಸ, ಇದ್ದಿದ್ದರೆ ನಮ್ಮ “ತಾಯಿ”ಗೆ ,”ತಂಗಿ ಯಾರಿಗೆ ಗೊತ್ತಾಗುವುದಿಲ್ಲ ನಾನು ಬಂದಾಗ ಯಾರೋ ಇದ್ರು, ಸ್ವಲ್ಪ ವಿಚಾರಿಸಿ” ಎನ್ನಬಹುದುದಿತ್ತು,ಇಲ್ಲ ನನ್ನ ಬಳಿ, ಬಂದು “ಯಾರು ಇಲ್ಲದಾಗ ಹಾಗಿರುವುದು ಸರಿಯಲ್ಲ ಎಂದಿದ್ಧರೆ” ನಾನು ನಿಜ ವಿಷಯ ತಿಳಿಸಿ “ನೀನು ಹೇಳಿದ್ದು ಒಳ್ಳೆಯ ದಾಯ್ತು ನಮ್ಮ ತಾಯಿಗೆ ಹೇಳುತ್ತೇನೆ” ಎನ್ನತಿದ್ಧೆ, ಅವನು ಹಾಗೆ ಮಾಡಿಲ್ಲ ಎಂದರೆ ನಾನು ಹಾಗೆ ಎಂದು ಕೊಂಡಿರಬೇಕು. ನಮ್ಮ ತಾಯಿ ಒಂದು ಸಲ “ಬಳೆಗಾರ ಬಸಪ್ಪ ಬಂದಿದ್ದನಂತೆ ನಮ್ಮ ಮನೆಗೆ ಯಾಕೋ ಬಂದಿಲ್ಲ ಹಣ ಕೇಳಾಕು ಬಂದಿಲ್ಲ ನಾನು ಮನೇಲಿ ಇರೋದಿಲ್ಲ ಅದಕ ಮಲ್ಲವ್ವನ ಕೈಯಾಗ ರೊಕ್ಕಾ ಕೊಟ್ಟ ಬಂದೆ ಅಂವ ಬಂದ್ರ ಕೊಡು ಅಂತ” ಅಂದಳು ಅವನು ಬರದೆ ಇರುವ ಕಾರಣ ನನಗೆ ಗೊತ್ತು ಆದರೂ ಸುಮ್ಮನಾದೆ ಆಗಲಾದರೂ ನಮ್ಮ ತಾಯಿಗೆ ಹೇಳಿದ್ದರೆ ಅವನನ್ನು ಕರೆದು ಮಾತನಾಡುತ್ತಿದ್ದಳು ಅದು ಹೊಳೆಯಲಿಲ್ಲ. ಅವನು ಬರಲಿಲ್ಲ ಅಷ್ಟೇ ಸಾಕು ಎನಿಸಿತು, ಮುಂದೆ ಮೂರು ವರ್ಷಕ್ಕೆ ನನ್ನ ಮದುವೆ. ಹಳ್ಳಿಯಾಗಿದ್ದರಿಂದ ಹದಿನೆಂಟು ತುಂಬಿತ್ತು ಒಳ್ಳೆಯ ಹುದ್ದೆಯಲ್ಲಿರುವ ದೂರದ ಸಂಬಂಧಿ ಯೊಂದಿಗೆ ನನ್ನ ಮದುವೆ ನಿಶ್ಚಯ,ವಾಯ್ತು .ನನ್ನ ಬಗ್ಗೆ ನನಗೆ ಯಾವುದೇ ಪಾಪ ಪ್ರಜ್ಞೆ ಇರಲಿಲ್ಲ, ನನ್ನ ತಪ್ಪು ಇರಲಿಲ್ಲ . ಒಂದು ಅಹಿತಕರವಾದದ್ದು ಏನು ನಡೆದಿಲ್ಲ, ಮದುವೆ ಸಂಭ್ರಮ ಶುರುವಾಯಿತು, ಬಳೆ ತೊಡಿಸುವ ಕಾರ್ಯಕ್ರಮಕ್ಕೆ ನಮ್ಮ ಊರಲ್ಲಿ ಒಬ್ಬಳು ಬಳೆ ವ್ಯಾಪಾರ ಶುರು ಮಾಡಿದ್ದಳು, ನಮ್ಮ ತಾಯಿ ಅಂದಳು “ಈಕೆ ಬಳೆ ಅಷ್ಟೊಂದು ಸರಿ ಇಲ್ಲ ಬಸಪ್ಪನ ಕರೆ ಸಬೇಕು” ಎಂದಳು ಮತ್ತೆ ನನಗೆ ದಿಗಿಲು ಅವನನ್ನು ಹೇಗೆ ಎದುರಿಸಲಿ ಅವನ ಮುಖ ಹೇಗೆ ನೋಡಲಿ? ನಾನೇನು ತಪ್ಪು ಮಾಡಿಲ್ಲ ಎಂದು ಧೈರ್ಯವಾಗಿ ಇದ್ದರೆ, “ಮಾಡೋದು ಮಾಡಿ ಎಷ್ಟು ಭಂಡ ಧೈರ್ಯ” ಎನ್ನಬಹುದು ಮುದುರಿಕೊಂಡು ಕುಳಿತರೆ “ಈಗ ಹೀಗೆ ನಾಚಿಕೆ ಪಟ್ಟರೆ!? ಮೊದಲೇ ಇರ ಬೇಕು ಈ ನಾಚಿಕೆ ” ಅನ್ನಬಹುದು .ನಾನು ಹೇಗೆ ನಡೆದರು ಅದು ತಪ್ಪಾಗಿ ಕಾಣುತ್ತದೆ, ಹೀಗೆ ದಿಗಿಲು ಗೊಂಡಿದ್ದೆ ನಮ್ಮ ತಾಯಿ ಒಂದಿನ “ಬಸಪ್ಪಗ ಬರಾಕ ಆಗುವುದಿಲ್ಲ ಅಂತ ಊರಾಗ ಇರೋದಿಲ್ಲ ಅಂತೆ ಈಕೆಯನ್ನು ಬಳೆ ತೊಡಿಸಲು ಕರೆಸೊಣ” ಎಂದಳು ಮತ್ತೆ ನನಗೆ ನಿರಾಳವಾಯ್ತು. ನನ್ನ ಮದುವೆ ಸಂಭ್ರಮ ದಿಂದ ನಡೆಯಿತು ನಮ್ಮ ಸಂಸಾರ ಶುರುವಾಯಿತು, ಇವರಿಗೆ ಬೆಂಗಳೂರು , ಬೇರೆ ಬೇರೆ ಊರುಗಳಿಗೆ ವರ್ಗಾ ವಣೆ ಈ ಮಧ್ಯೆ ಎರಡು ಮಕ್ಕಳು ಆದವು . ತವರಿಗೆ ಬಂದಾಗ ಅಣ್ಣ ತಮ್ಮ, ಇಬ್ಬರಿಗೂ ಮದುವೆ ಯಾದ ವಿಷಯ ತಿಳಿಸಿದಳು. ನಮ್ಮ ತಾಯಿ, ಮತ್ತೆ ಇಪ್ಪತ್ತು ವರ್ಷ ಆದ ನಂತರ ಅವನು ತೀರಿ ಕೊಂಡ ವಿಷಯ ತಿಳಿಸಿದಳು ಬಳೆ ಗಾರ ಬಸಪ್ಪನ ವಿಷಯ ಗೊತ್ತಾ ಗಲಿಲ್ಲ ನಾನು ಕೇಳಲಿಲ್ಲ.ಈಗ ದೊಡ್ಡ ಮಗ ನೌಕರಿ ಮಾಡುತ್ತ ಬೆಂಗಳೂರಲ್ಲಿ ಇದಾನೆ ನಮ್ಮ ತಾಯಿನೂ ಈಗಿಲ್ಲ , ಈಗ ಅನ್ನಿಸುತ್ತಿದೆ ನಮ್ಮ ತಾಯಿಗೆ ಹೇಳ ಬೇಕಿತ್ತು, ಎಂದು, “ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು”?! ಆದರೆ ಬಳೆ ಗಾರ ಬಸಪ್ಪನಿಗೆ ನಾನು ತಪ್ಪಿತಸ್ಥಳಾಗಿ ಉಳಿದೆ. ಆ ನೋವು ನನ್ನನ್ನು ಕಾಡುತ್ತಿದೆ ಅದಕ್ಕೆ ಹೇಳುವುದು “ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು” ಎನ್ನುವುದು. ನನ್ನ ಫ್ರೆಂಡ್ “ಇಲ್ಲೇನು ಮಾಡ್ತಾ ಇದ್ದೆ ಎಲ್ಲರು ಬಳೆ ತೊಟ್ಟು ಕೊಂಡರು ನೀನು ತೊಟ್ಟುಕೊ”ಎಂದು ಕರೆದು ಕೊಂಡು ಹೋದಳು ನಾನು ನನ್ನ ಮಗಳ ಮದುವೆ ಸಂಭ್ರಮ ದಲ್ಲಿ ಭಾಗಿಯಾದೆ,
ಆಗಿನ ಹಳ್ಳಿಜೀವನದಲ್ಲಿ ಬಳೆಗಾರನ ಮಹತ್ವವನ್ನು “ಈ ಕಥೆ” ತಿಳಿಸಿಕೊಡುತ್ತದೆ, ಮತ್ತು ಸಂಶಯಾಸ್ಪದವಾದವರೊಂದಿಗೆ ಹುಷಾರಾಗಿರಬೇಕು ಆದಷ್ಟು ಬೇಗ ಮನೆಯವರಿಗೆ ತಿಳಿಸಬೇಕು ಎಂಬ ಸಂದೇಶವನ್ನು ಈ “ಕಥೆ”ನೀಡುತ್ತದೆ
————————————
a