ಅರ್ಚನಾ ಯಳಬೇರು-ಗಜಲ್

ಕಾವ್ಯ ಸಂಗಾತಿ

ಗಜಲ್

ನಸು ನಗುತಲಿದೆ ಒಲವ ಮಂದಾರವು ಮನದಲ್ಲಿ ಕೇಳೆನ್ನ ಒಲವೆ
ಕಂಪು ಸೂಸುತಿದೆ ಪ್ರೀತಿ ಸುಮವು ಹೃದಯದಲ್ಲಿ ಕೇಳೆನ್ನ ಒಲವೆ

ನೀಲ ಗಗನದಿ ತಾರೆಗಳು ನಾಚುತಿವೆ ಚೆಲವನೆ ನಿನ್ನ ನೋಡುತಲಿ
ಅಧರಗಳಿಗೆ ಆಲಿಂಗನದ ಬಯಕೆಯು ಮೌನದಲ್ಲಿ ಕೇಳೆನ್ನ ಒಲವೆ

ರಂಗವಲ್ಲಿಯ ಚಿತ್ತಾರವನು ರಸಿಕತೆಯಲಿ ಮೂಡಿಸುವವ ನೀನು
ಮಂದಹಾಸಕೂ ಮುದ್ದಿಸುವ ಆಸೆಯು ಮೊಗದಲ್ಲಿ ಕೇಳೆನ್ನ ಒಲವೆ

ಹೊಸ ಹೊಳಪು ನೀಡಿರುವೆ ಕಂಗಳ ಕನಸುಗಳಿಗೆ ಬಣ್ಣ ಹಚ್ಚುತಲಿ
ಪ್ರೇಮಕಾವ್ಯವಾಗಿ ಹರಿಯುತ್ತಿರುವೆ ಎನ್ನ ಭಾವದಲ್ಲಿ ಕೇಳೆನ್ನ ಒಲವೆ

‘ಅರ್ಚನಾ’ಳ ಬದುಕಿನಲ್ಲಿ ಭರವಸೆಯ ಬೆಳಕು ನೀನಾಗಿ ಬಂದಿರುವೆ
ನಿನ್ನೊಲವು ಝೇಂಕರಿಸುತಿದೆ ಜೀವದ ಕಣಕಣದಲ್ಲಿ ಕೇಳೆನ್ನ ಒಲವ


One thought on “ಅರ್ಚನಾ ಯಳಬೇರು-ಗಜಲ್

Leave a Reply

Back To Top