ಕಾವ್ಯ ಸಂಗಾತಿ
ಡಾ. ಮಾಸ್ತಿಬಾಬು ಅವರ ಕವಿತೆ,ʼನನ್ನದು – ನಿನ್ನದುʼ

ಈ ಜಗದಲ್ಲಿ ತುಂಬಿಹುದು
ನನ್ನದು – ನಿನ್ನದೆಂಬ ಸ್ವಾರ್ಥ
ಇಲ್ಲಿ ಯಾವುದೂ ಶಾಶ್ವತವಲ್ಲ
ಎಂಬುದನು ಮರೆತಿಹರೀ ಮನುಜರು
ಕೂಡಿ ಬಾಳುತ್ತಿದ್ದ ದಿನಗಳು
ಇಂದು ಎಲ್ಲೆಡೆ ಕಣ್ಮರೆಯಾಗಿಹವು
ಎಲ್ಲಿ ಹುಡುಕಿದರೂ ಸಿಗದಾಗಿದೆ
ಪ್ರೀತಿ, ನಂಬಿಕೆ, ವಿಶ್ವಾಸ
ಇದು ನನ್ನದು, ಅದು ನಿನ್ನದೆಂಬ
ದಾಹವು ಹೆಚ್ಚುತಿಹುದು ಮನದಲಿ
ದ್ವೇಷ, ಅಸೂಯೆ ತುಂಬಿ ತುಳುಕುತಿಹುದು
ಈ ಜಗದ ಮನುಜರಲಿ
ಹಳೆಯ ದಿನಗಳು ಮರಳಿ ಬಾರವು
ಇಂದಿನ ಮನುಜರ ಗುಣಗಳು ಬದಲಾಗದೇತಕೇ?
ಇನ್ನಾದರೂ ಬಿಡು ನನ್ನದು-ನಿನ್ನದೆಂಬ ಭಾವ
ಮೂಡಲಿ ಎಲ್ಲರಲಿ ನಮ್ಮದು ಎನುವ ಭಾವ
ಕೂಡಿ ಬಾಳಿದರೆ ಸ್ವರ್ಗ ಸುಖವಲ್ಲವೇ?
ಒಗ್ಗಟ್ಟಿನಲ್ಲಿ ಬಲವಿದೆ ತತ್ವವ ಪರಿಪಾಲಿಸುತ
ಹಗಲಿರುಳು ನಿಸ್ವಾರ್ಥ ಸೇವೆಯಲಿ ದುಡಿಯುತ ಸಾಗು
ನೀನಾಗುವೆ ಜಗ ಮೆಚ್ಚಿದ ಜನನಾಯಕ.
ಡಾ. ಮಾಸ್ತಿಬಾಬು
