ಹಮೀದಾ ಬೇಗಂ ದೇಸಾಯಿ-ಗಜ಼ಲ್

ಕಾವ್ಯ ಸಂಗಾತಿ

ಗಜ಼ಲ್

ಹಮೀದಾ ಬೇಗಂ ದೇಸಾಯಿ

ಒಪ್ಪೊತ್ತು ಉಣ್ಣಾವ್ರ ನೋವು ಹಾಲ್ತುಪ್ಪ ತಿನ್ನಾವ್ರಿಗೇನ ಗೊತ್ತು
ತುತ್ತು ಅನ್ನದ ಕಿಮ್ಮತ್ತು ಸೊಕ್ಕಿ ಚೆಲ್ಲಾವ್ರಿಗೇನ ಗೊತ್ತು

ಹೊಗಿ ನುಂಗಿ ಕಣ್ಣೀರ ಕುಡ್ದು ಕೂಳು ಕುದಿಸಿರೇನ
ಉಟ್ಟ ಸೀರಿ ಮಸಿ ಆಗೋದು ನಗಾವ್ರಿಗೇನ ಗೊತ್ತು

ಮುರುಕ ಗುಡ್ಲಾಗ ಹರಕ ಚಾಪ್ಯಾಗ ಬಾಳೇವು ನಮ್ದು
ಬಣ್ಣದ ಮಾತ ಹೇಳಿ ಊರಾಗ ಮೆರ್ಯಾವ್ರಿಗೇನ ಗೊತ್ತು

ಕಲ್ಲ ಹೊತ್ತ ಬರಿಗಾಲಾಗ ಬಿಸಲ ಮಾರಿಗಿ ಕರಗಬೇಕ
ಕಾಲ ಮ್ಯಾಲ ಕಾಲ ಹಾಕಿ ಕುಂದ್ರಾವ್ರಿಗೇನ ಗೊತ್ತು

ರಟ್ಟೆ ದುಡಿದು ತಿನ್ನೋ ರೊಟ್ಟಿ ಅಮೃತದಂಗ ಬೇಗಂ
ಬಡವರ ರೊಕ್ಕಾ ತಿಂದು ಹೊಟ್ಟೀ ಬೆಳಸಾವ್ರಿಗೇನ ಗೊತ್ತು


Leave a Reply

Back To Top