ಹಮೀದಾಬೇಗಂ ದೇಸಾಯಿ ಅವರ ಕವಿತೆʼಕನಸು…ನನಸು.ʼ

ಕನಸು ಎಂದರೆ
ಎದೆ ತುಂಬ ತುಂಬಿರುವ
ಆಸೆಗಳ ಗೊಂಚಲು…

ಕನಸು ಎಂದರೆ
ಕೈಗೆಟುಕಲಾರದ
ದೂರದಲಿರುವ ಮರೀಚಿಕೆ…

ಕನಸು ಎಂದರೆ
ನಾಳೆಗಳ ಎಳೆಗಳನು
ಇಂದೇ ನೇಯುವ ಭ್ರಮೆಯು…

ಕನಸು ಎಂದರೆ
ವಾಸ್ತವವ ಮರೆಮಾಡಿ
ಇಂದ್ರ ಲೋಕ ತೋರುವ ಮಾಯಾವಿ..

ಆದರೂ..ಒಂದೊಮ್ಮೆ
ಅದುಮಿದಾಸೆಯ ಭ್ರೂಣ
ಬೆಳೆದು ಮೈದಾಳಿ
ನನಸಾಗುವ ಕೂಸು..ಕನಸು !


One thought on “ಹಮೀದಾಬೇಗಂ ದೇಸಾಯಿ ಅವರ ಕವಿತೆʼಕನಸು…ನನಸು.ʼ

Leave a Reply

Back To Top