ಡಿ. ಪಿ. ಯಮನೂರಸಾಬ್ ಅವರ ಕವಿತೆʼನಿದಿರೆʼ

ನಿದಿರೆ ನಿನದೆಂತಾ
ಕರುಣೆ

ನಿನಗಿಲ್ಲ ಮನೆ
ಮಠ

ನೀ ಆವರಿಸಲು ಬೇಡ
ತಡೆ ಹೊದಿಕೆ ದಿಂಬು

ಮುಗ್ಗರಿಸುವೆ ಮೈ
ಕೊರೆವ ಚಳಿಯಲಿ

ರೈಲು ನಿಲ್ದಾಣದಲಿ

ಬೀದಿ ನಾಟಕದ
ಬಯಲು
ಬಲು ಇಷ್ಟ ನಿನಗೆ

ಹೊದಿಕೆ ಇಲ್ಲದ
ಹೊರಾoಡ
ಬಲು ತಂಪು ನಿನಗೆ

ಬುಸುಗುಡುವ
ಸೊಳ್ಳೆ ಗಳಿಗೆ
ನೀ ಬಗ್ಗುವದಿಲ್ಲ

ರಕ್ತ ಹೀರುವ
ತಿಗಣೆ ಗಳಿಗೆ
ನೀ ಜಗ್ಗುವದಿಲ್ಲ

ನಿದಿರೆ
ನಿನದೆಂತಾ ಕರುಣೆ


ನಿದಿರೆ ನಿನದೆಂತಾ
ಕರುಣೆ

ನಿನಗಿಲ್ಲ ಮನೆ
ಮಠ

ನೀ ಆವರಿಸಲು ಬೇಡ
ತಡೆ ಹೊದಿಕೆ ದಿಂಬು

ಮುಗ್ಗರಿಸುವೆ ಮೈ
ಕೊರೆವ ಚಳಿಯಲಿ

ರೈಲು ನಿಲ್ದಾಣದಲಿ

ಬೀದಿ ನಾಟಕದ
ಬಯಲು
ಬಲು ಇಷ್ಟ ನಿನಗೆ

ಹೊದಿಕೆ ಇಲ್ಲದ
ಹೊರಾoಡ
ಬಲು ತಂಪು ನಿನಗೆ

ಬುಸುಗುಡುವ
ಸೊಳ್ಳೆ ಗಳಿಗೆ
ನೀ ಬಗ್ಗುವದಿಲ್ಲ

ರಕ್ತ ಹೀರುವ
ತಿಗಣೆ ಗಳಿಗೆ
ನೀ ಜಗ್ಗುವದಿಲ್ಲ

ನಿದಿರೆ
ನಿನದೆಂತಾ ಕರುಣೆ

Leave a Reply

Back To Top