ಜಯಶ್ರೀ ಭ ಭಂಡಾರಿ.ಗಝಲ್

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭ ಭಂಡಾರಿ

autumn

ಬಂಗಾರ ಬಣ್ಣದ ಧಿರಿಸು ಧರಿಸಿ ಸರಿ ಸಮಯದಿ ಬಂದೆಯಾ ರವಿ.
ಶೃಂಗಾರ ಕಣ್ಣಿಂದ ಅರಿಸಿ ವೃಕ್ಷದ ಸೆರಗಿನ ಮರೆಯಲಿ ನಿಂದೆಯಾ ರವಿ.

ನಿತ್ಯವೂ ನಿಸರ್ಗ ರಮಣೀಯ ಸೌಂದರ್ಯ ಸವಿದು ನಿಂತೆಯಲ್ಲವೇ.
ಸತ್ಯವೂ ಅವಿಸ್ಮರಣೀಯ ಆನಂದವನು ಮನದಿ ತಂದೆಯಾ ರವಿ.

ಬಾನಲಿ ರಂಗಿನ ಓಕುಳಿಯಾಟವ ನೋಡುತ ಮೈಮರೆತು ಹೋದೆ 
ಕಾನನದ ಮರಗಿಡಗಳ ಮೇಲೆ ಬಣ್ಣಗಳ ಹುಯ್ದು  ಮಿಂದೆಯಾ ರವಿ .

ಆಗಸದ ವಿಸ್ಮಯ ಕಾಣುವ ಅದೃಷ್ಟ ಬೇಗ ಎದ್ದವರಿಗೆ ಮಾತ್ರವು.
ಸೊಗ‌ಸಿನ ರಶ್ಮಿಯ ಮೋಡದ ಓಟ ದಿಟ್ಟಿಸು ಈಗ ಎಂದೆಯಾ ರವಿ.

ದೇವನ ಗಮ್ಯ ಕೈಚಳಕ ಕಂಡು ಜಯ ಹಿಗ್ಗುತ ಸಗ್ಗವಾಗಿದ್ದಾಳೆ
ಅವನ ನಿಯಮ ಮೀರಿ ಇಲ್ಲಿ ಏನೂ ನಡೆಯದು ಅಂದೆಯಾ ರವಿ.


Leave a Reply

Back To Top