ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಅವಸರವಿಲ್ಲ.

ನೀನು ಬಂದೆ !!
ಬೆವರ ಹನಿಯ ಲೆಕ್ಕ ಸಿಕ್ಕುವದಿಲ್ಲ
ಹಾಗಾಗಿ ಸುರಿವ ಸೋನೆಯಲಿ ಸೊಗಸಾಗಿ ನೆಂದು ಬಿಟ್ಟೆ
ಮಳೆಬಿದ್ದು ಹದವಾದ
ನೆಲದಿಂದ ಮಣ್ಣವಾಸನೆ
ನಿನ್ನ ಬೆವರಿನಂತೆ ಘಮ ಘಮ !
ಮೋಡಗಳೆಲ್ಲ ಚದುರಿ
ಎದೆಯ ಎರಿಳಿತದಲಿ
ನಿನ್ನದೇ ನಿಟ್ಟುಸಿರು
ಮನವಾಯ್ತು ಮಲ್ಲಿಗೆ
ಮುದುಡುವ ಮುನ್ನ
ಮುಡಿದುಬಿಡು
ಮನಸು ಬಚ್ಚಿಟ್ಟಿರುವದನ್ನು
ಮುಖ ಹೊರ ಗೆಳೆಯುತ್ತದಂತೆ
ತಡೆಯಿಲ್ಲದೇ ನುಡಿದುಬಿಡು
ನಖದ ಗುರುತು ನಿಖರವಾದ
ಗುರಿ ತಲುಪಲಿ
ನಿದ್ದೆಗೀಗ ಅವಸರವಿಲ್ಲ
ಇಮಾಮ್ ಮದ್ಗಾರ




