ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ
ʼಅವಳೊಬ್ಬ ಹೆಣ್ಣುʼ

ಅವಳೇನು ಭುವನ ಸುಂದರಿ ಅಲ್ಲ
ಆದರೂ , ಒಮ್ಮೆ ನೋಡಿದರೆ
ಮತ್ತೆ ಮತ್ತೆ ನೋಡಬೇಕೆನಿಸುವ ಅಂದಗಾತಿ….
ಅವಳೇನು ಅರಸೊತ್ತಿಗೆ ರಾಜಕುವರಿ
ಅಲ್ಲ ಆದರೂ ,
ರಾಜ ಗಾಂಭೀರ್ಯದ
ಗತ್ತು ಹೊತ್ತ ಗಜಗಮನೆ …..
ಅವಳೇನು ಅಂದ ತೋರಿ ಕರೆವ
ಮಾಯಾಂಗನೆ ಅಲ್ಲ ಆದರೂ ,
ಆ ಅಂದಕ್ಕೆ ದಾಸರಾಗದವರಿಲ್ಲ….
ಅವಳೇನು ದೀಪದ ಬೆಳಕಲ್ಲ
ಆದರೂ , ಸುತ್ತ ಮಂದ ಕಾಂತಿ
ಹರಡಿದ ಚಂದ್ರಿಕೆ ಅವಳು …..
ಅವಳೇನು ಹರಿತ ಆಯುಧ ಅಲ್ಲ
ಆದರೂ , ಕೊಲ್ಲುವಳು ಚೂಪಾದ
ಈಟಿಯಂತ ತನ್ನ ನೋಟದಿಂದ ….
ಅವಳೇನು ದೇವತೆ ಅಲ್ಲ
ಆದರೂ , ಅಸ್ತು ಎಂದರೆ
ತಥಾಸ್ತು ಎನ್ನುವಳು …..
ಪರವಿನ ಬಾನು ಯಲಿಗಾರ





Super Mam