ಕಾವ್ಯ ಸಂಗಾತಿ
ಬಣ್ಣ
ರೂಪ ಮಂಜುನಾಥ
ನೀರಿನಲಿ ತೇಲಾಡುವ
ಕೃಷ್ಣವರ್ಣ ಸಿಂಚಿತೆ!
ರಂಗಿನಾ ಲೋಕದಲ್ಲಿ,
ನಿನಗೆ , ನಿನ್ನ ರಂಗಿನದೇನು ಚಿಂತೆ?
ಆದರೂ, ನೀ ಕಾಣುತಿರುವೆ ,
ಹುಣ್ಣಿಮೆಯ ಚಂದ್ರನಲಿರುವ ಕಪ್ಪು ಚುಕ್ಕೆಯಂತೆ!
ಮುಗ್ಧವಾದ ಮಗುವಿಗಿಟ್ಟ,
ದೃಷ್ಟಿಯ ಬೊಟ್ಟಿನಂತೆ!
ಕಪ್ಪುರಂಗಿನಲೂ ಅದೆಂಥ ಬೆಡಗಿಹುದು,
ನಿನ್ನ ನೋಡಿ ಅರಿತೆ!
ಬಣ್ಣವಿಲ್ಲದಾ ಬಗ್ಗೆ ಮಾಡದಿರು ಚಿಂತೆ!
ಬಣ್ಣ, ಏನಾದರೂ ಇರಲಿ,
ಬೆಳೆಯಬೇಕು, ತೋರಿಸುತಲಿ ನಮ್ಮ ಸ್ವಂತಿಕೆ!
ಸುತ್ತಮುತ್ತಲೆಲ್ಲರ ಮಧ್ಯೆ ಎದ್ದು ಕಾಣುವಂತೆ!
ಮುನ್ನಡೆಯನು ಸಾಧಿಸು,
ಎಲ್ಲರೂ ಹುಬ್ಬೇರಿಸುವಂತೆ !
ಬದುಕಿ ತೋರಿಸು,
ಧರಿಸುತಲಿ ಸನ್ನಡತೆ!
ಯಾರು ನಿನ್ನ ಬಣ್ಣದ ಬಗ್ಗೆ ಮಾತನಾಡದಂತೆ!
ಯಾರೂ ನಿನ್ನ ಬಣ್ಣದ ಬಗ್ಗೆ ಮಾತನಾಡದಂತೆ!