ಕಾವ್ಯ ಸಂಗಾತಿ
ನಂಬಿರುವೇ ನೀ ನನಗಾಗಿ
ಚಂದ್ರು ಪಿ ಹಾಸನ್
ಚಂದನವನದ ಚೆಂಗುಲಾಬಿಯೇ
ನಂದನವನವನ್ನೇ ನಿರ್ಮಿಸಿ
ಮುದದಿ ಘಮಘಮಿಸಿ ಅರಳಿ
ನನ್ನೆದೆ ಕದವಾ ಬಡಿದೆಯಾ?
ಮುಂಜಾವಿನ ಭಾಸ್ಕರನು
ಹೊನ್ನ ಬೆಳಕನ್ನು ಎಲ್ಲೆಡೆ ಬೀರಿ
ಜಗ ಜಗಮಗಿಸಿದಂತೆ
ಪ್ರೇಮಕಿರಣವ ನನ್ನಲ್ಲಿ ಚೆಲ್ಲಿದೆಯಾ?
ನಿನ್ನುಸಿರ ಪರಿಮಳವ
ನನ್ನೆದೆಗೆ ಪಸರಿಸಿ
ಹಸನಾದ ಹೃದಯವು
ಹೊಸತನವ ಮಿಡಿದಿದೆ
ನಂಬಿ ಕಾದಿರುವೆ ಓ ಒಲವೇ
ನಿನ್ನ ಚೆಲುವೆಲ್ಲಾ ನನಗಾಗಿ
ಹುಂಬದೊಳ್ ನಿಜ ಹೇಳುವೆ
ನನ್ನ ಬದುಕು ನಿನಗಾಗಿ
ನೆಲೆಸುವೆನು ಹೃದಯದಲ್ಲಿ
ನನಗಾಗಿ ಕಾದಿರುವೆಯಾ
ನಂಬಿರುವೆ ನನ್ನೊಲವೇ
ನನಗಾಗಿ ಅರಳಿರುವೆ.
ನಿಮಗಾಗಿ ಕಾದು ನಿಮ್ಮ ಬಾಳ ಸಂಗಾತಿಯಾಗಿ ಬಂದಾಯಿತು ನನ್ನ ಜೀವನವೇ ನೀವಲ್ಲವೇ…..