ಕಾವ್ಯಯಾನ

ಅನುವಾದ ಸಂಗಾತಿ

Gray Asphalt Road Surrounded by Tall Trees

ಮೂಲ: ರಾಲ್ಫ ಯಾಕೊಬ್ಸೆನ್(ನಾರ್ವೆ ಕವಿ)

Image may contain: 1 person, sitting

ಕನ್ನಡಕ್ಕೆ: ಕಮಲಾಕರ ಕಡವೆ

“ಸೂಕ್ಷ್ಮ ಸೂಜಿಗಳು”

ತುಂಬಾನೇ ಸೂಕ್ಷ್ಮ ಈ ಬೆಳಕು.
ಮತ್ತದು, ಇರುವುದು ಸಹ ಭಾಳ ಕಮ್ಮಿ. ಕತ್ತಲೋ
ಬೃಹತ್ತರವಾದುದು.
ಕೊನೆಯಾಗದ ರಾತ್ರಿಯಲ್ಲಿ
ಸೂಕ್ಷ್ಮ ಸೂಜಿಯಂತೆ ಈ ಬೆಳಕು,
ಮತ್ತದಕ್ಕೆ ಎಷ್ಟು ದೂರ ಕ್ರಮಿಸಬೇಕಿದೆ
ಈ ಪಾಳು ಜಾಗದಲ್ಲಿ.

ಎಂದೇ ಅದರೊಡನೆ ನಯವಾಗಿ ವರ್ತಿಸೋಣ
ಆರೈಕೆ ಮಾಡೋಣ.
ಮತ್ತೆ ಮುಂಜಾನೆ ತಿರುಗಿ ಅದು ಬರಲೆಂದು
ಹಾರೈಸೋಣ.
**********

“Just Delicate Needles”

It’s so delicate, the light.
And there’s so little of it. The dark
is huge.
Just delicate needles, the light,
in an endless night.
And it has such a long way to go
through such desolate space.

So let’s be gentle with it.
Cherish it.
So it will come again in the morning.
We hope.

One thought on “ಕಾವ್ಯಯಾನ

Leave a Reply

Back To Top