ಇತರೆ

ಕಲ್ಲಂಗಡಿ ಹಣ್ಣಿನ ಪೂಜೆ”

Image result for photos of watermelon

ತಾರಾ ಸತ್ಯನಾರಾಯಣ

ನನ್ನ ಮದುವೆಯಾಗಿದ್ದ ಹೊಸದು ಮದುವೆಯಾಗಿ ಹದಿನೈದು ದಿನಕ್ಕೆ ಯುಗಾದಿ ಹಬ್ಬ ಬಂತು ಹಬ್ಬಕ್ಕೆ ನಮ್ಮಿಬ್ಬರನ್ನು ಕರೆದುಕೊಂಡು ಹೋಗಲು ನನ್ನ ಅಣ್ಣ ಬಂದ ಇವರಿಗೆ ಆಫೀಸಿನ ಕೆಲಸದ ನಿಮಿತ್ತ ಚೆನ್ನೈಗೆ ಹೋಗಬೇಕಾದ್ದರಿಂದ ಇವರು “ನಾನು ಬರಲು ಸಾಧ್ಯವಿಲ್ಲ ನೀನು ಹೋಗಿ ಬಾ “ಎಂದು ಹೇಳಿದರು. ನಾನು ಅಣ್ಣನ ಜೊತೆ ತವರಿಗೆ ಹೋದೆ.ಹಬ್ಬ ಮುಗಿಸಿಕೊಂಡು ಅಣ್ಣನ ಜೊತೆ ಗಂಡನ ಮನೆಗೆ ಹೊರಟೆ .ನಾನು ಹೋಗುವ ಹಿಂದಿನ ದಿನ ಅವನ ಫ್ರೆಂಡ್  ತೋಟದಿಂದ ಒಂದೆರಡು ಕಲ್ಲಂಗಡಿ ಹಣ್ಣು ತಂದ. ತುಂಬ ದೊಡ್ಡದಿತ್ತು ಒಂದನ್ನು ಹೆಚ್ಚಿ ತಿಂದೆವು” ಅಣ್ಣ ಹಣ್ಣು ತುಂಬಾ ಚೆನ್ನಾಗಿದೆ ನಾಳೆ ನೀನೊಂದು ಹಣ್ಣು ತಗೊಂಡು ಹೋಗು ಅಲ್ಲಿ ಎಷ್ಟು ದುಡ್ಡು ಕೊಟ್ಟರೂ ಬೆಂಗಳೂರಲ್ಲಿ ಇಂಥ ಹಣ್ಣು ಸಿಗಲ್ಲ” ಅಂದ  ನಾನು ಸರಿ ಎಂದು ದಪ್ಪಗಿದ್ದ ಹಣ್ಣನ್ನು ಎತ್ತಿಟ್ಟುಕೊಂಡು ಮರುದಿನ ಅಣ್ಣನ ಜೊತೆ ಬೆಂಗಳೂರಿಗೆ ಬಂದೆ .ಅಣ್ಣ, “ಗೀತಾ ನಂಗೆ ಇಲ್ಲೇ ಸ್ವಲ್ಪ ಕೆಲಸ ಇದೆ ಮುಗಿಸಿಕೊಂಡು ರಾತ್ರಿ ಮನೆಗೆ ಬರ್ತೀನಿ ಈಗ ನಿನ್ನನ್ನು ಆಟೋ ಹತ್ತಿಸುತ್ತೇನೆ” ಎಂದು ಹೇಳಿದ.ನಾನು ಆಟೋ ಹತ್ತಿ ಮನೆಗೆ ಬಂದೆ ಪುಟ್ಟ ಲಗೇಜ್ಹಿಡಿದು ಕಲ್ಲಂಗಡಿ ಹಣ್ಣನ್ನು ಕೊಂಕಳಲ್ಲಿ  ಇಟ್ಟುಕೊಂಡು ಮನೆಗೆ ಬಂದೆ ಅಲ್ಲೇ ಇದ್ದ ಅಲ್ಲೇ ನನ್ನ ಮೈದುನ “ಏನತ್ತಿಗೆ
ಇಷ್ಟು ದೊಡ್ಡ ಕಲ್ಲಂಗಡಿ ಹಣ್ಣು!! ಎಂದು ಆಶ್ಚರ್ಯ ಪಟ್ಟ. ಆಗ ತಾನೆ ಚೆನ್ನೈಯಿಂದ ಬಂದಿದ್ದ ಇವರು “ಏನು !ಗೀತಾ ಕಲ್ಲಂಗಡಿ ಹಣ್ಣು  ಒಳಗೆ ತಂದ್ ಬಿಟ್ಲಾ?””  ಗೀತ ಏನ್ಮಾಡ್ತಿದಿಯಾ?” ಅಂದುಕೊಂಡು ರೂಮಿನಿಂದ ಆಚೆ ಬಂದರು. “ಹಣ್ಣು ತಗೊಂಡು ಆಚೆ ನಡಿ” ಅಂದಾಗ ನಾನು ಹೆದರಿಕೊಂಡು ಹಣ್ಣು ತಗೊಂಡು ಆಚೆ ಬಂದೆ.  ಇವರು ತಮ್ಮ ನಿಗೆ “ಏನು ನೀನು ಸುಮ್ನೆ ನೋಡ್ತಾ ಇದೀಯಾ? ಅಪ್ಪ ಅಮ್ಮ  ಆಚೆ ಹೋಗಿದ್ದಾರೆ ಇಲ್ಲದಿದ್ದರೆ ಕಲ್ಲಂಗಡಿ ಹಣ್ಣನ್ನು ಪೂಜೆ ಮಾಡದೆ ಒಳಗೆ ತಂದಿದ್ದು ನೋಡಿದ್ರೆ ಎಲ್ಲರಿಗೂ ಗ್ರಹಚಾರ ಬಿಡಿಸೋರು. ಗೀತಾಳಿಗೆ ನಮ್ಮನೆ ಪದ್ಧತಿ ಗೊತ್ತಿಲ್ಲ ನಾವು ಕಲ್ಲಂಗಡಿ ಹಣ್ಣು ತಂದಾಗ ಅದಕ್ಕೆ ಪೂಜೆ ಮಾಡಿ ಅಲ್ವೇ ಒಳಕ್ಕೆ ತರೋದು! ಅಂದ್ರು ತಕ್ಷಣ ಮೈದುನ “ಹೌದೌದು  ನಾನು ಇಷ್ಟು ದಿನ ಅಮೇರಿಕದಲ್ಲಿ ಇದ್ದು ಇಲ್ಲಿಯ ಪದ್ಧತಿ ಮರ್ತೆ ಬಿಟ್ಟಿದ್ದೆ “ಅಂದು, “ಅತ್ತಿಗೆ ಹಣ್ಣನ್ನು ಆಚೆ ಇಟ್ಟು ಪೂಜೆ ಮಾಡಿ “ಅಷ್ಟೊತ್ತಿಗೆ ಒಳಗಡೆಯಿಂದ ನಾದಿನಿ ಬಂದಳು ಕಲ್ಲಂಗಡಿ ಹಣ್ಣು ತಂದ್ರಾ??” ಅತ್ತಿಗೆ ಚೂಡಿದಾರದಲ್ಲಿ ಪೂಜೆ ಮಾಡ್ಬೇಡಿ  ಬನ್ನಿ ಬೇಗ ಹೋಗಿ ಸೀರೆ ಉಟ್ಟುಕೊಂಡು ಬನ್ನಿ “ಅಂದಾಗ,ನಾನು ತಕ್ಷಣ ರೂಮಿಗೆ ಹೋಗಿ ಸೀರೆ ಉಟ್ಕೊಂಡು ಬಂದೆ ನಾದಿನಿ ಅರಿಶಿನ ಕುಂಕುಮ ತಟ್ಟೆ ಕೊಟ್ಲು ಆಮೇಲೆ ದೇವರ ಮುಂದೆ ಇದ್ದ ಹೂವನ್ನು ಕೊಟ್ಲು. ನಾನು ಕಲ್ಲಂಗಡಿ ಹಣ್ಣಿಗೆ ನೀರು ಹಾಕಿ ತೊಳೆದು ಅರಿಶಿನ ಕುಂಕುಮ ಹಚ್ಚಿ ಹೂವು ಹಾಕಿ ಪೂಜೆ ಮಾಡಿದೆ.ಮೈದುನ ಕರ್ಪೂರ ಹೊತ್ತಿಸಿ ಕೊಟ್ಟ ಆಮೇಲೆ ಇವರು ತೆಂಗಿನಕಾಯಿ ಒಡೆದು ಕೊಟ್ಟರು ಅದನ್ನು ಒಡೆದು,ಆರತಿ ಬೆಳಗಿ,ನಮಸ್ಕಾರ ಮಾಡಿದೆ.  ಅಷ್ಟು ಹೊತ್ತಿಗೆ ಆಚೆ ಹೋಗಿದ್ದ ಅತ್ತೆ ಮಾವ ಬಂದರು ಇದನ್ನೆಲ್ಲ ನೋಡಿ “ಏನ್ರೋ ಇದು?  ಅದೇ ಅಮ್ಮಾ, ಕಲ್ಲಂಗಡಿ ಹಣ್ಣು ತಂದರೆ ಅದನ್ನು ಹೇಗೆ ಒಳಗೆ ತಗೊಂಡು ಬರಬೇಕು ಅಂತಹೇಳ್ತಿದ್ವಿ” ಗೀತಾಳಿಗೆ ನಮ್ಮ ಪದ್ಧತಿ ಗೊತ್ತಿರಲಿಲ್ಲ ಅದಕ್ಕೆ ನಾವೆಲ್ಲರೂ ಸೇರಿ ಪೂಜೆ ಮಾಡಿಸಿದ್ದೇವೆ ನೋಡು” ಅಂದ್ರು “ನಿಮ್ಮ ಪೂಜೆಗೆ ಏನು ಹೇಳಲಿ !ನೀವು ಹೇಳಿದ್ರಿ ಪಾಪ ಅವಳು ಮಾಡಿದಳು” ಅಂತ ಅತ್ತೆ ಅಂದಾಗ ಇವರೆಲ್ಲರೂ ಸೇರಿ ನನ್ನನ್ನು ಮೂರ್ಖರನ್ನಾಗಿ ಮಾಡಿದ್ದಾರೆ ಎಂದು ಗೊತ್ತಾದಾಗ ಎಲ್ಲರ ಮೇಲೆ ಸಿಕ್ಕಾಪಟ್ಟೆ ಕೋಪ ಬಂತು.  ಎಲ್ಲರೂ ಸೇರಿ “ಏಪ್ರಿಲ್ ಫೂಲ್” ಅಂದಾಗ ವಿಪರೀತ ಅವಮಾನವಾಗಿ ಕೈಯಲ್ಲಿದ್ದ ಹಣ್ಣನ್ನು ಅಲ್ಲೇ ಎತ್ತಿಹಾಕಿ ರೂಮ್ ಗೆ ಹೋಗಿ ಬಾಗಿಲು ಹಾಕಿಕೊಂಡೆ ಎಲ್ಲರೂ ಬಂದು ನನ್ನನ್ನು ಕರೆಯೋಕೆ ಶುರು ಮಾಡಿದರು ಪ್ಲೀಸ್ ಅಂದರು ಸಾರಿನು ಕೇಳಿದರೂ ನನ್ನ ರೂಮಿನಿಂದ ಯಾವು ದೆ ಶಬ್ದವು ಬರದಿದ್ದಾಗ ಒಂದು ಗಳಿಗೆ ಎಲ್ಲಾ ಹೆದರಿ ಬಾಗಿಲು ಬಡಿಯೋಕೆ ಶುರು ಮಾಡಿದ್ರು.ಎಲ್ಲಾರು ತುಂಬಾನೆ ಹೆದರಿದ್ರು.ನಾನು ಐದು ನಿಮಿಪ ಸುಮ್ಮನಿದ್ದು, ಆಮೇಲೆ ನಾನು ನಕ್ಕೊಂಡು ಇನ್ನೊಂದು ಬಾಗಿಲಿಂದ ಆಚೆ ಬಂದೆ. ಆಗ ಅವರುಗಳ ಮುಖ ಇಂಗು ತಿಂದ ಮಂಗನಂತಾಗಿತ್ತು.

*************************

Leave a Reply

Back To Top