ಲೇಖನ
ಭಾರತದ ಅಪ್ರತಿಮ ಸಮಾಜ
ಸುಧಾರಕ ಬಾಲ ಗಂಗಾಧರ ತಿಲಕ
ಭಾರತಿ ಕೇದಾರಿ ನಲವಡೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವಾರು ಮಹಾನ್ ನಾಯಕರು ತಮ್ಮ ತ್ಯಾಗ ,ದೇಶಭಕ್ತಿ ಹಾಗೂ ಸ್ವಾಭಿಮಾನದಿಂದ ಬದುಕಿ ತಮ್ಮ ಜೀವನವನ್ನೇ ಒಂದು ಸಂದೇಶವನ್ನಾಗಿಸಿದ್ದಾರೆ.ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುವದರೊಂದಿಗೆ ಸಮಾಜಸುಧಾರಣೆಯ ಹರಿಕಾರರಾಗಿದ್ದಾರೆ. ಇಂತಹ ಮಹಾಪುರುಷರಲ್ಲಿಲೋಕಮಾನ್ಯ ಬಾಲಗಂಗಾಧರ ತಿಲಕರವರು ಅಗ್ರಗಣ್ಯರಾಗಿದ್ದಾರೆ.
ಭಾರತೀಯ ಚಿಂತನೆಗಳಿಗೆ ಹೊಸ ಸ್ವರೂಪ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಚೈತನ್ಯ ತುಂಬಿದ ಅಪ್ರತಿಮ ಹೋರಾಟಗಾರ,ಸಂಘಟಕ.ಪತ್ರಕರ್ತ,ಲೇಖಕ, ಅದ್ಯಾತ್ಮ ಚಿಂತಕರಾಗಿ ಭಾರತದ ಇತಿಹಾಸದ ಪುಟಗಳಲ್ಲಿ ಅಜರಾಮರರಾಗಿದ್ದಾರೆ.
ಭಾರತೀಯರ ಮನದಿ ಸಂಪೂರ್ಣ ಸ್ವರಾಜ್ಯದ ಕಿಚ್ಚು ಹಚ್ಚಿ ರಾಷ್ಟ್ರೀಯತಾವಾದದ ಪಿತ ಎಂದು ಚಿರಪರಿಚಿತರಾಗಿದ್ದಾರೆ.
“ಸ್ವಾತಂತ್ರ್ಯವೇ ನನ್ನಜನ್ಮ ಸಿದ್ಧ ಹಕ್ಕು ಅದನ್ನು ಪಡೆದೇ ತೀರುತ್ತೇನೆ”ಎಂದು ಘಂಟಾಘೋಷವಾಗಿ ಘರ್ಜಿಸಿದ ಧೀಮಂತ ಚೇಥನವೆಂದರೆ ತಪ್ಪಾಗಲಾರದು.ಲೋಕಮಾನ್ಯರೆಂದು ಪ್ರಖ್ಯಾತರಾದ ಬಾಲಗಂಗಾಧರ ತಿಲಕ ಇವರು
ಜುಲೈ 23 1865ರಂದು ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ಜನಿಸಿದರು.ತಂದೆ ಗಂಗಾಧರ ತಾಯಿ ಪಾರ್ವತಿಬಾಯಿ.10ನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ಮುಂದೆ 16ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡನು.ಬಾಲ್ಯದಿಂದಲೂ ಜಾಣ ವಿದ್ಯಾರ್ಥಿಯಾಗಿದ್ದ ತಿಲಕರು ಗಣಿತ ವಿಷಯದಲ್ಲಿ ವಿಶೇಷ ಪ್ರತಿಭೆ ಹೊಂದಿದ್ದರು.ಇವರು ಮೇಟ್ರಿಕ್ಯೂಲೇಷನ್ ಓದುವಾಗ 10ವರ್ಷದ ಬಾಲಕಿ ಸತ್ಯಭಾಭ
ಮಾಳನ್ನುಮದುವೆಯಾದರು.ಆಧುನಿಕ ಕಾಲೇಜು ಶಿಕ್ಷಣ ಪಡೆದುಕೊಂಡ ನವಪೀಳಿಗೆಯ ಯುವಕರಲ್ಲಿ ಇವರು ಒಬ್ಬರಾಗಿದ್ದರು.ಪದವಿ ಪಡೆದ ಬಳಿಕ ಪುಣೆಯ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಸೇರಿದ ತಿಲಕರು ಅನಂತರ ಅದನ್ನು ಬಿಟ್ಟು ಪತ್ರಕರ್ತರಾದರು.
ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯು ಭಾರತೀಯ ಪರಂಪರೆಯನ್ನು ಅವಹೇಳನ ಮಾಡುವಂತದಾಗಿದೆ ಎಂದರಿತ ಇವರು ಪುಣೆಯಲ್ಲಿ ಡೆಕ್ಕನ್ ಎಜ್ಯುಕೇಶನ ಸೊಸೈಟಿಯನ್ನು ಸ್ಥಾಪಿಸಿದರು. ಉನ್ನತ ಸರಕಾರಿ ಉದ್ಯೋಗ ಬಿಟ್ಟು ಸರಕಾರದ ಲಾಭದಾಯಕ ಕೊಡುಗೆಗಳನ್ನು ತಿರಸ್ಕರಿಸಿದರು.
ಸಮಾಜ ಸುಧಾರಕರಾಗಿ ಬಾಲಗಂಗಾಧರ ತಿಲಕರು
ಬಾಲಗಂಗಾಧರ ತಿಲಕರು ಹೊರಡಿಸಿದ ‘ಕೇಸರಿ’ಮರಾಠಿ ಪತ್ರಿಕೆಯು ಭಾರತದ ನಾಗರೀಕರನ್ನು ಸಂಸ್ಕ್ರತಿ ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ ಸತ್ತೆಯ ತೀವ್ರ ಟೀಕೆಯನ್ನು ಮೆಟ್ಟಿ ಭಾರತೀಯರಲ್ಲಿ ಸ್ವರಾಜ್ಯದ ಹಕ್ಕಿನ ಬಗ್ಗೆ ಹೋರಾಡಲು ಜಾಗೃತಿ ಮೂಡಿಸಿದರು.
ಮಹಿಳಾ ಶಿಕ್ಷಣ ಮತ್ತು ಮಹಿಳಾ ಸಬಲೀಕರಣದ ಕಾರಣವನ್ನು ಪ್ರತಿಪಾದಿಸಿದರು. ತಿಲಕರು ಗಣೇಶ ಚತುರ್ಥಿ ಮತ್ತು ಶಿವಾಜಿ ಜಯಂತಿಯನ್ನು ಸಾರ್ವಜನಿಕ ಆಚರಣೆಗಳನ್ನಾಗಿಸಿ ಭಾರತೀಯರ ಏಕತೆಯ ಭಾವವನ್ನು ರಾಷ್ಟ್ರೀಯ ಭಾವನೆಯನ್ನು ಪ್ರೇರೆಪಿಸಿದರು.ಬಾಲ್ಯ ವಿವಾಹ ನಿಷೇಧ ಮಾಡಿ ವಿಧವಾ ವಿವಾಹಕ್ಕೆ ಪ್ರೋತ್ಸಾಹ ನೀಡಿದರು.19ನೇ ಶತಮಾನದ ಕೊನೆಯ ದಶಕದಲ್ಲಿ ಸಾಂಕ್ರಾಮಿಕ ರೋಗ ಪ್ಲೇಗ್ ಪುಣೆ ನಗರವನ್ನು ಆವರಿಸಿದಾಗ ತಿಲಕರು ಆಸ್ಪತ್ರೆಗಳನ್ನು ಪ್ರಾರಂಭಿಸಿ ರೋಗಿಗಳ ಸೇವೆ ಮಾಡಿದರು.ಮದ್ಯಪಾನ ನಿಷೇಧದ ಪರವಾಗಿ ಕಳಕಳಿಯನ್ನು ಹೊಂದಿದವರಾಗಿದ್ದರು.ಮೂಲತಃ ಅದ್ವೈತ ವೇದಾಂತದ ಪ್ರತಿಪಾದಕರಾಗಿದ್ದರೂ ಸಾಂಪ್ರದಾಯಿಕ “ಅದ್ವೈತ ಜ್ಞಾನವೊಂದರಿಂದಲೇ ಮುಕ್ತಿ”ಎಂಬ ನಂಬಿಕೆ ಅವರಿಗೆ ಒಪ್ಪಿಗೆ ಇರಲಿಲ್ಲ ಅದಕೆ ಸರಿಸಮನಾಗಿ ಹಾಗೂ ಪೂರಕವಾಗಿ ಕರ್ಮಯೋಗವನ್ನು ಸೇರಿಸಿದರು. ಅಸ್ಪ್ರಶ್ಯತೆಯ ವಿರುದ್ಧ ಕೂಡ ದನಿ ಎತ್ತಿದ ಮಹಾನಸುಧಾರಕ ಬಾಲಗಂಗಾಧರ ತಿಲಕ.
ಬಾಲಗಂಗಾಧರ ತಿಲಕರಿಂರ ಪ್ರೇರಿತರಾದ ಅವರ ಸಹಚರ ಬಾಲಕೃಷ್ಣ ಶಿವರಾಮ ಮೂಂಜೆ ದೇಶದಲ್ಲಿ ಮೊದಲ ಸೈನಿಕ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು.ಇವರ ಮೇರು ವ್ಯಕ್ತಿತ್ವ ಕಂಡ ಮಹಾತ್ಮಾ ಗಾಂಧೀಜಿಯವರು”ತಿಲಕರು ಹಿಮಾಲಯದಷ್ಟು ವಿಶಾಲ ಎತ್ತರ ವ್ಯಕ್ತಿತ್ವದ ಸಾಧಕರು,ಅವರಷ್ಟು ಎತ್ತರ ಏರಲು ನನಗೆ ಸಾಧ್ಯವಾಗುವದಿಲ್ಲ”ಎಂದು ಪ್ರಶಂಸಾತ್ಮಕವಾಗಿ ನುಡಿದಿದ್ದಾರೆ.
ಕರ್ತವ್ಯದ ಕುರಿತು ಬಾಲಗಂಗಾಧರ ತಿಲಕರವ ವಾಣಿಯನ್ನು ನೋಡಿದಾಗ ಅವರ ಅದಮ್ಯ ಅರ್ಪಣಾಮನೋಭಾವದ ಧನ್ಯತೆಯನ್ನು ಕಾಣಬಹುದು”ಧರ್ಮ ಮತ್ತು ಜೀವನ ಬೇರೆಯಲ್ಲ,ಸನ್ಯಾಸವನ್ನು ಸ್ವೀಕರಿಸುವದು ಎಂದರೆ ಜೀವನವನ್ನೇ ಬಿಟ್ಟಂತೆ ಅಲ್ಲ ನಾನು ಎಂಬ ಸ್ವಾರ್ಥದ ಬದಲಿಗೆ ದೇಶ, ಕುಟುಂಬ ಎಂದು ಒಟ್ಟಾಗಿ ದುಡಿಯುವುದೇ ನಿಜವಾದ ಸ್ಫೂರ್ತಿಯಾಗಿದೆ.ಮಾನವೀಯತೆಯಿಂದ ಮಾಡುವ ಕಾರ್ಯಗಳನ್ನು ಮಾಡಿದರೇ ದೇವರ ಕಾರ್ಯಕ್ಕೆ ಸಮ” ಎಂಬಮೌಲ್ಯದ ನುಡಿಗಳ ಮೂಲಕ ದೇಶಾಭಿಮಾನವನ್ನು ನರನರದಿ ಮೀಟಿದ ಸ್ವಾತಂತ್ರ್ಯ ಜ್ಯೋತಿ ದೇಶಕೆ ದಾಸ್ಯದ ಕತ್ತಲೆ ಕಳೆದ ಮೂರ್ತಿ 1920ಅಗಸ್ಟ 1ರಂದು ನಂದಿ ಹೋಯಿತು. ಇಂತ ಮಹಾನುಭಾವರ ನಡೆ ನಮಗೆಲ್ಲ ಆದರ್ಶಪ್ರಾಯವಾಗಿದೆ. ಮಾನವೀಯತೆಯ ಅಡಿಪಾಯದಿ ದೇಶಾಭಿಮಾನದ ಉಸಿರಿನಿಂದ ದೇಶದ ಪ್ರಗತಿಗೆ ಕಂಕಣಬದ್ಧರಾಗೋಣ ಅಲ್ಲವೇ?