ಲೇಖನ
ನಮ್ಮನ್ನಾವರಿಸಿದ ಜ್ಞಾನದ ಬ್ರೂಣ ಬುದ್ದ
ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ
ಜಗತ್ತಿಗೆ ೨ ಅದ್ಭುತವಾದ ಸೈದ್ದಾಂತಿಕ ಕೃತಿ ನೀಡಿದವ ಬುದ್ದ…೧ ಚುಲ್ಲವಗ್ಗ…೨..ಅಪದ್ದಮನ ನಿಷಿದ್ದ….
ಯುಗ ಯುಗಗಳು ಕಳೆದರು ಇಂದಿಗೂ ತರ್ಕ ಚರ್ಚೆ ಚಿಂತನೆ ಜಿಜ್ಞಾಸೆಗಳಿಗೆ ಬುದ್ದನ ಬದುಕು ತೆರೆದಿಡಲ್ಪಡುತ್ತಿದೆ…ಕಾರಣ ಬುದ್ಧನ ಬಗೆಗೆ ನಾವು ಕೇಳಿದ ಮತ್ತು ತಿಳಿದುಕೊಂಡು ಸಂಗತಿಗಳ ಕುಬ್ಜ ಅರಿವು…..
ಶಾಕ್ಯ ದೊರೆ ಶುದ್ದೋಧನ ಮಹಾರಾಜನ ಮಗ ಸಿದ್ದಾರ್ಥ …. ಶುದ್ಧೋದನನ ಅಣ್ಣ ಧನದತ್ತ ಅವನ ಮಗ ದೇವದತ್ತ….. ದಾಯಾದಿಗಳ ನಡುವೆ ಸೌಮ್ಯ ವೈಷ್ಯಮ್ಯಗಳು ಅನಾದಿಕಾಲದಿಂದಲೂ ಇದ್ದದ್ದೆ…..ಕೋಸಲ ಕಳಿಂಗ ಸುತ್ತಮುತ್ತಲಿನ ರಾಜ್ಯಗಳಿಗೆ ಶುದ್ದೋಧನ ನೆಂದರೆ ಅತೀವ ಪ್ರೀತಿ…
ಅಣ್ಣನಾದ ಧನದತ್ತನಿಗೆ ಪಟ್ಟ ಕಟ್ಟದೆ ಶುದ್ಧೋಧನನಿಗೆ ಪಟ್ಟ ಕಟ್ಟಿದಕ್ಕೆ ಮುಂದೆ ಬಲಿ ಯಾದವನೆ ಸಿದ್ದಾರ್ಥ…..
ಸಿದ್ದಾರ್ಥ ಜೀವ ಪ್ರೀತಿಯ ಯುವರಾಜ…..ಪ್ರಕೃತಿ ಪ್ರಾಣಿ ಮನುಜರಲ್ಲಿ ದಯೆ ಮತ್ತು ಕ್ಷಮೆಯೇ ಅವನ ಅಸ್ಮಿತೆ…..ಜೀವದಯೆ ಅವನ ಅಸ್ತಿತ್ವ….ತಂದೆ ತರುವಾಯ ಸಿದ್ದಾರ್ಥನಿಗೆ ಪಟ್ಟ….ಇದುವೆ ದೇವದತ್ತನಿಗೆ ಸಹಿಸಲಾರದ ವೈರ್ಯ….ರೈತರೊಂದಿಗೆ ಕೂಲಿ ಕಾರ್ಮಿಕ ರೊಂದಿಗೆ ಬರೆತು ಬದುಕುವ ಸಿದ್ದಾರ್ಥ ನಿಗೆ ಹಿಂಸೆ ಮತ್ತು ಯುದ್ದ ಉನ್ಮಾದದ ಸಿಂಹಾಸನ ಬೇಕಾಗಿರಲಿಲ್ಲ…..ಇದನ್ನೇ ಕಾರಣವಾಗಿಟ್ಟು ಕೊಂಡು ಸಿದ್ಧಾರ್ಥ ರಾಜ ನಾಗಲು ಅಸಮರ್ಥ ಎಂಬುದು ದೇವದತ್ತನ ವಾದ…..ಜಲ ವಿವಾದ ವೊಂದನ್ನು ಹುಟ್ಟುಹಾಕಿ ಅಪ್ರಾಪ್ತ ಹೆಣ್ಣುಮಗಳೊಬ್ಬಳು ನದಿಗೆ ಹಾರಿ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಸಿದ್ಧಾರ್ಥ ನೇ ಕಾರಣ ನೆಂಬ ದೊಡ್ಡದಾದ ಸಂಚನ್ನು ರೂಪಿಸಿದವ ದೇವದತ್ತ ಜೊತೆಯಲ್ಲಿ ನದಿಯ ನೀರಿಗಾಗಿ ಜಲವಿವಾದಕ್ಕಾಗಿ ಪಕ್ಕದ ರಾಜ್ಯದಿಂದ ಆಕ್ರಮಣ ವಾಗುತ್ತಿದೆ ಎಂಬ ಸುದ್ದಿ ಹಬ್ಬಿಸುತ್ತಾನೆ …..ಅಸಲಿ ಅಲ್ಲಿ ಯಾವ ವಿವಾದಗಳಾಗಲಿ ಯುದ್ದದ ವಿಚಾರವಾಗಲಿ ಯಾವ ಸಮಸ್ಯೆಗಳು ಇರೊದೆಯಿಲ್ಲ…..ಆದರೆ ಸಿದ್ದಾರ್ಥನೊಬ್ಬ ಅಸಮರ್ಥ ದೊರೆ ಎಂಬ ದಂಗೆಯನ್ನು ಅರಾಜಕತಾವಾದವನ್ನು ದೇವದತ್ತ ಹುಟ್ಟು ಹಾಕುತ್ತಾನೆ..ಕಾರಣ ತನ್ನ ತಂದೆಗೆ ಆದ ಅವಮಾನ ಮತ್ತು ಅನ್ಯಾಯದ ಸಲುವಾಗಿ ……
ರಾಜ್ಯದ ತುಂಬಾ ಅಹಾಕಾರ ಯುದ್ದದ ಭೀತಿ ಮತ್ತು ಭಯದ ವಾತಾವರಣ ನಿರ್ಮಾಣವಾಗುತ್ತದೆ…..ಶಾಕ್ಯರ ಸಂಘದ ಮಹಾಸಭೆ ಜರುಗುತ್ತದೆ ಅಲ್ಲಿ ಸಿದ್ದಾರ್ಥನಿಗೆ ಯುದ್ದದ ಜವಾಬ್ದಾರಿಯನ್ನು ನಿರ್ವಹಿಸಲು ಒತ್ತಾಯಪೂರ್ವಕವಾಗಿ ಒಪ್ಪಿಸಲು ಬಂದಾಗ…ಯುವರಾಜ ಯುದ್ದವನ್ನು ನಿರಾಕರಿಸುತ್ತಾನೆ…ಇದು ರಾಜ್ಯದ ಮತ್ತು ಜನತೆಯ ವಿರುದ್ದವಾಗಿ ವ್ಯತಿರಿಕ್ತವಾದ ತಿರ್ಮಾನವೆಂದು ಸಿದ್ದಾರ್ಥ ನ ಪದಚ್ಯುತಿ ಆಗಲೇ ಬೇಕೆಂದು ಹಠ ತೊಡುತ್ತಾನೆ…ವಾದ ವಿವಾದಗಳ ಕೊನೆಗೆ ಸಿದ್ದಾರ್ಥ ನಿಗೆ ೩ ಶಿಕ್ಷೆಗಳನ್ನು ಸಂಘವು ನೀಡುತ್ತದೆ ಅದರಲ್ಲಿ ೧ ನ್ನು ಅವನು ಆಯ್ಕೆ ಮಾಡಿಕೊಳ್ಳಲು ತಿಳಿಸುತ್ತಾರೆ…
೧.. ಕೂಡಲೇ ಯುದ್ದ ಮಾಡಿ ರಾಜ್ಯಕ್ಕೆ ಬಂದ ಆಪತ್ತು ಪರಿಸರಿಸಬೇಕು…
೨.
ದೇವದತ್ತನಿಗೆ ಶರಣಾಗಿ ರಾಜ್ಯ ಒಪ್ಪಿಸಿ ಅವನ ಸೇವಕ ನಾಗಬೇಕು….
೩..ಭಿಕ್ಷಾಟನ ಸನ್ಯಾಸ ..
….
ಪರಿಣಾಮ…ಘೋರವಾದ ಯುದ್ದವಂತು ಸಿದ್ದಾರ್ಥ ನಿಗೆ ಸಾಧ್ಯವೇ ಇಲ್ಲ… ದೇವದತ್ತನ ಆಧೀನತೆ ಖಂಡಿತವಾಗಿಯೂ ಒಪ್ಪಲಸಾಧ್ಯ….. ಉಳಿದಿರುವ ಆಯ್ಕೆ ಭಿಕ್ಷಾಟನ ಸನ್ಯಾಸತ್ವ….(ಜೀವಮಾನದ ವರೆಗೂ ಎಲ್ಲಿಯೂ ತಂಗುವ ಹಾಗಿಲ್ಲ..ರಾಜ್ಯಾಶ್ರಯ ಪಡೆಯುವ ಹಾಗಿಲ್ಲ….ಗುಡಿಸಲುನ್ನು ಕೂಡಾ ಕಟ್ಟುವ ಹಾಗಿಲ್ಲ ಜೀವಿತಾವಧಿವರೆಗೂ ರಾಜ್ಯದ ಗಡಿಯನ್ನು ಪ್ರವೇಶಿಸುವ ಹಾಗಿಲ್ಲ…ಅಂದರೆ ಎಲ್ಲಿಯೂ ಅವನ ಅಸ್ತಿತ್ವದ ಮತ್ತು ಅವನ ಕುರೂಹುಗಳು ಇರುವ ಹಾಗಿಲ್ಲ….ಬರಿ ಪರ್ಯಟನೆ…ರಾಜ್ಯ ನಿರ್ಮಾಣವಂತು ದೂರದ ಮಾತು) ಹೀಗೆ ಸಿದ್ದಾರ್ಥ ಎಲ್ಲವನ್ನು ತೊರೆದು ಹೋಗಲೇ ಬೇಕಾದ ಅನಿವಾರ್ಯತೆ …..
ನಮ್ಮೊಳಗಿನ ಅನೇಕ ಪ್ರಶ್ನೆಗಳಿಗೆ ಯಶೋಧರೆ ಬದುಕು ಕಾರಣ…..ತುಂಬಾ ಗಟ್ಟಿಗಿತ್ತಿ ಗಂಡನ ನಂತರ ಅತ್ತೆ ಮಾವ ಮತ್ತು ಮಗನನ್ನು ಸಂರಕ್ಷಿಸುವ ಹೊಣೆ ಹೋರುತ್ತಾಳೆ….
ನಿಯಮದಂತೆ ಪ್ರಾತಃಕಾಲ ರಾಜನ ವೇಷಕಳಿಚಿ ಸನ್ಯಾಸಿಯ ವೇಷತೊಟ್ಟ ಸಿದ್ದಾರ್ಥ ಮುಖದಲ್ಲಿ ಸೂರ್ಯನೆ ಉದಯಿಸಿದಂತ ಕಾಂತಿ ಜೊತೆಯಲ್ಲಿ ಚನ್ನ ಮಾತ್ರ….
ಮದುವೆ ಯಾಗದಿದ್ದರೆ ಮೊದಲ ಭಿಕ್ಷೆತಾಯಿ ನೀಡಬೇಕು….ಇಲ್ಲದಿದ್ದರೆ ಹೆಂಡತಿ
ಯಶೋಧರ ಸಿದ್ದಾರ್ಥನ ಪ್ರತಿ ನೆರಳು….ಅವನಂತೆ ಆಕೆಯು ಬಿಳಿ ಬಟ್ಟೆಧರಿಸಿದ ಶ್ವೇತವದನೆ….ಸಿದ್ದಾರ್ಥ ನ ಜೋಳಿಗೆಯಲ್ಲಿ ಭಿಕ್ಷೆ ಹಾಕಲು ಧೃತಿಗೆಡದೆ ಹೆಜ್ಜೆ ಇಟ್ಟ ರಾಣಿ…..೧…೨…೩….ಎಣಿಸಿ ಭೋಗಸೆ ಭಿಕ್ಷೆ ನೀಡುತ್ತಾಳೆ….
ಆದರೆ ಸಿದ್ಧಾರ್ಥ ನ ಜೋಳಿಗೆಯಲ್ಲಿ ಏನೂ ಹಾಕಿಲ್ಲ..ಖಾಲಿ ಖಾಲಿ….ಏನೂ ಇಲ್ಲದ ಖಾಲಿ ಜೋಳಿಗೆಯಿಂದ ನಾನು ಹೊರಡಲು ಸಾಧ್ಯವಿಲ್ಲವೆಂದು ಸಿದ್ದಾರ್ಥ ಅಲ್ಲಿಯೇ ನಿಲ್ಲುತ್ತಾನೆ….ಯಶೋಧರರೆಯನ್ನಂತು ಏನೂ ಕೇಳುವ ಹಾಗಿಲ್ಲ…ಏಕೆಂದರೆ ತಂದೆ ತಾಯಿ ಹೆಂಡತಿ ಮಗ..ಸಂಬಂಧ ಯಾವುದು ಈಗ ಉಳಿದಿಲ್ಲ…..
ಯಶೋಧರೆ ಕೊನೆಯ ಭಿಕ್ಷೆ ನೀಡಿ ಧರೆಗೆ ಮೂರ್ಛಾಗತ ಳಾಗಿದ್ದಾಳೆ…ರಾಹುಲ ಅಪ್ಪನನನ್ನು ಅಪ್ಪಿಕೊಳ್ಳಲು ತವಕಿಸುತ್ತಿದ್ದಾನೆ…..ಸಿದ್ದಾರ್ಥ ಈಗ ಸನ್ಯಾಸಿ ಮಾತ್ರ….
…..ಯಶೋಧರೆ ನೀಡಿದ ಪ್ರಥಮ ಭಿಕ್ಷೆ ಏನೆಂದು ಚನ್ನನಿಗೆ ಮಾತ್ರ ಗೊತ್ತು…ಸಿದ್ದಾರ್ಥ ನನ್ನು ಬೀಗಿದಪ್ಪಿ ಹೇಳಿದ…
೧.. ಅವಳು ತನ್ನ ರೂಪ ಯವ್ವನ ಮತ್ತು ರಾಣಿ ಪದವಿ ತ್ಯಜಿಸಿ ಸನ್ಯಾಸಿಯಾಗಿದ್ದಾಳೆ
೨..ತಂದೆ ತಾಯಿ ಮತ್ತು ಮಗನ ಸಂಪೂರ್ಣಗೊಂಡ ಜವಾಬ್ದಾರಿಯನ್ನು ಹೊತ್ತಿದ್ದೇನೆ…ನಿನ್ನನ್ನು ಸಂಸಾರದಿಂದ ಬಿಡುಗಡೆ ಮಾಡಿದ್ದೇನೆ…
೩…ಲೋಕದಲ್ಲಿ ಸಿದ್ದಾರ್ಥ ನೆಂಬ ಹೆಸರಿನೊಂದಿಗೆ ನಮ್ಮ ಋಣವಿಲ್ಲ…ನೀನು ಋಣಮುಕ್ತ……
ಚನ್ನನ ವಿವರ ಪಡೆದ ಸಿದ್ದಾರ್ಥ ನಲ್ಲಿ ನಿರ್ಜಲೀಕರಣದ ಭಾವ….ಶುದ್ದೋಧನ ಪ್ರಜಾಮತಿ ಮಹಾ ಆಘಾತ ದಿಂದ ಧರೆಗುರುಳಿದ್ದಾರೆ…..ರಾಹುಲನ ಅಳುವಿನ ಧ್ವನಿ ಕೇಳಿಸುತ್ತದೆ …
ಎಲ್ಲದರಿಂದ ಎಲ್ಲವನ್ನು ತೋರೆದ ಸಿದ್ದಾರ್ಥ ಲೋಕಕ್ಕೆ ಜ್ಞಾನಪೀಠವಾದ…ದಮ್ಮ ಬೋಧಕನಾದ…ಆಶೆಯೇ ದುಃಖಕ್ಕೆ ಮೂಲವೆಂದ..ದುಃಖದಿಂದಲೂ ಮುಕ್ತನಾದ ನಿರ್ವಾಣವೆಂಬ ಪದಕ್ಕೆ ಬುದ್ದನಾದ……
ಈ ಮಾಹಿತಿ ಮತ್ತು ಕಥಾ ನಿರೂಪಣೆ ನಾನು ಓದಿದ ಮ.ನ.ಜವರಯ್ಯನವರ ಜಲ ನಾಟಕದ ಸಾರಾಂಶ
One thought on “.ನಮ್ಮನ್ನಾವರಿಸಿದ ಜ್ಞಾನದ ಬ್ರೂಣ ಬುದ್ದ”