ಸರಣಿ ಬರಹ

ಅಂಬೇಡ್ಕರ್ ಓದು

ಭಾಗ-13

ಪ್ರಬುದ್ದ ಭಾರತ ನಿರ್ಮಾಣದತ್ತ

Welcome to Dr. Bhimrao Ambedkar Law University, Jaipur, Rajasthan

  ದಲಿತರು ಚವಡಾರ ಕೆರೆಯ ನೀರನ್ನು ಮುಟ್ಟಿ ಕುಡಿದು ಮರುದಿನದಂದು ಸಂಪ್ರದಾಯ ಹಿಂದೂಗಳು 108 ಮಣ್ಣಿನ ಬಿಂದಿಗೆಗಳಲ್ಲಿ ಗೋಮೂತ್ರ, ಸಗಣಿ ಮೊಸರು ಹೀಗೆ ನೀರಿನೊಂದಿಗೆ ಬೆರೆಸಿ ಕೆರೆಯ ನೀರನ್ನು ಶುದ್ಧಿಕರಣಗೊಳಿಸುವರು. ಇದು ಅಂಬೇಡ್ಕರರಿಗೆ ತಿಳಿದಾಗ ಅವರು ಕೋಪಗೊಳ್ಳುತ್ತಾರೆ, ದಲಿತರು ಮುಟ್ಟಿದ ವಸ್ತುಗಳು, ಪ್ರವೇಶಿಸಿದ ಸ್ಥಳಗಳು ಅಪವಿತ್ರಗೊಳ್ಳುತ್ತವೆ ಎಂಬುದು ಮತ್ತು ಅದನ್ನು ಶುದ್ಧೀಕರಣಗೊಳಿಸುವುದು ಸಂಪ್ರದಾಯವಾದಿ ಹಿಂದೂಗಳಿಗೆ ಇದೊಂದು ವಿಚಿತ್ರ ಕುರುಹು ಆಗಿ ಉಳಿಸಿಕೊಂಡು ಬಂದಿದ್ದಾರೆ. ಕೇವಲ ಶಿಕ್ಷಣದಿಂದ ಈ ರೋಗ ವಾಶಿಯಾಗಲಾರದು, ಈ ರೋಗ ಆಳವಾಗಿ ಬೇರೂರಿ ಬಿಟ್ಟಿದೆ ಇದಕ್ಕೆ ಬಲಿಷ್ಟ ಔಷದವನ್ನು ಕೊಡಬೇಕಾಗಿದೆ ಎಂದು ನುಡಿಯುತ್ತಾರೆ. ಎಲ್ಲ ಬ್ರಾಹ್ಮಣರು ಕೆಟ್ಟವರಲ್ಲ ಅದರಲ್ಲೂ ಮಾನವಿಯ ಗುಣವುಳ್ಳವರು ಇದ್ದಾರೆ. ಎಲ್ಲ ಬ್ರಾಹ್ಮಣರು ವೈರಿಗಳೆಂದು ನಾವು ಬಾವಿಸಿಕೊಳ್ಳಬಾರದು, ಉಚ್ಛ-ನೀಚ, ಮಡಿ-ಮೈಲಿಗೆ ಎಂಬ ಗುಣಗಳನ್ನು ಅಳವಡಿಸಿಕೊಂಡಿರುವ ಬ್ರಾಹ್ಮಣತ್ವದ ವಿರುದ್ಧ ಹೋರಾಡಬೇಕಾಗಿದೆ ಎಂದು ಕರೆ ಕೊಡುತ್ತಾರೆ. ಬ್ರಾಹ್ನನರಿಗಿಂತ ಬ್ರಾಹ್ಮನತ್ವದ ಮೇಲುಕೀಳು ಗುಣಗಳನ್ನು ಅಳವಡಿಸಿಕೊಂಡಿರುವ ಇತರೆ ಜಾತಿಯ ಹಿಂದುಗಳು ಹೆಚ್ಚು ಅಪಾಯಕಾರಿಯಾಗಿದ್ದಾರೆ. ಅಂತವರ ವಿರುದ್ದವೂ ಹೋರಾಡಬೇಕಾಗಿದೆ ಎನ್ನುತ್ತಾರೆ. ಚವಡಾರ ಕೆರೆಯ ನೀರನ್ನು ಮುಟ್ಟಿ ಕುಡಿದಮೇಲೆ ಹಲವಾರು ಟೀಕೆಗಳು ಬರುತ್ತವೆ. ಅಂಥಹ ಟೀಕೆಗಳಿಗೆ ಸಮರ್ಪಕ ಉತ್ತರ ಕೊಡಲು ಮಾಧ್ಯಮದ ಅವಶ್ಯಕತೆಯನ್ನು ಮನಗಂಡು ಈಗಾಗಲೆ ನಿಂತುಹೊಗಿದ್ದ ಮೂಕನಾಯಕ ಪತ್ರಿಕೆಯ ಸ್ಥಾನದಲ್ಲಿ “ಬಹಿಸ್ಕೃತ ಭಾರತ” ಮರಾಠಿ ಪತ್ರಿಕೆಯನ್ನು  1927 ರ ಏಪ್ರೀಲ್ 3 ರಂದು ಆರಂಭಿಸುತ್ತಾರೆ. “ಬಹಿಷ್ಕೃತ ಭಾರತ”ವನ್ನು ಪರಿವರ್ತಿಸಿ ಜಾಗೃತಿಯನ್ನಂಟು ಮಾಡಿ ಏಕತೆಯನ್ನು ತಂದು ಪ್ರಬುದ್ಧ ಭಾರತ ನಿರ್ಮಾಣ ದತ್ತ ಹೆಜ್ಜೆ ನಿಡುತ್ತಾರೆ.

          ಗೋಮಾಂಸ ತಿನ್ನುತ್ತಾರೆಂದು ದಲಿತರನ್ನು ಅಸ್ಪೃಶ್ಯರೆಂದು ಪರಿಗಣಿಸುವುದಾದಲ್ಲಿ ಕ್ರಿಶ್ಚಿಯನ್ ಮತ್ತು  ಮುಸ್ಲಿಂ ಬಾಂದವರು  ಗೋಮಾಂಸ ಸೇವಿಸುತ್ತಾರೆ ಹಾಗಾದರೆ ಅವರನ್ನೆಕೆ ಅಸ್ಪೃಶ್ಯರೆಂದು ಪರಿಗಣಿಸಲಿಲ್ಲ ಎಂದು ಪತ್ರಿಕೆ ಮೂಲಕ ಹಿಂದುಗಳನ್ನು ಪ್ರಶ್ನಿಸುತ್ತಾರೆ. ಕೆರೆಯ ನೀರನ್ನು ಹಸು, ಎಮ್ಮೆ, ದನಕರುಗಳು ನಾಯಿ-ನರಿ ಹಂದಿಗಳು ಮುಟ್ಟಿದರೂ ಸರಿ ಆದರೆ ನಿಮ್ನ ಜನರು ಮುಟ್ಟಬಾರದು ಮಂದಿರ ಪ್ರವೇಶ ಮಾಡಬಾರದು ಎಂಬುದು ಶತಶತಮಾನಗಳಿಂದ ಬಂದ ಮುರ್ಖತನವೆಂದು ಖಂಡಿಸುತ್ತಾರೆ. ಸವರ್ಣಿಯರ ಸ್ವಾರ್ಥದಿಂದ  ಜಾರಿಗೆಬಂದ ಅಸ್ಪೃಶ್ಯತೆ ಅವರಿಂದಲೆ ನಿರ್ಮೂಲನೆಯಾಗಬೇಕು. ಬಾಲಗಂಗಾಧರ ತಿಲಕರು ಒಂದು ವೇಳೆ ಅಸ್ಪೃಶ್ಯರಾಗಿದ್ದರೆ ಅವರು ಸ್ವರಾಜ್ಯವೆ ನನ್ನ ಜನ್ಮಸಿದ್ದ ಹಕ್ಕು ಘೋಷಣೆಯ ಬದಲಾಗಿ ಅಸ್ಪೃಶ್ಯತೆ ನಿರ್ಮೂಲಯೆ ನನ್ನ ಜನ್ಮಸಿದ್ದ ಹಕ್ಕು ಎಂದು ಘೋಷಿಸುತ್ತಿದ್ದರೆಂದು ಪತ್ರಿಕೆ ಮೂಲಕ ಸವರ್ಣಿಯರ ಆತ್ಮಸಾಕ್ಷಿಗೆ ಪ್ರಶ್ನಿಸುತ್ತಾರೆ.

          ದಲಿತರು ಚವಡಾರ ಕೆರೆಯ ನೀರನ್ನು ಮುಟ್ಟಿ ಕುಡಿದು ಅಪವಿತ್ರಗೋಳಿಸಿದ್ದಾರೆಂದು ಸವರ್ಣಿಯರು ಕೆರೆಯನ್ನು ಶದ್ಧಿಕರಿಸಿ ಪವಿತ್ರ ಕಾರ್ಯ ನೆರೆವೆರಿಸಿದ್ದನ್ನು ವಿರೋದಿಸಿ 1927 ರ ಡಿಸೆಂಬರ್ 25 ರಂದು ಮಹಾಡ ಪಟ್ಟಣದಲ್ಲಿ ಸತ್ಯಾಗ್ರಹ ನಡೆಸುವುದಾಗಿ ಬಹಿಸ್ಕೃತ ಭಾರತ ಪತ್ರಿಕೆ ಮೂಲಕ ಕರೆ ಕೊಡುವರು. ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವರಿಗೆ ಹೆಸರು ನೊಂದಾಯಿಸಲು ತಿಳಿಸುವರು. ಸತ್ಯಾಗ್ರಹ ದಿನಸಮೀಪಿಸುತಿದ್ದಂತೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಡಿಸೆಂಬರ 24 ರಂದು ಮಹಾಡ ನಗರ ಬಂದು ತಲುಪುತ್ತಾರೆ, ಅನಂತರಾವ್ ಚಿತ್ರೆ ಶಿಸ್ತು ಬದ್ದವಾಗಿ ಕಾರ್ಯಕ್ರಮವನ್ನು ಆಯೋಜಿಸಿದರೆ ಸುಭೇದಾರ ಘಾಟಗೆ ಆಹಾರ ವ್ಯವಸ್ಥೆ ಮಾಡುವರು ಅಂಬೇಡ್ಕರರು ಮುಂಬಯಿಂದ ಹೊರಟು ಡಿಸೆಂಬರ 25 ರಂದು ಮಧ್ಯಾನದ ಹೋತ್ತಿಗೆ ಮಹಾಡ ನಗರ ತಲುಪುವರು. ನೂರಾರು ಜನ ಮುಖಂಡರುಗಳು ಅವರೊಂದಿಗೆ ಆಗಮಿಸುವರು. ಸತ್ಯಗ್ರಹದಲ್ಲಿ ಪಾಲ್ಗೊಳ್ಳಲು ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಬಾಬಾಸಾಹೇಬ ಅಂಬೇಡ್ಕರ ಆವರಿಗೆ ಜೈವಾಗಲಿ ಎಂದು ಕೂಗುತ್ತಾ, ಘೋಷಣೆ ಹಾಕುತ್ತಾ ಸಮಾವೇಶ ಸ್ಥಳಕ್ಕೆ ಬಂದು ಸೇರುವರು. ಸಮಾವೇಶವು ಸಂಜೆ 4.30 ರ ಸಮಯಕ್ಕೆ ಪ್ರಾರಂಭವಾಗುವುದು.

          ಡಾ||ಅಂಬೇಡ್ಕರರು ಸಮಾವೇಶವನ್ನುದ್ದೇಶಿಸಿ ಮಾತನಾಡಲು ಎದ್ದು ನಿಲ್ಲುತಿದ್ದಂತೆ ಅಲ್ಲಿ ನೆರೆದಿದ್ದ 15 ಸಾವಿರಕ್ಕಿಂತ ಹೆಚ್ಚಿನ ಜನರು ಕರತಾಡನ ಚಪ್ಪಾಳೆ ಘೋಷಣೆಗಳು ಮುಗಿಲು ಮುಟ್ಟುತ್ತವೆ. ಮಾಸಿದ ಹರಿದ ಬಟ್ಟೆ ತೊಟ್ಟ ಜನರಲ್ಲಿ ಬಿಸಿಲಿಗೆ ಬಳಿದು ಬೆಂಡಾದ ಮುಖಗಳಲ್ಲಿ ಯಾವುದೋ ಉತ್ಸಾಹ ಹುರುಪು ಎದ್ದು ಕಾಣುತಿತ್ತು ಪ್ರಾಣಿಪಕ್ಷಿ ಗಿಡಮರಗಳಿಗೆ ಪೂಜಿಸುವ ಸವರ್ಣಿಯರು ವಿಷಜಂತುಗಳಿಗೂ ಹಾಲು ಸಕ್ಕರೆ ಹಾಕುವ ಸವರ್ಣಿಯರು ದಲಿತರನ್ನು ನಿಕೃಷ್ಟವಾಗಿ ಕಾಣುವರು ಏಕೆ ಎಂದು ಪ್ರಶ್ನಿಸುತ್ತಾರೆ. ನಿಮ್ನ ಜನರು ಹಿಂದುಗಳು ಹೌದೋ ಅಲ್ಲವೆ  ಎಂಬುದನ್ನು ಸವರ್ಣಿಯರು ಸ್ಪಷ್ಟ ಪಡಿಸಬೇಕು ಎಂಬುದೆ ಈ ಸತ್ಯಗ್ರಹದ ಉದ್ದೇಶ ಎನ್ನುವರು. ಜಾತಿ ವ್ಯವಸ್ಥೆ ಜಗತ್ತಿನ ಅತ್ಯಂತ ಅನಾಗರಿಕ ಮತ್ತು ಕ್ರೂರ ವ್ಯವಸ್ಥೆಯಾಗಿದ್ದು ಜಾತಿ ವ್ಯವಸ್ಥೆ ಈ ದೇಶವನ್ನೆ ಹಾಳುಮಾಡಿದೆ ಚವಡಾರ ಕೆರೆಯ ನೀರು ಕುಡಿಯುವುದರಿಂದ ನಾವು ಅಮರರಾಗುವುದಿಲ್ಲ ಕುಡಿಯದೆ ಇದ್ದರೂ ನಾವು ಸಾಯುವುದಿಲ್ಲ, ನಾಯಿ ಹಂದಿ ದನಗಳು ಕೆರೆಯ ನೀರನ್ನು ಮುಟ್ಟಿದರೆ ಅಪವಿತ್ರವಾಗದ ನೀರು ದಲಿತರು ಮುಟ್ಟಿದರೆ ಕೆರೆ ನೀರು ಅಪವಿತ್ರವಾಗುವಿದಿಲ್ಲ ಎಂಬುದನ್ನು ಈ ಸಮಾವೇಶ ಮೂಲಕ ಸ್ಪಷ್ಠಪಡಿಸುವುದಾಗಿದೆ. ನಾವು ಹೋರಾಟ ಮಾಡುವುದು ನಮ್ಮ ಹಕ್ಕುಗಳನ್ನು ಸ್ಥಾಪಿಸುವುದಾಗಿ ಎನ್ನುವರು.

GoI declares 14th April, birthday of Dr B R Ambedkar as public holiday

          ಪ್ರಾನ್ಸ ದೇಶದ ಇತಿಹಾಸದಲ್ಲಿ 1789 ರಲ್ಲಿ ರಾಜಕೀಯ ಮತ್ತು  ಸಾಮಾಜಿಕ ಕ್ರಾಂತಿಯುಂಟಾಗಿ ಆ ದೇಶದಲ್ಲಿ ಚಕ್ರಾದಿಪತ್ಯ ಸಮಾಪ್ತಿಗೊಂಡು ಸ್ವಾತಂತ್ರ್ಯ ಸಮಾನತೆ ಬ್ರಾತೃತ್ವದ ಗಣರಾಜ್ಯ ಸ್ಥಾಪನೆಗೊಂಡಿದ್ದನ್ನು ಅಂಬೇಡ್ಕರರು ನೆನಪಿಸಿಕೊಳ್ಳುತ್ತಾ ತಾವು ಮಾಡುತ್ತಿರುವ ಹೊರಾಟವನ್ನು ಪ್ರಾನ್ಸ ಕ್ರಾಂತಿಗೆ ಹೊಲಿಸುತ್ತಾರೆ. ಮಾನವ ಹಕ್ಕುಗಳ ಸ್ಥಾಪನೆಯೇ ಈ ಹೋರಾಟದ ಗುರಿಯಾಗಿದೆ ಎಂದು ಘರ್ಜಿಸುತ್ತಾರೆ. ಅಸ್ಪೃಶ್ಯತೆಯನ್ನು ಹುಟ್ಟು ಹಾಕಿದ  ಬ್ರಾಹ್ಮಣರೆ ಸ್ವತಃ ಸಹಪಂಕ್ತಿ ಬೋಜನ ಹಾಗೂ ಅಂತರ್ಜಾತಿ ವಿವಾಹ ಮಾಡಿಕೊಳ್ಳುವ ಮೂಲಕ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಮುಂದಾಗಬೇಕು ಎನ್ನುತ್ತಾರೆ. ಜಾತಿ ವ್ಯವಸ್ಥೆಯನ್ನು ಹೊಗಲಾಡಿಸಿ ದೇಶದಲ್ಲಿ ಏಕತೆ ತಂದು ಸಮಾನತೆ, ಸ್ವಾತಂತ್ರ್ಯ ಹಾಗೂ ಸಮಾನ ಹಕ್ಕುಗಳ ಸ್ಥಾಪನೆ ಮಾಡುವುದು ನಮ್ಮ ಧ್ಯೇಯವಾಗಿದೆ. ಅದಕ್ಕಾಗಿ ಶಾಂತಿಯುತವಾಗಿ ಹೋರಾಟ ನಡೆಸುವುದಾಗಿ ಕರೆ ಕೊಡುತ್ತಾರೆ.

          ಅಸ್ಪೃಶ್ಯತೆಗೆ ಮೂಲ ಬೇರು ಮನುಸ್ಮೃತಿಯಾಗಿದೆ ಎಂದು ಬ್ರಾಹ್ಮಣರಾದ ಜಿ.ಎನ್.ಶಾಸ್ತ್ರಬುದ್ದೇ ಅವರು ಮನುಸ್ಮೃತಿಯಲ್ಲಿ  ಶೂದ್ರರರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದ ಉಲ್ಲೇಖಗಳನ್ನು ಸಮಾವೇಶದ ಸಭೆಯಲ್ಲಿ ಓದಿ ಹೇಳುವರು. ಒಬ್ಬ ವ್ಯಕ್ತಿ ಕೊಲೆ ಸುಲಿಗೆ ಅತ್ಯಾಚಾರ ಅಪರಾದಗಳನ್ನು ಮಾಡಿದಾಗ ಬ್ರಾಹ್ಮಣರಿಗೆ ವಿದಿಸುವ ಶಿಕ್ಷೆ ಮತ್ತು ಶೂದ್ರರಿಗೆ ವಿದಿಸುವ ಶಿಕ್ಷೆಯಲ್ಲಿನ ತಾರತಮ್ಯಗಳನ್ನು ಓದುವರು. ಅಸ್ಪೃಶ್ಯರಿಗೆ ಸಂಬಂಧಿಸಿದ ಉಲ್ಲೇಖಗಳು ಅತ್ಯಂತ ಹೀನಾಯವಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತವೆ. ಬೇದಭಾವ ಮಾಡುವ ಅಸ್ಪೃತ್ಯಯನ್ನು ಹುಟ್ಟುಹಾಕಿದ ಮನುಸ್ಮೃತಿಯಲ್ಲಿನ ಅಂತಹ ಉಲ್ಲೇಖಗಳನ್ನು ಸುಟ್ಟು ಹಾಕಲು ತಿರ್ಮಾನಿಸಿ 1927 ರ ಡಿಸೆಂಬರ್ 25 ರಂದು ರಾತ್ರಿ ಸಭೆ ಮುಗಿದ ನಂತರ ಮನುಸ್ಮೃತಿಯನ್ನು ಬೆಂಕಿಯಲ್ಲಿಟ್ಟು ದಹನ ಮಾಡಲಾಯಿತು. ಇದು ಕ್ರಾಂತಿಕಾರಿ ಹೊರಾಟವಾಗಿತ್ತು. ಮನುಸ್ಮೃತಿ ದಹನದ ನಂತರ ಅಪಾದನೆಗಳ ಮಾಹಾಪೂರವೆ ಹರಿದುಬರುತ್ತದೆ. ಮನುಸ್ಮೃತಿಯನ್ನು ಓದಿಕೊಂಡು ಸವರ್ಣಿಯರು ದಲಿತರ ಶೋಷಣೆ ಮಾಡಿದ್ದಾರೆ ಅದೇ ಕೃತಿಯನ್ನು ಆಧರಿಸಿ ಅನ್ಯಾಯದ ಕಾನೂನುಗಳ ರಚಿಸಲ್ಪಟ್ಟಿವೆ ಆ ಕಾರಣಗಳಿಂದಲೆ ದಲಿತರು ಶೋಷಣೆಗೆ ಒಳಗಾಗಿದ್ದರಿಂದ ಮನುಸ್ಮೃತಿಯ ದಹನ ಉದ್ದೇಶ ಪೂರ್ವಕವಾಗಿತ್ತೆಂದು ಅಂಬೇಡ್ಕರರು ಸ್ಪಷ್ಟ ಪಡಿಸುವರು. ಪುರೋಹಿತ ಸ್ಥಾನದ ಕುರಿತು ಅದೊಂದು ಹುದ್ದೆ ಎಂದು  ಪರಿಗಣಿಸಿ ಪುರೋಹಿತ ಹುದ್ದೆಗೆ ಪರೀಕ್ಷೆ ನಡೆಸಿ ಆಯ್ಕೆ ಪ್ರಕ್ರಿಯೆಗೆ ಒಳಪಡಿಸಲು ಕರೆ ಕೊಡುತ್ತಾರೆ.

                                            (ಮುಂದುವರೆಯುವುದು)              


ಸೋಮಲಿಂಗ ಗೆಣ್ಣೂರ

Leave a Reply

Back To Top