ಗಜಲ್
ನಂರುಶಿ ಕಡೂರು
ಒಂದೇ ಒಂದು ಮಾತು ಸಾಕು ಜೀವ ಉಳಿಯಲು
ಒಂದೇ ಒಂದು ಭೇಟಿ ಸಾಕು ಹಸಿರು ಚಿಗುರಲು
ಇಬ್ಬರ ನಡುವೆ ಒಲವ ಬಂಧ ಬಂದಿಯಾಗಲಿ
ಒಂದೇ ಒಂದು ಕಿರಣ ಸಾಕು ಬೆಳಕು ಹೊಳೆಯಲು
ನನ್ನ ಜೊತೆ ನೀನು ಇದ್ದರೆ ಜಗವ ಗೆಲ್ಲುವೆ
ಒಂದೇ ಒಂದು ನಗೆಯು ಸಾಕು ಮನವು ಕುಣಿಯಲು
ಉಸಿರಾಗಿ ಬೆರೆತು ಹೋದೆ ಎನ್ನ ಎದೆ ಆಳದಿ
ಒಂದೇ ಒಂದು ನೋಟ ಸಾಕು ಖುಷಿಯು ಉಳಿಯಲು
ನಂರುಶಿ ಯೇ ಸೋತನು ಮಮತೆ ಯೊಡಲ ಮಾತಿಗೆ
ಒಂದೇ ಒಂದು ಮುತ್ತು ಸಾಕು ಸಾವು ತಡೆಯಲು