ಮನ್ಸೂರ್‌ ಮುಲ್ಕಿ ಅವರ ಕವಿತೆ ಸಂಸಾರ ಮತ್ತು ಬದುಕು

ಭೋರ್ಗರೆಯುತ್ತಿರುವ ಕಡಲ ತೀರದಲ್ಲಿ
ಗೌಜಿಗದ್ದಲಗಳಲ್ಲಿಯೂ
ಪ್ರಶಾಂತ ವಾತಾವರಣವನ್ನು ಸೃಷ್ಟಿಸಿ
ಎಷ್ಟು ಶಾಂತವಾಗಿದೆ ಮನಸ್ಸು

ಭಾನುವಾರದ ಆ ಸಂಜೆ
ಕಡಲ ಸೇರುವ ಬಯಕೆ
ತೀರದ ನಡುಗೆಯೋ
ಕುಳಿತು ಆಡುವ ಮಾತುಗಳೋ
ನೆಮ್ಮದಿಯನ್ನು ತರುವುದಾದರೆ
ಜಂಜಾಟದಲ್ಲಿಯೂ ಮನುಷ್ಯ
ಶಾಂತತೆಯಿಂದ ಬದುಕಬಲ್ಲ

ಹೃದಯಕೆ ಬೇಕಾಗಿದೆ
ಸಂತೆ ಇಲ್ಲದ ಬದುಕು
ಕಿರಿಕಿರಿ ಇರದ ಸೊಗಸು
ಇರುವುದರಲ್ಲಿಯೇ ನೆಮ್ಮದಿ
ಗುಡಿಸಲಿನೊಳಗಿನ ಬದುಕು
ಸಂತೃಪ್ತಿಯನ್ನು ತರುವುದಾದರೆ
ನಿಜವಾಗಲೂ ಮನುಜ ಬದುಕಬಲ್ಲ

ಬದುಕಿನ ದೂರದ ಪಯಣ
ಸಾಗುವಷ್ಟು ದೂರ
ಮನುಜ ಆರಿಸಿಕೊಳ್ಳುವುದು
ಪ್ರಶಾಂತ ವಾತಾವರಣ
ನೆಮ್ಮದಿ ಮತ್ತು ನಗು
ಇದಿಷ್ಟೇ ಸಂಸಾರ ಮತ್ತು ಬದುಕು


One thought on “ಮನ್ಸೂರ್‌ ಮುಲ್ಕಿ ಅವರ ಕವಿತೆ ಸಂಸಾರ ಮತ್ತು ಬದುಕು

Leave a Reply

Back To Top