ಕಾವ್ಯ ಸಂಗಾತಿ
ಹನಿ ಬಿಂದು
ಅಮ್ಮ

ನಿದ್ದೆ ಮಾಡುತ್ತಿದ್ದ ಮಗುವ ನೋಡಿ ನಕ್ಕಳು
ರಕ್ತವನ್ನೇ ಹಾಲು ಮಾಡಿ ನನಗೆ ಕೊಟ್ಟಳು
ನನ್ನ ಖುಷಿಯಲವಳ ನೋವು ಎಲ್ಲಾ ಮರೆತಳು
ನಗುವ ಮಗುವ ಕಂಡು ಆಕೆ ಹಿಗ್ಗಿ ನಿಂತಳು
ಎಲ್ಲಾ ದೇವರನ್ನು ಕೂಗಿ ನನಗಾಗಿ ಕರೆದಳು
ಕಂದ ನೋವು ಉಣ್ಣಬಾರದೆಂದು ಬೇಡಿದಳು
ಬಂದ ಸರ್ವ ಸುಖವ ನೀಡಿ ನನ್ನ ಬೆಳೆಸುತ
ರಾತ್ರಿ ಹಗಲು ದುಡಿದು ಆಕೆ ನನ್ನ ಸಾಕುತ
ಮಾತೆ ಪ್ರೀತಿ ಅಮೂಲ್ಯ ಬೇರೆ ಸಿಗದದು
ಮಾನ ಪ್ರಾಣ ಕಾಯ್ವ ತಾಯ್ಗೆ ಸಾಟಿ ಯಾರದು?
—————————
ಹನಿಬಿಂದು
