ಬಾವಿ ಕಟ್ಟೆ
ಕನ್ನಡ ಮೂಲ: ಸ್ಮಿತಾ ಅಮೃತರಾಜ್.ಸಂಪಾಜೆ
ಇಂಗ್ಲೀಷಿಗೆ: ಸಮತಾ ಆರ್.
ಗುದ್ದಿ ಗುದ್ದಿ ಆಳಕ್ಕೆ ಅಗೆದು
ಸಿಕ್ಕ ಜೀವ ಜಲಕ್ಕೆ
ಅತ್ತ ಇತ್ತ ಮಿಸುಕಾಡದಂತೆ
ಕಟ್ಟಿದ್ದು ಕಟ್ಟೆ.
ನೆಟ್ಟ ದಿಟ್ಟಿಗೆ ಒಂದು ಹಿಡಿ
ಆಗಸ ಬಿಟ್ಟರೆ
ಆಕೆ ತರುವ ಕೊಡದೊಂದಿಗಷ್ಟೇ
ಹೇಗೋ ಬೆಳೆದದ್ದು ನಂಟು.
ಅದೆಂತಹ ಆತುರ ಬಿಂದಿಗೆಗೆ
ಕಂಠಕ್ಕೆ ಹಗ್ಗ ಬಿಗಿಸಿಕೊಳ್ಳುತ್ತಾ
ಹಾಗೇ ಇಳಿಬಿಡುವ ಹೊತ್ತಿಗೆ
ಕೈಯ ಹಿಡಿತವನ್ನೇ ಸಡಿಲಿಸಿ
ರೊಯ್ಯನೆ ಡುಬುಕಿ ಹೊಡೆದಾಗ
ಕೊಡ ಸೇರಿ ಜಗತ್ತು ನೋಡುವ
ಕಾತರಕ್ಕೆ ಬಾವಿಯ ಮೈ ತುಂಬಾ
ಅಲೆ.
ಅನ್ನಕ್ಕೆ ಸಾಂಬಾರಿಗೆ ಕಾಫಿಗೆ
ಚಹಕ್ಕೆ ನೀರು ಸದ್ದಿಲ್ಲದೇ
ಕಲಬೆರಕೆಯಾಗುವ ಸಂಕಟಕ್ಕೆ
ಕುದಿ ಮತ್ತಷ್ಟು ಹೆಚ್ಚುತ್ತಿದೆ.
ಖಾಲಿಯಾಗುವ ಖುಷಿಗೆ
ಕೊಡ ಇಂಚಿಂಚೇ ಮೈ ಅಲಗಿಸಿ ಕೊಳ್ಳುತ್ತಿದೆ
ಇತ್ತ ಬಾವಿ ಹೆಜ್ಜೆ ಸಪ್ಪಳಕ್ಕೆ
ಕಿವಿ ತಾಗಿಸಿ ಕುಳಿತಿದೆ.
ಈ ಕೊಡದ ನೀರು
ಗಿಡದ ಬುಡಕ್ಕೋ
ಅಡುಗೆ ಮನೆಯ ವ್ಯಂಜನಕ್ಕೋ?
ಕುತೂಹಲ ತಣಿದ ದಿನ
ಕಣ್ಣು ಹೊಳಪು ಕಳೆದುಕೊಂಡು
ಬಿಡುತ್ತದೆ.
ಮತ್ತೆ ಕೊಡ ತುಂಬಿಕೊಳ್ಳುತ್ತಿದೆ
ಡುಬು ಡುಬು ಎದೆಬಡಿಯುವ
ಒಡಲಾಳದ ಸದ್ದು
ಎಲ್ಲಿಯದ್ದು .? ಬಿಂದಿಗೆಯದ್ದಾ..?
ಬಾವಿಯದ್ದಾ..?
ಅರೆ!
ನನ್ನೆದೆಯೇಕೆ ಹೀಗೆ
ಬಡಿದುಕೊಳ್ಳುತ್ತಿದೆ ಈ ಹೊತ್ತು .
**************************
A stone lined well
Digging and digging deep down
Found the elixir of life,
Not to make it waggle
A stone lined well was built.
Other than a piece of sky
Left for the direct sight,
Got attached to a pitcher,
Brought by her
How hurried this pitcher is,
When let to climb down,
With a tightening rope around the neck,
Loosening the grip, dives deep within.
Then with the eagerness to see,
The world through this pitcher,
The well trembles
With waves all around.
When used quietly to make
rice,curry,coffee or tea,
The agony of being tainted,
boils the water up.
The pitcher is moving inch by inch
With the joy of getting emptied.
Here the well is all ears,
Eagerly waiting for,
The rustling by the steps.
Whether this pitcher will
Water a plant
Or a dish in the kitchen.?
The moment this query gets quenched
The eyes may loose the shine.
The pitcher is getting filled again,
From where does this
Dub dub sound, thumping the heart
deep within, is coming?
From the pitcher or the well ?
Hey,why my heart is beating
So much at this hour…
********************************************
ಬಾವಿ– ಕೊಡದ ಬಾಂಧವ್ಯವನು ಬದುಕಿನ ಹತ್ತಿರಕ್ಕೆ ತಂದು ನಿಲ್ಲಿಸುವಲ್ಲಿ ಕವಿತೆ ಯಶಸ್ವಿಯಾಗಿದೆ. ಒಂದು ಚಂದದ ಕವಿತೆ ಓದಿದಂತಾಯಿತು. ಕನ್ನಡದಿಂದ ಇಂಗ್ಲೀಷೋ ಇಂಗ್ಲೀಷಿನಿಂದ ಕನ್ನಡವೋ..ಅದೇ ಮೂಲ ಎನ್ನಿಸುವಷ್ಟು ಚಂದ. ಯಾವುದು ಯಾವುದರ ಅನುವಾದ ಎಂದು ತಿಳಿಯದಷ್ಟು..!!
ಮಾರ್ಮಿಕ ಕವಿತೆ. ಓದಿಸಿಕೊಳ್ಳುತ್ತದೆ
ತುಂಬಾ ಒಳ್ಳೆಯ ಕವನ, ಅನುವಾದವೂ ಚಂದ.
ಸ್ಮಿತಾ ಮತ್ತು ಸಮತಾ ಇಬ್ಬರಿಗೂ ಅಭಿನಂದನೆಗಳು.
ಚಂದ ಕವಿತೆ ಮೇಂ…
ಚಂದ ಕವಿತೆ ಮೇಂ… ದೇಹ ಬಾವಿಯಲ್ಲಿ ಹೃದಯ ಕೊಡಪಾನ…
ಕಾತ್ಯಾಯಿನಿ ಕುಂಜಿಬೆಟ್ಟು
Thanks to both Smitha and Sangaathi…
ಚಂದ ಕವಿತೆ..
ಎಲ್ಲಾ ಕೆಟ್ಟ ಸುದ್ದಿಗಳು ಹುಟ್ಟುವುದು, ಬಿತ್ತರಗೊಳ್ಳುವುದು ಬಾವಿ ಕಟ್ಟೆಯ ಮೇಲಂತೆ..!!!
” ನಿಂಗೊಬ್ಬಳಿಗೇ ಹೇಳಿದ್ದು ಯಾರಿಗೂ ಹೇಳಬೇಡ ಹಾಂss”
ಅನ್ನುತ್ತಲೇ ಗುಲ್ಲು ಹಾಕುವುದು ಅಲ್ಲೇ…
ಮೂಲ ಹಾಗೂ ಅನುವಾದ ಎರಡೂ ಬಹಳ ಬಹಳ ಚೆನ್ನಾಗಿದೆ… ಇಬ್ಬರ ಪ್ರತಿಭೆಗೂ ಶರಣು
Samantha madam u r wonderful….
Very nice poem and the translation are very good
Smitha hagu samatha ibbarigu abhinandanegalu
Original poem and the the translation both are excellent