ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಎ . ಹೇಮಗಂಗಾ ರೋಗಿಗಳ ಶುಶ್ರೂಷೆಯಲಿ ನಿರತರಾಗಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟುನಿರೋಗಿಯಾಗಲೆಂದು ಶ್ರಮಿಸುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ನಮಗೂ ಬದುಕಿದೆ ಎಂಬುದನೇ ಮರೆತು ಬದುಕಬೇಕಿದೆ ಇಂದುಹಗಲಿರುಳು ನಿರುತ ದುಡಿಯುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ಕಡುವೈರಿ ವೈರಾಣು ಮಹಾಮಾರಿಯಾಗಿ ಪಂಥಾಹ್ವಾನ ನೀಡಿದೆರಣಕಲಿಯಂತೆ ಹೋರಾಡುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ಸಾವಿನ ಕಬಂಧಬಾಹು ಉಸಿರುಗಟ್ಟಿಸಿದೆ ವಯೋಭೇದವಿಲ್ಲದೇಪಾರಾಗುವ ದಾರಿಯ ಅರಸುತ್ತಿದ್ದೇವೆ ಪ್ರಾಣವನ್ನು ಪಣಕ್ಕಿಟ್ಟು ತೂಗುಗತ್ತಿ ಎಂದು ಬೀಳುವುದೋ ಭಯ ಬೇರೂರಿದೆ ಎದೆಯಲ್ಲಿಜೀವಗಳ ಉಳಿಸಲು ಪಣ ತೊಟ್ಟಿದ್ಧೇವೆ ಪ್ರಾಣವನ್ನು ಪಣಕ್ಕಿಟ್ಟು **************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ಧರಾಮ ಹೊನ್ಕಲ್ ಏಳು ದಶಕಗಳೇ ಕಳೆದವು ಹೊಸ ಮಳೆಯು ಸುರಿಯಲಿಲ್ಲ ನೋಡು ಸಾಕಿಭೂತಾಯಿ ಮಕ್ಕಳ ಬಂಜೆತನ ಹಿಂಗಲೇಯಿಲ್ಲ ನೋಡು ಸಾಕಿ ದುಡಿ ದುಡಿದು ನೊಂದ ರೈತನ ಮುಖದಲ್ಲಿ ನಗೆಯು ಅರಳಲಿಲ್ಲಜಗಕೆ ಅನ್ನ ಹಾಕುವವರ ಬಾಯಿಯೇ ಸಿಹಿಯಾಗಲಿಲ್ಲ ನೋಡು ಸಾಕಿ ಗಾಂಧಿ ಕಂಡ ಗ್ರಾಮೀಣ ಭಾರತದ ಕನಸುಗಳೆಲ್ಲ ಜಾರಿ ಕಡಲ ಪಾಲಾದವು ಈ ಮಣ್ಣಲಿಹಳ್ಳಿ ಹಳ್ಳಿಗಳೆಲ್ಲ ಗುಳೇ ಎದ್ದು ಹೋಗಿ ಸುಖವೆಂಬುದೇ ಸುಳಿಯಲಿಲ್ಲ ನೋಡು ಸಾಕಿ ಕುರ್ಚಿಯ ಕನಸಿನಲಿ ಸ್ವಾರ್ಥದ ಸೆಳವಿನಲಿ ದೇಶ ನಮ್ಮ ನಮ್ಮವರಲ್ಲಿಯೇಹರಾಜಾಯಿತುಅಧಿಕಾರದ ಅಮಲಿನಲ್ಲಿ ರೈತರ ನೆಮ್ಮದಿಗೆ ಯಾರು ಪೂರ್ಣ ಚಿಂತಿಸಲಿಲ್ಲ ನೋಡು ಸಾಕಿ ‘ಹೊನ್ನಸಿರಿ’ ಭೂತಾಯಿ ಮಕ್ಕಳ ಆಶೋತ್ತರಗಳಿಗೆ ಉತ್ತರ ಎಲ್ಲಿಹದುಸ್ವಾರ್ಥದ ಈ ಪಡಿಪಾಟಲಿಗೆ ಬಂಡೆಳದೇ ಫಲ ದೊರಕುವದಿಲ್ಲ ನೋಡು ಸಾಕಿ ***************************************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ಇಲ್ಲಿ ಉಸಿರಿಗಾಗಿ ಒದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿಅಲ್ಲಿ ಬದುಕಿಗಾಗಿ ಹುಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಚಂದ್ರಮನ ಮುಖ ನೋಡಿ ತಿಂಗಳ ಪೂರ್ತಿ ರೋಜಾ ಮಾಡಿರುವೆಇವರು ನೋಟುಗಳ ಮುದ್ದಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಶಹರಿ ಹೊತ್ತಲ್ಲಿ ಸತ್ತವರು ನೆನಪಾಗಿ ಕಣ್ಣು ತುಂಬಿಕೊಳ್ಳುತ್ತವೆಇಫ್ತಾರ್ ಮಾಡುತ್ತ ಮಿಡುಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಹಗಲೆನ್ನದೆ ಇರುಳೆನ್ನದೆ ನಮಾಜು ಮಾಡಿ ದುವಾ ಬೇಡಿದ್ದೇನೆದೇಶದ ದಳ್ಳುರಿ ತಣ್ಣಗಾಗದೆ ತಡಕಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಕೆಂಪಾದ ಮೆಹಂದಿಯ ರಂಗು ಕಣ್ಣ ಸುರುಮಾವನ್ನೇ ಇರಿಯುತ್ತಿದೆಕಾಣದ ಕೈಗಳಿಗೆ ಜೀವಗಳನ್ನೇ ಜಕಾತ್ ನೀಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಹಬ್ಬಕ್ಕೆ ಕೊಂಡ ಹೊಸ ಬಟ್ಟೆ ಕಫನ್ ಆಗುತ್ತದೆಂದು ನನಗೆ ಗೊತ್ತಿರಲಿಲ್ಲಮುಳುಗಿದ ಚಾಂದ್ ಗಾಗಿ ಇಂತಜಾರ್ ಮಾಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ಕತ್ತಲಲ್ಲಿ ತಡವರಿಸುವ ಅರುಣಾ ಗೆ ಶಮೆಯ ಬೆಳಕು ಕಾಣುತ್ತಿದೆಕೈಚೆಲ್ಲಿದ ಅಲ್ಲಾಹುವಿಗೆ ಇನ್ನೂ ಬೇಡುತ್ತಿದ್ದಾರೆ ಹೇಗೆ ಈದ್ ಆಚರಿಸಲಿ ********

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಡಾ.ರೇಣುಕ ಅರುಣಕುಮಾರ ಕಠಾರಿ ಹಣೆ ಬರಹವೆಂದು ಕೈ ಕಟ್ಟಿ ಮಾತಿದ್ದೂ ಸುಮ್ಮನೆ ಕೂಡಬೇಕೆ ಈ ಲೋಕದೆದುರುಒಳಮನೆಯ ಹೊಸ್ತಿಲಳೊಗೆ ಮೈಲಿಗೆಂದು ಕುದಿಯಬೇಕೆ ಈ ಲೋಕದೆದುರು ಮಡಿ ಮೈಲಿಗೆಯ ಮನದೆದುರು ಬೆತ್ತಲೆ ಒಂದಾಗಿದೆ ಬದುಕುಮನಸಿಗೆ ಮೈಲಿಗೆ ಇಲ್ಲವೆಂದು ತಿಳಿದರು ದೂರವಾಗಬೇಕೆ ಈ ಲೋಕದೆದುರು ಮೂರರೊಳಗೆ ಬಂಧನ ಮೂರರೊಳಗೆ ಬೆಂದೇನಾ ಧರ್ಮದೆದುರುಹೆಣ್ಣನೇ ದೇವರು ಮಾಡಿದ ಬದುಕಿನೊಳಗೆ ಮಾತನು ಅಡವಿಡಬೇಕೆ ಈ ಲೋಕದೆದುರು ಬೆಂಕಿಗೆ ಹಾರಿದವಳೊಬ್ಬಳು ಬೆನ್ನು ಹತ್ತಿದವಳೊಬ್ಬಳು ಕಲ್ಲಾಗಿ ಕಾದವಳೊಬ್ಬಳು ಚರಿತ್ರೆಯೇ ಹೀಗೆಗಾದೆಯೊಳಗೆ ನೇಣು ಬಿಗಿದರೂ ನಮ್ಮ ಕುಲವನು ಕುರುಡಾಗಬೇಕೆ ಈ ಲೋಕದೆದುರು ‘ರೇಣು’ ಕೇಳೆ ಮುಡಿಗಳೆಲ್ಲ ಒಂದಾಗಬೇಕು ನಡೆ ನುಡಿಯೊಳಗೆ ಇಂದೇಕತ್ತಲಾದ ಬೊಗಸೆಯೊಳಗೆ ಮೈಲಿಗೆ ತೊಳೆದು ಬೆಳಕ ಬುಗ್ಗೆ ಚಿಮ್ಮಿಸಬೇಕು ಈ ಲೋಕದೆದುರು. ************************************************************

ಗಜಲ್ Read Post »

You cannot copy content of this page

Scroll to Top