ಕಾವ್ಯ ಸಂಗಾತಿ
ಗೀತಾ ಆರ್.
ಅಮ್ಮನ ಕೂಸು

ಹೃದಯವೆಂಬ ತೊಟ್ಟಿಲಲ್ಲಿ
ಕೂಸನ್ನು ಮಲಗಿಸಿ ತೂಗಿ
ತೂಗಿ ಲಾಲಿ ಹಾಡುತ್ತಿಹಳು
ಅಮ್ಮಾನೋರ್ವಳು..
ಕೂಸು ಇದ್ದ ಕನಸು ಕಂಡಳು
ಒಡಲಲ್ಲಿ ಬಸೀರಾದಂತೆ
ಬರಿದಾಗಿತ್ತು ವಾಸ್ತವದಲೀ
ಕೂಸಾ ಹೆತ್ತತಾಯಿ ಮಡಿಲು
ತುಟಿ ಕಚ್ಚಿ ನೋವಿನಿಂದ
ಬಿಕ್ಕಿ ಬಿಕ್ಕಿ ಅಳುತ್ತಿರುವಳು
ಕೂಸಾ ಹೆರಲಾಗದ ಹೆಣ್ಣಾ
ಸ್ವೀಕರಿಸುವರೇ .. ಎಂದು
ತಡೆಯದೇ ಕಣ್ಣಾ ಹನಿಗಳು
ಧಳ ಧಳನೆ ಸುರಿಯುತ್ತಿವೆ
ಒರೆಸುವವರಿಲ್ಲದೇ ಕಣ್ಣೀರಾ
ಅಮ್ಮ ನೀ ಅಳಬೇಡವೆಂದು
ಹೆಣ್ಣಾ ಮನಸನು ಅರಿತು
ನಡೆಯಿರಿ ಅವಳ ದುಂಖವ
ತಿಳಿಯ ಬಯಸಿರಿ ಅವಳಿಗೂ
ಒಂದು ಮನಸಿದೆ ಮರೆಯದಿರಿ
ಅಡಿಗೆ ಪರಿಮಳದೊಂದಿಗೆ
ಕಾಯುತ್ತಿರುವಳು ಬಾಗಿಲಲಿ
ಅಮ್ಮಾ ಅಮ್ಮಾ ಎನ್ನುತಾ
ಕರೆಯುವ ಭಿಕ್ಷುಕನಿಗಾಗಿ
ಗೀತಾ ಆರ್.




