ವಿಜಯಲಕ್ಷ್ಮಿ ಹಂಗರಗಿ ಅವರʼಭಾವ ಜೀವವುʼ

ಎಷ್ಟು ಬೇಗ
ಬೆಳಗಾಯಿತು
ಇರುಳು ಕಳೆಯಿತು
ಅವನ ನೆನಪಲಿ
ಕಣ್ಣು ರೆಪ್ಪೆ
ಮುಚ್ಚಲೆ ಇಲ್ಲ

ರಾತ್ರಿ ಹಾಡಿದವು
ಹಕ್ಕಿ ಪಕ್ಷಿ
ಮಧುರ ಜೋಗುಳ
ಪ್ರೇಮ ರಾಗವು
ಚೆಲುವ ಚಂದಿರ
ಮುಗುಳು ನಕ್ಕನು

ಹೃದಯ ತುಂಬಿದ
ಭಾವ ಜೀವವು
ಕಾವ್ಯವಾಗಿ ಅರಳಿತು
ಸ್ನೇಹ ಸರಸ ಒಲವು
ದೂರ ಪಯಣ ದಿಟ್ಟ ಗುರಿ
ಅವನು ಬಾಳ ಗೆಲುವು


3 thoughts on “ವಿಜಯಲಕ್ಷ್ಮಿ ಹಂಗರಗಿ ಅವರʼಭಾವ ಜೀವವುʼ

Leave a Reply

Back To Top