ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಲ್ಲಿಗೆಯ ಅಕ್ಷರಮಾಲೆ ಹೆಣೆದು,
ವಿಜ್ಞಾನದ ಸೌರಭವನು ಅರಳಿಸುವ ,
ಪುಸ್ತಕವೆಂಬ ಕುಸುಮವನ್ನು ತೃಪ್ತಿಯಾಗಿ ಸವಿಯೋಣ.
ಪುಸ್ತಕಗಳು ಕೇವಲ ಕೈಗೆ ಭೂಷಣವಲ್ಲ,
ಮೆದುಳಿಗೆ ಅವು ಆತ್ಮೀಯ ಗೆಳೆಯರಲ್ಲ?
ಲೇಖನಿಗಳು ಘರ್ಜಿಸುವ ತನಕ,
ಕಾವ್ಯದ ಶಕ್ತಿ ಆಳುವ ದಿನದವರೆಗೂ,
ಹಾಡೋಣ, ಕುಣಿಯೋಣ,
ಮಾತನಾಡೋಣ, ಹರಟೆ ಹೊಡೆಯೋಣ.
ಆಡೋಣ, ಆನಂದಿಸೋಣ…
ಮನವ ಸ್ಪಂದಿಸುವಂತೆ ಮಾಡಲು,
ನಮ್ಮನು ಮನುಷ್ಯರಾಗಿಸಲು,
ಒಳ್ಳೆಯ ಪುಸ್ತಕಗಳನ್ನು ಮದಿವೆ ಆಗೋಣ.
ನಮ್ಮ ಅರ್ಥಾಂಗಿ ಪುಸ್ತಕವೇ ಅನೊಣ.
ವೈಜ್ಞಾನಿಕ ಬೆಳವಣಿಗೆಗಳನ್ನು ಪುಸ್ತಕವಾಗಿ ಹೆತ್ತೋಣ.
ಪಾಶ್ಚಾತ್ಯ ಪ್ರವೃತ್ತಿಗಳಲ್ಲಿ
ಗೆದ್ದಲುಗಳಿಂದ
ಬೀಳುವ ಮಿದುಳುಗಳನ್ನ
ಬಿಡುವಿಲ್ಲದ ಉಸಿರಾಟ
ಹೃದಯದ ಕೋಣೆಗಳನ್ನ
ಪುಸ್ತಕ ಪಠನಗಳಿಂದ ತುಂಬಿಸೋಣ…
ಮೊಬೈಲುಗಳಲ್ಲಿ ಸಿಕ್ಕಿಹಾಕಿಕೊಳ್ಳದೆ
ಜ್ಞಾನವನ್ನು ಭೇಟಿ ಮಾಡೋಣ.
ಮಾನಸಿಕ ಒತ್ತಡನ್ನ
ಕತ್ತಲೆಯ ಆಳದಲ್ಲಿ ಬಿಟ್ಟಿ
ನಾಳೆಯ ಕನಸುಗಳನ್ನ ಕುಚ್ಚುಗಳಲ್ಲಿ ಅಡಗಿವ
ಸಂತೋಷದ ಪುಸ್ತಕಗಳ
ಪುಟಗಳನ್ನು ಒಂದೊಂದಾಗಿ ತೆರೆಯೋಣ.
(ವಿಶ್ವ ಪುಸ್ತಕ ದಿನ ಸಂದರ್ಭವಾಗಿ)


About The Author

Leave a Reply

You cannot copy content of this page

Scroll to Top