ಅನುವಾದ ಸಂಗಾತಿ
ಮೂಲ: ಜಾವಿದ್ ಆಖ್ತರ್.. ಅನುವಾದ ಸಂಗೀತ ಶ್ರೀಕಾಂತ ಯಾವಗಲೆಲ್ಲ ನೋವಿನ ಮೋಡ ಹರಡುತ್ತದೆಯೊ, ಯಾವಗಲೆಲ್ಲ ಬೇಸರದ, ನೆರಳು ಹರಡುತ್ತದೆಯೋ, ಯಾವಗಲೆಲ್ಲಾ ಕಣ್ಣಿಂದ ಹನಿ ರೆಪ್ಪೆಯ ಬಳಿ ಬರುತ್ತದೆಯೋ, ಯಾವಗಲೆಲ್ಲಾ ಏಕಾಂತದಿಂದ ಹೃದಯ ಹೆದರುತ್ತದೆಯೋ, ಆಗೆಲ್ಲ ನಾನು ನನ್ನ ಹೃದಯವನ್ನು ಸಂತೈಸಿದ್ದೆನೆ ಏ ಹೃದಯವೇ ನೀನೆಕೆ ಹೀಗೆ ಆಳುತ್ತಿದ್ದಿಯಾ ಜಗತ್ತಿನಲ್ಲಿ ಎಲ್ಲರಿಗೂ ಹೀಗೆ ಆಗುತ್ತದೆ. =======
ಅನುವಾದ ಸಂಗಾತಿ
ಮೂಲ: ಅರುಣ್ ಕೊಲ್ಜಾಟ್ಕರ್ ಮಹಾರಾಷ್ಟ್ರದ ದ್ವಿಭಾಷಾ ಕವಿ ಅನುವಾದ:ಕಮಲಾಕರ ಕಡವೆ ಮುದುಕಿ ಮುದುಕಿಅಂಗಿ ಅಂಚನು ಹಿಡಿದುಬೆನ್ನು ಬೀಳುತ್ತಾಳೆ. ಅವಳು ಬೇಡುತ್ತಾಳೆ ಎಂಟಾಣೆಕುದುರೆ ಲಾಳದ ಮಂದಿರ ನಿಮಗೆತೋರಿಸುವಳಂತೆ ನೀವದನ್ನು ಅದಾಗಲೇ ನೋಡಿದ್ದೀರಿಅಂದರೂ ಕುಂಟುತ್ತ ಬರ್ತಾಳೆ ಹಿಂದೆಬಿಗಿಯಾಗಿ ಹಿಡಿದು ಅಂಗಿ ಅಂಚನು ನಿಮಗೆ ಹೋಗಗೊಡುವುದಿಲ್ಲ ಅವಳುಗೊತ್ತಲ್ಲ, ಮುದುಕಿಯರ ಪರಿಹತ್ತಿ ಹೂವಂತೆ ಅಂಟಿಕೊಳ್ಳುವರು ತಿರುಗಿ ಎದುರಿಸುವಿರಿ ನೀವುಅವಳನ್ನು, ಈ ಆಟ ಮುಗಿಸುವಖಡಾಖಂಡಿತ ನಿಲುವಲ್ಲಿ ಅವಳಾಗ ಅನ್ನುತ್ತಾಳೆ: “ಇನ್ನೇನುಮಾಡಿಯಾಳು ಮುದುಕಿಯೊಂಟಿಇಂಥ ದರಿದ್ರ ಕಲ್ಲುಗುಡ್ಡಗಳಲ್ಲಿ?” ನೀವು ನೋಡುತ್ತೀರಿ. ನಿರಾಳ ಆಕಾಶಅವಳ ಗುಂಡು ಕೊರೆದ ತೂತಿನಂತಹಕಣ್ಣುಗಳ […]
ಅನುವಾದ ಸಂಗಾತಿ
ಮೂಲ-ಜಯಂತ ಮಹಾಪಾತ್ರ ಒರಿಸ್ಸಾದ ಭಾರತೀಯ ಆಂಗ್ಲ ಕವಿ ಅನುವಾದ–ಕಮಲಾಕರ ಕಡವೆ “ಪುರಿಯಲ್ಲಿ ಬೆಳಗು” ಕೊನೆಯಿರದ ಕಾಗೆಗಲಭೆಪವಿತ್ರ ಮರಳಲ್ಲಿ ತಲೆಬುರುಡೆಯೊಂದುಹಸಿವಿನೆಡೆಗೆ ವಾಲಿಸುತ್ತದೆ ಖಾಲಿ ದೇಶವನ್ನು. ಬಿಳಿತಳೆದ ವಿಧವೆಯರುತಮ್ಮ ಬಾಳಿನ ಮಧ್ಯದಾಚೆಮಹಾಮಂದಿರದೊಳಗೆ ಹೊಗಲು ಕಾದಿದ್ದಾರೆ. ಅವರ ವಿರಕ್ತ ಕಣ್ಣುಗಳುಬಲೆಯಲ್ಲಿ ಸಿಕ್ಕಿಬಿದ್ದವರಂತೆ ದಿಟ್ಟಿಸುತ್ತವೆ,ಬೆಳಬೆಳಗ್ಗೆ ಶ್ರದ್ಧೆಯ ಬೆಳಗಿನೆಳೆಗೆ ಜೋತುಬಿದ್ದು. ನಿತ್ರಾಣ ಮುಂಜಾನೆ ಬೆಳಕಿಗೆ ಬಿದ್ದಿವೆಒಂದನಿನ್ನೊಂದು ಆತಿರುವ ಪಾಳು ತೊನ್ನುಭರಿತ ಚಿಪ್ಪುಗಳು,ಹೆಸರಿರದೆ ಕುಗ್ಗಿಹೋದ ಮುಖಗಳ ಮುಂದೆ, ತಟ್ಟನೆ ನನ್ನ ತೊಗಲೊಳಗಿಂದ ಹೊರಬೀಳುವ ಬಿಕ್ಕುಸೇರುತ್ತದೆ ಏಕಾಕಿ ಮಂಕು ಚಿತೆಯೊಂದರ ಹೊಗೆಯನನ್ನ ಮುದಿ ಅಮ್ಮನ ಕವಿಯುವ ಧಗೆಯ: […]
ಅನುವಾದ ಸಂಗಾತಿ
ಲೋರ್ನ್ ಗುಡಿಸನ್(1947
ಜಮೈಕಾ ದೇಶದ ಕವಿಯಿತ್ರಿ
ಕೆರಿಬಿಯನ್ ಕಾವ್ಯ
ಅನುವಾದ-ಕಮಲಾಕರ ಕಡವೆ
ಅನುವಾದ ಸಂಗಾತಿ
Solitary! ತೆಲುಗು ಮೂಲ : ರವಿ ವೀರೆಲ್ಲಿ ಅನುವಾದ : ರೋಹಿಣಿಸತ್ಯ ಒಂಟಿ ಮೇಘದಂತೆ ಅಲ್ಲಿ ಇಲ್ಲಿ ಎಷ್ಟುಹೊತ್ತು ಅಡ್ಡಾಡಲು ಸಾಧ್ಯ?! ಸ್ವಲ್ಪಹೊತ್ತಿಗೆ ಸಾವಿರವಾಗಿ ಸೀಳಿಹೋಗುತ್ತೇನೆ ಕಡೆಗೆ ಹನಿಗಳೆಲ್ಲವನ್ನು ಒಟ್ಟುಗೂಡಿಸಿಕೊಂಡು ದೊಡ್ಡ ಸಮೂಹವಾಗಿ ದಾಳಿಯಿಡುತ್ತೇನೆ ಯುದ್ಧ ಮುಗಿದಮೇಲೆ ಯಾವ ತೊರೆಯಲ್ಲೋ ಏಕಾಂಗಿಯಾಗಿ ಹರಿಯುತ್ತೇನೆ ಒಂಟಿಯಾಗಿ ಬಾಳಲಾಗದಿರುವುದಕ್ಕೆ ಸಮೂಹದಲ್ಲಿ ನಡೆಯಲಾಗದಿರುವುದಕ್ಕೆ ನಡುವೆ ಎಷ್ಟೋ ಕಾಲಗಳು ಹಾಗೆ ಓರೆಗಣ್ಣಿನಿಂದ ನೋಡುತ್ತಾ ಸಾಗುತ್ತಿರುತ್ತವೆ ಮತ್ತೆಷ್ಟೋ ಕ್ಷಣಗಳು ಕಾಯದೆ ಅನುಕಂಪದಿಂದ ಕದಲುತ್ತಿರುತ್ತವೆ ಯಾವ ಕೈಯಾಸರೆ ನನ್ನನ್ನು ಲಾಲಿಸುವುದಿಲ್ಲವೆಂದು ಯಾವ ಮೊಗ್ಗು ನನಗಾಗಿ ಮೂಡುವುದಿಲ್ಲವೆಂದು […]
ಅನುವಾದ
ವಸಂತನಾಗಮನ ಮೂಲ ತೆಲುಗು ರಚನೆ: ಗುಂಟೂರು ಶೇಷೇಂದ್ರಶರ್ಮ ಗುಂಟೂರು ಶೇಷೇಂದ್ರ ಶರ್ಮಾ ಬಿ.ಏ.ಬಿ.ಯಲ್ 1927 -2007 ತೆಲುಗು ಸಾಹಿತ್ಯದಲ್ಲಿ ಜನಪ್ರಿಯ ಕವಿ ಯುಗಕವಿ ಎಂದು ಹೆಸರುಗಳಿಸಿದವರು. ಇವರು ಕವಿ, ವಿಮರ್ಶಕ ಹಾಗೂ ಬರಹಗಾರರು.1994 ರಲ್ಲಿ ಇವರಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಇವರು ನೋಬಲ್ ಬಹುಮಾನಕ್ಕೂ ಭಾರತದಿಂದ ನಾಮಿನೇಟ್ ಆಗಿದ್ದರು. ಇವರ ಹಲವಾರು ರಚನೆಗಳು ಕನ್ನಡ, ಇಂಗ್ಲೀಷು ಹಿಂದೀ ಉರ್ದೂ ಬೆಂಗಾಲೀ ನೇಪಾಲಿ ಹಾಗೂ ಗ್ರೀಕ್ ಭಾಷೆಗಳಿಗೂ ಅನುವಾದಗೂಂಡಿವೆ ಕನ್ನಡಕ್ಕನುವಾದ: ನಾರಾಯಣ ಮೂರ್ತಿ ಬೂದುಗೂರು ಹೂಗಳು ತುಟಿಯರಳಿಸಿವೆ […]
ಅನುವಾದ
ತೆಲುಗು ಮೂಲ- ಡಾ.ಕತ್ತಿ ಪದ್ಮಾರಾವು ಕನ್ನಡಕ್ಕೆ ನಾರಾಯಣಮೂರ್ತಿ ಬೂದುಗೂರು ಯಾರು ಕೊಲೆಪಾತಕರು? ಸಮುದ್ರ ಹಿಮದಿಂದ ಗಾಢವಾಗಿ ಗಡ್ಡೆಕಟ್ಟಿದೆ ನಡುವೆ ಒಂದು ನೀರಿನ ಝರೀ ತಿಮಿಂಗಲಗಳು ಈಜುತ್ತಾ ಸಾಗುತ್ತಿವೆ ಹೆಚ್ಚಾಗಿ ಇಬ್ಬನಿ ಸುರಿದಾಗ, ಅವಕ್ಕೆ ಉಸಿರಾಡಲು ಕಷ್ಟವೆನಿಸುತ್ತದೆ ಈಗ ತಿಮಿಂಗಲಗಳದೇ ಬೇಟೇ ಬಲೆಗಳೆಲ್ಲಾ ಖಾಲೀ,ಖಾಲೀ ಬಿದ್ದಿವೆ ಇತ್ತೀಚೆಗೆ ಮೀನುಗಳೂ… ಬಲೆಯನ್ನು ಗುರ್ತು ಹಚ್ಚುತ್ತಿವೆ. ಆ ಕಾಲುವೆ ಬದಿಯಲ್ಲಿ ತುಂಬಾ ನಾಯೀಕೊಡೆಗಳ ಸಾಲು ರಸ್ತೆ ಒದ್ದೆ ಒದ್ದೆಯಾಗಿ ಕಿರುಪಾದಗಳ ಸಪ್ಪಳಕೆ ನೀರು ಚೆಲ್ಲುತಿದೆ. ಮನುಷ್ಯನಿಗೆ ಈ ಚಳೀಯಲ್ಲೂ ಬೆವರು ಕಿತ್ತುಬರುತ್ತಿದೆ […]