Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಹೊಸ ವರ್ಷದ ಹೊಸಿಲಲ್ಲಿ…. ಡಿ.ಎಸ್.ರಾಮಸ್ವಾಮಿ ಇವತ್ತು ಈ ವರ್ಷಕ್ಕೆ ಕಡೆಯ ಮೊಳೆ ಹೊಡೆದಾಯಿತು. ಮತ್ತಷ್ಟು ಬಿಳಿಯ ಕೂದಲು ಗಡ್ಡದಲ್ಲಿ ಹಣುಕಿವೆ ತೆಲೆ ಮತ್ತಷ್ಟು ಬೊಕ್ಕಾಗಿದೆ. ಇರುವ ಸಾಲದ ಕಂತುಗಳ ಲೆಕ್ಕ ಹಾಕಿದರೆ ಬರೀ ನಿಟ್ಟುಸಿರು ಆದಾಯ ತೆರಿಗೆಯ ಸ್ಲಾಬು ಏರಿದೆ. ಎದೆ ಎತ್ತರ ಬೆಳೆದು ನಿಂತಿದ್ದಾಳೆ ಮಗಳು, ಮುಂದೆ ಹೇಗೋ ಎಂದು ತಳಮಳಿಸುವುದು ಜೀವ, ಮದುವೆಯ ಮಾತೆತ್ತಿದರೆ ಸಿಡುಕುತ್ತಾಳೆ. ಚಿನ್ನದ ಸರ ಕೊಳ್ಳುವ ಇವಳ ಮಾತು, ಅಪಥ್ಯ. ಸ್ವರ್ಣ ಬಾಂಡಿನ ಕಂತು ಮುಗಿದು ಆಭರಣಗಳ ಆಯಬೇಕಿದೆ ಅಷ್ಟೆ. […]

ಕಾವ್ಯಯಾನ

ಭ್ರೂಣ ಕಳಚುವ ಹೊತ್ತು ಬಿದಲೋಟಿ ರಂಗನಾಥ್ ಭ್ರೂಣ ಕಳಚುವ ಹೊತ್ತು ಗಂಡು ಕೂಸಿಗಾಗಿ ಬಯಕೆ ಬಾಯಾರಿ ಹುಟ್ಟಿದ ಹೆಣ್ಣುಕಂದಮ್ಮಗಳ ಭ್ರೂಣಗಳನ್ನು ಯಾವುದೋ ಗುದ್ದರಗಳಲ್ಲಿ ಹೂತು ಮಣ್ಣೂ ತಿನ್ನಲಾರದೆ ನಾಯಿಗಳು ವಾಸನೆ ಹಿಡಿದು ಎರಡೂ ಕಾಲುಗಳಲ್ಲಿ ಬಗೆ ಬಗೆದು ಕಚ್ಚಿ ಕಚ್ಚಿತಿನ್ನುತ್ತಿವೆ ಇಟ್ಟಾಡಿಕೊಂಡು ಹಸಿಮಾಂಸವೆಂದು.! ರಕ್ತಸೇರಿ ಮಾಂಸ ತುಂಬಿ ಆಕಾರ ಮೂಡಿ ತಾಯಿಯೊಳಗಿನ ಅಂತಃಕರಣ ತುಂಬಿ ಜೀವ ಪಡೆದು ಹೆಣ್ಣು ಕೂಸು ಅಂದಾಕ್ಷಣ ಕಣ್ಣುಗಳಲ್ಲಿ ಬೆಂಕಿಯುಂಡೆ ಉರುಳಿ ಮನಸುಗಳನ್ನು ಸುಡುವ ಮುಟ್ಟಾಳತನ ಅಳುವ ಮಗುವಿನ ದ್ವನಿ ಕೇಳಿಸಿಕೊಳ್ಳುತ್ತಲೇ ಎದೆಯಲ್ಲಿ […]

ಕಾವ್ಯಯಾನ

ಈ ಇರುಳು ನೂರುಲ್ಲಾ ತ್ಯಾಮಗೊಂಡ್ಲು ಈ ಇರುಳು ಕಣ್ಣುಗಳಲಿ  ಸೂರ್ಯ ಉರಿಯುತಿದ್ದಾನೆ  ಲಕ್ಷ ಲಕ್ಷ ನಕ್ಷತ್ರಗಳು ದನಿ ಕೂಡಿಸಿವೆ ನವ ಸ್ವಾತಂತ್ರ್ಯದ ಮೊಳಗಿನಲಿ  ನಮ್ಮ ಯಾತನೆಗಳು ದಿಕ್ಕು ದಿಕ್ಕಿಗೂ ಒಯ್ಯುವ ಸಮೀರನೇ ನಿನಗೆ ವಂದನೆ ಅಸಮಾನತೆ ,ಶೋಷಣೆಯಲಿ ನಲುಗಿದೆ ಈ ಹೊತ್ತು ಈ ದೇಶ ನಮ್ಮ ಪಾಡಿನ ಕಿಚ್ಚು ಮೂಡಲಿ ಎಲ್ಲೆಡೆ ಬದುಕು ಶೂನ್ಯವಾಗಿದೆ ಹೆಪ್ಪುಗಟ್ಟಿದ ರಾತ್ರಿಯಲಿ ನೋವಿನ ಹಾಡು ಹೊರಡುತಿದೆ ಇದೊ! ಎದೆ ತಂತಿಯ ನರಳಿಕೆಯಲಿ ಕಣ್ಣ ಪೊರೆ ಮಂಜಾಗಿದೆ ನಾಳಿನ ಚಿಂತೆಯಲಿ ಈ ಸುದೀರ್ಘ […]

ಗಝಲ್ ಸಂಗಾತಿ

ಗಝಲ್ ಡಾ.ಗೋವಿಂದ ಹೆಗಡೆ ಅವನು ನನ್ನೊಡನೆ ಇದ್ದಿದ್ದು ಅದೊಂದೇ ಸಂಜೆ ನಾನು ನನ್ನನ್ನೇ ಮರೆತಿದ್ದು ಅದೊಂದೇ ಸಂಜೆ ಹಕ್ಕಿಗಳು ಗೂಡಿಗೆ ಮರಳಿ ಬರುವ ಹೊತ್ತು ಮನಸು ಗರಿಬಿಚ್ಚಿ ಹಾರಿದ್ದು ಅದೊಂದೇ ಸಂಜೆ ಪಡುವಣದ ಕೆನ್ನೆಗೆ ರಂಗು ಬಳಿದಿದ್ದ ಸೂರ್ಯ ಕನಸುಗಳಿಗೆ ಬಣ್ಣ ಏರಿದ್ದು ಅದೊಂದೇ ಸಂಜೆ ಎಷ್ಟೊಂದು ಅಲೆಗಳು ದಡವ ಮುದ್ದಿಟ್ಟವಾಗ ಕಡಲು ಉಕ್ಕುಕ್ಕಿ ಹರಿದಿದ್ದು ಅದೊಂದೇ ಸಂಜೆ ನಮ್ಮ ಬಡಕೋಣೆಯಲಿ ಚಂದ್ರೋದಯವಾಯ್ತು ಮಧುಪ ಮಧುವೆರೆದಿದ್ದು ಅದೊಂದೇ ಸಂಜೆ ಸಂಜೆ ಇರುಳಾಗಿ ಅಯ್ಯೋ ದಿನ ಉರುಳಿತಲ್ಲ ಕಾಡುವ […]

ಕಾವ್ಯಯಾನ

ಮಂತ್ಲಿಪಿರಿಯಡ್ಸ್ ಮತ್ತು…. ವಿಜಯಶ್ರೀ ಹಾಲಾಡಿ ಮಂತ್ಲಿಪಿರಿಯಡ್ಸ್ ಮತ್ತು…. ರಕ್ತ ಕಂಡರೆ ಹೆದರುವಕೋಮಲೆಗೆ ಅನಿವಾರ್ಯ ಮಂತ್ಲಿ ಪಿರಿಯಡ್ಸ್ ! ಬ್ರೆಡ್ – ಜಾಮ್ ಹೋಲಿಕೆಗೆ ಲಘುವಾಗಿ ನಕ್ಕವಳೇ ಇನ್ನೀಗ ಅಳಬೇಕು ಹೆರಿಗೆ ಬೇನೆಯಾದರೂ ಮುಗಿಯುತ್ತದೆ ಒಮ್ಮೆಗೇ ಇಪ್ಪತ್ತೆಂಟರ ಸೈಕಲ್ ಇಪ್ಪತ್ತಾರು- ಇಪ್ಪತ್ತನಾಲ್ಕಕ್ಕೇ ಹಾಗಾದರೆ ವರ್ಷಕ್ಕೆಷ್ಟು ! ಟೆನ್ಷನ್ ಜಾಸ್ತಿಯಾದರೆ ಬ್ಲೀಡಿಂಗೂ ಜಾಸ್ತಿ ಪ್ಯಾಡುಗಳೂ ಇರಿಸುಮುರುಸುಗಳೂ ನೋವು ಅಪಮಾನಗಳೂ… ಐವತ್ತೋ ಐವತ್ಮೂರಕ್ಕೋ ನಿಲ್ಲುತ್ತದಂತೆ … ಅಂತೆಕಂತೆಗಳಿಗೂ ಆಚೆ ಬದುಕಿದೆ ಮೆನೋಪಾಸ್ ತೀಕ್ಷ್ಣತೆಗೆ ಡಿಪ್ರೆಶನ್ ಸುಸೈಡ್ ಉದಾಹರಣೆಗಳೂ ಉಂಟು! ಈ ನಡುವೆ […]

ಗಝಲ್ ಸಂಗಾತಿ

ಗಝಲ್ ಡಾ.ಗೋವಿಂದ ಹೆಗಡೆ ತಪ್ಪು ನನ್ನದೇ ಗೆಳತಿ,ಬಿಡದೆ ಚುಂಬಿಸಿದೆ ಕೊಳ್ಳಿಯನ್ನು ಊದಿ ಊದಿ ಉರಿಸಬಾರದಿತ್ತು ಹೀಗೆ ನಿನ್ನ ಒಡಲನ್ನು ಎದೆಯ ಆಳ-ಅಗಲಗಳ ನಾನೇಕೆ ಕುಗ್ಗಿಸಿಕೊಂಡೆ ಅಗ್ಗವಾಗಿಸಬಾರದಿತ್ತು ಹೀಗೆ ನನ್ನ ನಿಲುವುಗಳನ್ನು ಕಂಬನಿಯಿಂದಲ್ಲವೇ ಕಿಲುಬೆದೆಯ ತೊಳೆಯುವುದು? ನಿಚ್ಚಳ ನೋಡಬೇಕಿನ್ನು ಹರಿದೆಲ್ಲ ಪೊರೆಗಳನ್ನು ಹಸಿದಿರುವೆನೆಂದು ಸಿಕ್ಕಿದ್ದನ್ನೆಲ್ಲ ತಿನ್ನಲಾದೀತೇನು ಉಳಿಸಿಕೊಳ್ಳಲೇಬೇಕು ನೀನು ಕೊಟ್ಟ ಒರೆಗಳನ್ನು ಬಿದ್ದಾಗಲೂ ನಾನು ನಾನೇ ಮರೆಯಬಾರದು, ಸಖೀ ಉಳಿಸುವೆ ಉಡುಗಲು ಬಿಡದೆ ಎದೆಯ ಪಿಸುದನಿಗಳನ್ನು =============

ಕಾವ್ಯಯಾನ

ಆತನೊಲವು ಆತ್ಮ ಭಲವು ಜಗವ ಪ್ರೀತಿಸಿದ ಸಂತನ ಹುಟ್ಟು ಹಬ್ಬದ ಶುಭಾಷಯಗಳು ಸತ್ಯಮಂಗಲ ಮಹಾದೇವ ಕೇಳುತ್ತೀರಿ ನೀವು ನೀನು ಯಾರು ಎಂದು ಉತ್ತರಿಸಿದರೆ ಸಾಕು ನಿಮ್ಮದೇ ಉಯಿಲು ಲೋಕದ ಪಡಸಾಲೆಯಲ್ಲಿ ಹೇಳುವುದನ್ನು ಹೇಳಲೇ ಬೇಕು ಕಲ್ಲು ಮುಳ್ಳಿನ ಹಾದಿಯಲಿ ಮುಳ್ಳಿನ ಕಿರೀಟ ಹೊತ್ತ ಸಂತ ಮೈ ತುಂಬಾ ರಕ್ತದ ಧಾರೆ ಹರಿಯುತ್ತಿರಲು ಪ್ರೇಮದ ಸಾಕ್ಷಿ ಈ ರಕುತವೆಂದ ತಿವಿದವರ ತಿಳುವಳಿಕೆಯ ಕ್ಷಮಿಸಿರೆಂದ ಸಂಕಟಪಡುವವರ ಆತ್ಮ ಸಖನಾದ ನನ್ನೊಳಗೆ ನನ್ನನ್ನು ತಿಳಿಸಿದ ನೀನು ಯಾರು ಯಾವ ಊರು, ಯಾರಮಗ, […]

ಕಾವ್ಯಯಾನ

” ಹಡೆದವ್ವ” ನಿರ್ಮಲಾ ಅಪ್ಪಿಕೋ ನನ್ನ ನೀ ಹಡೆದವ್ವ ಮಲಗಿಸಿಕೊ ಮಡಿಲಲಿ ನನ್ನವ್ವ ನಿನ್ನ ಮಡಿಲಲಿ ಮಲಗಿ ಜಗವ ಮರೆವೆನವ್ವ ನೀ ಮಮಕಾರದ ಗಣಿಯೇ ಕೇಳವ್ವ ಜಗದಲಿ ಸಾಟಿಯೇ ಇಲ್ಲ ನಿನ್ನೊಲವಿಗೆ ದಾರಿದೀಪವಾದೆ ನನ್ನೀ ಬದುಕಿಗೆ ಇನ್ನೊಂದು ಹೆಸರೇ ನೀನಾದೆ ಕರುಣೆಗೆ ಅಮ್ಮ ಎಂದರೆ ಎಂತ ಆನಂದ ಮನಸಿಗೆ ಭೂಮಿಯ ಮೇಲೆ ನೀ ತ್ಯಾಗದ ಪ್ರತೀಕ ನೀನಿಲ್ಲದೆ ಇಲ್ಲ ಈ ಲೋಕ ನಿನ್ನ ಮಮಕಾರವದು ಬೆಲ್ಲದ ಪಾಕ ನೀನೇ ಸರ್ವಸ್ವವೂ ನನಗೆ ಕೊನೆತನಕ ವರವಾಗಿ ನೀಡಿದೆ ನನಗೆ […]

ಕಾವ್ಯಯಾನ

ಇವಳು_ಅವಳೇ ! ಹರ್ಷಿತಾ ಕೆ.ಟಿ. ಅಲಂಕಾರದ ಮೇಜಿಗೆ ಹಿಡಿದಿದ್ದ ಧೂಳು ಹೊಡೆಯುತ್ತಿದ್ದ ನನ್ನ ಶೂನ್ಯ ದೃಷ್ಟಿಗೆ ಅಚಾನಕ್ಕಾಗಿ ಕಂಡಳಿವಳು ನೀಳ್ಗನ್ನಡಿಯ ಚೌಕಟ್ಟಿನೊಳಗೆ ಒತ್ತಿ ತುಂಬಿಸಿದಂತೆ ಉಸಿರು ಕಟ್ಟಿಕೊಂಡು ನಿಂತಿದ್ದವಳು ಬೆಚ್ಚಿ ಹಿಂಜಗಿದು ಕ್ಷಣಗಳೆರೆಡು ಗುರುತು ಸಿಗದೆ ಕಣ್ಣು ಕಿರಿದು ಮಾಡಿ ದಿಟ್ಟಿಸಿದೆ ಅವಳೂ ಚಿಕ್ಕದಾಗಿಸಿದಳು ಗುಳಿ ಬಿದ್ದ ಎರಡು ಗೋಲಿಗಳನು ಅರೇ.. ನಾನೇ ಅದು! ಎಷ್ಟು ಬದಲಾಗಿದ್ದೇನೆ? ನಂಬಲಾಗದಿದ್ದರೂ ಕನ್ನಡಿಯ ಮೇಲೆ ಬೆರಳಾಡಿಸಿ ಅವಲೋಕಿಸಿದೆ ಗುಳಿಬಿದ್ದ ಕೆನ್ನೆಗಳಲಿ ಈಗ ನಕ್ಷತ್ರಗಳಿಲ್ಲ ಬರೇ ಕಪ್ಪುಚುಕ್ಕೆಗಳು, ಮೊಡವೆಯ ತೂತುಗಳು ಅವರು […]

ಕಾವ್ಯಯಾನ

ಥೇಟ್ ನಿನ್ನ ಹಾಗೆ! ಸಂತೆಬೆನ್ನೂರು ಫೈಜ್ನಾಟ್ರಾಜ್ ಅದೇ ಹಾಡು ತುಟಿಗೆ ಬಂದು ವಾಪಾಸಾಯಿತು ಏಕೋ ಏನೋ ಹೀಗೆ ರಸ್ತೆಯ  ಕೊನೇ ತಿರುವಲ್ಲಿ ಕಾದಿರು ಈಗ ಬಂದೆ ಎಂದು ಮಾಯವಾದ ಥೇಟ್ ನಿನ್ನ  ಹಾಗೆ! * ಕಾಫಿಯ ಘಮವೋ ಮುಡಿದ ಮಲ್ಲಿಗೆ ಗಂಧವೋ… ಉಳಿದ ಮಾತುಗಳು ಹೇಳಲಾರದೇ ಖಾಲಿಯಾದವು…. ನಿನ್ನಂತೆ! * ನೂರು ಮಾತುಗಳು ಆಡಿದರೇನು ಬರಿದೆ; ಚಹ ಪುಡಿಯಿಲ್ಲದ ಚಹ ಕುಡಿದಂತೆ ಬರಿದೆ! * ಮುಳ್ಳ ಬೆನ್ನ ಮೇಲೆಯೇ ಗುಲಾಬಿ ಕೆಸರ ಸೊಂಟದ ಪಕ್ಕದಲ್ಲೇ ಕಮಲ ಮಣ್ಣ […]

Back To Top