Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಗಜಲ್ ಸಿದ್ಧರಾಮ ಹೊನ್ಕಲ್ ಇಂಥವರ ನೆನಪಾದಾಗಲೆಲ್ಲ ನಿಟ್ಟುಸಿರೊಂದು ತಾನೇ ತಾನಾಗಿ ಹೊರಬರುತ್ತದೆ ಸಾಕಿ ಕಂಡಾಗಲೆಲ್ಲ ಗಂಟಲು ಕಟ್ಟಿ ಮಾತೆ ಮಥಿಸಿ ಮೌನ ಹೆಪ್ಪುಗಟ್ಟುತ್ತದೆ ಸಾಕಿ ಯಾರ ತಪ್ಪಿಗೆ ಯಾರ ಆಯುಷ್ಯಕ್ಕೆ ಯಾರು ಹೊಣೆ ಪಾಪ!ವವರು ಸಾಕಿ ಕುಂಕುಮ ಹೂ ಬಳೆ ಕೊನೆಗೆ ನಸು ನಗೆಯು ಮರೀಚಿಕೆಯಾಗುತ್ತದೆ ಸಾಕಿ ಸಂತೆಯೊಳಗೊಂದು ಮನೆಯ ಮಾಡಿ ಸುಮ್ಮನೆ ಶಬ್ದಕ್ಕೂ ಹೆದರಿ ಬಾಳುವದು ಇದೆಯಲ್ಲ ಅದು ಕಡುಕಷ್ಟ ಸಾಕಿ ಹದಿ ಬದೆಯ ಬಯಕೆಗಳ ತುಳಿದು ಹಸಿರುಟ್ಟು ಸಹ ಬರಡು ಮರದಂತೆ ಬದುಕಾಗುತ್ತದೆ ಸಾಕಿ […]

ಕಾವ್ಯಯಾನ

ಗಜಲ್ ದೀಪಾಜಿ ಎದೆಯ ಮೇಲಿನ ಹಚ್ಚೆಗೆ ಅಗ್ಗಿಷ್ಟಿಕೆಯ ಕೆಂಡಹಚ್ಚಿ ಉಜ್ಜಿಕೊಂಡವನಲ್ಲವೇ ನೀನು ಎದೆ ಒಳಗಿನ ಇವಳನ್ನ ತೆಗೆದು ಹಾಕಲೆತ್ನಿಸಿ ಸೋತವನಲ್ಲವೇ ನೀನು ಹಿಡಿದು ತಂದ ಕೆಂಗುಲಾಬಿ ಕೆಳಗಿನ ಮುಳ್ಳ ಎಣಸ ತೊಡಗಿದ್ದ ಕುಸುಮಪ್ರೇಮಿ ಅಂತದೆ ಸುಮದ ಪರಿಮಳಕ್ಕೆ ಸೋತು ಬಿಗಿದಪ್ಪಿದ ದಿನಗಳ ಮರೆತವನಲ್ಲವೆ ನೀನು.. ಅಂಗೈಲಿ ಹಿಡಿದ ಮಧು ಪಾತ್ರೆಯೊಳಗಿನ ಬಿಂಬ ಕಲಕಿತೆಂದು ರೋಧಿಸಿದೆ ಏನು ಮಧುಹೀರಿ ಮಲಗಿದ ನಲ್ಲೆಯ ತುಟಿಗಳನೆ ಕಚ್ಚಿ ಕಡೆಗಣಿಸಿದವನಲ್ಲವೇ ನೀನು ಬಲವಂತಕ್ಕೆ ಪ್ರೀತಿಸಕೂಡದೆಂದು ಪಾಠಮಾಡುತ್ತಿದ್ದೆ ನೋಡು ಮರೆತು ಬಿಡು ಇನ್ನೂ ಜತೆಯಾಗಿ […]

ಕಾವ್ಯಯಾನ

ಗಜಲ್ ಡಾ.ಗೋವಿಂದ ಹೆಗಡೆ ಮದಿರೆಬಟ್ಟಲು ಖಾಲಿಯಾಗಿದ್ದಕ್ಕೆ ಅವಳು ಅಳುತ್ತಿದ್ದಾಳೆಎಲ್ಲಿ ಹೇಗೆ ಯಾವಾಗ ಸೋರಿಹೋಯಿತೆಂದು ಹುಡುಕುತ್ತಿದ್ದಾಳೆ ಜನ್ಮ ಜನ್ಮಾಂತರಕ್ಕೂ ತುಂಬಿರುವುದೆಂದು ಎಣಿಕೆಯಿತ್ತುಇಷ್ಟು ಬೇಗ ಎಲ್ಲ ಖಾಲಿ ಆಗಿದ್ದನ್ನು ನಂಬದಂತಿದ್ದಾಳೆ ಕನಸುಗಣ್ಣುಗಳಲ್ಲಿ ಎಷ್ಟೊಂದು ಸುರೆಯ ಸಂಗ್ರಹವಿತ್ತುಪತ್ತೆಯೇ ಇರದೆ ಸೂರೆಯಾಗಿದ್ದಕ್ಕೆ ತಳಮಳಿಸುತ್ತಿದ್ದಾಳೆ ಮಧುಬಟ್ಟಲಲ್ಲೇ ಐಬಿತ್ತೋ ಅಥವಾ ಮಧುವಿನಲೋಬಟ್ಟಲನೆತ್ತಿ ಹಿಂದೆ-ಮುಂದೆ ತಿರುತಿರುಗಿಸಿ ನೋಡುತ್ತಿದ್ದಾಳೆ ಮರಳೇ ಹಾಗೆ ಕಣಕಣವಾಗಿ ಸುರಿದು ಖಾಲಿಯಾಗುತ್ತದೆಗಡಿಯಾರ ತಿರುಗಿಸಬಹುದು, ಕಾಲವನಲ್ಲ ಮರುಳಿಯಾಗಿದ್ದಾಳೆ ಎದೆಯೊಡೆದ ಹುಚ್ಚಿ ಅವಳನ್ನು ಹೇಗೆ ಸಂತೈಸಲಿ ಸಾಕಿಹೇಗೋ ಒಂದು ಮುಕ್ಕೆರೆದು ಬಿಡು,ಚೇತರಿಸುತ್ತಾಳೆ..

ಕಾವ್ಯಯಾನ

ಸಾವಿನ ಸಾಂಗತ್ಯದಲ್ಲಿ ಮಧುಸೂದನ ಮದ್ದೂರು ಸಾವೆಂಬ ಸೂತಕದ ಹಕ್ಕಿ ರಕ್ಕೆ ಬಿಚ್ಚಿ ಹಾರುತ್ತಿದೆ ಯಾವ ಜೀವಗಳೆಂಬೋ ಹಣ್ಣ ಕಚ್ಚಿ ತಿಂದು ರಕ್ಕೆ ಪಟಪಟಿಸಿ ಗಗನದ ಚಿಕ್ಕೆಯಾಗಲಿದೆಯೋ ಬಲ್ಲವರು ಯಾರು ? ಸಾವೆಂಬ ಮಾಂತ್ರಿಕನ ಮಂತ್ರಬೂದಿಯ ಸೆಳತೆಗೆ ಸಿಲುಕಿ ಮಾಯವಾಗುವ ಮಾಯಕಾರರೆಷ್ಟೋ ಬಲ್ಲವರು ಯಾರು? ಸಾವೆಂಬ ಬುಟ್ಟಿಯಲಿ ಕಣ್ಕಟ್ಟಿನ ಯಕ್ಷಿಣಿಕಾರನ ಯಕ್ಷಿಣಿ ಕೋಲಿನ ಮಂತ್ರಕೆ ಅತಳ ಸುತಳ ಪಾತಾಳ ಸೇರುವವರೆಷ್ಟೋ ಬಲ್ಲವರು ಯಾರು? ಬಡವ-ಬಲ್ಲಿದ ಅಧಿಕಾರಸ್ಥ-ವ್ಯವಹಾರಸ್ಥ ಕಲೆಕಾರ-ಓಲೆಗಾರ ಯಾಂತ್ರಿಕ-ಮಾಂತ್ರಿಕ ವಿಜ್ಞಾನಿ-ಅಜ್ಞಾನಿ ಎಂಬೋ ಬೇಧ ಭಾವ ಎಣಿಸದ ಸಾವೆಂಬೋ ಸಾಹುಕಾರನೆದರು […]

ಕಾವ್ಯಯಾನ

ರೆಕ್ಕೆ ಮುರಿದ ಹಕ್ಕಿ ಕನಸು ಬಿದಲೋಟಿ ರಂಗನಾಥ್ ದುಃಖ ಬಚ್ಚಿಟ್ಟುಕೊಂಡು ನಗುವ ಸೂಸುವ ನಿನ್ನ ಅಂತರಂಗದ ನುಡಿಯೇ ನೋವುಗಳು ಜಾರುತ್ತಿವೆ ನಿನ್ನ ತುಟಿ ಸೀಳುಗಳ ಮೇಲೆ… ಕಣ್ಣಪದರುಗಳಲ್ಲಿ ತೇಲುವ ಕಣ್ಣೀರು ನಿಜಕ್ಕೂ ಎದೆಯಲ್ಲಡಗಿದ ಕಥೆ ಬಿಚ್ಚುತಿದೆ ಕುಂತ ನೆಲದ ಜೊಳ್ಳು ಮಾತುಗಳೋ ಸೀರೆ ಸುಟ್ಟ ನೋವೋ ಅಂತು ಸುಡುತ್ತಿದೆ ಎದೆಯ ಮೇಲೆ ಬಿದ್ದು ಉಕ್ಕಲಾರದೆ ರತಿ ಉಕ್ಕಿ ಗರಿಬಿಚ್ಚದೆ ಒಳಗೇ ಸುತ್ತಿ ಸುತ್ತಿ ಭಾವನೆಗಳ ಕೊಲ್ಲುತ.. ರತಿ ತಿಲೋತಮೆಯಂತಿದ್ದರೂ ಒಡೆದ ಒಳಮನಸಿನ ಕನ್ನಡಿಯ ಚೂರು ತಿವಿಯುತ್ತಿದೆ ಮೆತ್ತಗೆ […]

ಮಕ್ಕಳದಿನದ ಸಂಭ್ರಮ

ಮಕ್ಕಳ ಕವಿತೆಗಳು ಸಂತೆಬೆನ್ನೂರು ಫೈಜ್ನಾಟ್ರಾಜ್ ನಮ್ಮ ಚಂದ್ರ ನಮ್ಮ ಚಂದ್ರ ಬಾನಿಗೊಬ್ಬ ಚಂದಿರ ದೇಶಕ್ಕೊಬ್ಬ ಚಂದಿರ ಅವನೇ ಸುಭಾಸ್ ಚಂದಿರ//ಬಾ// ಶಕ್ತಿ ಕೊಡಿ ರಕ್ತ ಕೊಡಿ ಸ್ವತಂತ್ರ ಕೊಡುವೆ ಎಂದನು ಸ್ವಾರ್ಥ ಬಿಡಿ ನಿಸ್ವಾರ್ಥ ದುಡಿ ದೇಶಕದುವೆ ಹೆಮ್ಮೆ ಎಂದನು//ಬಾ// ಜೈ ಹಿಂದ್ ಜೈ ಹಿಂದ್ ಜೈಕಾರ ಕೂಗುತ ಎಂದಿಗೂ ಮುನ್ನುಗ್ಗಿ ಏನೇ ಬರಲಿ ಒಗ್ಗಟ್ಟಿರಲಿ ದೇಶಭಕ್ತರು ಒಂದಾದರೆ ಅದೇ ಸುಗ್ಗಿ //ಬಾ// ಒಂದೆ ನಾಡು ಒಂದೆ ತಾಯಿ ನಾವೆಲ್ಲರೂ ಭಾರತಾಂಬೆ ಮಕ್ಕಳು ಹಿಂದು-ಮುಸ್ಲಿಂ ಯಾರೇ ಇರಲಿ […]

ಕಾವ್ಯಯಾನ

ಅಂಬೇಡ್ಕರ್ ಕೆಂಪಗೆ ಕಣ್ಣು ಬಿಟ್ಟಿದ್ದಾರೆ ! ಬಿದಲೋಟಿ ರಂಗನಾಥ್ ನಮ್ಮ ನಾಡಿಮಿಡಿತದಲ್ಲಿರುವ ಅಂಬೇಡ್ಕರ್ ಕೆಂಪಗೆ ಕಣ್ಣು ಬಿಟ್ಟಿದ್ದಾರೆ ಅವರೇ ಜನ್ಮವಿತ್ತ ಸಂವಿಧಾನದ ಕೂಸು ಅವರದಲ್ಲವೆಂದವರ ವಿರುದ್ಧ. ಅಲ್ಪತಿಳಿದವರ ಕುತಂತ್ರ ಬೆಳೆಯುವ ಮಕ್ಕಳ ಮನಸುಗಳ ನೆಲದ ಮೇಲೆ ವಿಷ ಬೀಜ ಕುದಿಯುವ ರಕ್ತದಲಿ ಅಂಬೇಡ್ಕರ್ ಕಣ್ಣೀರು.! ಸುಡುತ್ತದೆ ಕೋಮುವಾದಿಗಳ ಲೇಖನಿಯನ್ನು ಹೊಲಸು ಮನಸನ್ನು ನೀವೆ ತೋಡುವ ಖೆಡ್ಡಕ್ಕೆ ನೀವೆ ಮುಗ್ಗರಿಸುವಿರಿ ಭೀಮನು ನಡೆದ ನೆಲ ಬೆವರುತ್ತಿದೆ ಅಪಮಾನ ಅವಮಾನದ ಕರುಳು ಸುಡುತ್ತ ಮನದಲಿ ಕುಂತ ಶಾಂತಿಯ ಪಾರಿವಾಳಕ್ಕೆ ರಕ್ತಪಾತದ […]

ಕಾವ್ಯಯಾನ

ಪಯಣ ಶಂಭುಗೌಡ.ಆರ್.ಗಂಟೆಪ್ಪಗೌಡ್ರ) ಬೆವರ ಬಸಿಯಬಹುದೇ ಹೇಳು ನೀನು ಶ್ರಮದ ಕವಾಟ ತಟ್ಟದೇ “ಬೆಳಕು” ಕತ್ತಲ ಸಮಾದಿಯ ಮೇಲೊಬ್ಬ ಗೊತ್ತಿಲ್ಲದೇ ಇಟ್ಟು ಹೋದ ಮೊಗ್ಗಲ್ಲದ ಹೂ “ಪ್ರೀತಿ” ಮುಚ್ಚಿದ ಕಣ್ಣೊಡಲೊಳಗಿನ ದಿವ್ಯ ಚೇತನ ಬೆಳಕು ಮತ್ತೆ ಪ್ರೀತಿ ಸಂಗತಿ ಎರಡಾದರೂ ಬೆಳಗುವ ತತ್ವವೊಂದೇ, ಬದುಕೊಂದು ಎರಡು ಬಾಗಿಲು ತೆರೆದರೊಂದು ಮುಚ್ಚುವುದು ಮತ್ತೊಂದು ತೆಗೆದು ಮುಚ್ಚುವ ಮಧ್ಯೆ ತನ್ನ ತನವ ಬಚ್ಚಿಟ್ಟು ಪರರ ಮೆಚ್ಚಿಸುವ ಬಣ್ಣದಾಟವೇನು ಬದುಕು ಹೇಳು ನೀನು ; ಕಾಣದವನ ಸೂತ್ರಗಳ ಬೀಜಾಕ್ಷರಗಳು ನಾವು ಒಬ್ಬರನ್ನೊಬ್ಬರು ಕೂಡಲೂ […]

ಕಾವ್ಯಯಾನ

ಬಿಕರಿ ಡಾ.ಗೋವಿಂದ ಹೆಗಡೆ ಇಲ್ಲಿ ಪ್ರೀತಿ ಸಿಗುತ್ತದೆ’ ಬೋರ್ಡು ಹಾಕಿ ಕುಳಿತಿದ್ದೇನೆ ಯಾರೊಬ್ಬರೂ ಸುಳಿಯುತ್ತಿಲ್ಲ.. ಅದೇನು, ಕೋವಿಯಂಗಡಿ ಮುಂದೆ ಅಷ್ಟೊಂದು ಸರತಿಯ ಸಾಲು!

ಕಾವ್ಯಯಾನ

ಸುತ್ತ ಸುಳಿವ ಗಾಳಿಯಲ್ಲೇ ಪುಳಕ
ಗಂಧಕ್ಕಾಗಿ ಕಾದ ಮೂಗು
ಬಂಡುಣಲು ದುಂಬಿ
ಜೇನ್ನೊಣಗಳ ಪೈಪೋಟಿ
ಎರಗಿ ದಳದಳ ಕಿತ್ತು
ಹೊಸಕಲು ತಯಾರಾಗುವ ಕೈಗಳೂ

Back To Top