Category: ಕಾವ್ಯಯಾನ

ಕಾವ್ಯಯಾನ

ಏಕತಾರಿಯ ಸಂಚಾರಿ ಸ್ವರಗಳು

ಕಾತ್ಯಾಯಿನಿ ಕುಂಜಿಬೆಟ್ಟು ಬರೆಯುತ್ತಾರೆ
ಹೊರ ದಾರಿಯಲ್ಲಿ ನೀನು ನಡೆದು ದೂರ ಹೋಗಿ ಬಿಡು
ನಿನ್ನದೇ ಕನಸುಗಳ ಊರಿಗೆ
ಕಡಲಾಚೆಯ ಆ ದೇಶಕೆ

ಸಂಕ್ರಾಂತಿ ಕಾವ್ಯ ಸುಗ್ಗಿ ಕನ್ನಡಿ ಟಿ ಎಸ್ ಶ್ರವಣ ಕುಮಾರಿ ಅಜ್ಜನ ಮನೆಯಲ್ಲಿದ್ದ ಕನ್ನಡಿ ಅವರಜ್ಜ ತಂದದ್ದಂತೆ;ಅಜ್ಜನಜ್ಜ ಆ ಮನೆಕಟ್ಟಿದಾಗ ಗೋಡೆಗೆ ಹಾಕಿದ್ದಂತೆ.  ಎರಡಡಿ ಎತ್ತರ, ಒಂದೂವರೆಯಡಿಯಗಲದ ಕನ್ನಡಿಗೆ –ಕರಿಮರದ ಕೆತ್ತನೆಯ ಚೌಕಟ್ಟು, ಹಿಂಬದಿಗೆ ಗಟ್ಟಿ ಹಲಗೆ.ಮಿರಮಿರ ಮಿಂಚುವ ಬೆಲ್ಜಿಯಂ ಗ್ಲಾಸಿನ ಕನ್ನಡಿಯಡಿಗೆ –ಮರದ ಗೂಡು, ಅದರಲ್ಲಿ ಸಾದು, ಕುಂಕುಮ, ಹಣಿಗೆ…  ಬಚ್ಚಲ ಮನೆಯಿಂದ ಬಂದರೆ ಎದುರಿಗೇ ಕಾಣುವಂತೆ,ಮುಚ್ಚಟೆಯಿಂದ ಬಾಚಿ, ಹಣೆಗಿಡಲು ಅನುವಾಗುವಂತೆ,ಮಚ್ಚಿನಿಂದ ಬೀಳುತಿದ್ದ ಬೆಳಕು ಮುಖ ತೋರುವಂತೆ,ಅಚ್ಚೆಯಿಂದಿತ್ತು ಗೋಡೆಯಲಿ ಮೌನವೇ ಮಾತಾದಂತೆ!  ಅಜ್ಜನಜ್ಜನ ಕಾಲದಿಂದದೆಷ್ಟು ಮುಖಗಳ […]

ಶಪಥ

ಸಂಕ್ರಾಂತಿಗೆ ಸುಧಾರಾಣಿಯವರ ವಿಶೇಷ ಕವಿತೆ ಶಪಥ ಹೊಸ ವರುಷಕೆ ಒಂದುಶಪಥವಿದೆ ಸಾಕಿಮತ್ತೆಂದೂ ಎದಿರುಗೊಳ್ಳುವುದಿಲ್ಲಹನಿ ಪ್ರೀತಿಗಾಗಿಅಂಗಲಾಚುವುದೂ ಇಲ್ಲನೀ ಸಾಗಿದ ದಾರಿಯಲ್ಲಿಸಾವಿರ ಬಾರಿ ತಿರುಗಿ ತಿರಿಗಿನೋಡುವುದೂ ಇಲ್ಲ ನಿನ್ನ ನೆನಪಲಿ ಕಣ್ಣಾಲಿಗಳುಒಡ್ಡು ಕಟ್ಟಿ ನಿಂತರೂ,ಥುಳುಕಿದರೂತುಟಿ ಕಂಪಿಸಿದರೂನಿನ್ನ ಸಂತೈಸುವಿಕೆಗೆಹಾತೊರೆಯುವುದೂ ಇಲ್ಲಒರಗಿದ್ದ ನಿನ್ನೆದೆಯ ನೆನೆದುಸಂತೈಸಿಕೊಳ್ಳುವುದು ಇಲ್ಲಬಿಡು, ನಿರಾಳವಾಗಲಿ ಮನಸ್ಸು, ಅದೆಷ್ಟೂ ಖಾಲಿತನಉಸಿರು ನಿಂತ ಮೇಲೆಯಾರಿಗ್ಯಾವ ಹೆಸರು?ಹೆಣವೆಂದಷ್ಟೇ ಅಲ್ಲವೇ ಸಾಕಿಈ ವರ್ಷಕೂ ಅದೇ ಶಪಥನನ್ನಲ್ಲಿ ನೀನಿರುವವರೆಗೂಬದುಕಬೇಕುಅದಮ್ಯವಾಗಿ ಪ್ರೀತಿಸಬೇಕು

ಸಂಕ್ರಾಂತಿಕಾವ್ಯ ಸುಗ್ಗಿ ಉರಿಯುವ ಬದಲು ಬೆಳಗಬೇಕು ಸಂಗೀತ ರವಿರಾಜ್ ಸಮಾಜ ಅಭಯದ ಮುಖವಾಡ ಹಾಕಿನಲುಗಿಸುತ್ತಿದೆ ಗಳಿಸಿದ ಸ್ವಾತಂತ್ರ್ಯ ವನ್ನೇ….ಜಾತಿ ವರ್ಗಗಳಿಗೆ ಕೀಳರಿಮೆ ತೊಲಗಿಂದ ಮೇಲೆಭಯ ಮುಕ್ತ ಭಾವನೆಗೆಲ್ಲಿ ಎಲ್ಲೆ ? ಮಲ ತೆಗೆಯಲು ಒಂದುಮನುಷ್ಯ ವರ್ಗವ ಸೃಷ್ಠಿಸಿಅದಕ್ಕೊಂದು ಜಾತಿಯ ಹೆಸರು ಕೊಟ್ಟಇನ್ನೊಂದು ಮನುಷ್ಯ ಜಾತಿಗೆ ನಮ್ಮ ವಿರೋಧವಿರಲಿದೇವ ಸ್ವರೂಪ ತೋಟಿಗಳಒಳತೋಟಿಯ ಅರಿವಾಗಿಒಂದು ತೊಟ್ಟು ಕಣ್ಣೀರು ಹಾಕಿದರೆಈ ಜನ್ಮ ಸಾರ್ಥಕ. ಜಗದಲ್ಲಿ ಜಲಗಾರ ಜಾಡಮಾಲಿಯಒಡಲ ಬೇಗುದಿಯ ಉರಿಗೆತ್ಯಾಜ್ಯವೆಲ್ಲ ಉರಿದು ಬೂದಿಯಾಗುತ್ತಿದೆ!ಗುಡಿಸೆತ್ತಿ ಸ್ವಚ್ಛಗೊಳಿಸುವ ಒಂದ್ವರ್ಗವಿಲ್ಲದಿದ್ದರೆಶೋಚನೀಯ ಸ್ಥಿತಿಯ ಗತಿಗಳುಶುಭ್ರತೆ ಇರಬೇಕಾದ್ದು ಮನಸ್ಸಿನಲ್ಲಿ […]

ಸಂಕ್ರಾಂತಿ ಕಾವ್ಯ ಸುಗ್ಗಿ ಸಂ-ಕ್ರಾಂತಿ! ಚೈತ್ರ ಶಿವಯೋಗಿಮಠ ಆಂತರ್ಯದಲ್ಲಿ ಭುಗಿಲೆದ್ದಿದ್ದರೂಅಸಮಾಧಾನ, ಅಶಾಂತಿಶಮನ ಮಾಡಲಿ ಅದೆಲ್ಲವಎಳ್ಳು-ಬೆಲ್ಲ ತಿನ್ನಿಸುವ ಸಂಕ್ರಾಂತಿ! ಮನದೊಳಗೆ ನಡೆದಿದ್ದರೂಭಾವನೆಗಳ ಸಂಘರ್ಷ-ಕ್ರಾಂತಿರಮಿಸಿ ತುಂಬಲಿ ಸಿಹಿ ಹರುಷವಕಬ್ಬಿನ ಜಲ್ಲೆಯ ಸಂಕ್ರಾಂತಿ! ಒಲವು ಮರೆತು, ಒಳಗೆತುಂಬಿದ್ದರೂ ಸಿರಿತನದ ಭ್ರಾಂತಿ..ಮರೆಸಿ ಭ್ರಮೆಯ, ತೆರೆಸಲಿ ಒಳಗಣ್ಣಅವರೆ, ನೆಲಗಡಲೆ ಬಿಡಿಸುವ ಸಂಕ್ರಾಂತಿ! ಮನವು ಮುದುಡಿ, ಭಾವ ಕದಡಿಹಾರಿ ಹೋಗಿದ್ದರೂ ಮನದ ಜಂತಿಅರಳಿಸಿ ಮನವ, ತುಂಬಲಿ ಸ್ಥೈರ್ಯವಬಣ್ಣದ ರಂಗವಲ್ಲಿ ಬಿಡಿಸುವ ಸಂಕ್ರಾಂತಿ!! ವರುಷವಿಡಿ ಸುಖ-ದುಃಖಗಳ ಸ್ವೀಕರಿಸಿಕೆಲವೊಮ್ಮೆ ಸಂಭ್ರಮಿಸಿ, ಮತ್ತೊಮ್ಮೆ ಕನವರಿಸಿದಣಿದು ನಲುಗಿರುವ, ಮನವೆಂಬರಾಸನ್ನ ಸಿಂಗರಿಸಿ ಬೆಂಕಿಹಾಯಿಸುವ […]

ಸಂಕ್ರಾಂತಿ ಕಾವ್ಯ ಸುಗ್ಗಿ ಸರಳ ಸೂತ್ರ ಎಸ್ ನಾಗಶ್ರೀ ಆರುತಿಂಗಳಾದರೂ ಬಳಸದ್ದನ್ನುಬಿಸಾಡುವುದು ಕ್ಷೇಮವೆಂದರುಒಪ್ಪಿದೆಬಟ್ಟೆಬರೆಯೆಲ್ಲಾ ಹರಡಿಹತ್ತಾರು ಚೂಡಿ, ಸೀರೆ, ರವಿಕೆಫಳಗುಟ್ಟುವ ಕಿವಿಯೋಲೆಜಾಮೂನ್ ಬಟ್ಟಲುಲೆಕ್ಕವಿರದಷ್ಟು ಲೋಟ, ತಟ್ಟೆಓದಲಾಗದ ಪುಸ್ತಕರೀಫಿಲ್ಲು ತೀರಿದ, ತಿರುಪು ಗಟ್ಟಿಯಿದ್ದಪೆನ್ನುಖಾಲಿ ಹಾಳೆಯ ಪುಸ್ತಕಡೈರಿಗಳನುತಿರುಗಾಮುರುಗಾ ನೋಡಿಪೇರಿಸಿಟ್ಟೆ ಗುಜರಿಗೆ ಹಾಕಿನೂರಿನ್ನೂರು ಎಣಿಸುವುದೆಷ್ಟರ ಮಾತು?ಬಡವರಿಗೆ ಕೊಡಬೇಕುಹಬ್ಬದ ಸಂಜೆ ಅವರುಟ್ಟು ತೊಟ್ಟುಸಂಭ್ರಮಿಸಬೇಕುಕನಸುಗಳ ಮುಗುಚಿ ಹಾಕಿಮಲಗಿದ್ದು ಗೊತ್ತುಈ ನೆನಪುಗಳು ಜೀವ ತಿನ್ನುತ್ತವೆಹೊತ್ತೊಯ್ಯುತ್ತವೆ ಕಪ್ಪಿರುವೆಯಂತೆತಲೆ ಮೇಲೆ ಭಾರ ಗಂಟೊಂದನುನಜ್ಜುಗುಜ್ಜಾದ ತಟ್ಟೆಯಲ್ಲೇಅನ್ನವುಣ್ಣುವ ಅಪ್ಪಹರಿದ ಸೀರೆಯುಡುವ ಅಜ್ಜಿಬೇಯಿಸುವ ಪಾತ್ರೆಯೂ ಇಲ್ಲದೆಬೀದಿಗೆ ಬಿದ್ದಗೃಹಭಂಗದ ನಂಜಮ್ಮಹೀಗೆ ಯಾವುದೋ ನೆನಪುಗಳುಗೀಟುಗಳೆಳೆದುಕಾಟಕೊಡುತ್ತವೆತಂತಿಯ ಮೇಲಿನ ಬಟ್ಟೆಗಳಂತೆಫಟಫಟಿಸುತ್ತದೆ […]

ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ ಕೆ.ಟಿ.ಜಯಶ್ರೀ ಮುಂಬಾಗಿಲ ತಳಿರ ಸ್ವಾಗತಪಂಚಭೂತ ತತ್ವದರಿವನುಹರವುವ ಹೊಸ ಮಡಕೆಯಲಿಘಮಘಮಿಸುತಿದೆ ಪೊಂಗಲ್ಎಳ್ಳು ಬೆಲ್ಲ ಮೆಲುನುಡಿದಿವೆ ಜರತಾರಿ ತೊಟ್ಟ ಕುವರಿಯರಮೆರವಣಿಗೆ ಸಾಗಿದೆ ಸಂಜೆಯಲಿ ಪಥ ಬದಲಿಸಿ ಸಾಗುವಾಗಸೂರ್ಯ ಸಂಭ್ರಮದಿನಗೆ ಚೆಲ್ಲಿತಾ ರಂಗಿನ ರಂಗವಲ್ಲಿಉಷೆ ಸ್ಪರ್ಶಕೆಪುಳಕಮೈಮನದಲಿ ಎಳ್ಳು ಬೆಲ್ಲ ಹಂಚುವ ಸಡಗರಕೆಲಲನೆಯರ ಲಾಲಿತ್ಯದ ಮೆರಗು ರಾಸುಗಳ ಕಿಚ್ಚಿನ ಓಟಎಳೆಯರ ಗಾಳಿಪಟದಾಟಮುಗುದೆಯರ ಕೋಲ್ಮಿಂಚಿನೋಟಹರುಷ ಉಕ್ಕಿದೆ ಸುಗ್ಗಿಕಣಿತದಿ ಸಂಕುಚಿತ ಮನದ ತಮ ಕರಗಿಸಾಗಲಿ ಸೂರ್ಯ ಅಶಾಂತಿಯ ಪಥದಿಂದ ಶಾಂತಿ ಸಾಮರಸ್ಯದ ಸಂಕ್ರಮಣ ಕಾಲದತ್ತ

ವೀಣಾ ನಿರಂಜನ ಬರೆಯುತ್ತಾರೆ

ಎದೆಯ ಕದ ಇಷ್ಟಿಷ್ಟೇ ತೆಗೆದು
ಮೌನವನ್ನು ಒಳಗೆ
ಬಿಟ್ಟುಕೊಳ್ಳುವ ಸುಖ
ದಕ್ಕಿದವರಿಗಷ್ಟೇ ಗೊತ್ತು

Back To Top