ಕಾವ್ಯಯಾನ
ಚರಿತ್ರೆ ಚಿರನಿದ್ರೆ ದೇವು ಮಾಕೊಂಡ ಜಗದ ಬಲೆ ಬಲೆಯೊಳಗಿನ ಮುಸುಕು ಸಿಕ್ಕಿಸಿಕೊಂಡ ಬದುಕ ಕೊಂಡಿ ಕಳಚಲು ಯತ್ನಿಸುವ ವೈರಾಗಿ ರಾತ್ರಿ ಹೆದರುತ್ತದೆ ಹೊರಬರಲು ಹಗಲ ಬಯಲು ನರ್ತನಕ್ಕೆ ಅನುಗಮನ ನಿಗಮನದರಿವು ಏಕಮುಖಗೊಂಡಿದೆ ಗೊಂದಲ ಜಗದಿ ದಿನ ದಿನ ನಂಬಿಕೆಗಳೆ ಬೋಣಿಗೆ ಮಾಡುವಾಗ ಬೋದಿಗೆ ಶಾಸನ ಮೌನ ಮಾತಾಗಿದೆ ಮಹಾಸತಿ ಕಲ್ಲುಗಳು ಮನಸು ತೇವ ಮಾಡಿ ನಕ್ಕು ಮತ್ತೆ ಮತ್ತೆ ಶರಣಾಗುತ್ತಿವೆ ಅಂಧಗೋಪುರಕ್ಕೆದರಿ ನೀರವರಾತ್ರಿ ದಮನಿತ ದೀಪಗಳುರಿಸುವಾಗ ವಿಲೋಮಗಾಳಿ ಜನಜನಿತ ಅವಮಾನಿತ ! ತನ್ನೊಳಗಿನ ತನ್ನದರಿವು ಹುಡುಕುವ ಆಗುಂತಕನೊಬ್ಬ […]
ಕಾವ್ಯಯಾನ
ಆಗಬಹುದು. ಎಂ.ಆರ್.ಅನಸೂಯ ಆಗಬಹುದು ಧುಮ್ಮಿಕ್ಕುವ ಕಣ್ಣೀರು ಕೇವಲ ಕಣ್ಣಂಚಿನ ಕಂಬನಿ ಮಲಗಬಹುದು ಕೆರಳಿ ನಿಲ್ಲುವ ದ್ವೇಷ ಮೊಂಡಾದ ಮಚ್ಚಾಗಿ ಮರಗಟ್ಟಬಹುದು ಬೆಂಕಿಯುಗುಳುವ ಕೋಪವೂ ಕೊರೆವ ಹಿಮಗಡ್ಡೆಯಾಗಿ ಇಳಿಯಬಹುದು ಉಕ್ಕಿ ಹರಿವ ಉನ್ಮಾದವೂ ನೆರೆಯಿಳಿದ ನದಿಯಾಗಿ ********
ಕಾವ್ಯಯಾನ
ಗಝಲ್ ಎ ಎಸ್ ಮಕಾನದಾರ. ಗಲ್ ಗಲ್ ಗಜ್ಜೆಯ ನಾದ ಹೊಮ್ಮಿಸುತ ಮನದ ಅಂಗಳದಲಿ ಒಮ್ಮೆ ಓಡಾಡಿ ಬಿಡು ಕತ್ತಲು ತುಂಬಿದ ಮನೆಯ ಮೂಲೆ ಮೂಲೆಯಲೂ ನಗುವ ತೂರಾಡಿ ಬಿಡು ಸೂರ್ಯ ಚಂದ್ರ ನಕ್ಷತ್ರಗಳ ಬೆಳಕೇಕೆ ನಿನ್ನ ಕಣ್ಣ ಬೆಳದಿಂಗಳು ಸಾಕು ಬೆಳಕ ಹಬ್ಬಕೆ ಬಾಗಿಲು ಕಿಟಕಿಗಳಾಚೆ ಇರಲಿ ಆ ಮುಗಿಲ ತಾರೆಯರು ಬಾಚಿಕೊಳ್ಳುತ್ತೇನೆ ಒಲವನ್ನೊಮ್ಮೆ ತೂರಾಡಿ ಬಿಡು ಬಾಳನಂದನಕ್ಕಿಗ ಚೈತ್ರ ಬಂದಾಗಿದೆ ಹಸಿರು ಬಳ್ಳಿಯ ತುಂಬ ಆಸೆಗಳ ಒಸಗೆ ಮೊಗ್ಗು ಹೂವಾಗಿ ಅರಳಿ ನಲಿಯುವ ಕಾಲ […]
ಕಾವ್ಯಯಾನ
ಬಚ್ಚಿಟ್ಟ ನೆನಪುಗಳು ವೀಣಾ ರಮೇಶ್ ನೀ ಬರುವೆಯೆಂದು ಕಾಯುತ್ತಿದ್ದೆ……. ಒಡಲಸೆರಗಲಿ ಅದುಮಿಟ್ಟ ಬಯಕೆಗಳು ತಬ್ಬಲಿಯಾದ ನಿನ್ನ ಕನಸುಗಳ ಜೊತೆ ನನ್ನ ಕನಸುಗಳು ಕಾಡುವುದು ಬಸಿರಾಗದ ಆಸೆಯ ಕುಡಿಗಳು, ,ಹಸಿಯಾಗಿ, ಹುಲ್ಲುಜಾಡಿನಲಿ ಕಳೆಗೂಡಾದ ಬದುಕು ಹೊಸಕಿ.. ನೀ ಬರುವೆಯೆಂದು ಕಾಯುತ್ತಿದ್ದೆ …… ಹಾಕಿದ ಏಳು ಹೆಜ್ಜೆಗಳು ಬಿಸಿಯ ಕೆಂಡದ ಮೇಲಿನ ಅವಳ ತಪ್ಪಿನ ನಡೆಗಳು ಹೊಸಿಲ ಮೇಲೆ ಜಾಡಿಸಿ ಒದ್ದ ಸೇರಿನ ಜೊತೆ ಕನಸುಗಳ ಒದ್ದೋಡಿಸಿದೆ ಸರಕಾಗಿದೆ ನಿನ್ನ ಮೌಲ್ಯಗಳು, ಬಿಕರಿಯಾಗುತ್ತಿದೆ ಕನಸುಗಳು,…. ಬೆತ್ತ ಲಾಗಬೇಡ ಬತ್ತಿದ ಕನಸುಗಳಿಗೆ, […]
ಕಾವ್ಯಯಾನ
ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ಜಹಾನ್ ಆರಾ ಎಚ್. ಕೋಳೂರು ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ನೇರಭಾವಕ್ಕೆ ತೂಕ ಕಡಿಮೆ ಸಾಗರದ ಆಳಗಲವಂತೆ ಆಗಸದ ಅನೂಹ್ಯವಂತೆ ನಾಜೂಕಂತೆ, ಸುಲಭವು ಅಲ್ಲವಂತೆ ಬಿಡಿ ಬಿಡಿ ಹೇಳಿದ್ದೆಲ್ಲಾ ಕವಿತೆಯಾಗುವುದಿಲ್ಲ ನಾನು ಬರೆದದ್ದು ಅವನೊಪ್ಪನು ಇವ ಬರೆದದ್ದು ಮತ್ತೋರ್ವನೊಪ್ಪನು ಅವರು ಬರೆದದ್ದು… ನಾ ಒಪ್ಪಬೇಕಂತೆ!!! ಭಾವ ಭಕುತಿ ಅವರಿಗೆ ಬಿಟ್ಟದು. ಇಲ್ಲಿ ಜರೂರಾಗಿ ಹೇಳಬೇಕಾದ ನಿಯಮ ಕಡಿಮೆ ಪದಗಳ ಪೋಣಿಕೆ ಹೆಚ್ಚು ಭಾವ ಭಾರ ತುರುಕುವಿಕೆ ಶಬ್ಧ ಮಣಿಗಳ ದರ್ಪಣದಲಿ ನಿಂತರೂ ಪಾಶ್ಚಾತ್ಯ ಸಿಂಗಾರದ […]
ಕಾವ್ಯಯಾನ
ಅರಿವು ಶಿವಲೀಲಾ ಹುಣಸಗಿ ಚಿಂತೆಯನು ಬಿಡುಮನವೇ ಕಾಯ್ವನೊಬ್ಬನಿಹನೆಮಗೆ! ಕಲ್ಲರಳಿ ಹೂವಾಗಿ ನಿಂತಿಹುದಿಲ್ಲಿ ಕಂಬನಿಯ ಮಿಡಿಯದೆ ಮೌನದಲಿ ಸ್ವೀಕರಿಸು ನಿನ್ನಾಸೆ ಬಳ್ಳಿ ಚಿಗುರೊಡೆದು ಹಬ್ಬಲಿ ಕರಳ ಬಳ್ಳಿ…….. ದೇಹವಿದು ನಶ್ವರವು ಬಾಳಿಕೆ ಬರದು ಆತ್ಮವಿದು ಶಾಶ್ವತವು ಕಂಗಳಿಗೆ ಕಾಣದು ಎಲುಬಿನಹಂದರದಲ್ಲಿ ವ್ಯಾಮೋಹ ಇಲ್ಲ ಬದಿಗೊತ್ತಿ ಚಿತ್ತವಿರಿಸು ಮುಕ್ತಿಯಲಿ…… ಉಸಿರಿನಲ್ಲೊಂದಾಗಿ ಕಾಯಕದಿ ನೆಲೆಸಿ ಕರ್ಮವೊಂದೇ ನಮಗೆ ಕೈಲಾಸ ಫಲಾಫಲಗಳು ನಿನ್ನಲ್ಲೇ ನೆಲೆಸಿ ಭಿಕ್ಷೆ ನೀಡೆಮಗೆ ಮುಕ್ತಿಯ ಕರುಣಿಸಿ…… ಜೀವಿಗಳೆದೆಯಲಿ ಕಿರಣಚಿಮ್ಮಿಸಿ ನಲಿವೆಂಬ ಹೂವನರಳಿಸಿ ಕಂಗಳೆದೆಯಲಿ ಬಿಂಬವಿರಿಸಿ ಭಾವದಾಚೆಯೆನ್ನ ಮುಕ್ತ ಗೊಳಿಸಿ…… […]
ಕಾವ್ಯಯಾನ
ಭಾವ ರಂಗವಲ್ಲಿ ಶಾಲಿನಿ ಆರ್. ಬೆರಳೊಳಿಡಿದ ಮರುಳಿಗೆ ಹುಡಿ ಒಡಮೂಡಿ ಅಂಗಳದಲಿ ನಲವಿಸುತಿದೆ, ಮನದ ಭಾವವೆಲ್ಲ ಮುದದಿ ಮೂಡಿ ಅರಳಿ ಮೆಲ್ಲಗೆ ರಂಗವಲ್ಲಿ ಇಲ್ಲಿ, ಎಳೆದ ಪ್ರತಿ ಗೆರೆ ಗೆರೆಯಲು ಅವನದೆ ಪ್ರೇಮದಮಲು ಅಂಕುಡೊಂಕಿನ ವೈಯಾರದಲು ಗೆರೆ ಬಿಂಕ ತೋರಿ ಅಣಕಿಸಲು ಅರಳಿತ್ತು ಮೋಡಿಗಾರ ರಂಗವಲ್ಲಿ ಇಲ್ಲಿ, ಗೆರೆಯಿಂದ ಗೆರೆಯ ಬಳಸಿ ಒಲವನೆಲ್ಲ ಸುತ್ತಿ ಬಳಸಿ ಮನವದು ಸೃತಿಸಿ ಶೃತಿಸಿ ಸ್ಪುರಿಸಿತಾಗ ನಗೆಯ ರಂಗವಲ್ಲಿ ಇಲ್ಲಿ, ನೀಲನಲಿ ನೀಲವಾಗಿ ತೇಲುತಿದೆ ಮನ ಪರಿಮಳಿಪ ಗಂಧವಾಗಿ ತೀಡುತಿದೆ ಭಾವ […]
ಕಾವ್ಯಯಾನ
ಜಗದ ಜ್ಯೋತಿ ರೇಮಾಸಂ ದಂಡಿ ಕಟ್ಟದೇ ಮಾಡಿಕೊಂಡೆಯಲ್ಲ ಕೊರಳಿಗೆ ತಾಳಿಯನೂ ಬಿಗಿಯಲಿಲ್ಲ ಮೈಗೆ ಅರಿಶಿಣ ಮೆತ್ತಿಕೊಳ್ಳಲಿಲ್ಲ ಮದುವೆಯ ಹಂದರವು ಹರಿವಿರಲಿಲ್ಲ ಹೊಸ ಇತಿಹಾಸವ ಸೃಷ್ಟಿಸಿಬಿಟ್ಟೆಯಲ್ಲ ಸಮಾನತೆಗಾಗಿ ಧರಣಿ ಹೂಡದೆ ಹೆಣ್ಣೆಂದು ಅವಕಾಶವಾದಿಯಾಗದೆ ಅಲ್ಲಮರ ಮಂಟಪದ ಜ್ಯೋತಿಯಾದೆ ಉಡತಡಿ ಉಡುಗೊರೆಯಾಗಿ ಉದಯಿಸಿದೆ ಕದಳಿಗೆ ಕರ್ಪುರದಂತೆ ಅರ್ಪಿತಳಾದೆ ನೀ ಶರಣ ಚಳುವಳಿಯ ಚೇತನ ಅಲ್ಲಮರ ಸಮ ಸಂವೇದನಶೀಲಳು ಅನುಭಾವಿಯುಕ್ತ ಮೇರು ಸಾಹಿತಿ ವಿಶಿಷ್ಟ ವೈಚಾರಿಕ ಮೌಲಿಕ ವಚನಗಾರ್ತಿ ಕನ್ನಡದ ಪ್ರಥಮ ಬಂಡಾಯ ಕವಯತ್ರಿ ಸಾರಿದೆ ಜಗದ ಕಣ್ಣು ಬೆತ್ತಲಾಗಿದೆ ಮನವು […]
ಕಾವ್ಯಯಾನ
ಅಪ್ಪಣ್ಣನಿಗೊಂದು ಮನವಿ ಎ.ಎಸ್. ಮಕಾನದಾರ ಗದಗ ಅಪ್ಪಣ್ಣ ಎಷ್ಟೊಂದು ಕತ್ತಿಗಳು ಸೇರಿಕೊಂಡಿವೆ ನಿನ್ನ ಹಸಬಿಯೊಳು ಆ ಕತ್ತಿಗಳೇ ಮಾಡಿದ ಕ್ಷೌರ ಹೇಗೆ ಸೂಚಿಸಿ ಬಿಡುತ್ತವೆ. ಆ ಚಾಂದ ದಾಡಿ ಮುಸ್ಲಿಮನದೆಂದು ಆ ಜುಟ್ಟು ಬ್ರಾಹ್ಮಣನನದೆಂದು ಆ ಕೆಳದಾಡಿ ಸಿಖ್ಖನದೆಂದು ಆ ಫ್ರೆಂಚ್ ದಾಡಿ ಕ್ರಿಶ್ಚಿಯನನದೆಂದು ಮೀಸೆ ಬಿಟ್ಟರೊಂದು ಜಾತಿ ಕೇಶ ಬಿಟ್ಟರೊಂದು ಜಾತಿ ಮುಡಿ ಕಟ್ಟಿ ದಾಡಿ ಬಿಟ್ಟರೊಂದು ಜಾತಿ ಎಲ್ಲವನು ಬೋಳಿಸಿಟ್ಟು ಹೊಸದೊಂದು ವ್ಯವಸ್ಥೆ ನಿರ್ಮಿಸಬಾರದಿತ್ತೇ ಅಪ್ಪಣ್ಣ ನೀನು ಅಣ್ಣ ಅಕ್ಕ ಅಲ್ಲಮರೊಂದಿಗೆ ಅನುಭವ ಮಂಟಪದ […]
ಕಾವ್ಯಯಾನ
ಗಝಲ್ ಕಾಫಿ಼ಯಾನಾ…………. ಎ.ಹೇಮಗಂಗಾ ಮಧುಪಾನದ ನಶೆಯಲ್ಲಿ ಭೂತವನ್ನು ಮರೆಯಬೇಕಿದೆ ಬೆಂಬಿಡದೇ ಕಾಡುವ ಕಹಿಕ್ಷಣಗಳಿಗೆ ಗೋರಿ ಕಟ್ಟಬೇಕಿದೆ ಮರೆಯಲಾಗದ ನೋವ ಮರೆವುದಾದರೂ ಹೇಗೆ ಸಾಕಿ? ಅಂತರಂಗದ ಬಿಕ್ಕುಗಳನ್ನು ಅಲ್ಲಲ್ಲಿಯೇ ಹೂಳಬೇಕಿದೆ ನೋವು, ಯಾತನೆಗಳು ಹೊಸದಲ್ಲ ಎಲ್ಲ ಅವಳಿತ್ತ ಕೊಡುಗೆ ಅವಳಿಗೆಂದೇ ಪ್ರತಿಕ್ಷಣ ಮಿಡಿದ ಧಮನಿಗಳ ಸಂತೈಸಬೇಕಿದೆ ಬಾಳು ಪಾಳು ಬಿದ್ದ ಮನೆಯಂತೆ ಭಣಗುಡುತ್ತಲೇ ಇದೆ ಸಾಕಿ ಅವಳನ್ನೇ ಬಯಸುವ ಹುಚ್ಚುಮತಿಗೆ ಅರಿವಳಿಕೆ ನೀಡಬೇಕಿದೆ ಗರಿ ಚಾಮರಗಳು ತೊನೆದಂತೆ ಕಂಡಿವೆ ಮಧುಪಾತ್ರೆಯಲ್ಲಿ ಭ್ರಮೆಯನ್ನೇ ನಿಜವೆಂದು ನಂಬಿದ ಮನಕೆ ತಿಳಿಹೇಳಬೇಕಿದೆ ಕಾಣದ […]