ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಕಲ್ಪನಾ ಎಸ್ ಪಾಟೀಲ ಅವರ ಗಜಲ್

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ ಗಜಲ್ ಜಗಕೆಲ್ಲ ತಿಳಿಸಿ ಹೇಳಲೆಬೇಕಿಲ್ಲ ಸಖಈ ಬದುಕು ನಮಗಾಗಿಯೇ ನಲ್ಲ ಜಗದಗೊಡವೆ ಏತಕೆ ಹೇಳು ನಲ್ಲಆಗದಿರಲಿ ನಿನ್ನಮನ ಗೊಂದಲದ ಗೂಡು ಕೊರಳ ಬಳಸಿ ಕಿವಿಯಲುಸಿರಿಲು ನೀನಾ ಎದೆಗೆ ಒರಗಿ ನಾಚಿದ ಆ ದಿನಗಳು ಆಣೆಯನೊಂದು ನೀ ಮಾಡಿದೆ ನಲ್ಲಹಕ್ಕಿಗೂಡು ಸಾಕ್ಷಿಯಾಗಿದೆ ಸಾಕಲ್ಲ ಕಾವ್ಯಧರೆ ಪ್ರಮಾಣಗಳನೆಂದು ನಂಬಿಲ್ಲನಿನ್ನನೇ ನಂಬಿಹಳು ನಿನಗೇಕೆ ತಿಳಿದಿಲ್ಲ ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಗಜಲ್ Read Post »

ಕಾವ್ಯಯಾನ, ಗಝಲ್

ಜ್ಯೋತಿ ಮಾಳಿ ಅವರ ಹೊಸ ಗಜಲ್‌

ಕಾವ್ಯ ಸಂಗಾತಿ ಜ್ಯೋತಿ ಮಾಳಿ ಗಜಲ್‌ ಹೆಣ್ಣಾಗಿ ಹುಟ್ಟಿಸು ಅಂತ ನಿನ್ನಲ್ಲೇನು ನಾನು ಮನ್ನತ್ ಮಾಡಿರಲಿಲ್ಲಎಲ್ಲರಂತೆ ಬದುಕಬಲ್ಲೆ, ಸುಖದಿಂದ ಬಾಳಲು ಜನ್ನತ್ ಬೇಡಿರಲಿಲ್ಲ ನಾನೇನು ಗುನಾ ಮಾಡಿದಿನೋ ಈ ದುರಾದೃಷ್ಟ ಸ್ಥಾನ ನೀಡಿರುವೆಪ್ರಾಣಿಯಾಗಿ ಹುಟ್ಟಿಸಬಹುದಿತ್ತು ಮನುಜನ ಶೌರತ್ ಅರಸಿರಲಿಲ್ಲ ಹೆಣ್ಣಿನ ಘನತೆ ಗೌರವ ಕಾಪಾಡುವ ಸುಂದರ ಸಮಾಜವಿರಬೇಕುಸಮಬಾಳು ನೀಡೆಂದೆನೇ ಹೊರತು ಸುಖದ ಸೌಲತ್ ಬಯಸಿರಲಿಲ್ಲ ಹೆಂಗರುಳಿನಲಿ ಪೋಣಿಸಿ ನಯ ನೆರಳಿನ ಸೂರಿನಡಿ ಇಡು ನನ್ನಮಾ ಬೆಹೆನ್ ಬಹು ಬೇಟಿಯಾಗಿ ನೋವಿರದ ನೌಲತ್ ನಡೆಸಿರಲಿಲ್ಲ ನೀ ಸೃಷ್ಟಿಸಿದ ಕರಾಮತ್ ನಲಿ ಜ್ಯೋತಿಗೆ ಔರತ್ ಸ್ಥಾನ ಸಿಕ್ಕಿದೆಸಾರ್ಥಕ ಸಾವೊಂದು ಸಾಕು ಇದಕ್ಕಿಂತ ದೊಡ್ಡ ದೌಲತ್ ಕೇಳಿರಲಿಲ್ಲ ಮನ್ನತ್ = ಹರಕೆಜನ್ನತ್ = ಸ್ವರ್ಗಶೌರತ್ = ಕೀರ್ತಿಸೌಲತ್ = ಸೌಲಭ್ಯನೌಲತ್ =ಶ್ರೇಷ್ಠ ಬದುಕುಔರತ್ = ಸ್ತ್ರೀದೌಲತ್ = ಶ್ರೀಮಂತಿಕೆಮಾ = ತಾಯಿಬಹೆನ್ = ಸಹೋದರಿಬೇಟಿ = ಮಗಳುಬಹು = ಸೊಸೆಕರಾಮತ್ = ಕೈಚಳಕಗಲತಿ = ತಪ್ಪುಗುನಾ= ಪಾಪ ಜ್ಯೋತಿ ಮಾಳಿ ಬೆಳಗಾವಿ

ಜ್ಯೋತಿ ಮಾಳಿ ಅವರ ಹೊಸ ಗಜಲ್‌ Read Post »

ಇತರೆ

“ನಾವಾರು ಎಂಬ ಅರಿವು – ಜೀವನದ ನಿಜವಾದ ಶಕ್ತಿ”ಪೃಥ್ವಿರಾಜ್ ಟಿ ಬಿ.

ವ್ಯಕ್ತಿ ಸಂಗಾತಿ ”ಪೃಥ್ವಿರಾಜ್ ಟಿ ಬಿ. “ನಾವಾರು ಎಂಬ ಅರಿವು – ಜೀವನದ ನಿಜವಾದ ಶಕ್ತಿ ಮಾನವನ ಜೀವನದಲ್ಲಿ ಅನೇಕ ಸವಾಲುಗಳು ಬರುತ್ತವೆ. ಕೆಲವೊಮ್ಮೆ ಪರಿಸ್ಥಿತಿಗಳು ಕಠಿಣವಾಗಿರುತ್ತವೆ, ಕೆಲವೊಮ್ಮೆ ಜನರ ಮಾತುಗಳು ನಮ್ಮ ಮನಸ್ಸನ್ನು ನೋಯಿಸುತ್ತವೆ. ಆದರೆ ಈ ಎಲ್ಲದರ ಮಧ್ಯೆ ಅತ್ಯಂತ ಮುಖ್ಯವಾದ ಒಂದು ವಿಷಯ ಇದೆ – ನಾವಾರು ಎಂಬ ಅರಿವು. “ನಾವೇನೆಂದು ನಮಗೆ ತಿಳಿದಿದ್ದರೆ ಸಾಕು, ಮೂರನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ” ಎಂಬ ಮಾತು ಜೀವನದ ಬಹಳ ದೊಡ್ಡ ಸತ್ಯವನ್ನು ಹೇಳುತ್ತದೆ. ಇಂದಿನ ಸಮಾಜದಲ್ಲಿ ಜನರು ತಮ್ಮ ಜೀವನಕ್ಕಿಂತ ಹೆಚ್ಚು ಇತರರ ಜೀವನದ ಬಗ್ಗೆ ಮಾತನಾಡುತ್ತಾರೆ. ಕೆಲವರು ಪ್ರೋತ್ಸಾಹ ನೀಡುತ್ತಾರೆ, ಆದರೆ ಕೆಲವರು ಟೀಕೆ ಮಾಡುತ್ತಾರೆ. ನಮ್ಮ ಸಾಧನೆ, ನಮ್ಮ ಪ್ರಯತ್ನ ಅಥವಾ ನಮ್ಮ ಕನಸುಗಳ ಬಗ್ಗೆ ಕೆಲವರು ಅರ್ಥಮಾಡಿಕೊಳ್ಳದೇ ಮಾತನಾಡಬಹುದು. ಈ ಸಂದರ್ಭಗಳಲ್ಲಿ ನಾವು ಅವರ ಮಾತುಗಳನ್ನು ಮನಸ್ಸಿಗೆ ಹಾಕಿಕೊಂಡರೆ ನಮ್ಮ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಆದ್ದರಿಂದಲೇ ಸ್ವತಃ ನಮ್ಮನ್ನು ನಾವು ಅರಿತುಕೊಳ್ಳುವುದು ಬಹಳ ಮುಖ್ಯ. ಮಾನವನಿಗೆ ತನ್ನ ಮೇಲೆ ನಂಬಿಕೆ ಇದ್ದರೆ, ಯಾವುದೇ ಟೀಕೆ ಅಥವಾ ನಿಂದೆ ಅವನನ್ನು ಕುಗ್ಗಿಸಲು ಸಾಧ್ಯವಿಲ್ಲ. ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಚೆನ್ನಾಗಿ ಓದುತ್ತಿದ್ದಾನೆ ಎಂದುಕೊಳ್ಳಿ. ಆದರೆ ಕೆಲವು ಜನ “ನೀನು ಇದನ್ನು ಮಾಡಲಾಗುವುದಿಲ್ಲ” ಎಂದು ಹೇಳಬಹುದು. ಆ ಮಾತುಗಳನ್ನು ನಂಬಿ ಆತ ನಿರಾಶೆಯಾಗಿದರೆ ಅವನ ಪ್ರಯತ್ನ ವ್ಯರ್ಥವಾಗುತ್ತದೆ. ಆದರೆ ಅವನು ತನ್ನ ಶ್ರಮದ ಮೇಲೆ ವಿಶ್ವಾಸ ಇಟ್ಟಿದ್ದರೆ, ಇತರರ ಮಾತು ಅವನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜೀವನದಲ್ಲಿ ಯಶಸ್ಸು ಸಾಧಿಸಿದ ಅನೇಕ ಮಹಾನ್ ವ್ಯಕ್ತಿಗಳ ಕಥೆಗಳನ್ನು ನೋಡಿದರೆ ಇದೇ ವಿಷಯ ಸ್ಪಷ್ಟವಾಗುತ್ತದೆ. ಅವರು ತಮ್ಮ ಗುರಿಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು. ಪ್ರಾರಂಭದಲ್ಲಿ ಹಲವರು ಅವರನ್ನು ಟೀಕಿಸಿದರು, ಹಾಸ್ಯ ಮಾಡಿದರು. ಆದರೆ ಅವರು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ತಮ್ಮ ದಾರಿಯಲ್ಲಿ ಸಾಗಿದರು. ಅಂತಿಮವಾಗಿ ಅವರ ಪರಿಶ್ರಮವೇ ಅವರನ್ನು ಯಶಸ್ಸಿನ ಶಿಖರಕ್ಕೆ ಕರೆದೊಯ್ದಿತು. ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು (Social Media) ನಮ್ಮ ಜೀವನದ ಒಂದು ಭಾಗವಾಗಿವೆ. ಇಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ಸುಲಭವಾಗಿ ಹೇಳುತ್ತಾರೆ. ಕೆಲವೊಮ್ಮೆ ಅವು ಒಳ್ಳೆಯವು ಆಗಿರಬಹುದು, ಆದರೆ ಕೆಲವೊಮ್ಮೆ ಅವು ನೋವುಂಟುಮಾಡುವಂತೆಯೂ ಇರಬಹುದು. ಈ ಕಾರಣದಿಂದ ಕೆಲವರು ಇತರರ ಅಭಿಪ್ರಾಯಗಳಿಗೆ ಅತಿಯಾದ ಮಹತ್ವ ಕೊಡುತ್ತಾರೆ. ಅವರು ತಮ್ಮ ಸ್ವಂತ ಸಂತೋಷವನ್ನೇ ಮರೆತುಬಿಡುತ್ತಾರೆ. ಆದರೆ ನಾವು ನೆನಪಿಡಬೇಕಾದದ್ದು ಒಂದೇ – ನಮ್ಮ ಜೀವನವನ್ನು ನಾವು ಬದುಕಬೇಕು, ಇತರರು ಅಲ್ಲ. ಸ್ವತಃ ನಮ್ಮನ್ನು ನಾವು ಅರಿತುಕೊಳ್ಳುವುದು ಎಂದರೆ ನಮ್ಮ ಶಕ್ತಿಗಳು ಮತ್ತು ದುರ್ಬಲತೆಗಳನ್ನು ತಿಳಿದುಕೊಳ್ಳುವುದು. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಪ್ರತಿಭೆ ಇರುತ್ತದೆ. ಕೆಲವರು ಬರವಣಿಗೆಯಲ್ಲಿ ಉತ್ತಮರಾಗಿರಬಹುದು, ಕೆಲವರು ಸಂಗೀತದಲ್ಲಿ, ಇನ್ನೂ ಕೆಲವರು ವಿಜ್ಞಾನ ಅಥವಾ ಕೃಷಿಯಲ್ಲಿ ಪ್ರತಿಭೆ ಹೊಂದಿರಬಹುದು. ನಾವು ನಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡರೆ, ಇತರರ ಮಾತುಗಳು ನಮ್ಮನ್ನು ತಡೆಯಲು ಸಾಧ್ಯವಿಲ್ಲ.ಮೂರನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳುವುದು ಜೀವನವನ್ನು ಕಠಿಣವಾಗಿಸುತ್ತದೆ.  ಉದಾಹರಣೆಗೆ, ಒಬ್ಬ ಯುವಕ ತನ್ನ ಕನಸನ್ನು ಅನುಸರಿಸಲು ಬಯಸುತ್ತಾನೆ. ಆದರೆ ಸುತ್ತಮುತ್ತಲಿನ ಜನರು “ಇದು ಸಾಧ್ಯವಿಲ್ಲ”, “ನೀನು ಇದರಲ್ಲಿ ಯಶಸ್ವಿಯಾಗುವುದಿಲ್ಲ” ಎಂದು ಹೇಳಬಹುದು. ಈ ಮಾತುಗಳನ್ನು ಕೇಳಿ ಆತ ತನ್ನ ಕನಸನ್ನೇ ಬಿಟ್ಟುಬಿಟ್ಟರೆ, ಅವನ ಜೀವನದಲ್ಲಿ ದೊಡ್ಡ ಅವಕಾಶವನ್ನು ಕಳೆದುಕೊಳ್ಳುತ್ತಾನೆ. ಆದರೆ ಆತ ತನ್ನ ಮನಸ್ಸಿನ ಧ್ವನಿಯನ್ನು ಕೇಳಿ ಮುಂದೆ ನಡೆದರೆ, ಅವನು ಖಂಡಿತವಾಗಿಯೂ ಸಾಧನೆ ಮಾಡಬಹುದು. ಇತರರ ಅಭಿಪ್ರಾಯಗಳು ಕೆಲವೊಮ್ಮೆ ಉಪಯುಕ್ತವಾಗಬಹುದು, ಆದರೆ ಅವು ನಮ್ಮ ಜೀವನವನ್ನು ನಿರ್ಧರಿಸಬಾರದು. ನಾವು ಯಾವ ದಾರಿಯನ್ನು ಆರಿಸಬೇಕು ಎಂಬುದು ನಮ್ಮ ನಿರ್ಧಾರವಾಗಿರಬೇಕು. ಜನರು ಮಾತನಾಡುವುದು ಸಹಜ. ಇಂದು ಒಂದು ವಿಷಯದ ಬಗ್ಗೆ ಮಾತನಾಡುತ್ತಾರೆ, ನಾಳೆ ಮತ್ತೊಂದು ವಿಷಯದ ಬಗ್ಗೆ ಮಾತನಾಡುತ್ತಾರೆ. ಆದರೆ ನಾವು ಅವರ ಪ್ರತಿಯೊಂದು ಮಾತಿಗೂ ಮಹತ್ವ ನೀಡಿದರೆ, ನಮ್ಮ ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ.ಜೀವನದಲ್ಲಿ ಶಾಂತಿ ಮತ್ತು ಸಂತೋಷ ಬೇಕಾದರೆ, ಮೊದಲಿಗೆ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಇರಬೇಕು. ಸ್ವಾಭಿಮಾನ ಇರುವ ವ್ಯಕ್ತಿ ಯಾರ ಮಾತಿಗೂ ಸುಲಭವಾಗಿ ಕುಗ್ಗುವುದಿಲ್ಲ. ಆತ ತನ್ನ ಮೌಲ್ಯವನ್ನು ತಿಳಿದಿರುತ್ತಾನೆ. ಆತ್ಮವಿಶ್ವಾಸ ಇರುವ ವ್ಯಕ್ತಿ ತನ್ನ ಗುರಿಯತ್ತ ಧೈರ್ಯವಾಗಿ ಸಾಗುತ್ತಾನೆ. ಇದರ ಜೊತೆಗೆ ನಮಗೆ ಬೆಂಬಲ ನೀಡುವ ಜನರನ್ನು ಗುರುತಿಸುವುದೂ ಮುಖ್ಯ. ನಮ್ಮ ಕುಟುಂಬ, ಸ್ನೇಹಿತರು ಅಥವಾ ಶಿಕ್ಷಕರು ಕೆಲವೊಮ್ಮೆ ನಮಗೆ ಮಾರ್ಗದರ್ಶನ ನೀಡುತ್ತಾರೆ. ಅವರ ಸಲಹೆಗಳು ನಮ್ಮ ಬೆಳವಣಿಗೆಗೆ ಸಹಾಯ ಮಾಡಬಹುದು. ಆದರೆ ಎಲ್ಲರ ಮಾತನ್ನೂ ಒಂದೇ ರೀತಿ ಸ್ವೀಕರಿಸಬೇಕೆಂದು ಇಲ್ಲ. ನಾವು ಯಾವ ಮಾತು ನಮ್ಮ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು. ನಾವೇನೆಂದು ನಮಗೆ ತಿಳಿದಿದ್ದರೆ ಜೀವನದಲ್ಲಿ ಅನೇಕ ಸಮಸ್ಯೆಗಳು ಸ್ವತಃ ಪರಿಹಾರವಾಗುತ್ತವೆ. ನಮ್ಮ ಮೌಲ್ಯವನ್ನು ಅರಿತುಕೊಂಡ ವ್ಯಕ್ತಿ ಯಾರ ಮುಂದೆ ತಲೆಬಾಗುವುದಿಲ್ಲ. ಆತ ತನ್ನ ಜೀವನವನ್ನು ಗೌರವದಿಂದ ನಡೆಸುತ್ತಾನೆ. ಇತರರ ಟೀಕೆಗಳು ಅವನನ್ನು ದುರ್ಬಲಗೊಳಿಸುವುದಿಲ್ಲ, ಬದಲಾಗಿ ಇನ್ನಷ್ಟು ಬಲಿಷ್ಠನನ್ನಾಗಿ ಮಾಡುತ್ತವೆ. ಕೊನೆಯಲ್ಲಿ ಹೇಳಬೇಕಾದದ್ದು ಏನೆಂದರೆ – ಜೀವನದಲ್ಲಿ ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ. ಯಾರೇ ಆಗಲಿ, ಏನೇ ಮಾಡಿದರೂ ಕೆಲವು ಜನರು ಟೀಕೆ ಮಾಡುತ್ತಾರೆ. ಆದ್ದರಿಂದ ನಾವು ಎಲ್ಲರ ಮಾತಿಗೂ ಮಹತ್ವ ಕೊಡದೆ, ನಮ್ಮ ಗುರಿಯತ್ತ ಗಮನಹರಿಸಬೇಕು. ನಮ್ಮ ಮನಸ್ಸು ಶುದ್ಧವಾಗಿದ್ದರೆ ಮತ್ತು ನಮ್ಮ ಉದ್ದೇಶ ಸತ್ಯವಾಗಿದ್ದರೆ, ಇತರರ ಮಾತುಗಳಿಂದ ನಾವು ಅಲುಗಾಡಬಾರದು.“ನಾವೇನೆಂದು ನಮಗೆ ತಿಳಿದಿದ್ದರೆ ಸಾಕು, ಮೂರನೆಯವರ ಮಾತಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ” ಎಂಬ ಮಾತು ನಮಗೆ ಆತ್ಮವಿಶ್ವಾಸದ ಮಹತ್ವವನ್ನು ನೆನಪಿಸುತ್ತದೆ. ನಮ್ಮ ಜೀವನದ ದಾರಿಯನ್ನು ನಾವು ಸ್ವತಃ ಆಯ್ಕೆ ಮಾಡಬೇಕು. ಇತರರ ಮಾತುಗಳು ನಮ್ಮನ್ನು ತಡೆಯುವ ಬದಲು, ನಮ್ಮನ್ನು ಇನ್ನಷ್ಟು ಬಲಿಷ್ಠರನ್ನಾಗಿ ಮಾಡಲಿ. ಅಂತಿಮವಾಗಿ, ಜೀವನದ ನಿಜವಾದ ಸಂತೋಷ ಹೊರಗಿನ ಮೆಚ್ಚುಗೆಯಲ್ಲಿ ಇಲ್ಲ, ಅದು ನಮ್ಮ ಒಳಗಿನ ಆತ್ಮಸಂತೋಷದಲ್ಲಿ ಇದೆ. ನಾವು ನಮ್ಮನ್ನು ನಾವು ನಂಬಿದರೆ, ಯಾವುದೇ ಅಡೆತಡೆಗಳು ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ತಮ್ಮ ಮೇಲೆ ನಂಬಿಕೆ ಇಟ್ಟು, ಇತರರ ಮಾತಿಗೆ ತಲೆ ಕೆಡಿಸಿಕೊಳ್ಳದೆ, ತಮ್ಮ ಕನಸುಗಳತ್ತ ಧೈರ್ಯವಾಗಿ ಮುಂದೆ ಸಾಗಬೇಕು. ಇದೇ ಜೀವನದ ನಿಜವಾದ ಜ್ಞಾನ ಮತ್ತು ಯಶಸ್ಸಿನ ದಾರಿ ಪೃಥ್ವಿರಾಜ್ ಟಿ ಬಿ.

“ನಾವಾರು ಎಂಬ ಅರಿವು – ಜೀವನದ ನಿಜವಾದ ಶಕ್ತಿ”ಪೃಥ್ವಿರಾಜ್ ಟಿ ಬಿ. Read Post »

ಕಾವ್ಯಯಾನ

ವಾಣಿ ಶಿವಕುಮಾರ್ ಅವರ ಕವಿತೆ “ಮನದ ಮಿಡಿತ”

ಕಾವ್ಯ ಸಂಗಾತಿ ವಾಣಿ ಶಿವಕುಮಾರ್ “ಮನದ ಮಿಡಿತ” ಅಂದು ನೀನು ನನಗೆ ಆಗಂತುಕ..ಆದರಿಂದು ನೀನೇ ನನ್ನ ಸಖ..ಮನ ಬಯಸಿತು ನಿನ್ನ ಸನಿಹ..ಯಾರನ್ನೂ ನೋಡಿಲ್ಲ ನಿನ್ನ ವಿನಃ.. ಪ್ರೀತಿಯ ಜೇನು ಜಿನುಗುತಿದೆ ನನ್ನಲ್ಲಿ,.ನಿನ್ನ ರೂಪವೇ ಅಚ್ಚತ್ತಿದೆ ಹೃದಯದಲ್ಲಿ..ಸೋನೆ ಹನಿ ನಿನ್ನನ್ನು ನೆನಪಿಸಿದೆ..ಮನದ ಅಂತಪುರ ನಿನಗಾಗಿ ಕಾದಿದೆ.. ಗರಿ ತೆರೆದ ನವಿಲಿನಂತೆ ನರ್ತಿಸುತ್ತಿರುವೆ..ಒಂದಾಗಿ ಪ್ರೀತಿಯ ತಾಳವನ್ನು ಹಾಕಲು..ನಾಲ್ಕು ಕೈಗಳು ಒಂದಾಗಿ ಶ್ರುತಿ ಮೀಟಿದರೆ..ನಾದವಾಗಿ ಹೊಮ್ಮುತ್ತದೆರಸಧಾರೆ ಹರಿಯುತ್ತಿರೆ.. ಒಲವಿನ ಬೆಳಕು ಅನುರಾಗವನ್ನು ಚೆಲ್ಲಿದೆ..ಮನದಲಿ ಮೈನ ಹಾಡಿ ಬಾವವ ತುಂಬಿದೆ..ಚೂಪಾದ ನಯನಗಳು ಸಲ್ಲಾಪಕ್ಕೆ ಕರೆದಿದೆ..ಸದ್ದಿಲ್ಲದೆ ಬಂದು ನನ್ನನ್ನು ಆವರಿಸಿದೆ.. ವಾಣಿ ಶಿವಕುಮಾರ್

ವಾಣಿ ಶಿವಕುಮಾರ್ ಅವರ ಕವಿತೆ “ಮನದ ಮಿಡಿತ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಧಾರವಾಡ ಅವರದೊಂದು ಯುದ್ದದ ಕವಿತೆ “ರಕ್ತದ ಮಳೆ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ರಕ್ತದ ಮಳೆ” ಮಳೆ ಸುರಿಯಬೇಕಾದಆಕಾಶದಿಂದ ಇಂದುಸುರಿಯುತ್ತದೆ ರಕ್ತದ ಹನಿ,ಮಕ್ಕಳ ನಗು ಕೇಳಬೇಕಾದಬೀದಿಯಲ್ಲಿ, ಗುಂಡಿನ ಸದ್ದು ಧ್ವನಿ. ಅಮ್ಮನ ಮಡಿಲು ಇರಬೇಕಾದಜಾಗದಲ್ಲಿ ಬೂದಿಯಾಗಿದೆಕನಸಿನ ಮನೆ,ಬಾಲಕನ ಕೈಯಲ್ಲಿ ಪುಸ್ತಕ   ಹಿಡಿದಿದೆ ಭಯದ ಕರಿ ನೆರಳು ಯಾವ ಧರ್ಮ? ಯಾವ ದೇಶ?ಯಾರಿಗಾಗಿ ಈ ಹೊತ್ತಿಉರಿಯುವ  ಉರಿ ಬೆಂಕಿ?ಹೆಸರಿಲ್ಲದ ಶವಗಳ ಸಾಲಿನಲ್ಲಿಮಾನವೀಯತೆ ನಿಂತಿದೆ ಮಂಕಾಗಿ ಇಲ್ಲಿ ಗಾಳಿಯೇ ಕೇಳುತ್ತದೆ ಮೌನವಾಗಿಸಹೋದರತೆ ಸತ್ತು ಹೋಗಿದೆಭೂಮಿಯೇ ಅಳುತ್ತದೆ ಕಣ್ಣೀರಾಗಿ,“ನಿನ್ನ ಹೆಜ್ಜೆಗೆ ಕೆಂಪಾದ ಗಾಯ ಇದು?” ನಕ್ಷತ್ರಗಳು ಕೂಡ  ಮಾಯವಾಗಿವೆ,ಅವುಗಳ ಹೊಳಪು ಕಣ್ಣೀರಿಗೆ ಕರಗಿದೆ,ಶಾಂತಿಯ ಹಕ್ಕಿ ಹಾರಲು ಹೆದರುತ್ತಿದೆಹಕ್ಕಿಯ ರೆಕ್ಕೆಗೂ ಹೊಗೆ ತಗಲಿದೆ. ಬೂದಿಯಿಂದ   ನೋವು  ಕೂಗುತ್ತಿದೆಕತ್ತಲಿನ ನಡುವೆ ಬೆಂಕಿ ಚಿಮ್ಮುತ್ತಿದೆರಕ್ತದ ಮಳೆಯನ್ನೇ ಹೊಳೆಯಂತೆ ಮಳೆಯಾಗಿ ಹರಿಯುತ್ತಿದೆ ಕೈ ಹಿಡಿದು ಕಣ್ಣೀರ  ಒರೆಸಲೂಯಾರಿಲ್ಲ ಇಲ್ಲಿಮಾನವೀಯತೆಯನ್ನು ಮತ್ತೊಮ್ಮೆ ಜೀವಂತಗೊಳಿಸಲು ಸಾಧ್ಯವೇ??????? ಮಮತೆ ಕರುಣೆ ಕರಗಿಸತ್ತುಹೋಗಿದೆ.ಅಮಾಯಕ ಜೀವಗಳಬಲಿ ಏರುತ್ತಿದೆಯುದ್ಧ ಬೇಕಿತ್ತಾ??ಪರಿಣಾಮ ಘನಘೋರ ,, ಮರಗುತ್ತದೆ ಮನಕೊರಗುತ್ತದೆ ಜೀವ…. ಡಾ ತಾರಾ ಬಿ ಎನ್ ಧಾರವಾಡ

ಡಾ ತಾರಾ ಬಿ ಎನ್ ಧಾರವಾಡ ಅವರದೊಂದು ಯುದ್ದದ ಕವಿತೆ “ರಕ್ತದ ಮಳೆ” Read Post »

ಇತರೆ, ರಂಗಭೂಮಿ

“ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ” ಗೊರೂರು ಅನಂತರಾಜು

ರಂಗ ಸಂಗಾತಿ ಗೊರೂರು ಅನಂತರಾಜು “ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ” 50 ವರ್ಷದ ಸನಿಹದಲ್ಲಿರುವ ಬೆಂಗಳೂರಿನ ಗೆಜ್ಜಹೆಜ್ಜೆ ರಂಗತಂಡವು ಬೆಂಗಳೂರು ಸೇವಾ ಸದನ ರಂಗಮಂದಿರದಲ್ಲಿ ದಿನಾಂಕ 12.03.206 ರಂದು ಯುಗಾದಿ ರಂಗ ಸಂಭ್ರಮ ನಾಟಕೋತ್ಸವ ಏರ್ಪಡಿಸಿತ್ತು.  ರಂಗಭೀಷ್ಮ ಬಿ ವಿ ಕಾರಂತರ ಸಂಗೀತ ಸುಂಯೋಜನೆಯಲ್ಲಿ ಮೂಡಿ ಬಂದ  ಗಜವದನ ಏರಂಬ ಎಂಬ ಗೀತೆಯನ್ನು ಗಣೇಶಯ್ಯನವರು ಆಡುವುದರ ಮುಖೇನ ನಾಟಕೋತ್ಸವಕ್ಕೆ ಚಾಲನೆ ನೀಡಿದರು  ಹಲವಾರು ಪ್ರಸಿದ್ಧ ನಾಟಕಗಳ ರಂಗಗೀತೆಗಳನ್ನು ಒಂದು ಗಂಟೆಗಳ ಕಾಲ ಹಾಡಲಾಯಿತು  ತಂಡದ ಹೊಸ ಪ್ರಯೋಗ ಮಾದಕ ಯುವ ಮಾರಕ ಪ್ರದರ್ಶಿಸಲಾಯಿತು. ಯುವ ಜನತೆ ದುಶ್ಚಟಕ್ಕೆ ದಾಸರಾಗ್ತ ಇದ್ದಾರೆ. ಇದರ ಸುತ್ತ ಹೆಣೆಯಲಾದ ಕಥಾ ಹಂದರ ಮನುಷ್ಯ ಅನುಮಾನ ಮತ್ತು ಅವಮಾನದಿಂದ ಕೋಪ ತಾಪ ಆವೇಶ ಚಟ ಬಿದ್ದು ಚಟ್ಯಕೆ ಏರುತ್ತಾನೆ. ಬೀದಿ ಬದಿಗಳಲ್ಲಿ ಜನಸಂದಣಿ ಇರುವ ಜಾಗಗಳಲ್ಲಿ ಶಾಲಾ-ಕಾಲೇಜುನ ಸಮೀಪ ಏರ್ಪೋರ್ಟ್ ಬಸ್ಟ್ಯಾಂಡ್ ರೈಲು ನಿಲ್ದಾಣ ಮುಂತಾದ ಕಡೆಗಳಲ್ಲಿ ಗಾಂಜಾ ಅಫೀಮು ಎಲಾಯಿನ್ ಮತ್ತೇರಿಸುವ ಪದಾರ್ಥಗಳನ್ನು ಮಾರುತಿರುತ್ತಾರೆ. ಯುವಕ ಯುವತಿಯರನ್ನು ದುಶ್ಚಟಕ್ಕೆ ದಾಸರನ್ನಾಗಿಸುವ ವಂಚಕರ ಜಾಲವೇ ವಿಪರೀತವಾಗಿದೆ. ಪ್ರೇಕ್ಷಕರಿಗೆ ನೇರವಾಗಿ ಡ್ರಗ್ಸ್ ಮಾರಾಟ ಕಂಡು ಬಂದಲ್ಲಿ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಒಂದು ಪಾತ್ರ ಹೇಳುತ್ತದೆ. ಯುವ ಜನತೆಯನ್ನು ದುಸ್ಥಿತಿಯಿಂದ ಕಾಪಾಡಬೇಕಾದ ಪರಿಸ್ಥಿತಿ ಒದಗಿ ಬಂದಿರುವುದು ನೋವಿನ ಸಂಗತಿ. ಧರೆಗೆ ತಂದು ಬಿಟ್ಬಿಟ್ನಪ್ಪ ಆಟ ಆಡ್ಸೋಕೆ ಪಾಠ ಕಲ್ಸೋಕೆ ಈ ಭೂಮಿ ಎಂಬ ರಂಗದ ಮೇಲೆ ಹಾಡೋಕ್ ಬಿಟ್ಟವ್ನೆ, ಕಾಮ ನೇಮ ಲೋಭ ಲಾಭದ ಪಾತ್ರ ಕೊಟ್ಟವ್ನೆ ಅಂತ ಹೇಳ್ತಾ ಪ್ರಹಸನ ಮುಕ್ತಾಯವಾಗುತ್ತದೆ. ನಿಂತ್ಕೋಳಿ ಅಲ್ಲಲ್ಲ ಕುಳಿತುಕೊಳ್ಳಿ ಎಂಬ  ಹಾಸ್ಯ ಕಿರು ನಾಟಕ ಮತ್ತು ಎಂಡ್ ಇಲ್ಲದ ಬಂಡ್ ಅವತಾರ ರಾಜಕೀಯ ವಿಡಂಬನಾತ್ಮಕ ನಗೆ ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ ತಂಡ. ರಂಗ ಉಪನ್ಯಾಸ ರಂಗ ಗೀತೆಗಳು, ಕಿರು ನಾಟಕ ರಂಗದ ಬಗ್ಗೆ ಮಾತುಗಳು ರಂಗ ಹಾಸ್ಯ ಪಟಾಕಿ ಎಲ್ಲಾ ಸರಿಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿತು ಚಿಂತನೆಗೂ ಚಾಲನೆ ನೀಡಿತು.  ಬೆಳಕು ವಿನ್ಯಾಸ ರವಿಶಂಕರ್ ಪ್ರಸಾದನ ಶಿವು, ಉಪನಿಷ ವಸ್ತ್ರಾಲಂಕಾರ ಪುಷ್ಪಲತಾ. ಪ್ರಚಾರ ಅಮಿತಾನಂದ ಶೇಖ ಪಾತ್ರವರ್ಗದಲ್ಲಿ ಮೈಸೂರು ರಮಾನಂದ್, ಶೇಖರ್ ಸೂರ್ಯನಾರಾಯಣರಾವ್,  ಲಲಿತಾ ಗಣೇಶಯ್ಯ, ಟಿ.ಜಿ ಹರೀಶ್ ಸಂಗೀತ. ನಾಟಕ ಬರೆದಾಡಿಸಿದವರು ಮೈಸೂರು ರಮಾನಂದ. ಗೊರೂರು ಅನಂತರಾಜು

“ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ” ಗೊರೂರು ಅನಂತರಾಜು Read Post »

ಪುಸ್ತಕ ಸಂಗಾತಿ

ಜ್ಯೋತಿ ಮಾಳಿಯವರ ಕೃತಿ”ಹಾಳುಗೋಡೆಯಲೊಂದು ಚಿಗುರು(ಗಜಲ್ ಸಂಕಲನ)” ಒಂದುಅವಲೋಕನ ಪ್ರಭಾವತಿ ಎಸ್ ದೇಸಾಯಿ

ಪುಸ್ತಕ ಸಂಗಾತಿ ಪ್ರಭಾವತಿ ಎಸ್ ದೇಸಾಯಿ ಜ್ಯೋತಿ ಮಾಳಿ “ಹಾಳು ಗೋಡೆಯಲೊಂದು ಚಿಗುರು“ ಕೃತಿ ಶೀಷಿ೯ಕೆ:ಹಾಳು ಗೋಡೆಯಲೊಂದು ಚಿಗುರುಲೇಖಕರು:ಜ್ಯೋತಿ ಮಾಳಿ…..೭೩೩೭೭ ೦೯೫೧೨*ಪ್ರಕಾಶಕರು:ಜ್ಯೋತಿ ಪ್ರಕಾಶನ ಬೆಳಗಾವಿ ೭೩೩೭೭ ೦೯೫೧೨ಪುಸ್ತಕದ ಬೆಲೆ:126=00 ಹಾಳು ಗೋಡೆಯಲಿ ಚಿಗುರಿದ ಪ್ರಕೃತಿಯ ಆತ್ಮಬಲ ತೋರಿಸುವ ಗಜಲ್ ಗಳು… ಗಜಲ್ ಅಂದರೆ ಏನು ? ,ಅದು ಹೇಗೆ ಹುಟ್ಟಿತು ‌ , ಎಲ್ಲಿ ಬೆಳೆದು ಭಾರತಕ್ಕೆ ಹೇಗೆ ಬಂದಿತೆಂದು , ಕನ್ನಡ ಗಜಲ್ ರಚನಾ ಛಂದಸ್ಸು ಏನು, ಹೇಗೆ , ಗಜಲ್ ರಚನಾ ನಿಯಮಗಳು ಹೇಗೆಂದು ಡಾ . ಶಾಂತರಸ ಹೆಂಬೇರಾಳ ಅವರಿಂದ ಪ್ರಾರಂಭವಾದ ಈ ವಿಷಯ ಇಂದಿನ ಎಲ್ಲಾ ಗಜಲ್ ಸಂಕಲಗಳಲ್ಲಿ ವಿವರಣೆ ಸಿಗುತ್ತದೆ. ಆದ ಕಾರಣ ನಾನು ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವುದಿಲ್ಲ . ನನ್ನ ದೃಷ್ಟಿಯಲ್ಲಿ ಗಜಲ್ ಎಂದರೆ ಧ್ಯಾನ , ಆತ್ಮಾನು ಸಂಧಾನ , ನಮ್ಮನ್ನು ನಾವು ಅರಿತುಕೊಳ್ಳುವುದು , ಲೌಕಿಕ ಪ್ರೀತಿಯಿಂದ ಆಧ್ಯಾತ್ಮಿಕ ಪ್ರೀತಿಯಲ್ಲಿ ಕೊನೆಗೊಳ್ಳುವುದು . ನಿರಾಕಾರನಾದ ಆ ಭಗವಂತನೊಂದಿಗೆ ಮಾತನಾಡುವುದು , ನಿವೇದಿಸಿಕೊಳ್ಳುವುದು , ಲಿಂಗಪತಿ ಶರಣ ಸತಿ ಭಾವ ಮೈ ತಾಳುವುದು , ಮೀರಾ ಮಾಧವನ ಭಕ್ತಿಯಂತೆ , ರಾಧಾಕೃಷ್ಣರ ಪ್ರೀತಿಯಂತೆ , ಅಕ್ಕಮಹಾದೇವಿ ಮಲ್ಲಿಕಾರ್ಜುನ ಧ್ಯಾನಿಸಿದಂತೆ . ಗಜಲ್ ಮೃದು ಮಧುರ ಭಾವನೆಗಳನ್ನು ಒಂದು ಹೃದಯ ಇನ್ನೊಂದು ಹೃದಯಕ್ಕೆ ನಿವೇಸದಿಸಿಕೊಳ್ಳು ಕಾವ್ಯ. ಗೇಯತೆ ,ಲಯ, ಮಧುರ , ಮಾಧುರ್ಯ ಉಳ್ಳ ಕಾವ್ಯವಾಗಿದೆ. ಇದು ಹಾಡುಗಬ್ಬ ಇಲ್ಲಿ ಗೇಯತೆ ,ಲಯ ,ಮಾಧುರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ . ಆತ್ಮವೂ ತನ್ನ ಸುತ್ತ ಹೆಣೆದುಕೊಳ್ಳುವ ನೋವು ನಲಿವುಗಳ ಮೋಹಕವಾದ ಪ್ರೇಮಿಗಳ ಪಿಸುಮಾತುಗಳೇ ಗಜಲ್ ಎಂದು ಹೇಳಬಹುದು. ಹೃದಯಗಳನ್ನು ಬೆಸೆಯುವ ಒಂದು ಅದ್ಭುತವಾದ ಶಕ್ತಿ ಇದಕ್ಕಿದೆ ನೋವಿನ ಕಡಲಲ್ಲಿನ ಬದುಕನ್ನು ದಡ ಸೇರಿಸುವ ಸುಖದ ಹಾಯ್ ದೋಣಿ ಇದಾಗಿದೆ.‌ ಧರ್ಮದ ಯಾವ ಕಟ್ಟುಪಾಡುಗಳನ್ನು ಸ್ವೀಕರಿಸದೆ ಸರ್ವರನ್ನು ಮನುಷ್ಯರನ್ನಾಗಿಸುವ ಕರುಣೆ ಸ್ನೇಹ ಅಸಹಾಯಕ ಅನುಕಂಪಗಳಲ್ಲಿ ದೇವರನ್ನು ಕಾಣಿಸುವ ಕಾವ್ಯ ಇದಾಗಿದೆ.. ಗಜಲ್ ಕಾವ್ಯ ನೋಡಲು ಸುಲಭವೆಂದು ಕಂಡರೂ ಇದರ ರಚನೆ ಸುಲಭವಲ್ಲ. ಗಂಭೀರ ಅಧ್ಯಯನ,ದಟ್ಟವಾದ ಅನುಭವ, ಧ್ಯಾನಿಸುವ ಮನೋದರ್ಮ, ಜನಸಾಮಾನ್ಯನ ಎದೆಗೂ ಮುಟ್ಟಿಸಬೇಕೆನ್ನುವ ತುಡಿತ ಸರಳ ಮೃದು ಶಬ್ದಗಳ ಬಳಿಕೆ ಇದ್ದರೆ ಮಾತ್ರ ಗಜಲ್ ರಚನೆ ಸಾಧ್ಯ. ಇದರ ಜೊತೆಗೆ ರಚನಾ ನಿಯಮಗಳನ್ನು ಅರಿತಿರಬೇಕು. ಇಂದು ಅನೇಕರು ಕನ್ನಡ ಗಜಲ್ ಗಳನ್ನು ರಚನೆ ಮಾಡುತ್ತಿದ್ದಾರೆ .ಕೆಲವರಿಗೆ ಮಾತ್ರ ಈ ರಾಣಿ ಒಲೆದಿದ್ದಾಳೆ,ಬಹಳ ಜನ ಎಡವುತಿದ್ದಾರೆ. ವಯಸ್ಸು ಲಿಂಗ ಭೇದವಿಲ್ಲದೆ ಅನೇಕರು ಗಜಲ್ ರಚಿಸಿ ಕೃತಿಗಳನ್ನು ಪ್ರಕಟಿಸಿ ಗಜಲ್ ಕಾರರಾಗಿದ್ದರೆ. ಬೆಳಗಾವಿ ಜಿಲ್ಲೆಯ ಜ್ಯೋತಿ ಮಾಳಿ ಇವರು ತಮ್ಮ ಹಾಳು ಗೋಡೆಯಲೊಂದು ಚಿಗುರು ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಪ್ರೀತಿಯಿಂದ ಓದುಗರ ಬೊಗಸೆಯಲ್ಲಿ ಇಟ್ಟಿದ್ದಾರೆ. ಜ್ಯೋತಿ ಮಾಳಿಯವರು ಈಗಾಗಲೇ ದುರುಡುಂಡೇಶ್ವರ ನಾಮಾಂಕಿತ ಆಧುನಿಕ ವಚನಗಳು ಮತ್ತು ಅಗಣಿತ ಮಹಿಮೆ ಕವನ ಸಂಕಲನ ಪ್ರಕಟಿಸಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ . ಸದ್ಯ ಬೆಳಗಾವಿಯ ಕೋಟಕ್ ಮಹೀಂದ್ರ ಲೈಫ್ ಇನ್ಸೂರೈನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ . ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ . ಅನೇಕ ಹಿರಿಯರ ಗಜಲ್ ಕೃತಿಗಳನ್ನು ಅಧ್ಯಯನ ಮಾಡಿ ಗಜಲ್ ರಚನಾ ಕ್ರಮವನ್ನು ಅರ್ಥೈಸಿಕೊಂಡು ನಿಯಮಗಳನ್ನು ಪಾಲಿಸಿಕೊಂಡು ಗಜರಗಳನ್ನು ರಚಿಸಿ ಕೃತಿಯನ್ನು ಪ್ರಕಟಿಸಿದ್ದಾರೆ ಬದುಕಿನಲ್ಲಿ ಮಹಿಳಗೆ ಬರುವ ಕಷ್ಟ ,ನೋವು, ತಿರಸ್ಕಾರ ಗಳನ್ನು ವಿಷಯವಾಗಿಟ್ಟುಕೊಂಡು ಗಜಲ್ ಗಳನ್ನು ರಚಿಸಿದ್ದಾರೆ . ಜ್ಯೋತಿ ಮಾಳಿಯವರ ಹಾಳು ಗೋಡೆಯಲೊಂದು ಚಿಗುರು ಗಜಲ್ ಸಂಕಲನಕ್ಕೆ ಶ್ರೇಷ್ಠ ಗಜಲ್ ಕಾರರಾದ ನಾಗೇಶ್ ಜೆ ನಾಯಕ ಅವರು ಅಮೂಲ್ಯವಾದ ಮುನ್ನುಡಿಯನ್ನು ಬರೆದು ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ .‌ ಅದೇ ರೀತಿಯಾಗಿ ಸಿದ್ದರಾಜು ಪೂಜಾರಿ ಅವರು ಕೃತಿಗೆ ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ . ಪ್ರಕಟಣೆಗೆ ಮುಂಚಿತವಾಗಿ ಈಶ್ವರ ಮಮದಾಪುರ ಹಾಗೂ ಶ್ರೀಮತಿ ಹಮೀದಾ ಬೇಗಂ ದೇಸಾಯಿ ಇವರುಗಳು ಗಜಲ್ ಗಳನ್ನು ಓದಿ ಶುಭ ಹಾರೈಕೆಯನ್ನು ಬರೆದಿದ್ದಾರೆ . ಜ್ಯೋತಿ ಮಾಳಿ ಇವರ ಕೃತಿ ಹಾಳು ಗೋಡೆಯಲೊಂದು ಚಿಗರು ಗಜಲ್ ಸಂಕಲನದಲ್ಲಿ 103 ಗಜಲ್ ಗಳಿದ್ದು 5 ,7 ,9 ದ್ವಿಪದಿಗಳ ಗಜಲ್ ಗಳಿವೆ. ಮುರದ್ಧಫ್ ಗಜಲ್ ,ಗೈರ್ ಮುರದ್ಧಫ್ ಗಜಲ್ ಗಳಿವೆ ಈ ಸಂಕಲದಲ್ಲಿವೆ. ಇರವ ಗಜಲ್ ಗಳು ಸ್ತ್ರೀ ಸಂವೇದನ ಬದುಕಿನ ತಲ್ಲಣಗಳನ್ನು ವಿಷಯವಾಗಿಟ್ಟುಕೊಂಡು ಗಜಲನ್ನು ರಚಿಸಿದ್ದಾರೆ . ಪುರುಷ ಪ್ರಧಾನವಾದ ಸಮಾಜದ ದೌರ್ಜನ್ಯಗಳನ್ನು, ದಬ್ಬಾಳಿಕೆಯನ್ನು, ಅನುಭವಿಸಿದ ಸಂಕಟ , ಯಾತನೆಗಳನ್ನು ಬಿಚ್ಚಿಟ್ಟಿದ್ದಾರೆ . ಹೆಣ್ಣು ಎಲ್ಲವನ್ನು ಸಹಿಸಿಕೊಂಡು ಬದುಕಿನ ಸವಾಲು ಮೆಟ್ಟಿ ಮುನ್ನ ನಡೆಯುವ ಧೋರಣೆಯನ್ನು ಜ್ಯೋತಿಯವರು ಗಜಲ್ ದಲ್ಲಿ ವ್ಯಕ್ತಪಡಿಸಿದ್ದಾರೆ .ಜ್ಯೋತಿ ಮಾಳಿಯವರು ಗಜಲ್ ಕಾವ್ಯದಲ್ಲಿ ತಮ್ಮ ತಖಲುಸ್ ನಾಮವನ್ನು “ಜ್ಯೋತಿ” ಎಂದು ಉಪಯೋಗಿಸಿದ್ದಾರೆ. ಜ್ಯೋತಿ ಮಾಳಿ ಯವರ ಹಾಳು ಗೋಡೆಯಲೊಂದು ಚಿಗುರು ಗಜಲ್ ಸಂಕಲನದ ಕೆಲವು ಗಜಲ್ ಗಳ ಸಾಲುಗಳ ವಿಶ್ಲೇಷಣೆ…. ಗಾಳಿಗೆ ಕಿಡಿ ಹೊತ್ತಿ ಉರಿಯುಲು ಎಷ್ಟು ಹೊತ್ತು ಬೇಕುನದಿಗೆ ಹರಿಯುತ ಕೊಚ್ಚಿಹೋಗಲು ಎಷ್ಟು ಹೊತ್ತು ಬೇಕು ಮೇಲಿನ ಗಜಲ್ ಓದಿದಾಗ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ನೆನಪಾಯಿತು ,ಬದುಕು ಕಟ್ಟುವುದು ಬಹಳ ಕಷ್ಟ ಆದರೆ ಅದೇ ಬದುಕು ಹಾಳಾಗಲು ಬಹಳ ಸಮಯ ಬೇಕಾಗುವುದಿಲ್ಲ ವೆಂದು ಮನನೊಂದು ವಿವಿಧ ರೀತಿಯ ರೂಪಕಗಳೊಂದಿಗೆ ವ್ಯಕ್ತಪಡಿಸಿದ್ದಾರೆ . ಕೈಯಿಂದ ಜಾರಿದ ಸಣ್ಣ ಬೆಂಕಿ ಕಡ್ಡಿಯ ಕಿಡಿ ಹೊತ್ತಿ ಇಡೀ ಹುಲ್ಲು ಗೂಡನ್ನು ಸುಡಲು ಬಹಳ ಹೊತ್ತು ಹಿಡಿಯುವುದಿಲ್ಲ.. ಅನ್ನೋನ್ಯವಾದ ಸಂಬಂಧಗಳ ಮಧ್ಯೆ ಅನೈತಿಕ ಸಂಬಂಧಗಳು ಇಣುಕಿದಾಗ ಸುಂದರವಾದ ಸಂಸಾರ ಹಾಳಾಗುವುದೆಂದು ಗಜಲ್ ಕಾರ್ತಿಯು ಮನನೊಂದು ಮಾರ್ಮಿಕವಾಗಿ ಗಜಲ್ ದಲ್ಲಿ ರೂಪಕಗಳೊಂದಿಗೆ ವಿವರಿಸಿದ್ದಾರೆ. ಯಾವ ಸುಖಕ್ಕಾಗಿ ಕಮರಿ ಹೋದೆ ಊಮಿ೯ಳೆ?ಲಕ್ಷ್ಮಣ ನಿನಗಾಗಿ ಸಮಯ ನೀಡ ಬೇಕಿತ್ತು ನೊಂದೆ ಏಕೆ? ಯುಗ ಯುಗಗಳಿಂದಲೂ ಪುರುಷ ಪ್ರಧಾನವಾದ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆ ಅಲಕ್ಷಗಳು ನಡೆದಿದ್ದು ಮಹಿಳೆ ತನ್ನ ಆಸೆ ಆಕಾಂಕ್ಷೆಗಳಿಗೆ ತಿಲಾಂಜನ ಕೊಟ್ಟು ಬದುಕುವುದನ್ನು ಕಲಿತಿದ್ದಾಳೆ. ನಾವು ಪುರಾಣಗಳಲ್ಲಿ ಬರುವ ಪಾತ್ರಗಳಲ್ಲಿ ಇದನ್ನು ಕಂಡುಕೊಂಡಿದ್ದೇವೆ . ಗಜಲ್ ಕಾರ್ತಿಯು ರಾಮಾಯಣದ ಊಮಿ೯ಳೆಯ ಜೀವನದ ಚಿತ್ರಣಯನ್ನು ಉದಾಹರಣೆಯಾಗಿ ಗಜಲ್ ದಲ್ಲಿ ಎತ್ತಿ ತೋರಿಸಿದ್ದಾರೆ. ಹಂಗಿನ ಅರಮನೆ ಕೂಳನೆಂದು ನುಂಗಲಾರೆನುಕಣ್ಣೀರಾಗಿ ರೆಪ್ಪೆ ತೊರೆದು ಜಾರಲಾರೆನು ಈ ಗಜಲ್ ದ ಮತ್ಲಾ ಓದಿದಾಗ ಗಜಲ್ ಕಾರ್ತಿಯು ಸ್ವಾಭಿಮಾನದ ಬದುಕು ಬಾಳ ಬಯಸುವುದು ತಿಳಿಯುತ್ತದೆ . ಹೆಣ್ಣು ಅಬಲೆ ಎಂದು ಸದಾ ಪುರುಷರ ಆಶ್ರಯದಲ್ಲಿ ಇರಬೇಕೆಂದು ಸಮಾಜ ಬಯಸುತ್ತದೆ . ಅದನ್ನು ಖಂಡಿಸಿದ ಗಜಲ್ ಕಾತಿ೯ ಅನ್ಯರ ಹಂಗಿನ ಅರಮನೆ ಕೂಳನೆಂದು ನುಂಗಲಾರೇ ಎಂದು ಮತ್ತು ಎಷ್ಟೇ ದುಃಖ ಇದ್ದರು ಕಣ್ಣೀರನ್ನು ಜಾರಿಸಿ ಅಬಲೆ ಎಂದು ಸಮಾಜದಮುಂದೆ ಸಾರಲು ಬಯಸುವುದಿಲ್ಲ ಎಂದು ಮಾರ್ಮಿಕವಾಗಿ ತಮ್ಮ ದೃಢ ನಿಲುವನ್ನು ಗಜಲ್ ದಲ್ಲಿ ರೂಪಕಗಳೊಂದಿಗೆ ತೋರಿಸಿದ್ದಾರೆ. ಹೆಣ್ಣಾಗಿ ಹುಟ್ಟೋದು ಈ ಭೂಮಿ ಮ್ಯಾಲ ಯಾರಿಗೆ ಬೇಕಿತ್ತು•ಹುಣ್ಣಾಗಿ ಕಂಡು ಆ ತೆಗಳೋ ಮಾತು ಯಾರಿಗೆ ಬೇಕಿತ್ತು* ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಾಗಿ ಹುಟ್ಟುವುದೇ ತಪ್ಪಾಗಿದೆ , ಹೆಣ್ಣಾಗಿ ಹುಟ್ಟುವುದು ಯಾರಿಗೆ ಬೇಕಾಗಿದೆ. ಹುಟ್ಟು ಯಾರ ಕೈಯಲ್ಲಿ ಇಲ್ಲ ಆದರೂ ಹೆಣ್ಣಾಗಿ ಹುಟ್ಟಿದಾಕೆ ಹೆತ್ತವರಿಂದ , ಒಡಹುಟ್ಟಿದವರಿಂದ, ಕೈ ಹಿಡಿದ ಗಂಡಸಿನಿಂದ , ದೌರ್ಜನ್ಯವನ್ನು ಸಹಿಸುತ್ತಾ ಸಮಾಜದ ತೆಗಳಿಕೆಯ ಮಾತುಗಳನ್ನು ಕೇಳುವುದು ಯಾರಿಗೆ ಬೇಕಾಗಿದೆ ಎಂದು ಹೇಳುತ್ತಾ ಈ ಭೂಮಿಯ ಮೇಲೆ ಹೆಣ್ಣಾಗಿ ಹುಟ್ಟಿದ್ದೇ ದೊಡ್ಡ ತಪ್ಪು ಎಂಬ ಭಾವನೆಯಲ್ಲಿ ಗಜಲ್ ನ್ನು ಸುಂದರವಾಗಿ ರೂಪಕಗಳೊಂದಿಗೆ ಮನದ ಮಾತು ಗಜಲ್ ದಲ್ಲಿ ಹೇಳಿದಿದ್ದಾರೆ. ಕಟ್ಟಿಕೊಂಡ ಕನಸುಗಳು ಬಿಕರಿಗೊಂಡವು ಬಾಳ ಬುತ್ತಿಯನು ಬಿಚ್ಚಿಟ್ಟಾಗಗಟ್ಟಿತನದ ಆಸೆಗಳು ನಿರಾಶೆಗೊಂಡವು ನಂಬಿಕೊಂಡದನು ಕೈ ಬಿಡುವಾಗ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೆ ಜೀವನದಲ್ಲಿ ತನ್ನದೇ ಆದ ಅನೇಕ ಕನಸುಗಳನ್ನು ಕಟ್ಟಿಕೊಂಡಿರುತ್ತಾನೆ. ಆ ಕನಸುಗಳು ನನಸಾಗದೆ ಬಿಕರಿಯಾದಾಗ ಬದುಕು ಹಾಳ ಸಂತೆಯಾಗುತ್ತದೆ . ತಾ ಬಯಸಿದ ಆಸೆಗಳೆಲ್ಲ ಈಡೆರದೆ ನಿರಾಶೆ ಆಗುತ್ತದೆ. ಬಯಸಿದ ಬದುಕು ಸಿಗದಾಗ ಮನನೊಂದು ನಿರಾಸೆಗೊಂಡು ತಾನು ನಂಬಿದ ಶುದ್ಧವಾದ ಜೀವನ ಸಿಗದೇ ಬದುಕು ಹಾಳಾಗಿದ್ದಕ್ಕೆ ಮರಗುತ್ತದೆ . ಈ ಗಜದಲ್ಲಿ ಗಜಲ್ ಕಾತಿ೯ ನಿರಾಶೆಯ ಭಾವವನ್ನು ರೂಪಕಗಳೊಂದಿಗೆ ವ್ಯಕ್ತಪಡಿಸಿದ್ದಾರೆ. ಜ್ಯೋತಿ ಮಾಳಿಯವರ ಪ್ರಥಮ ಗಜಲ್ ಸಂಕಲನ ಹಾಳು ಗೋಡೆಯಲೊಂದು ಚಿಗುರು ಎಂಬ ಕೃತಿಯಲ್ಲಿ ಸಮಾಜದಲ್ಲಿ ಮಹಿಳೆ ಅನುಭವಿಸಿದ ನೋವು ಅವಮಾನ ,ಮನದ ತಲ್ಲಣಗಳು,ತಣ್ಣನೆಯ ಆಕ್ರೋಶ , ಬಂಡಾಯ ಧ್ವನಿ , ಸಮಾಜದ ಆ ವ್ಯವಸ್ಥೆಯ ವಿರುದ್ಧ ಪ್ರತಿಭಟನೆಗೆ ಮಹಿಳೆ ಏನೆಲ್ಲಾ ಸಮಸ್ಯೆ ಬಂದರೂ ಅವುಗಳನ್ನು ಎದುರಿಸಿ ಬದುಕಬಲ್ಲೆ ಎಂಬ ಭಾವಗಳನ್ನು ಎದ್ದು ಕಾಣುವ ಗಟ್ಟಿಯಾದ ಗಜಲ್ ಗಳು ಈ ಸಂಕಲನದಲ್ಲಿ ಬಹಳಷ್ಟು ಸಂಖ್ಯೆಯಲ್ಲಿವೆ. ಜ್ಯೋತಿ ಮಾಳಿ ಅವರ ಹಾಳು ಗೋಡೆಯಲೊಂದು ಚಿಗುರು ಎಂಬ ಕೃತಿಯಲ್ಲಿ ಮಹಿಳೆ ಇಂದು ಹಾಗೂ ಹಿಂದೆ ಅನುಭವಿಸಿದ ನೋವುಗಳನ್ನು ಸಹಜವಾಗಿ ತಾವು ಅನುಭವಿಸಿ ನೋವುಗಳೆಂಬಂತೆ ಈ ಸಂಕಲನದ ಗಜಲ್ ದಲ್ಲಿ ತೋರಿಸಿಕೊಟ್ಟಿದ್ದಾರೆ.. ಭಾವ ತೀವ್ರತೆಯನ್ನು ಓದಗ ಅರ್ಥ ವಾಗುವಂತೆ ರೂಪಕಗಳನ್ನು ಬಳಸಿದ್ದಾರೆ ಜ್ಯೋತಿಯವರುಇನ್ನೂ ಉತ್ತಮವಾದ ಗಜಲ್ ಗಳನ್ನು ಬರೆದು ಕನ್ನಡ ಗಜಲ್ ಕಣಜವನ್ನು ತುಂಬಲೆಂದು ಶುಭ ಹಾರೈಸುತ್ತಾ ವಿರಾಮ ಕೊಡುತ್ತೇನೆ . ಪ್ರಭಾವತಿ ಎಸ್ ದೇಸಾಯಿ

ಜ್ಯೋತಿ ಮಾಳಿಯವರ ಕೃತಿ”ಹಾಳುಗೋಡೆಯಲೊಂದು ಚಿಗುರು(ಗಜಲ್ ಸಂಕಲನ)” ಒಂದುಅವಲೋಕನ ಪ್ರಭಾವತಿ ಎಸ್ ದೇಸಾಯಿ Read Post »

ಇತರೆ

“ಹಾಯಿಕು ಅಂದ್ರೆ ಏನು? ಎಂದು ಒಂದಷ್ಟು ಪರಿಚಯಾತ್ಮಕ ಮಾತು ಕಥೆ” ಡಾ.ಸಿದ್ದರಾಮ ಹೊನ್ಕಲ್

ಕಾವ್ಯ ಸಂಗಾತಿ ಡಾ.ಸಿದ್ದರಾಮ ಹೊನ್ಕಲ್ “ಹಾಯಿಕು ಅಂದ್ರೆ ಏನು? ಒಂದಷ್ಟು ಪರಿಚಯಾತ್ಮಕ ಮಾತು ಕಥೆ” ಈ ಪುರಸ್ಕೃತ ಹೊನ್ನಗರಿಯ ಹೈಕು ಕೃತಿಯಲ್ಲಿ ಬರೆದ‌  ಲೇಖನ  ತಮ್ಮ ಓದಿಗೆ… *ಹಾಯಿಕು ಅಂದ್ರೆ ಏನು? ಎಂದು ಒಂದಷ್ಟು ಪರಿಚಯಾತ್ಮಕ ಮಾತು ಕಥೆ*ಈ ಪುರಸ್ಕೃತ ಹೊನ್ನಗರಿಯ ಹೈಕು ಕೃತಿಯಲ್ಲಿ ಬರೆದ‌  ಲೇಖನ  ತಮ್ಮ ಓದಿಗೆ…ಈ ಹೈಕು ಅನ್ನೋದು ಜಪಾನಿ ಕಾವ್ಯ ಪ್ರಕಾರ. ಜಪಾನಿಗರು ತುಂಬಾ ಕುಳ್ಳರು ಹಾಗೂ ಅಪಾರ ಶ್ರಮ ಜೀವಿ ಚೆಲುವರು.ಅವರಂತೆಯೇ ಅವರ ಕಾವ್ಯ ಪ್ರಕಾರ ಹೈಕು ಸಹ ತುಂಬಾ ಪುಟ್ಟದು.ಹಾಗೇ ಅವರಷ್ಟೇ ಮೌಲ್ಯಯುತವಾದುದೂ. ಒಂದೊಂದು ಹೈಕುಗೆ ಒಂದೊಂದು ಸೆಮಿನಾರ್ ಮಾಡುವಷ್ಟು ಅರ್ಥ ಇರುತ್ತದೆ ಎಂಬುದು ಕೇವಲ ಔಪಚಾರಿಕ ಮಾತಲ್ಲ. ಮೂರು ಸಾಲಿನಲ್ಲಿ ಒಂದು ಮಹಾ ಕಾವ್ಯವನ್ನೇ ಹೇಳಬಹುದು ಅನ್ನುತ್ತಾರೆ.ಅದು ಹೈಕುವಿನ ಶಕ್ತಿ. ಹಾಯ್ಕು-ಹೈಕು ಎಂಬ ಈ ಪ್ರಕಾರವು ಕನ್ನಡಕ್ಕೆ ಬಂದ ಹೊಸ ಹೊಳುಹುಗಳಂತೆ ಸುಳಿದಿವೆ.ಹೈಕು ಕವಿಗಳು  ಇಂಗ್ಲಿಷ್ ನಲ್ಲಿ ಬಂದ ಅನೇಕ ಹಾಯ್ಕುಗಳನ್ನು ಕನ್ನಡಕ್ಕೆ ತಂದಿದ್ದಾರೆ.ಈ ಕೆಲಸ ಹಿರಿಯರಾದ ಎ.ಕೆ.ರಾಮಾನುಜನ್ ಅವರಿಂದ ಹಿಡಿದು ಇತ್ತೀಚಿನ ಬಹು ಭಾಷಾ ಬಲ್ಲ ಎಲ್ಲ ಹೈಕು ಕವಿಗಳ ತನಕವು ಅನುವಾದದ ಕೆಲಸ ನಿರಂತರವಾಗಿ ನಡೆದೆ ಇದೆ. ಹಾಯ್ಕುಗಳ ಮೂಲ ಜಪಾನ್ ದೇಶದ್ದಾದರೂ ಕಾಲ ದೇಶಗಳನ್ನು ದಾಟಿ ಅನೇಕ ಭಾಷೆಗಳಲ್ಲಿ ಈ ಹೈಕು ಮೈ ಚಾಚಿಕೊಂಡು ಹೊಸ ಹೊಸ ರೂಪದಲಿ ಮೈದೆಳೆದಿದೆ. ತಳೆಯುತ್ತ ಬೆಳೆಯುತ್ತಲಿದೆ.ಇದು ಮುಖ್ಯವಾಗಿ ಪ್ರಕೃತಿ ಹಾಗೂ ಆಧ್ಯಾತ್ಮಿಕ ಬೇಸ್ ಹೊಂದಿರುವ ಕಾವ್ಯ ಪ್ರಕಾರ.      ಇತ್ತೀಚೆಗೆ ನಾನು ಹೈಕು ಸಂಕಲನ ತರುವ ಮನಸು ಮಾಡಿದ್ದರಿಂದ ಈಗಾಗಲೇ ಈ ಹೈಕು ಗುಂಪುಗಳಲ್ಲಿ ಆಗಾಗ ಜುಗಲ್ ಗೆ ಒಂದಷ್ಟು ಹೈಕು ಬರೆದದ್ದು ಬಿಟ್ಟರೆ ಹೈಕು ಬರೆಯಲೇಬೇಕೆಂದು ಧ್ಯಾನಿಸಿ ಬರೆಯಲು ಕುಂತದ್ದು ತೀರಾ ಕಡಿಮೆ ಇತ್ತು.ಆದರೆ ಕಳೆದ ಎರಡು ವರ್ಷಗಳಿಂದ ಈ ಹೈಕುಗಳ ಆಂತರ್ಯದ ಅಧ್ಯಯನ, ಆಸಕ್ತಿ ಒಳಗೊಳಗೆ ನಡೆದೇ ಇತ್ತು.ಗಜಲ್ ವ್ಯಾಮೋಹಕ್ಕೆ ಬಿದ್ದು ಸುಮಾರು‌ ನೂರರ ಸಮೀಪ ಹೈಕು ಬರೆದು ನಿಲ್ಲಿಸಿದ್ದೆ.    ಹಾಯ್ಕುವಿನ ಪ್ರಖ್ಯಾತ ಲೇಖಕ *ಬಾಶೋವಿನ್* ಅವರು ಯಾರು ಐದು ಹೈಕು ಬರೆಯುವರೋ ಅವರು ಕವಿ.ಅವರ ಪ್ರಕಾರ ಯಾರು ಹತ್ತು ಹೈಕು ಬರೆಯುತ್ತಾರೋ ಅವರು  *ಮಹಾಕವಿ* ಎಂದು ಹೇಳಿದ್ದಾರೆ. ಇದರ ಅರ್ಥ ಹೈಕು ಬರೆಯೋದು ಸುಲಭವಲ್ಲ ಅಂತ ಅರ್ಥ.  *ಸಮುದ್ರವನ್ನು ಬೊಗಸೆಯಲ್ಲಿ ಹಿಡಿಯುವ ಪ್ರಯತ್ನ* ಅಂತ ನನಗನಿಸುತ್ತದೆ.ಹಿಂದೆ ಆರಂಭದಲ್ಲಿ ನಾ ಹೈಕು ಗುಂಪಿನಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದು ಉಂಟು.       ನಮ್ಮದೇ ನೆಲದ ಸರ್ವಜ್ಞನ ತ್ರಿಪದಿ, ಶರಣರ ವಚನಗಳು, ಹನಿಗವನ, ಚುಟುಕು ಇರುವಾಗ ನಾವೇಕೆ ಈ ೫/೭/೫ ಅಕ್ಷರಗಳ ಜಪಾನಿಯರ ಈ ವಿದೇಶಿ ಪುಟ್ಟ ಕನ್ಯೆಗೆ ಲೈನು ಹೊಡೆಯಲು, ಅವಳನ್ನು ನಮ್ಮ ಪ್ರೇಮಕ್ಕೆ ಒಲಿಸಲು, ಒಗ್ಗಿಸಲು ಕಷ್ಟ ಪಡಬೇಕು ಅಂತ ಬರೆದಿದ್ದ ನೆನಪು.      ನಮ್ಮ ಭಾರತೀಯರ  ಹಣೆಬರಹವೇ ಇಷ್ಟು.ಸ್ವದೇಸಿ ಜಾಗರಣದವರು ಎಷ್ಟು ಹೇಳಿದರೂ ಸಹ ನಾವು ವಿದೇಶಿ ಬಿಳೀ ಬಣ್ಣಕ್ಕೆ ಅನುಗಾಲ ದಿಂದಲೂ ಜೋತು ಬೀಳೋರೆಂದು ಫೇಮಸ್ ಆಗಿದ್ದೇವೆ. ಹ್ಯಾಗೂ ಪರ್ಷಿಯನ್ ದೇಶದ ಉರ್ದು ಗಜಲ್ ಕಾವ್ಯ ಕನ್ನಿಕೆಗೆ ಸೋತು ಗೆದ್ದಾಗಿದೆ. ಈ ಜಪಾನಿ ಕನ್ನಿಕೆಗೂ ಒಂದಷ್ಟು ಮುಟ್ಟಿ ತಟ್ಟಿ ನೋಡೋಣ.ಇದು ಒಂದು *ಎಕ್ಸಪಿರಿಮೆಂಟ್* ಆಗಲಿ ಅಂತ ಇದೀಗ ಹೈಕು ಕಡೆಗೆ ಒಂದು ಹೆಜ್ಜೆ ನನ್ನದು. ಒಲಿಯುವಳೋ, ಮುನಿವಳೋ ನೋಡೋಣ.      ಈ ಹೈಕುಗಳು ಪ್ರಕೃತಿ ಹಾಗೂ ಆಧ್ಯಾತ್ಮಿಕ ಹಿನ್ನೆಲೆಯ ಒಂದು ಅಸದ್ರುಶ್ಯ ಕಾವ್ಮಚಿತ್ರಣ ಕೊಡುವ, ಕಿರಿದರಲ್ಲಿ ಹಿರಿದಾದ ಅರ್ಥಕೊಡುವುದುಂಟು.ಕೇವಲ ೫/೭/೫ ಅಕ್ಷರಗಳಿಂದ ಬರೆದುದೆಲ್ಲ ಹೈಕು ಆಗುವ ಹಾಗಿದ್ದರೆ,ಇಲ್ಲಿ ಹೀಗೆ ಹೈಕು ಬರೆದವರೆಲ್ಲ ಮಹಾ ಕವಿಗಳೇ ಆಗಿ ಬಿಟ್ಟಿರೋರು.ಬಹಳ ಜನ ಹೀಗೆ ಬರೆಯಲು ಹೋಗಿ ಸೋತಿದ್ದಾರೆ. ಕೆಲವರು ಗೆದ್ದಿದ್ದಾರೆ.      ಹನಿಗವನ ಬರೆಯಲಿಕ್ಕೆ ಒಂದು ಕಾಲದಲ್ಲಿ ಫೇಮಸ್ ಇದ್ದ ನಾನು,ಐದಾರು ನೂರು ಹನಿಗವನ ಬರೆದವನು.ನನಗೆ ಇದು ಬೇಗ ಒಗ್ಗಬೇಕು.ಆದರೆ ಧ್ಯಾನಸ್ಥ ಮನಸ್ಥಿತಿಯಲ್ಲಿ ಕೂಡಲೇ ಆಗುತ್ತಿರಲಿಲ್ಲ. ಕುಂತರೆ ಖಂಡಿತಾ ಗೆಲ್ಲಬಲ್ಲೆ.ಇಲ್ಲಿಯ ಕೆಲ ಹೈಕುಗಳು ಅಪಾರ ಮೆಚ್ಚುಗೆ ಪಡೆದದ್ದು ನೋಡಿದಾಗ, ಧ್ಯಾನಸ್ಥ ಮನಸ್ಥಿತಿ ಮೈಗೂಡಿರಬಹುದೇ? ಇದೀಗ ಹೈಕು ಬರೆಯುವ‌ ನಂಬಿಕೆ ಬಂದಿದೆ.ತಾವು ಅದನ್ನು ದೃಡಿಕರಿಸಬೇಕಿದೆ. ಹೈಕುಗಳನ್ನು ಕನ್ನಡದ ಬಹುಮುಖ್ಯ ಹೈಕು ಲೇಖಕರಾದ ಡಾ.ಕೆ.ಬಿ.ಬ್ಯಾಳಿಯವರು, ಜಂಬಣ್ಣ ಅಮರಚಿಂತ ಅವರು, ಮುಂತಾದ ಕೆಲವರು ಸಾಕಷ್ಟು ಬರೆದು ಒಂದು ಗಟ್ಟಿ ಬುನಾದಿ ಹಾಕಿದ್ದಾರೆ.     ಇನ್ನೂ *ಎಪ್ಪತ್ತರ ದಶಕದಲ್ಲಿ ಹೈಕುಗಳನ್ನು ಮೊಟ್ಟ ಮೊದಲು ಕನ್ನಡದಲ್ಲಿ*  ಬರೆದು ಇದಕ್ಕೆ ಬುನಾದಿ ಹಾಕಿದವರು ನಮ್ಮದೇ *ಚಂದ್ರಕಾಂತ ಕುಸುನೂರರು* ಎಂದು ದಾಖಲಿಸಿರುವ ನಮ್ಮ ಕವಿ  *ಜಂಬಣ್ಣ ಅಮರಚಿಂತ* ರು ನೆನಪಾಗುತ್ತಾರೆ.ಆದರೆ ಕುಸನೂರರೂ ಸಹ ೧೭ ಸಿಲೆಬಲ್ ಗೆ ಸೀಮಿತ ಆದಂತಿಲ್ಲ. ಇದೇ ಹಾದಿಯಲ್ಲಿ ಯುವ ಲೇಖಕ ರಮಜಾನ್ ಹೆಬಸೂರು ಅವರು,ಡಾ.ಎ.ರವಿಂದ್ರನಾಥ ಅವರು ಹಾಗೂ ಇತರ ಅನೇಕರು ಸಹ ತಮ್ಮದೇ ಆದ ರೀತಿಯಲ್ಲಿ ೧೭ ಸಿಲೆಬಲ್ ಹಾಗೂ ಮೂರು ಸಾಲಿಗೆ ಸೀಮಿತ ಆಗದೇ ಉತ್ಕೃಷ್ಟ ಹಾಯಿಕು ನೀಡಿದ್ದಾರೆ.  *ಸಖಿಯ ಮನ* *ಅರಿತರೆ ಸ್ವರ್ಗವು* *ಕಾಲಡಿಯಲಿ….*   (ಹೊನ್ನು)  ನಮ್ಮ ಕನ್ನಡದಲ್ಲಿನ ಚುಟುಕು,ತ್ರಿಪದಿ, ಹನಿಗವನಗಳಂತೆ ಈ ಹೈಕು ಸಣ್ಣದರಲ್ಲಿಯೇ ಒಂದು ಹಿರಿದಾದ ಅರ್ಥ ನೀಡುವ ಪುಟ್ಟ ಕಾವ್ಯ. ಜಪಾನಿಗರಂತೆ ಚಿಕ್ಕದು,ಬುದ್ದಿ ಶಾಲಿಯಾದುದೂ, ಕೊನೆಯ ಸಾಲಿನಲ್ಲಿ ಒಂದು ಪಂಚ್ ನೀಡಿ ಇಡೀ ಆ ಪುಟ್ಟ ಕಾವ್ಯಕ್ಕೆ ಅರ್ಥವಂತಿಕೆ ತರುವಂತಹದು. ವಿಷಯ ಪ್ರಕೃತಿ, ಆಧ್ಯಾತ್ಮಿಕ ಇರಬಹುದಾದರೂ ಬರೆಯುವ‌ ಲೇಖಕನ  ಮನಸ್ಥಿತಿಗೆ ಸಂಬಂಧಿಸಿದ ವಿಷಯ ಅದು.ಆ ಲೇಖಕನ ಭಾವ ಲಹರಿ ಯಾವ ಕಡೆಗಾದರೂ ಚಲಿಸಿತು.ಆದರೆ ಸಾಂಪ್ರದಾಯಿಕ ಹೈಕು‌ ಇಂದಿಗೂ‌ ೫/೭/೫ ಸಿಲೆಬಲ್ ಮೂಲಕವೇ ಹೆಚ್ಚು ಜನಪ್ರಿಯ ಗೊಂಡಿದೆ.ಉದಾಹರಣೆಗೆ ಅನೇಕರು ಮೆಚ್ಚುಗೆ ಹೇಳಿದ ನನ್ನದೇ ಹೈಕು ನೋಡೋದಾದರೆ  *ಬಿತ್ತಿಕೋ ಒಮ್ಮೆ* *ನಿನ್ನೊಳಗೆ ನನ್ನನು* *ಮರವಾಗುವೆ…* ಇಂತಹದರಲ್ಲಿ ಒಂದು ಪಂಚ್ ಲೈನ್ ಇದೆ.ಅದು ಗರ್ಭಾಶಯದಲ್ಲಿ ಬಿತ್ತಿಕೋದೂ ಆಗಿರಬಹುದು. ಈ ಆದಿಗೆ ಅನಂತವಾದ ಭೂಗರ್ಭದಲ್ಲಿ ಬಿತ್ತುವುದೂ ಆಗಿರಬಹುದು. ಈ ಹೈಕು ಗೆ ಒಂದು ಸೆಮಿನಾರೆ ಮಾಡಬಹುದು. ಹೀಗೆ ಈ ಹೈಕು ಐದು ಏಳು ಐದು ಪದ ಬಳಕೆಯ ಮೂಲಕ ಒಂದು ‌ವಿಶಿಷ್ಟವಾದ ಚಿತ್ರಣವನ್ನು ಓದುಗನಿಗೆ‌ ಕಟ್ಟಿ ಕೊಡಬೇಕಾಗುವುದು.ಮೊದಲ ಎರಡು ಸಾಲು‌ ಹನಿಗವನ,ಮಿನಿಗವನದಂತೆ ಸಾಗಿದ್ದರೂ ಸಹ ಕೊನೆಯ ಸಾಲಿನ ಪದ ಇಡೀ ಆ ಹೈಕು ಕಾವ್ಯದ ಆಶಯವನ್ನು ಓದುಗನ ಮನೋ ಪಟಲದ ಮೇಲೆ ಒಮ್ಮಲೇ ಮೂಡುವ ಒಂದು ಅಸದ್ರಶ್ಯ ಕಾವ್ಯ ಚಿತ್ರಣವಾಗಿ,ಮನೋ ಭೂಮಿಕೆಯ ಮೇಲೆ ಪ್ರತಕ್ಷವಾಗುವಂತಿರಬೇಕು.ಅದಕ್ಕೆ ಅನೇಕರು ಪಂಚ್‌ ಲೈನ್ ಅನ್ನುವದುಂಟು.ಅದಕ್ಕೆ ಪ್ರಾಸದ, ಗೇಯದ ಹಂಗು ಇರಬೇಕಿಲ್ಲ.ಇದ್ದರೂ ತಪ್ಪೇನು ಇಲ್ಲ. ಆದರೆ ಇಡೀ ಮೇಲಿನ ಎರಡು ಸಾಲಿನಲ್ಲಿ ಹೇಳದೇ ಉಳಿದದ್ದು ಇಲ್ಲಿ ಧ್ವನಿಸಿ ಬಿಡಬೇಕು.ಅದರಲ್ಲಿ ಆಳ,ತಿಳಿವು, ಆಧ್ಯಾತ್ಮಿಕತೆ,ನಿಜದ ಪ್ರತಿರೂಪ ಕಣ್ಣಿಗೆ, ಮನಸ್ಸಿಗೆ ಒಂದು ಅನುಭೂತಿಯಾಗಿ ಮೂಡುವಂತಿರಬೇಕು.ಅದು ಸಾರ್ಥಕ ಹೈಕುವಿನ‌ ಒಂದು ಗುಣ ಲಕ್ಷಣವಾಗಿದೆ. ನಮ್ಮ ನವ್ಯ ಕಾವ್ಯದಂತೆ,ಹನಿಗವನದಂತೆ,ಮನ ಬಂದಷ್ಟು, ಮನ ಬಂದ ಕಡೆ ಸಾಲುಗಳು ಹರಿಯುವಂತಿಲ್ಲ. ಈ ಜಪಾನಿ ಚೆಲುವೆಗೆ ತನ್ನದೇ ಆದ ಒಂದು ಉಡುಪಿನ ಚೌಕಟ್ಟಿದೆ.ಅದು ೫/೭/೫ ರ ಪದ ಪ್ರಯೋಗ.ಒಂದೆರಡು ಸಿಲೆಬಲ್ ಹೆಚ್ಚು ಕಡಿಮೆಯಾದರೆ ಹೊಸ ಹೊಳವು, ಹೊಸ ಅರ್ಥ ಮೂಡಬಹುದಾದರೂ ಆ ಚೌಕಟ್ಟು ದಾಟುವಂತಿಲ್ಲ. ಅದು ದಾಟಿದರೆ ಅದು‌ ನಾನ್ ಸಿಲೆಬಲ್ ಹೈಕು ಆಗಿ ಪರಿಗಣಿಸಲಾಗುವುದು. ಹಾಗೇ ಬರೆಯುವ ಅನೇಕ ಪ್ರಯೋಗಶೀಲ ಲೇಖಕರು ಆ ಜಪಾನಿನಲ್ಲೂ ಇದ್ದಾರೆ, ನಮ್ಮಲ್ಲೂ ಇದ್ದಾರೆ.ನವೋದಯದ ನಂತರ ಬಂದ ನವ್ಯ, ಬಂಡಾಯ,ದಲಿತ ಕಾವ್ಯದಂತೆ ಈ ಜಪಾನಿ ಕಾವ್ಯದ‌ ಸಾಂಪ್ರದಾಯಿಕ ಛಂದಸ್ಸು ದಾಟಿದವರು ಅಲ್ಲೂ ಉಂಟು. ಇಲ್ಲಿಯು ಉಂಟು.ಅದನ್ನು ಯಾವುದೇ ದೇಶದ ಸಾಹಿತ್ಯದ ಸಂದರ್ಭದಲ್ಲಿಯು ನಿರಾಕರಿಸಲಾಗದು.     ಈ ಹದಿನೇಳು‌ ಸಿಲೆಬಲ್ ಒಂದೇ ಸಾಲಿನಲ್ಲಿ ಬರೆಯುವವರು ಉಂಟು.ಮೊದಲು ಏಳು,ನಂತರ ಐದು ಐದು ಬರೆಯುವವರುಂಟು.ಒಟ್ಟಾರೆ ಹದಿನೇಳು ಸಿಲೆಬಲ್ ಸಾಕು ಅಂತ ನಾಲ್ಕು ಸಾಲು ಮಾಡಿರುವ‌ ಪ್ರಯೋಗ ಶೀಲರು ಉಂಟು.ಈ ಯಾವುವೂ ಈಗ್ಗೆ ಮೊದಲು ಅಲ್ಲ. ಕೊನೆಯವು ಅಲ್ಲ.ಆಯಾ ಲೇಖಕನ ಮನಸ್ಥಿತಿಯ ಮೇಲೆ ಹೋಗಲಿದೆ.ಕೆಲವರು ಸಾಂಪ್ರದಾಯಿಕ ಗಜಲ್ ಬರೆದಂತೆ ನಿಯಮಾವಳಿ ಪ್ರಕಾರ ಬರೆವವರುಂಟು.ಕೆಲವರು ತಾವು ನಡೆದಿದ್ದೆ ದಾರಿ ಅಂತ ಹೋಗುವುದುಂಟು. *ಅಂತಹ ಕೆಲವು ಮುಖ್ಯ ಹೈಕು ಗಮನಿಸಬಹುದು.* *ಕುಮಾರಿಗೆ**ಬೆಳಕಿನ ಸೀರೆ ತರುವುದಿದೆ**ಬರುವಿರಾ* ( *ಚಂದ್ರಕಾಂತ ಕುಸನೂರು* )@*ಹಕ್ಕಿಯ ಎರಡು ರೆಕ್ಕೆಗಳು**ಹೂವಿಗೂ**ದಕ್ಕಲಿ* ( *ಹೆಬ್ಬಸೂರು ರಂಜಾನ್*  )@ಆದರೆ ಬಹುತೇಕ ಈ ಜಪಾನಿ ಕಾವ್ಯ ಮೊದಲ ಸಾಲಿನಲ್ಲಿ ಐದು ಅಕ್ಷರ.ಎರಡನೇ ಸಾಲಿನಲ್ಲಿ ಏಳು ಅಕ್ಷರ.ಮತ್ತು ಮೂರನೇ ಕೊನೆಯ ಸಾಲಿನಲ್ಲಿ ಐದು ಅಕ್ಷರಗಳಲ್ಲಿ ರಚಿಸಲ್ಪಡುವ ಒಂದು ವಿಶಿಷ್ಟ ಕಾವ್ಯ ಪ್ರಕಾರವಾಗಿ ಜನಪ್ರಿಯಗೊಂಡಿದೆ.ಜಪಾನಿಗರು ಅದನ್ನು ಕಟ್ಟು ನಿಟ್ಟಾಗಿ ಅನುಸರಿಸುತ್ತಾರೆ.ಬಹುತೇಕರು ಕನ್ನಡದಲ್ಲಿ (ನನ್ನನೂ ಒಳಗೊಂಡು) ಅದೇ ಸಾಂಪ್ರದಾಯಿಕ ಸಿಲೆಬಲ್ ಹಾಗೂ ಮೂರೇ ಸಾಲಿಗೆ ಅಂಟಿಕೊಂಡು ಬರೆದಿದ್ದಾರೆ. ಬರೆಯುತ್ತಲೂ ಇದ್ದಾರೆ.ಇತರ ರೀತಿಯಲ್ಲಿ ಬರೆದು ಸಹ ಹೈಕು ಗೆ ತಮ್ಮದೇ ನ್ಯಾಯ ಒದಗಿಸಿದವರು ಸಹ ಇದ್ದಾರೆ. ಯಾವುದೇ ಒಂದು ಕಾವ್ಯ ಪ್ರಕಾರ ನಿಂತ ನೀರಾಗಿ ಪಾಚಿಗಟ್ಟಬಾರದು.ಪ್ರಯೋಗಕ್ಕೆ ಒಳಪಡಿಸುವುದು ಜೀವಂತಿಕೆಯ ಲಕ್ಷಣ. *ಈ ಕೆಳಗಿನ ಹೈಕು ೧೭ ಸಿಲೆಬಲ್ ಗೆ ಗಮನಿಸಬಹುದು* @ *ಬೆತ್ತಲೆ ಮನ**ಹರಿದ ಬಿಸಿರಕ್ತ**ಕೆಂಪು ಕಣ್ಣೀರು*  ( *ಡಾ.ಕೆ.ಬಿ.ಬ್ಯಾಳಿ* ) @ *ಉನ್ಮಾದವಿಲ್ಲ* *ಗಂಧದ ಕೊರಡಿಗೆ* *ಕಣ್ಣೀರಧಾರೆ*  ( *ಮಹಿ ಮುನ್ನೂರು* )@*ಮಳೆಯ ಹನಿ**ಮರು ಜೀವ ನೀಡಿತು**ಬಾಳ ಬಳ್ಳಿಗೆ* ( *ಭಾರತಿ ರವೀಂದ್ರ*  ) ಇಂತಹ ಹಲವು ಹೈಕು ನನ್ನವು ಈ ಕೆಳಗಿವೆ.ತಾವು ಅಧ್ಯಯನದ ದೃಷ್ಟಿಯಿಂದ ಗಮನಿಸಬಹುದು.@ *ಪ್ರೀತಿ ಪ್ರೇಮಕೆ**ಏರು ಇಳುವಿಲ್ಲವು**ಸಮುದ್ರವದು*@ *ಪೂಜೆಗೆಂದು ನಾ**ಹೂವು ಮುಡಿಸಲೋದೆ**ಆ ದೇವನಕ್ಕ*@ *ಬೆಳಗಾಯಿತು**ಹೂವು ಕೀಳಲು ನಾನು**ದುಂಬಿ ರೇಗಿತು*@ *ಬಯಕೆ ಬೀಜ**ಹದದಿ ಬಿತ್ತಿಹಳು**ಕಾಯ ! ಬೇಕಿಗ*@ *ನಿರ್ಮೋಹಿ ಸಂಗ**ಬಯಸಿದವನಿಗೆ**ನಿಸ್ಸಂಗ ವರ*@ *ಹೃದಯ ಭಾಷೆ**ಕಣ್ಣುಗಳಿಗೆ ಬೇಕೆ**ಮನಸ್ಸು ಸಾಕು*@ *ಚೆಲುವಿಗಲ್ಲ**ಒಲವಿಗಾಗಿ ಎಲ್ಲ**ಮರೆತು ಹೋದ*@ *ನಿರಾಭರಣೆ**ಅತಿ ಸುಂದರವವು**ಜೋಡಿ ಕಂಗಳು*@ *ಮೊಡಗಟ್ಟಿದೆ**ಬಾನಲಿ ಮತ್ತೆ ಮತ್ತೆ**ನಿನ್ನ ನೆನಪು*@ *ಜಗದೆಲ್ಲೆಡೆ**ಪ್ರೀತಿ ತುಂಬಬೇಕಿದೆ**ಮಾತ್ಸರ್ಯವಲ್ಲ*  @  *ಹಸಿವು ತೃಷೆ* *ನೆಲದೆಡೆಗೆ ನೋಡು*   *ಹಿಂಗಿಸುವನು*  @ ಈ ಹೈಕುಗಳು ಕೇವಲ ಮೂರೇ ಸಾಲಿನವು. ಮೊದಲ ಸಾಲಿನಲ್ಲಿ ೫, ಎರಡನೆಯ ಸಾಲಿನಲ್ಲಿ ೭ ಮತ್ತು ಮೂರನೆಯ ಸಾಲಿನಲ್ಲಿ ೫ ಅಕ್ಷರಗಳು.ಜಪಾನಿಗರು ಈ ನಿಯಮ ಚಾಚು ತಪ್ಪದೆ ಪಾಲಿಸುತ್ತಾರೆ.ಈ ರಚನೆಗಳಲ್ಲಿ ಪ್ರಾಸದ ಬಗ್ಗೆ ಯಾವ ಗೊಂದಲವಿಲ್ಲ.ಪ್ರಾಸ್ ಒಟ್ಟು ಅರ್ಥಕ್ಕೆ ಹೊಸ ಹೊಳಹು ಹಾಗೂ ಪಂಚ್ ಕೊಡುವಂತಿದ್ದರೆ ಬಳಸುವುದಕ್ಕೆ ಯಾರ ಅಭ್ಯಂತರ ಇಲ್ಲ. ಅದು ಆಯಾ ಲೇಖಕನ ಪದ ಸಂಪತ್ತಿನ ಸಾಮರ್ಥ್ಯದ ಮೇಲೆ ಹೋಗುತ್ತದೆ. ಹೈಕುಗಳ ಪದ ವಿನ್ಯಾಸ ಅಥವಾ ಜನಪ್ರಿಯ ಆಕೃತಿಯ ದೃಷ್ಟಿಯಿಂದ ನೋಡುವುದಾದರೆ ಅದು ಐದು,ಏಳು,ಐದು ಅಕ್ಷರಗಳು ಹೊಂದಿದ ಸಾಲುಗಳು ಆಗಿರಬೇಕು.ಕನ್ನಡದ ಮನೋಧರ್ಮಕ್ಕೂ ಜಪಾನಿ ಭಾಷೆಯ ಮನೋಧರ್ಮ ಕ್ಕೂ ಬಹಳ ವ್ಯತ್ಯಾಸವಿದೆ. ಜಪಾನಿ ಭಾಷೆ ಸ್ವರ ಬದ್ಧವಾದ ಭಾಷೆ ಆಗಿದೆ.ನಾವು ಇಲ್ಲಿ ಕಣ್ಣಿಗೆ ಕಾಣುವ‌ ಅಕ್ಷರ ಎಣಿಸಿದರೆ ಅವರು ಉಚ್ಚಾರದಲ್ಲಿ ಬರುವ ಘಟಕಗಳನ್ನು  ಲೆಕ್ಕ ಹಾಕುತ್ತಾರೆ.ಆ ಹಿನ್ನೆಲೆಯಲ್ಲಿ ಅವರ ಸಿಲೆಬಲ್ ಗ್ರಹಿಕೆ ಕನ್ನಡದ ಜಾಯಮಾನಕ್ಕೆ ಸ್ವಲ್ಪ ಬದಲಾಗೋದು‌ ಸಹಜವಾಗಿದೆ.ಉಚ್ಚಾರಣೆಯಲ್ಲಿ ಬಳಕೆಯಾದ ಅಕ್ಷರಗಳನ್ನು ಅವರು ಗ್ರಹಿಸುತ್ತಾರೆ. ಉದಾಹರಣೆಗೆ ಕೌ…ಒಂದೇ ಅಕ್ಷರ.ಜಪಾನಿಗರ ದೃಷ್ಟಿಯಿಂದಇಂಗ್ಲಿಷ್ ನಲ್ಲಿ Cow  ಮೂರು ಅಕ್ಷರ.ಕನ್ನಡದಲ್ಲಿ ಕವ್ ಎರಡು ಅಕ್ಷರ.ಹೀಗೆ ಒಂದೇ ಉಚ್ಚಾರಣೆಯಲ್ಲಿ ಉಚ್ಚರಿಸಲ್ಪಡುವ

“ಹಾಯಿಕು ಅಂದ್ರೆ ಏನು? ಎಂದು ಒಂದಷ್ಟು ಪರಿಚಯಾತ್ಮಕ ಮಾತು ಕಥೆ” ಡಾ.ಸಿದ್ದರಾಮ ಹೊನ್ಕಲ್ Read Post »

ಕಾವ್ಯಯಾನ

ಎನ್. ಜಯಚಂದ್ರನ್ ದಾಂಡೇಲಿ ಅವರಕವಿತೆ “ಮುಖವಾಡದ ಅಕ್ಷರ ಭಕ್ಷಕ”

ಕಾವ್ಯ ಸಂಗಾತಿ ಎನ್. ಜಯಚಂದ್ರನ್ ದಾಂಡೇಲಿ “ಮುಖವಾಡದ ಅಕ್ಷರ ಭಕ್ಷಕ” ಪದಗಳ ಹಬ್ಬವನ್ನು ಆಚರಿಸುವಂತೆಮುಖದಲ್ಲಿ ಮೃದು ನಗು ಮೂಡಿಸಿದ  ಅಕ್ಷರ ಭಕ್ಷಕನಿವನು ಅಂತರಂಗದ ಕತ್ತಲಲ್ಲಿಕಪಟದ ಬೀಜಗಳನ್ನು  ಬಿತ್ತಿದವನು. ಕವಿಗಳ ನಡುವೆ ಕವಿಯಂತೆ ನಿಂತುಸುಳ್ಳಿನ  ಧ್ವನಿಯನ್ನು ಸತ್ಯದಂತೆ ಹೊಗಳಿದವನು  ಒಳಗೊಳಗೆಸ್ವಾರ್ಥದ ಮನೆಗೆ ದೀಪ ಹಚ್ಚಿಕೊಂಡವನು . ಸಾಹಿತ್ಯದ ವೇದಿಕೆಯನ್ನುಸತ್ಯದ ಮಂಟಪವೆಂದು ನಟಿಸುತ್ತಾ ವೇದಿಕೆಯಲ್ಲಿಮೋಸದ ನರ್ತನ  ಮಾಡಿದವನು. ಪದಗಳ ಮಧುರತೆಯ ಹಿಂದೆವಂಚನೆ ,ದರ್ಪ ವಿಷವನ್ನು ಮರೆಮಾಡಿ,ಪರರ ಪ್ರತಿಭೆಯ ನೆರಳಲ್ಲಿತನ್ನ ಹೆಸರಿನ ಗೂಟವನ್ನುತನ್ನ ಸುತ್ತಲಿದ್ದವರಿಗೆ ಜಡಿದವನು ಸಾಹಿತ್ಯದ ತೇರಲ್ಲಿಮನೆಯ ಜೋಳಿಗೆ ತುಂಬಿ ಕೊಂಡವನು,  ಅಕ್ಷರ ಉದ್ಧಾರದ  ಹೆಸರಲ್ಲಿ ಸ್ವಂತ ಜಾತ್ರಿ ಮಾಡಿಕೊಂಡವನು ಪದಗಳ ಪಗಡೆಯನ್ನೇರಾಜಕೀಯದ ಚದುರಂಗ ಮಾಡಿದವನು. ಒಂದು ದಿನ ಸತ್ಯದ ಸೂರ್ಯಮುಖವಾಡಗಳನ್ನೆಲ್ಲ ಕರಗಿಸಿದಾಗ, ಸಾಹಿತ್ಯದ  ಮಂದಿರದಲ್ಲಿ  ಒಂದುಕಪಟತನ ಕಳಚಿದಾಗ  , ಬೆತ್ತಲಾಗಲು ಸಜ್ಜಾದವನು !! ಅಂಥದೊಂದು ದಿನಅಕ್ಷರ  ಆಲಯದಲ್ಲಿನಿಜವಾದ ಮನಸ್ಸುಗಳುಹೊಸ ಕಾವ್ಯವಾಗಿ  ಬೆಳಗುವವು. ಎನ್. ಜಯಚಂದ್ರನ್ .ದಾಂಡೇಲಿ

ಎನ್. ಜಯಚಂದ್ರನ್ ದಾಂಡೇಲಿ ಅವರಕವಿತೆ “ಮುಖವಾಡದ ಅಕ್ಷರ ಭಕ್ಷಕ” Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-17 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಕುದುರೆ ಸಂಚಾರಕ್ಕೆ ಸಂಚಕಾರವಾಯಿತು ಆ ಶಿಲೆ! ಈಗ ನಮ್ಮ ಜೊತೆ ನೀಲಧ್ವಜನೂ ಸೇರಿಕೊಂಡಿದ್ದ. ತೆಂಕುದಿಕ್ಕಿನೆಡೆಗೆ ಹೆಜ್ಜೆ ಹಾಕುತ್ತಿತ್ತು ಹಯ. ಮುಂದೆ ಕಾಣುತ್ತಿದ್ದದ್ದು ವಿಂಧ್ಯಾ ಪರ್ವತ. ನಮ್ಮ ಅವಿರತ ಚಲನೆಯನ್ನು ಕಂಡೂ ಚಲನೆಗೆ ಮನಸ್ಸು ಮಾಡದೆ ದೃಢತೆಯೇ ಮೈವೆತ್ತ ಬಗೆಯಲ್ಲಿತ್ತು ಅದರ ನಿಲುವು. ಶೃಂಗವಿತ್ತು. ಕಂದರವಿತ್ತು. ಮಂಜು ಮುಸುಕಿತ್ತು. ಕಾಡು ಬೆಳೆದಿತ್ತು. ಅರಣ್ಯವನ್ನೇ ಆಶ್ರಯಿಸಿಕೊಂಡಿದ್ದ ಜನರನ್ನು ಕಂಡೆವು. ಬಗೆಬಗೆಯ ಪಕ್ಷಿಗಳು ಅಲ್ಲಿದ್ದವು. ವಿಧವಿಧದ ಪ್ರಾಣಿಸಮೂಹಗಳಿದ್ದವು. ಹಾಗೆಯೇ ಮುಂದೆ ಹೋಗುತ್ತಿದ್ದಂತೆ ಋಷಿಗಳ ಆಶ್ರಮಗಳು ಕಣ್ಣಿಗೆ ಕಂಡವು.ವಿಂಧ್ಯಾ ಪರ್ವತದೊಳಗನ್ನು ಪ್ರವೇಶಿಸಿದೆವು. ಕುದುರೆಯನ್ನು ಕೂಡಿಕೊಂಡ ನಾವು, ಕೃಷ್ಣ ಕಿಂಕರರು, ಕಾಲಿಟ್ಟ ಒಡನೆಯೇ ಅಚ್ಚರಿ ಹುಟ್ಟಿಸುವ ಪರಿವರ್ತನೆಗೀಡಾಯಿತು ಆ ಪರ್ವತ ಪ್ರದೇಶ. ದುರ್ಗಮವಾಗಿದ್ದ ದಾರಿಯದು ಸುಗಮವಾಗಿ ತೋರಿತು. ಅದುವರೆಗೂ ನೆಲೆಸಿದ್ದ ಕತ್ತಲು ತೊಲಗಿ ಬೆಳ್ಳನೆಯ ಬೆಳಕು ಮೂಡಿಬಂತು. ನಾವೆಲ್ಲರೂ ಕುದುರೆಯ ಜೊತೆಜೊತೆಗೇ ಇದ್ದೆವು. ತನ್ನ ಇಚ್ಛೆಯನುಸಾರ ಸಾಗುತ್ತಿತ್ತು ಆ ಕುದುರೆ. ಮುಂದೆ ಮುಂದೆ ಹೋದಾಗ ಎದುರಾದದ್ದು ಅತೀವ ವಿಸ್ತಾರದ ಒಂದು ಶಿಲೆ. ಒಂದು ಯೋಜನದಷ್ಟು ಅಗಲವಿದ್ದಿರಬಹುದು ಅದು. ಅದರ ಮೇಲೆಯೂ ನಡೆಯುವೆ ತಾನು ಎಂಬAತೆ ಕಾಲುಗಳನ್ನಿಟ್ಟಿತು ಕುದುರೆ.ಸ್ವಚ್ಛಂದವಾಗಿ ಸಂಚರಿಸುತ್ತಿದ್ದ ಅಶ್ವದ ಸುಗಮ ಸಂಚಾರಕ್ಕೆ ಸಂಚಕಾರ ಎದುರಾದದ್ದು ಆಗಲೇ. ಕಾಲುಗಳನ್ನು ಮೇಲಕ್ಕೆ ಎತ್ತಲಾಗದ, ಎತ್ತಿ ಮುಂದಿಡಲಾಗದ ಸ್ಥಿತಿಯಲ್ಲಿ ಕುದುರೆ ಅಲ್ಲಿಯೇ ನಿಂತುಬಿಟ್ಟಿತು. ಆ ಶಿಲೆಗೆ ಅದರ ಕಾಲುಗಳು ಅಂಟಿಕೊAಡಿವೆಯೋ ಏನೋ ಎಂಬAತೆ ತೋರುತ್ತಿತ್ತು. ನಡೆಯುವುದನ್ನೇ ಮರೆತಂತೆ ಅದು ಅಲ್ಲಿಯೇ ನಿಂತಿತು. ಪೌರ್ಣಮಿಯಂದು ಚಂದ್ರಾಕೃತಿಯ ಒಳಗೆ ಮೊಲವೊಂದು ತಟಸ್ಥವಾಗಿ ತೋರುವಂತೆ ಅಗಲಗಲವಾಗಿದ್ದ ಶಿಲೆಯ ಮೇಲೆ ಈ ಕುದುರೆ ಅಚಲವಾಗಿ ನಿಂತಿತ್ತು. ಗಾಳಿಯ ವೇಗವನ್ನೂ ಮೀರಿ ನಡೆಯುವ ಕುದುರೆ ಈ ಬಗೆಯಲ್ಲಿ ನಿಂತುದನ್ನು ಕಂಡಾಗ ಆಶ್ಚರ್ಯವಲ್ಲದೆ ಇನ್ನೇನು ತಾನೇ ಆಗಲು ಸಾಧ್ಯ!ಕುದುರೆ ಚಲಿಸಲೇಬೇಕಿತ್ತು. ಅದು ಚಲಿಸದೆಯೇ ನಾವು ಚಲಿಸುವಂತಿರಲಿಲ್ಲ. ಚಲಿಸಿದರೂ ಅದಕ್ಕೇನೇನೂ ಸಾರ್ಥಕತೆಯಿರಲಿಲ್ಲ. ಬದುಕು ಎಂದರೆ ಕೆಲವೊಮ್ಮೆ ಹೀಗೆಯೇ. ಇನ್ನೊಬ್ಬರ ಚಲನೆಯಿದ್ದರೆ ಮಾತ್ರ ನಮ್ಮ ಚಲನೆಗೆ ಅರ್ಥವಿರುತ್ತದೆ.ಜೊತೆಗಿದ್ದ ಸೇವಕರನ್ನು ಕುದುರೆಯ ಬಳಿಗೆ ಅಟ್ಟಿದೆ. ಕುದುರೆಯ ಕಾಲುಗಳನ್ನು ಬಿಡಿಸಲು ಹೇಳಿದೆ. ಅಳವು ತೋರಿದ ಆಳುಗಳು ಸೋತು ಅಳುಮೋರೆ ಮಾಡಿದರು.ಏನಾಯಿತಿದು! ಕುದುರೆಗೇಕೆ ಇಂತಹ ದುರವಸ್ಥೆ! ಅದು ಚಲಿಸದಿದ್ದರೆ ಮುಂದಿನ ತಾಣವನ್ನು ಸೇರುವ ಬಗೆ ಹೇಗೆ! ಅಶ್ವಮೇಧ ಯಾಗದ ಗತಿಯೇನಾಯಿತು! ಎಂದೆಲ್ಲಾ ಚಿಂತೆ ಮಾಡಿದ ನನಗೆ ಹೊಳೆದ ಯೋಚನೆ ಮುನಿಶಾಪದ್ದು. ಯಾರೋ ಮುನಿಗಳ ಶಾಪದ ಫಲವೇ ಇದಾಗಿರಬೇಕು ಎನಿಸಿತು. ತಿಳಿದ ಹಿರಿಯರಲ್ಲಿ ಕೇಳಿದರೆ ಒಳಿತು ಎನಿಸಿತು.“ಈ ಸ್ಥಳದಲ್ಲಿ ಸುತ್ತಮುತ್ತ ಋಷಿಗಳ ಆಶ್ರಮವಿದೆಯೇ ಎಂದು ನೋಡಿಬನ್ನಿ” ಎಂದು ಸೇವಕರನ್ನು ಕಳುಹಿಸಿಕೊಟ್ಟೆ. ತಾಣವನ್ನು ಸುತ್ತಾಡಿದ ಅವರು ಸ್ವಲ್ಪ ಸಮಯದಲ್ಲಿಯೇ ನನ್ನ ಬಳಿಬಂದು ಹತ್ತಿರದಲ್ಲಿಯೇ ಒಂದು ಆಶ್ರಮ ಇರುವುದಾಗಿ ಹೇಳಿದರು. ಪ್ರದ್ಯುಮ್ನ, ವೃಷಕೇತು, ಸಾಲ್ವಪತಿ, ಯೌವನಾಶ್ವ, ನೀಲಧ್ವಜ ಇವರೆಲ್ಲರನ್ನೂ ಜೊತೆ ಸೇರಿಸಿಕೊಂಡು ಆ ಆಶ್ರಮವಿದ್ದೆಡೆಗೆ ಹೊರಟೆ. ಹೋಗಿ ತಲುಪಿದೆ.ಶ್ರೇಷ್ಠ ಋಷಿಗಳು ಇರುವ ಪ್ರದೇಶವದು ಎನ್ನುವುದು ಆ ಪರಿಸರವನ್ನು ಈಕ್ಷಿಸಿದಾಗಲೇ ಗೊತ್ತಾಗುವಂತಿತ್ತು. ಬಗೆಬಗೆಯ ಮೃಗಗಳು ಪಕ್ಷಿಗಳು ತಮ್ಮ ವೈರತ್ವವನ್ನು ಮರೆತು ಅನುರಾಗ ಭಾವದಲ್ಲಿ ಸೊಗ ಕಂಡುಕೊಂಡಿದ್ದವು. ಅಗ್ನಿ, ವಾಯು, ಚಂದ್ರ, ವರುಣ ಮೊದಲಾದ ದೇವಾನುದೇವತೆಗಳು ಅಲ್ಲಿ ನೆಮ್ಮದಿಯಿಂದ ನೆಲೆಸಿದ್ದರು. ಅಲ್ಲಿದ್ದ ಎಲ್ಲಾ ಗಿಡ ಮರಗಳಲ್ಲಿಯೂ ಕಾಯಿ ಹಣ್ಣುಗಳ ಸಮೃದ್ಧಿ. ಬಂದವರು ಬಯಸಿದ್ದನ್ನು ಯಾವಾಗಲೂ ನೀಡಲು ಸಿದ್ಧವಾಗಿ ನಿಂತಂತೆ ತೋರುತ್ತಿತ್ತು ವೃಕ್ಷ ತರುಗಳು ನಿಂತ ಭಂಗಿ. ಸದಾಕಾಲವೂ ಸುಗ್ಗಿಯ ಕಾಲ ಎಂಬAತೆ ಪ್ರಕೃತಿ ಕಾಣಿಸುತ್ತಿತ್ತು. ಸುಖದ ಕೊರತೆಯಿದ್ದರೆ ತಾನೇ ದುಃಖ ಹುಟ್ಟುವುದು! ದುಃಖ ಉದ್ಭವಿಸಲು ಅಲ್ಲಿ ಅವಕಾಶವೇ ಇರಲಿಲ್ಲ. ಸುಖವೇ ಎಲ್ಲಾ.ಆಶ್ರಮದ ಒಂದೆಡೆಯಲ್ಲಿ ಒಂದಷ್ಟು ಮುನಿಗಳು ವೇದ ಆಗಮ ಶಾಸ್ತç ಪುರಾಣಗಳ ಪ್ರವಚನ, ಅಧ್ಯಯನದಲ್ಲಿ ನಿರತರಾಗಿದ್ದರು. ಇನ್ನೊಂದಷ್ಟು ಋಷಿಗಳು ಜಪ ತಪಸ್ಸನ್ನು ಗೈಯ್ಯುತ್ತಾ, ಪರಮಾತ್ಮ ಸ್ಮರಣೆಯಲ್ಲಿ ಪವಿತ್ರಾನುಭವ ಪಡೆಯುತ್ತಿದ್ದರು. ಸೂರ್ಯ ನಮಸ್ಕಾರ, ಹರಿಹರ ಸಮಾರಾಧನೆ, ಯೋಗ ಸಾಧನೆ ಮೊದಲಾದವು ನಡೆಯುತ್ತಿದ್ದವು. ಅತಿಥಿಗಳನ್ನು ಆದರದಿಂದ ಸತ್ಕರಿಸುವುದರಲ್ಲಿ ತಲ್ಲೀನರಾಗಿದ್ದರು ಕೆಲವರು.ಆಗಲೇ ನನ್ನ ಕಣ್ಣನ್ನು ಕಾಡಿದ್ದು ತೇಜೋಮಯವಾದ ಒಂದು ದಿವ್ಯಕಾಯ. ಶಾಂತಭಾವವೇ ಮೂರ್ತರೂಪ ಪಡೆದಂತೆ ಕುಳಿತಿದ್ದರು ಮುನಿಶ್ರೇಷ್ಠರೆನಿಸಿಕೊಂಡ ಸೌಭರಿ ಮುನಿಗಳು. ಅಗ್ನಿಯಂತಹ ಪ್ರವರ್ಧಮಾನವಾದ ಬೆಳಕಿನಿಂದ ಕಂಗೊಳಿಸುತ್ತಿದ್ದರು. ಆದರೆ ಸುಡುವವರಲ್ಲ. ಸೂರ್ಯನಂತೆ ಕಾಂತಿಮಯವಾಗಿದ್ದರು. ಆದರೆ ಮೈಸುಡುವ ಬಿಸಿ ಅವರದ್ದಲ್ಲ. ಜಟೆಯನ್ನು ಹೊತ್ತಿದ್ದವರು ಶಿವನಂತೆ ತೋರುತ್ತಿದ್ದರು. ಆದರೆ ನಂಜಿನ ಕಂಠ ಅವರದ್ದಲ್ಲ.ಸಾಷ್ಟಾಂಗ ನಮಸ್ಕರಿಸಿದೆ ಅವರಿಗೆ. ಅಶ್ವಮೇಧ ಯಾಗದ ವಿಚಾರ ಅರುಹಿದೆ. ಈಗ ಕುದುರೆ ಶಿಲೆಯ ಮೇಲೆ ಕಾಲಿಟ್ಟು ತಟಸ್ಥವಾದ ವಿಷಯ ತಿಳಿಸಿದೆ. “ನಿಮ್ಮ ಮಾರ್ಗದರ್ಶನ ಬೇಕು” ಎಂದೆ.ನನ್ನನ್ನು ಲೇವಡಿ ಮಾಡುವ ನಗು ಅವರ ಮೊಗದಲ್ಲಿ ಮೂಡಿತು. ಈ ಪರಿಯ ನಗುವದೇತಕೆ! ಅರ್ಥವಾಗಲಿಲ್ಲ. ಅವರ ಮುಖವನ್ನೇ ನೋಡಿದೆ. ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

You cannot copy content of this page

Scroll to Top