ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ತಾ ಪಾಲಿಸದೇ ಇತರರಿಗೆ ಉಪದೇಶ ನೀಡುವುದು ವ್ಯರ್ಥಇತರರಿಗೆ ಹೋಲಿಸಿಕೊಂಡು ಬಾಳ್ವೆ ಮಾಡುವುದು ವ್ಯರ್ಥ ಆಕಾಶದಲ್ಲಿ ಹಕ್ಕಿ ನೀರಲ್ಲಿ ಮೀನು ಬದಲಾಗಬಾರದು ಸ್ಥಾನಅವರು ಇವರಂತೆ ನಾನಾಗುವೆನೆಂದು ಆಡುವುದು ವ್ಯರ್ಥ ಯಾರ ಮೆಚ್ಚುಗೆಗೋ ಇಚ್ಛೆಗೋ ಬಲಿಯಾಗದಿರಲಿ ಬಾಳುಇಂದು ಗೈಯುವ ಕಾಯಕವ ನಾಳೆಗೆ ದೂಡುವುದು ವ್ಯರ್ಥ ಕುಣಿಯೋವಾಗ ಜೊತೆಗಿದ್ದವರು ಕೊನೆತನಕ ಬರಲಾರರುಅವರಿವರನ್ನು ನಂಬಿಕೊಂಡು ಹೆಜ್ಜೆಯ ಇಡುವುದು ವ್ಯರ್ಥ ಕುಂಬಾರ ಕಂಡಿದ್ದು ಸಾಸಿವೆ ಕಾಣಬೇಕಿರುವುದು ಸಾಗರವೇಮರೀಚಿಕೆಯ ಬೆನ್ನತ್ತಿ ಸುಮ್ಮನೆ ಕಾಲ ದೂಡುವುದು ವ್ಯರ್ಥ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಹೊಸ ಗಜಲ್ Read Post »

ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಕವಿತೆ “ಒಲವಿನಾಸರೆ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ “ಒಲವಿನಾಸರೆ” ಬರಡು ಬಿರುಕು ನೆಲಕೆ   ,ನೀ ತಂದೆ ಪ್ರೀತಿಯಸ್ನೇಹ ಸಿಂಚನ.ಕತ್ತಲೆಯ ಹಾದಿಯಲಿ ಕೈಹಿಡಿದು,ಬೆಳಗಿಸಿದೆ ಒಲವಿನಶುಭ್ರ ಹಗಲನು. ಸೋತು ಕುಳಿತಾಗ ಸನಿಹ ಬಂದು,ನೀನಾದೆ ಒಲವಿನಾಸರೆ.ನಿನ್ನ ನಗುವಿನ ಮುಗ್ಧ ನೋಟಕೆ,ಕರಗುವುದು ಮನದ  ಬೇಸರ. ಮಾತುಗಳೇ ಇಲ್ಲದ ಮೌನದಲ್ಲೂ,ಭಾವನೆಗಳ ಅರಿತ ಜೀವ ನೀನು.ಕೋಟಿ ಜನ್ಮದಪುಣ್ಯದಂತೆ ಸಿಕ್ಕ,ನನ್ನ ಬಾಳಿನ ಬೆಳಕು ನೀನು.  ಇದ್ದು ಬಿಡು   ಜೊತೆಯಾಗಿ,ಕೊನೆಯವರೆಗೆಇರಲಿ ಈ ಪ್ರೀತಿಯ  ಭಾವ ಬಂಧನ.ನಿನ್ನೊಲವಿನ ಆಸರೆಯ ನೆರಳಲ್ಲೇ,ಸಾಗಲಿ ನನ್ನೀ ಜೀವನ.  ಉಷಾರಾಣಿ ಗುರುಪ್ರಸಾದ್

ಉಷಾರಾಣಿ ಗುರುಪ್ರಸಾದ್ ಕವಿತೆ “ಒಲವಿನಾಸರೆ” Read Post »

ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಜಗವ ಗೆದ್ದ ಜಾನಕಿ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಜಗವ ಗೆದ್ದ ಜಾನಕಿ” ವಸಂತ ಕಾಲದಲಿ ಹಸಿರಾದ ಕಾಡಿನಲಿ,ದಿನವೂ ಹಾಡುತಿದ್ದ ಕೋಗಿಲೆಯೊಂದು.ಇಂದು  ಮೌನವಾಗಿದೆ,ಸ್ವರ ಬಿಟ್ಟು ಮುಗಿಲುಸೇರಿತು ಮೆಲ್ಲಗೆ  ಯಾರ ದೃಷ್ಟಿ ಬಿತ್ತೋ ಚಂದದ ಧ್ವನಿಗೆ?ಯಾವ ಬೇಸರವಾಯಿತು ಮುಗ್ಧ ಮನಕೆ?ಹಾಡು ನಿಲ್ಲಿಸಿದ ಕೋಗಿಲೆಯ ಕಂಡು,ಕರೆದ ಕಾಗೆಯೂ ಮೂಕ ಪ್ರೇಕ್ಷಕ ದುಃಖದ ಕಡಲು . ಚಿಲಿಪಿಲಿ ಹಕ್ಕಿಗಳ ಕಲರವವೂ ನಿಂತಿದೆ,ತಂಗಾಳಿ ಬೀಸದೆಮಸಣ ಮೌನ.ಮರಗಿಡ ಕಾನನ ಕಣ್ಣೀರು ಇಡುತಿವೆ,ನಿನ್ನ ಗಾನ ಸುಧೆಗೆ  ಮತ್ತೆ ಕಾಯುತಿವೆ. ಕೋಗಿಲೆಯೇ ಏಕೆ  ಮೌನ?ಶಿಖರ ಬಾಗಿವುದು  ನಿನ್ನ ಸಾಧನ.ನಿನ್ನ  ಜಂಟಿ ಸ್ವರದ  ಕೂಗು,ಹಸಿರಾಗಿಸಲಿ ಒಣಗಿದ ತೋಟದಲಿ ಹೋಗಿ ಬಾ ತಾಯಿನಿನಗಿದೆ ಶೋಕದ ವಿದಾಯಜಗವ ಗೆದ್ದ ಜಾನಕಿನೀನಿಲ್ಲದೆ ಬಡವಾಯಿತುಸ್ವರ ಸಂಗೀತ ಮೂಕಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಜಗವ ಗೆದ್ದ ಜಾನಕಿ” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ “ಕೋಗಿಲೆ ಕರಗಿತು”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಕೋಗಿಲೆ ಕರಗಿತು” ಕೋಗಿಲೆ ಕರಗಿತುಕಾಡು ಮೌನವಾಗಲಿಲ್ಲ;ಅವಳ ಕಂಠದಿಂದ ಹರಿದರಾಗಗಳುಇನ್ನೂ ಗಾಳಿಯ ಎದೆಯಲಿ ತೇಲುತ್ತಿವೆ. ಸ್ವರವೆಂಬ ಗಂಗೆಯಲ್ಲಿಭಾವದ ದೀಪ ಹಚ್ಚಿದವಳುನೀನು;ನಗುವಿಗೂ ನಾದ ಕೊಟ್ಟೆ,ಅಳುವಿಗೂ ಆಲಾಪನೆಯರೂಪ ಕೊಟ್ಟೆ. ನಿನ್ನ ಕಂಠದ ಜೇನಿನಹನಿಗಳುಕೋಟಿ ಹೃದಯಗಳದಾಹ ನೀಗಿಸಿದವು;ಮುಗ್ಧ ಮಗುವಿನಲಾಲಿಯಾಗಿ,ತಾಯಿಯ ಮಮತೆಯತೊಟ್ಟಿಲಾಗಿ,ಪ್ರೇಮಿಗಳ ಕನಸಿನ ಭಾವವಾಗಿಭಕ್ತರ ಪ್ರಾರ್ಥನೆಯದೀಪವಾಗಿಅಮರಳಾದೆ ನೀನು. ನೀ ಹಾಡಿದಾಗಚಂದ್ರನು ಬೆಳದಿಂಗಳ ಹರಡಿದಮಲ್ಲಿಗೆ ತನ್ನ ಪರಿಮಳ ಸೂಸಿತು;ಗಾಳಿ ನಿಂತು ನಿನ್ನಆಲಾಪನೆಯನ್ನು ಆಲಿಸಿತು;ನದಿಯ ಅಲೆಗಳೂನಿನ್ನ ತಾಳಕ್ಕೆ ತಲೆದೂಗಿದವು. ನಿನ್ನ ರಾಗದ ಅಲೆಗಳಲ್ಲಿವಿರಹವು ಕಣ್ಣೀರಮುತ್ತಾಯಿತು;ಸಂತೋಷವು ನಗುವಿನ ಹೂವಾಯಿತು;ವೇದನೆಯೂ ಸಂಗೀತವಾಗಿ ಅರಳಿತು;ಮೌನವೂ ಮಧುರಗೀತೆಯಾಗಿ ಮೊಳಗಿತುಕಲ್ಲಿನ ಮೇಲೆ ಹೆಸರುಬರೆದವಳಲ್ಲಹೃದಯಗಳ ಮೇಲೆಸ್ವರಗಳಿಂದ ಶಾಶ್ವತ ಅಚ್ಚು ಹಾಕಿದವಳು ಕೋಗಿಲೆ ಕರಗಿತುಎನ್ನುವುದುಕಾಲದ ಮಾತು ಮಾತ್ರ;ಆದರೆ ನಿನ್ನ ಗಾನ ಬೆಳಗಿನ ಮೊದಲಹಕ್ಕಿಯ ಕೂಗಿನಂತೆ,ಸಂಜೆಯ ಮೃದುವಾದಗಾಳಿಯಂತೆ,ಮಳೆಹನಿಯ ಸಂಗೀತದಂತೆ,ಭಕ್ತಿಯ ದೀಪದಜ್ಯೋತಿಯಂತೆಯುಗಯುಗಕೂ     ಮೊಳಗುತ್ತಲೇ ಇರುವುದು. ಓ ಗಾನಸರಸ್ವತಿಯೇ!ನಿನ್ನ ಕಂಠ ಮೌನವಾದರೂನಿನ್ನ ಸ್ವರ ಅಮರವಾಗಿದೆ;ನಿನ್ನ ದೇಹ ದೂರವಾದರೂನಿನ್ನ ಸಂಗೀತನಮ್ಮ ಉಸಿರಾಗಿದೆ. ಕೋಗಿಲೆ ಕರಗಲಿಲ್ಲ…ಜಾನಕಿ ರಾಗವಾಗಿಆಕಾಶದಲ್ಲಿ ಬೆರೆತಳು;ಭಾವವಾಗಿ ಮನಗಳಲ್ಲಿನೆಲೆಸಿದಳು;ಸಂಗೀತವಾಗಿ ಕಾಲಾತೀತಳಾದಳು. ನಿನ್ನ ಅಮರ ಗಾನಕ್ಕೆಶತಶತ ನಮನಗಳು. ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಅವರ ಕವಿತೆ “ಕೋಗಿಲೆ ಕರಗಿತು” Read Post »

ಇತರೆ

“ಒಲವಿನ ಸ್ನೇಹದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ

ಪ್ರೇಮ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಒಲವಿನ ಸ್ನೇಹದ ಪ್ರೀತಿ” ಒಲವಿನ ಸ್ನೇಹದ ಪ್ರೀತಿ ಅಂದ್ರೆ  ಬೆಳಗ್ಗೆ ಎದ್ದು “ಚಹ ಕುಡಿದೆಯಾ?”ಅಂತ ಕೇಳೋ ಸ್ನೇಹಿತ/ತೆನೀನು ಸುಮ್ನೆ ಇದ್ದಾಗ “ಏನಾಯ್ತು?”ಅಂತ ಅರ್ಥ ಮಾಡ್ಕೊಳ್ಳೊ ಮೌನ.   ಒಲವಿನ ಪ್ರೀತಿ ಸ್ನೇಹ ಅಂದ್ರೆ  ನೀನು ಸೋತಾಗ “ಪರವಾಗಿಲ್ಲ,ಮತ್ತೆ ಪ್ರಯತ್ನಿಸು” ಅಂತ ಹೇಳೋ ಧೈರ್ಯನೀನು ಗೆದ್ದಾಗ ಮೊದಲು ಚಪ್ಪಾಳೆ ತಟ್ಟುವ ಕೈ.   ಅದು ಹೂವಿನ ಹಾಗೆ ಗೊತ್ತಾ ನಿನಗೆ ಜೋರಾಗಿ ಕೂಗಲ್ಲ, ಆದ್ರೆ ಅದರ ವಾಸನೆಗೆ ಮನಸ್ಸು ಹಗುರ ಆಗುತ್ತೆಅದು ದೇವರ ಮುಂದೆ ಹಚ್ಚಿದ ದೀಪದ ಹಾಗೆ,ಜೋರಾಗಿ ಉರಿಯಲ್ಲ,ಆದ್ರೆ ಕತ್ತಲಲ್ಲಿ ದಾರಿ ತೋರಿಸುತ್ತೆ.   ಒಲವಿನ ಪ್ರೀತಿ ಕೇಳಲ್ಲ ಏನೂ,  ಸ್ನೇಹಕ್ಕೆ ಕೊಡೋದಷ್ಟೇ ಗೊತ್ತುಮನಸ್ಸು ತುಂಬಾ ಇದ್ದಾಗ ಹಂಚಿಕೊಳ್ಳೋಕೆ ಭುಜ, ಮನಸ್ಸು.ಖಾಲಿ ಇದ್ದಾಗ ತುಂಬೋಕೆ ಮಾತು.   ಆ ಪ್ರೀತಿ ಇದ್ದರೆ ಸಾಕು ಸಖಿ/ಖ ಬದುಕು ಎಷ್ಟೇ ಕಷ್ಟ ಆದ್ರೂ ಎದೆಯ ಒಂದು ಬೆಚ್ಚಗಿನ ಮೂಲೆಯಲ್ಲಿ  ನಾನು ಸುರಕ್ಷಿತವಾಗಿರುತ್ತೇನೆಎಂಬ ಭಾವ ಸ್ನೇಹಿತ/ತೆ ಎನಿಸಿಕೊಂಡ ಎಲ್ಲರಿಂದಲೂ ಪಡೆಯಲು ಸಾಧ್ಯವಿಲ್ಲ. ಕಲ್ಪನಾ ಎಸ್ ಪಾಟೀಲಕಾವ್ಯಧರೆ

“ಒಲವಿನ ಸ್ನೇಹದ ಪ್ರೀತಿ” ಕಲ್ಪನಾ ಎಸ್‌ ಪಾಟೀಲ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ  ಅವರ ಕವಿತೆ “ಕಣ್ಣ ನೋಟ”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ  “ಕಣ್ಣ ನೋಟ” ರಾತ್ರಿ ನೀಲ ಗಗನದಲ್ಲೂ ಬಿಸೋ ಗಾಳಿ ಮಳೆಯಲ್ಲೂಚಂದಿರನು ಹೊಳೆಯುತಾನ.ನಿನ್ನ ಕಣ್ಣ ನೋಟದಾಂಗ ನನ್ನ ಹೃದಯ ಮಾತಿನಾಂಗಮನಸು ಸೇರಿ ಕನಸು ನೀಡುತಾವಾ… ಚುಕ್ಕಿ ಬೆಳಕ ಹೊಳಪಿನಲ್ಲೂ ಕಡಲ ತಟದ ತೀರದಲ್ಲೂಮನುಜ ಪ್ರೀತಿ ಕಾಣುತಾನಾ..ಒಲವ ಕಾಣೋ ಹೃದಯದಲ್ಲಿ ಮುತ್ತಿನಂತ ಮಾತಿನಲ್ಲಿನಗುವು ತಾನೇ ಮೂಡುತಾವ. ಬಳ್ಳಿ ಹೂವ ಕಾಣುವಾಗ ಮುಡಿಗೆ ತಾನೇ ಇರಿಸುವಾಗತನ್ನ ಚೆಲುವ ಬೀರುತಾವ…ಗೆಜ್ಜೆ ಶಬ್ದ ಮಾಡಿಕೊಂಡು ನೀಲ ಜಡೆಯ ಬೀಸಿಕೊಂಡುಬಿಂಕದಲ್ಲಿ ನಡೆಯುತಾವ… ಪಚ್ಚಾ ಪೈರು ಹುಲ್ಲಿನಲ್ಲೂ ಅರಳುತ್ತಿರುವ ಹೂವಿನಂತೆತನ್ನ ಸೊಗಸ ಚೆಲ್ಲುತಾವ..ಅವಳ ನಡೆಯ ನುಡಿಯಲ್ಲಿಸುಗಂಧ ಪರಿಮಳ ಬೀರುತಾವ… ಮನ್ಸೂರ್ ಮುಲ್ಕಿ 

ಮನ್ಸೂರ್ ಮುಲ್ಕಿ  ಅವರ ಕವಿತೆ “ಕಣ್ಣ ನೋಟ” Read Post »

ಕಾವ್ಯಯಾನ

ನಾಗರಾಜ ಬಿ. ನಾಯ್ಕ ಅವರ “ಕಥೆಗೆ ಒಂದು ಚಿತ್ರ……”

ಕಾವ್ಯ ಸಂಗಾತಿ ನಾಗರಾಜ ಬಿ. ನಾಯ್ಕ “ಕಥೆಗೆ ಒಂದು ಚಿತ್ರ……” ಚಿತ್ರ ಗೆರೆ ಬದುಕುಮೂರು ಒಂದು ಕಥೆಯ ದಾರಿಯಾರೋ ನಡೆದು ಹೋದಂತೆಇನ್ನಾರೋ ಹಿಂಬಾಲಿಸಿದಂತೆಕೆಲವು ಚಿತ್ರಗಳು ಮುಂದೆಓಡಿದಂತೆ ಕಾಲದ ಓಟಕ್ಕೆತೆಗೆವ ತರತರದ ಚಿತ್ರಗಳುಬಣ್ಣದ ಎಳೆಗಳ ಹೊದಿಕೆಕಾಣದ ಮುಖ ಪುಟಅಂದುಕೊಳ್ಳುವ ಸಲಿಗೆದೂರ ನಿಂತ ನಿಲುವುಹಸಿರಿನಿಂದ ಹುಟ್ಟಿದಸಸಿಯೊಂದು ಹಸಿರು ಹರಡಿಹಗೆರೆಗಳ ಚಿತ್ರಮೋಡದ ಮೇಲೊಂದು ಕುಳಿತಹನಿ ಮೋಡದ ಸನಿಹಚಿಟ್ಟೆ ಹೆಜ್ಜೆಯ ಗುರುತುಹಕ್ಕಿ ಗೂಡಿನ ಹಾಡುಮುಳುಗುವ ದಿಗಂತದಿಸಾಗುವ ಪುಟ್ಟ ದೋಣಿಹುಲ್ಲು ಹೊರೆಯ ನಡುವೆಮಗುವಿಗೆ ಕಟ್ಟಿಟ್ಟಅಮ್ಮನ ಹಸಿವೆಯ ರೊಟ್ಟಿಅಪ್ಪನ ಕಿಸೆಯಂಚಿನಲ್ಲಿಕುಳಿತ ಸೊಪ್ಪು ಕಟ್ಟಿನ ಬಾಕಿಯಾರಿಗೂ ಕಾಯದೇಹೊರಡುವ ಬಸ್ಸಿನ ಪಯಣದೂರ ದಾರಿಯ ನಡುವೆಇಳಿವ ಗುರುತಿಗೆಕಾಣುವ ಸಣ್ಣ ದಣಪೆಯಕೇಳದ ಕಥೆಗಳುಎಲ್ಲವೂ ವಾಸ್ತವದಚಿತ್ರದ ಕವಿತೆಗಳು ನಾಗರಾಜ ಬಿ. ನಾಯ್ಕ

ನಾಗರಾಜ ಬಿ. ನಾಯ್ಕ ಅವರ “ಕಥೆಗೆ ಒಂದು ಚಿತ್ರ……” Read Post »

ಕಾವ್ಯಯಾನ

ವನಜ ಮಹಾಲಿಂಗಯ್ಯ  ಅವರ ಕವಿತೆ “ಉದುರಿದ ಹೂವಿನ ಕಥೆ”

ಕಾವ್ಯ ಸಂಗಾತಿ ವನಜ ಮಹಾಲಿಂಗಯ್ಯ  “ಉದುರಿದ ಹೂವಿನ ಕಥೆ” ಮರಳಿನ ದೇಶ ರಾಜಸ್ಥಾನದಲ್ಲಿಒಂದು ಚಿಕ್ಕ ಚಿಲುಮೆ ಹೂವು ಅರಳಿತ್ತುಹೆಸರು ಹೇಳುವ ಮೊದಲೇಅಮಾನುಷತೆಯ ಕತ್ತಿ ಅದನ್ನು ಕತ್ತರಿಸಿತು ಅವಳ ಕೈಯಲ್ಲಿ ಬಳೆ ಇರಬೇಕಿತ್ತುಕಾಲಲ್ಲಿ ಗೆಜ್ಜೆ ಸದ್ದು ಇರಬೇಕಿತ್ತುಬದಲಾಗಿ ಮೌನ ಮತ್ತು ಕಣ್ಣೀರು ಮಾತ್ರ ಉಳಿದವು ಯಾರ ಮಗಳೋ, ಯಾರ ಅಕ್ಕನೋಯಾರ ತಂಗಿಯೋ ಅವಳುಕನಸು ಕಾಣುವ ವಯಸ್ಸಲ್ಲಿ  ಕತ್ತಲೆಗೆ ತಳ್ಳಲಾಯಿತು ಆಕಾಶವೂ ಇಂದು ಅಳುತ್ತಿದೆಗಾಳಿಯೂ ನಾಚುತ್ತಿದೆಏಕೆಂದರೆ ನಾವಿನ್ನೂ ಮನುಷ್ಯರಾಗಿಲ್ಲ ಆ ಹೂವು ಉದುರಿದ್ದು ವ್ಯರ್ಥವಾಗಬಾರದುಪ್ರತಿಯೊಂದು ಮನೆಯಲ್ಲಿ ಹೆಣ್ಣು ಸುರಕ್ಷಿತವಾಗುವವರೆಗೆನಮ್ಮ ಹೋರಾಟ ನಿಲ್ಲಬಾರದು ನ್ಯಾಯ ಬೇಕು..ಇನ್ನೊಂದು ಉದುರಿದ ಹೂವಿನ ಕಥೆ ಬೇಡ.. ವನಜ ಮಹಾಲಿಂಗಯ್ಯ 

ವನಜ ಮಹಾಲಿಂಗಯ್ಯ  ಅವರ ಕವಿತೆ “ಉದುರಿದ ಹೂವಿನ ಕಥೆ” Read Post »

ಕಾವ್ಯಯಾನ

ಎನ್. ಜಯಚಂದ್ರನ್ ದಾಂಡೇಲಿ “ಬದುಕೇ ಅಮರತ್ವ”

ಕಾವ್ಯ ಸಂಗಾತಿ ಎನ್. ಜಯಚಂದ್ರನ್ ದಾಂಡೇಲಿ “ಬದುಕೇ ಅಮರತ್ವ” ಸಾವಿನ ದಡದಾಚೆಯೂಬೆಳಕಾಗಿ ಉಳಿಯುವ ಹೆಜ್ಜೆಯೇ ಅಮರತ್ವ,ಕಾಲದ ಮರಳಿನ ಮೇಲೆಅಳಿಯದ ಗುರುತು ಬಿಡುವ ಬದುಕೇ ಅಮರತ್ವ. ಉಸಿರು ನಿಲ್ಲಬಹುದು,ದೇಹ ಮಣ್ಣಿನಲ್ಲಿ ಬೆರೆತು ಹೋಗಬಹುದು,ಆದರೆ ;ಸತ್ಕಾರ್ಯದ ಸುಗಂಧಯುಗಗಳವರೆಗೂ ಹರಡಬಹುದು. ಮರವು ಬಿದ್ದು ಹೋದರೂಅದರ ಬೀಜ ಕಾಡಾಗಿ ಬೆಳೆಯುವಂತೆ,ಮನುಜನ ದೇಹ ಮರೆಯಾದರೂ ;ಅವನ ಚಿಂತನೆಗಳು ಜೀವಂತವಾಗಿರುತ್ತವೆ. ಕವಿಯು ಬರೆದ ಸಾಲುಗಳಲ್ಲಿ,ವೀರನ ರಕ್ತದ ತ್ಯಾಗದಲ್ಲಿ,ತಾಯಿಯ ಮಮತೆಯ ಸ್ಪರ್ಶದಲ್ಲಿ,ಗುರುವಿನ ಜ್ಞಾನದ ಬೆಳಕಿನಲ್ಲಿಅಮರತ್ವ ಮೌನವಾಗಿ ಅರಳುತ್ತದೆ. ಅದು ದೇವರ ವರವಲ್ಲ,ಮಾನವನ ಕರ್ಮದ ಫಲವೂ ಅಲ್ಲ ,ಸ್ವಾರ್ಥದಾಚೆ ಬದುಕಿದಆತ್ಮದ ಹುಸಿ ಕಲ್ಪನೆಯೂ ಅಲ್ಲ ;ಅಮರತ್ವ ಎಂಬುದು ಕಾಯ ಕಾಯಕಗಳಶಾಶ್ವತ ಪ್ರತಿಫಲ ಕಾಲವು ಎಲ್ಲವನ್ನೂ ಕಸಿದುಕೊಳ್ಳಬಹುದು,ಆದರೆ ಪ್ರೀತಿಯಿಂದ ಕಟ್ಟಿದ ನೆನಪುಗಳನ್ನು ಅಲ್ಲ;ಸತ್ಯಕ್ಕಾಗಿ ಬದುಕಿದ ಜೀವವನ್ನು ಅಲ್ಲ,ಮಾನವೀಯತೆಯ ಜ್ಯೋತಿಯನ್ನು ಅಲ್ಲ ಈ ಕಾರಣ ಬದುಕುಕೇವಲ ಉಸಿರಿನ ಎಣಿಕೆಯಾಗಬಾರದು,ಹೃದಯಗಳಲ್ಲಿ ಬೆಳಗುವಒಂದು ದೀಪವಾಗಬೇಕು ಆ ದೀಪವೇ ಅಮರತ್ವ,ಆ ಬೆಳಕೇ ಶಾಶ್ವತತೆ,ಮರಣವನ್ನೂ ಮೀರಿ ಉಳಿಯುವಮನುಷ್ಯತ್ವದ ಮಹೋನ್ನತ ಗೀತೆ. ಎನ್. ಜಯಚಂದ್ರನ್ .ದಾಂಡೇಲಿ

ಎನ್. ಜಯಚಂದ್ರನ್ ದಾಂಡೇಲಿ “ಬದುಕೇ ಅಮರತ್ವ” Read Post »

ಕಾವ್ಯಯಾನ

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ”ಪ್ರೀತಿಯ ದೀಪ”

ಕಾವ್ಯ ಸಂಗಾತಿ ಉಷಾರಾಣಿ ಗುರುಪ್ರಸಾದ್ “ಪ್ರೀತಿಯ ದೀಪ” ಪ್ರಕೃತಿಯ ಮಡಿಲಲಿ ಮೂಡಿದ ರಂಗು,ಹೃದಯದ ಗೋಡೆಯ ಮೇಲೆ ಹೊಸ ತರಂಗು.ಮುಂಜಾವಿನ ಮಂಜಲಿ ಅರಳಿದ ಹೂವು,ಮರೆಸಿದೆ ಎದೆಯಲಿ ಮೂಡಿದ ನೋವು. ಕುಂಚದ ತುದಿಯಲಿ ಮೂಡಿದ ರೂಪ,ಮನದ ಕತ್ತಲಿಗೆಪ್ರೀತಿಯ ದೀಪ.ಕಣ್ಣಿನ ಭಾಷೆಗೆಸಿಗದ  ಅರ್ಥ,ಭಾವನೆಗಳೆಲ್ಲವೂ  ಪೂರ್ಣ ಸಮರ್ಥ. ಬಾನಿನ ಅಂಚಲಿ ಕಾಮನಬಿಲ್ಲು,ಹೃದಯ ಅಂಗಳದಿನಿನ್ನ ಹೆಜ್ಜೆಯ ಸದ್ದು.ಕನಸಿನ ಲೋಕದಸುಂದರ ಮದ್ದು,ಒಲುಮೆಯ ತೋಟದ ಸಿಹಿ ಸವಿ ಮುದ್ದು  ಉಷಾರಾಣಿ ಗುರುಪ್ರಸಾದ್,

ಉಷಾರಾಣಿ ಗುರುಪ್ರಸಾದ್ ಅವರ ಕವಿತೆ”ಪ್ರೀತಿಯ ದೀಪ” Read Post »

You cannot copy content of this page

Scroll to Top