ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಅನುವಾದ, ಕಥಾಗುಚ್ಛ

ತೆಲುಗು ಕಥೆ “ಶೋಭನ್‌ ಬಾಬು-ಗಣೇಶ್‌ ಬೀಡಿ” ತೆಲುಗುಮೂಲ ಜಿ.ಉಮಾಮಹೇಶ್ವರ್‌ , ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು

ಅನುವಾದ ಸಂಗಾತಿ ಶೋಭನ್‌ ಬಾಬು-ಗಣೇಶ್‌ ಬೀಡಿ ತೆಲುಗುಮೂಲ ಜಿ.ಉಮಾಮಹೇಶ್ವರ್‌ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು ಶ್ರೀಶೈಲದಂತಹ ಆಧ್ಯಾತ್ಮಿಕ ಕ್ಷೇತ್ರದ ಅಂಚಿನಲ್ಲಿ ಇರುವುದರಿಂದಲೋ ಅಥವಾ ಮಧ್ಯಮ ವರ್ಗದ ನೌಕರರ  ಕುಟುಂಬಗಳು ಅಧಿಕವಾಗಿ ಇರುವುದರಿಂದಲೋ ಮತ್ತು ಸುನ್ನಿಪೆಂಟದಲ್ಲಿ  ಭಕ್ತಿ ಕಾರ್ಯಕ್ರಮಗಳು, ಮತ್ತು ಹಬ್ಬಗಳ ಸಂಭ್ರಗಳು ಚೆನ್ನಾಗಿ ಇರುತ್ತಿದ್ದವು. ವಿನಾಯಕಚವಿತಿಗೆ, ರಾಮನವಮಿಗೆ ಚಪ್ಪರಗಳನ್ನು ಹಾಕುವವರು. ಒಂಬತ್ತು ದಿನಗಳ ಹಬ್ಬದ ಗಡಿಬಿಡಿಯಲ್ಲಿ ನಾಟಕಗಳು, ಹರಿಕಥೆಗಳು, ಬುರ್ರಕಥೆಗಳು ಅದರಲ್ಲಿ ಭಾಗವಾಗಿದ್ದವು. ಚಿಕ್ಕಮಕ್ಕಳಿಗೆ ಹಾಡುಗಳು, ಏಕಪಾತ್ರಾಭಿನಯಗಳು, ನೃತ್ಯಸ್ಪರ್ಧೆಗಳಲ್ಲಿ ಬಹುಮಾನಗಳು ವಿತರಿಸುವವರು. ಶಿವರಾತ್ರಿಗೆ ಸಿನಿಮಾ ಹಾಲುಗಳಲ್ಲಿ ತ್ರೀ ಶೋಸ್ ಹಾಕುವವರು. ಧನುರ್ಮಾಸದಲ್ಲಿ ನಗರ ಸಂಕೀರ್ತನೆಗಳು ಚಳಿಯನ್ನು ಜಯಿಸುತ್ತವೆ. ಸಂಕ್ರಾಂತಿಗೆ ಅಘೋಷಿತ ರಂಗೋಳಿ ಸ್ಪರ್ಧೆಗಳು ನಡೆಯುತ್ತಿದ್ದವು. ಯಾರ ರಥ ಎಷ್ಟು ದೂರ ಸಾಗಿತೋ ಎಂದು ಅಳೆಯುತ್ತಿದ್ದರು. ದೊಡ್ಡ ದೊಡ್ಡ ರಂಗೋಳಿಗಳಿಗೆ ವಿಶೇಷ ಪ್ರಶಂಸೆಗಳು ದೊರೆಯುತ್ತಿದ್ದವು. ಅಕ್ಕಾತಂಗಿಯರು,ತಾಯಿ-ಆತ್ತೆಗಳು ರಂಗೊಳಿಗಳು ಹಾಕುತ್ತಿದ್ದಾರೆ  ಅಣ್ಣ-ತಮ್ಮಂದಿರು, ತುಂಟ ಮಕ್ಕಳು ಸ್ವಂತ ರಂಗೊಳಿಗಳಿಗೆ ಕಾಪಾಲಾ ಕಾಯುತ್ತಾ, ಹೊರಗಿನ ರಂಗೊಳಿಗಳನ್ನು ವಿಶ್ಲೇಷಿಸುತ್ತಾ ತಿರುಗಾಡುತ್ತಿದ್ದರು. ಸುನ್ನಿಪೆಂಟಗೆ ಸಂಬಂಧಿಸಿದವರೆಗೂ ಸತ್ಯನಾರಾಯಣಸ್ವಾಮಿ ದೇವಸ್ಥಾನ, ರಾಮಮಂದಿರಗಳು ಭಕ್ತಿ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿವೆ.ಶ್ರೀಶೈಲದಲ್ಲಿ ಸಹಜ ಸಿದ್ಧವಾಗಿ ಕೆಲವುರು ಸಾಧುಗಳು, ಸನ್ಯಾಸಿಗಳು ಯಾವಾಗಲೂ ಕಂಡು ಬರುತ್ತಿರುತ್ತಾರೆ. ಇವರಲ್ಲದೆ, ಹೊರ ಪ್ರದೇಶಗಳಿಂದಲೂ ಕೆಲವರು ಬಂದು ಇಲ್ಲಿ ಯಾವುದೋ ಸತ್ರದಲ್ಲಿ ಊಟ ಮಾಡುತ್ತಾ, ಕಾಲ ಕಳೆಯುತ್ತಾ   ಬದುಕುವವರು ಅನೇಕರು ಇರುವವರು. ಮುಮುಕ್ಷುವುರಾದ ಸಾಧುಗಳು ಯಾರೋ, ಭಿಕ್ಷುಕುರಾದ ಸನ್ಯಾಸಿಗಳು ಯಾರೋ ಕಂಡುಹಿಡಿಯುವುದು ತುಂಬಾಕಷ್ಟ. ಉಡುಗೆ ತೊಡುಗೆಗಳಿಂದ, ಹಾವಭಾವಗಳಿಂದ, ಮಾತಿನ ಪದ್ಧತಿ ಸುಮಾರಾಗಿ ಒಂದೇ ವಿಧವಾಗಿ ಇರುತ್ತದೆ.ಒಮ್ಮೆ ಪೂರ್ಣಾನಂದ ಸ್ವಾಮಿ ಎಂಬ ಸ್ವಾಮಿಗಳು ತಮ್ಮ ಪತ್ನಿಸಮೇತ ಶ್ರೀಶೈಲಕ್ಕೆ ಬಂದರು.  ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಕೆಲವು ದಿನಗಳು, ಮತ್ತು ಸತ್ಯನಾರಾಯಣ ಸ್ವಾಮಿಯ ದೇವಸ್ಥಾನದಲ್ಲಿ ಕೆಲವು ದಿನಗಳು ಪ್ರವಚನಗಳನ್ನು ಹೇಳುತ್ತಾ ಸುಮಾರು ಮೂರುತಿಂಗಳ ಕಾಲವು ಅವರು ಸುನ್ನಿಪೆಂಟದಲ್ಲಿ ಕಳೆದರು. ಹಾಗಾಗಿ ಪೂರ್ಣಾನಂದಸ್ವಾಮಿಗಳು ಶ್ರೀಶೈಲದಲ್ಲಿದ್ದ ಮೂರುತಿಂಗಳಲ್ಲಿ ಒಂದುತಿಂಗಳು ನಮ್ಮ ಮನೆಯಲ್ಲಿಯೇ ಇದ್ದರು. ಪೂರ್ಣಾನಂದಸ್ವಾಮಿಗಳು, ತಾವು ವೇದಾಂತಂ ಲಕ್ಷ್ಮಯ್ಯನವರ ಶಿಷ್ಯರೆಂದು, ಅವರ ಊರು ಕಡಪಜಿಲ್ಲೆಯ ಮಾಮಿಡಾಲಪಲ್ಲೆ ಎಂದೋ, ಇನ್ನೂ ಯವುದೋ ಊರು ಎಂದು ಹೇಳಿದ್ದು ನೆನಪಿದೆ. ಪ್ರತಿದಿನ, ಸಾಯಂಕಾಲ ಆರರಿಂದ ಏಳರ ವರೆಗೆ ಅವರು  ಉಪದೇಶ ಮಾಡುತ್ತಿದ್ದರು. ಆಗ ಹೆಂಗಸರೆಲ್ಲ ಆ ಸಮಯಕ್ಕೆ  ಸೇರಿ ಸ್ವಲ್ಪ ಹೊತ್ತು ಕಾಲಕ್ಷೇಪ ಮಾಡುತ್ತಿದ್ದರು. ಭಾನುವಾರಗಳಲ್ಲಿ ಮಾತ್ರ ಮಧ್ಯಾಹ್ನ ಮೂರರಿಂದ ನಾಲ್ಕರವರೆಗೂ ಹೇಳುತ್ತಿದ್ದರು.ಒಂದುದಿನ ಯಾವುದೋ ಕೆಲಸಕ್ಕೆ ನನ್ನ ತಾಯಿಯನ್ನು ಕರೆದುಕೊಂಡು ಬರಬೇಕೆಂದು ಅಪ್ಪ ಹೇಳಿದರೇ ನಾನು ದೇವಸ್ಥಾನಕ್ಕೆ ಹೋಗಿದ್ದೆ. ಇನ್ನೊಂದು ಐದು ನಿಮಿಷಗಳಲ್ಲಿ ಮುಗಿಯುತ್ತದೆ. ಕೂತ್ಕೋ ಅಂದರೆ, ನಾನೂ ಕೂತ್ಕೊಂಡು ಕೇಳುತ್ತಿದ್ದೇನೆ. ಅವರು ಶ್ಯಾಸೆದ ಬಗ್ಗೆ, ಶ್ಯಾಸೆ ಮೇಲಿನ ಧ್ಯಾಸದ ಬಗ್ಗೆ, ಮೌನವಾಗಿ ಮಾಡುವ ಧ್ಯಾನದ ಬಗ್ಗೆ ಹೇಳುತ್ತಾ  ಅಧ್ಯಾತ್ಮಿಕ ಸಂಬಂಧವಾದ ಮಾತುಗಳೇನೊ ಹೇಳಿತ್ತಿದ್ದರು.ನಾನು ಏನೋ  ಯೋಚಿಸುತ್ತಾ ಕೂತಿದ್ದಾರೆ ನಾಗಮಣಿ ಅತ್ತೆ ನನ್ನನ್ನು ಹತ್ತಿರಕ್ಕೆ ಕರೆದು –“ಈ ಸ್ವಾಮಿ ಇಷ್ಟೊಂದು ಮಾತುಗಳು ಹೇಳ್ತಾನೆ, ಆದರೆ, ಇವರಿಗೆ ಸಿನಿಮಾ ಹುಚ್ಚು ಹೋಗಿಲ್ಲ” ಎಂದಳು.ವಾಸ್ತವಕ್ಕೆ ಈ ಚರ್ಚೆಯಲ್ಲಿ ಚಲನ ಚಿತ್ರಗಳ ಪ್ರಸ್ತಾವನೆ ಏಕೆ ಬಂದವೋ ನನಗೆ ಅರ್ಥವಾಗಿಲ್ಲ. ಆ ಅತ್ತೆ ಸಿನಿಮಾಗಳು ಚೆನ್ನಾಗಿ ನೋಡುತ್ತಾಳೆ. ಚೆನ್ನಾಗಿ ಫಾಲೋ ಆಗುತ್ತಾಳೆ  ಕೂಡಾ. ಇವರಿಗೆ ಸಿನಿಮಾಹುಚ್ಚು ಎಂದು ಹೇಗೆ ನಿರ್ಧರಿಸಿದ್ದಾಳೋ  ತಿಳಿಯದೆ ನಾನು ತಲೆ ಕೆಡಿಸಿಕೊಂಡಾಗ, ಅವರೇ ನನ್ನನ್ನು ಮತ್ತಿಷ್ಟೂ ಹತ್ತಿರಕ್ಕೆ ಕರೆದು-“ಬೇಕಿದ್ದರೆ ಕೇಳು, ಅವರು ಮಾತು ಮಾತಿಗೆ ಶೋಭನ್ ಬಾಬು, ಶೋಭನ್ ಬಾಬು ಎನ್ನುತ್ತಿದ್ದಾನೆ”ನಾನು ಸ್ವಲ್ಪ ಕಿವಿಕೊಟ್ಟು ಶ್ರದ್ಧೆ ಯಿಂದ ಕೇಳಿದಾಗ, ಹಾಗೆ ಅನಿಸಿತು, ಆದರೆ ಅದಲ್ಲ ಅಂತಲೂ ಅನಿಸಿತು. ನನಗೆ ತೆಲುಗು ಭಾಷೆಯೆಂದರೆ ಒಲವು, ಮನೆಯಲ್ಲಿದ್ದ ಪುಸ್ತಕಗಳನ್ನು(ಪೂರ್ಣಾನಂದಸ್ವಾಮಿ ಅವರವು ಕೂಡಾ) ನೋಡಿದ್ದೇನೆ. ಅದರಿಂದ ಮತ್ತಿಷ್ಟೂ ಶ್ರದ್ಧೆಯಿಂದ ಕೇಳಿದರೆ  ಆಗ  ಸ್ಫುರಿಸಿತು ಆ ಪದವು, ಅದರ ಅರ್ಥ್!ಆ ಅತ್ತೆ ಮತ್ತೆ ಕರೆದು  “ಗಮನಿಸಿದ್ದೀಯಾ?” ಎಂದು ಕೇಳಿದಳು.ಆಗ ನಾನು ಅವಳಿಗೆ ಹೇಳಿದೆ –“ಅತ್ತೆ, ಅದು ನೀವು ಅಂದುಕೊಂಡಂತೆ ಶೋಭಾನ್ ಬಾಬು ಅಲ್ಲ – ಸೋಹಂ ಭಾವ – ಅಂದರೆ ನಾನೇ ದೇವರು ಎಂಬ ಭಾವನೆ ” ಎಂದು ಹೇಳಿದರೆ  ಅವಳ ಮುಖ ಸಂಪೂರ್ಣವಾಗಿ ಕಳೆಗುಂದಿತ್ತು. ನಂಬಿದಂತೆ ಕಾಣಿಸಲಿಲ್ಲ. ಮನೆಗೆ ಬಂದಮೇಲೆ ನನ್ನ ಅಕ್ಕಗೆ ಹೇಳಿದೆ. ಈಗಲೂ  ಆ ವಿಷಯವನ್ನು ನೆನೆದರೆ  ತಡೆಯಲಾರದಷ್ಟು ನಗು ಬರುತ್ತದೆ.ಇನ್ನೊಂದು ಸಲ ಸನ್ಯಾಸಿಯೊಬ್ಬರು ಮಹದೇವಪ್ಪನವರನ್ನು ಭೇಟಿಮಾಡಿ  ತಾನು ಬಂದು ವ್ರತವನ್ನು ಸಂಕಲ್ಪಿಸಿದ್ದೇ ನೆಂದು ಅದು ಮುಗಿಯುವ ತನಕ ಅವರ ಸಹಾಯ ಬೇಕೆಂದು ಕೇಳಿದ. ಬೋಳ ಶಂಕರನಂತಹ  ಮಹದೇವಪ್ಪ ಮಾಮಾ ಆ ವ್ರತವು ಏನು, ಅದು ಮುಗಿಸಲು ಎಷ್ಟು ದಿನಗಳು ಬೇಕಾಗುತ್ತವೋ  ಅದಕ್ಕೆ  ಏನೇನು ಬೇಕಾಗುತ್ತವೋ ಏನೂ  ಕೇಳದೆ ಅವರಿಗೆ ಅಭಯ ಕೊಟ್ಟರು.  ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಆಶ್ರಯವೂ ಕೊಡಿಸಿದರು. ಒಂದುವಾರ ಅವರಿಗೆ ಎರಡು ಸಲ ಊಟ ಕಳುಹಿಸುವ ಸರದಿ ನಮ್ಮದಾಗಿತ್ತು.ದೇವಸ್ಥಾನದ ಈಶಾನ್ಯದ  ಮೂಲೆಯಲ್ಲಿ ಸ್ವಲ್ಪ ಖಾಲೀ ಜಾಗವಿತ್ತು. ಅಲ್ಲಿಯೇ ಅವರು ತಮ್ಮ ಚೀಲ ಇಟ್ಟುಕೊಂಡು, ಅಲ್ಲಿಯೇ ಇದ್ದ ನಲ್ಲಿಯ ಬಳಿ ಸ್ನಾನ ಮಾಡುತ್ತಿದ್ದರು. ಅವರು ಅಷ್ಟೊಂದು ಪೂಜೆ ಪುಂಸ್ಕಾರಗಳು ಮಾಡಿದಂತೆ ಕಾಣಿಸುತ್ತಿರಲಿಲ್ಲ. ಯಾವಾಗಲೂ ಮೌನವಾಗಿ ಏನೋ ಯೋಚಿಸುತ್ತಿದ್ದವನಂತೆ ಇರುವವನು. ಆಗಾಗ, ಕೆಲವೊಮ್ಮೆ ಗೋಡೆಗೆ ಒರಗಿ ಮಲಗಿದ್ದೇನೋ  ಧ್ಯಾನ ಮಾಡುತ್ತಿದ್ದಾನೋ ತಿಳಿಯದ ಸ್ಥಿತಿಯಲ್ಲಿ ಇರುತ್ತಿದ್ದ.ಅಯ್ಯಪ್ಪಸ್ವಾಮಿ ದೇವಸ್ಥಾನ ನಮ್ಮ  ಕಾರ್ಯಕಲಾಪಕ್ಕೆ ಮುಖ್ಯವಾದ ಜಾಗಾ. ಅದು ದೊಡ್ಡ  ಜನಸಂದಣಿ ಇರುವ ದೇವಸ್ಥಾನ ವಲ್ಲ. ಆ ಪ್ರಾಜೆಕ್ಟ್ ನಲ್ಲಿ ಉದ್ಯೋಗಿಯೊಬ್ಬರು ಆ ದೇವಸ್ಥಾನಕ್ಕೆ ಧರ್ಮ ಕರ್ತ, ಪೂಜಾರಿ  ಎಲ್ಲಾ ಅವನೇ ಆಗಿ ನಡೆಸುತ್ತಿದ್ದನು. ಆ ದೇವಸ್ಥಾನ, ಅವರ ಮನೆ ಪೂಜಾ ಕೋಣೆಗೆ ತುಂಬಾ ದೊಡ್ಡದಾಗಿದಂತೆ,  ಮತ್ತು ಸಾಂಪ್ರದಾಯಿಕ ದೇವಸ್ಥಾನಗಳಿಗೆ ತುಂಬಾ ಚಿಕ್ಕದಾಗಿದಂತೆ ಕಾಣಿಸುತ್ತಿತ್ತು. ಅವರ ಮನೆ ಒಳೆಗೆಯಿಂದ ದೇವಸ್ಥಾನಕ್ಕೆ ದಾರಿಯಿತ್ತು. ದೇವಸ್ಥಾನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ, ಪೂಜೆ, ನೈವೇದ್ಯ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಅವರ ಮಗನ  ಹೆಸರು ಮಣಿಕಂಠ. ಅದೇನೇ ಇರಲಿ, ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿಯ ವರೆಗೂ ಅದು ಮಕ್ಕಳ ಆಟಗಳ  ಜಾಗಾವಾಗಿತ್ತು.ಶನಿವಾರ ಸಂಜೆ ಏಳುಗಂಟೆಗೆಲ್ಲಾ , ‘ಈಗಲಪೆಂಟ’ದಿಂದ ಒಬ್ಬ ಮಲಯಾಳ/ ತಮಿಳ ಭಜನ ತಂಡ ಬರುತ್ತಿತ್ತು. ಅಲ್ಲಿಯ ವರೆಗೂ ಅಲ್ಲಲ್ಲಿ ಆಟವಾಡುತ್ತಿದ್ದ ಮಕ್ಕಳೆಲ್ಲರು ಮನೆಗೆ  ಹೋಗಿ ಕೈಕಾಲೂ ತೊಳೆದುಕೊಂಡು ಬಂದು  ಭಜನೆಯಲ್ಲಿ ಭಾಗ ವಹಿಸುವವರು. ಘಂಟೆಸಾಲ ಅವರ ಶುಕ್ಲಾಂಬರಧರಂದಿಂದ ಪ್ರಾರಂಭವಾಗಿ “ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ”, “ಚಂದ್ರಶೇಖರ, ಚಂದ್ರಶೇಖರ” ಎಂಬ ಭಜನೆಗಳ ಮೂಲಕ  “ಒನ್ರಾಮ್ ತಿರುಪ್ಪಡಿ ಶರಣಂ ಪುನ್ನಯ್ಯಪ್ಪ” ಎಂದು  ಸಾಗುವ ಸೋಪಾನದ ಗೀತೆಯೊಂದಿಗೆ ಕೊನೆಗೊಳ್ಳುವುದು.  ಸೋಪಾನಗಳ ಹಾಡು ಉಂಬಾ ಉತ್ಸಾಹದಿಂದ  ತುಂಬಿ ತುಳುಕುತ್ತಿತ್ತು. ಪ್ರತಿಯೊಂದು ಸೋಪಾನಕ್ಕೆ ಒಂದು ಚರಣವಿದೆ. ಪ್ರತಿಚರಣ ಮುಗಿಯುತ್ತಿದ್ದಂತೆ, ಪ್ರಸಾದಕ್ಕೆ ಹತ್ತಿರವಾಗುತ್ತಿದ್ದ ತೃಪ್ತಿ. ನಡುವೆ ಕಾಲಕ್ಷೇಪಕ್ಕಾಗಿ ನಾನು ಶಿವ ಶಿವ ಶಂಕರ…  ಎನ್ನುತ್ತಾ ಭಕ್ತ  ಕನ್ನಪ್ಪ ಗೀತವನ್ನು ಹಾಡುತ್ತಿದ್ದೆ.  ಆ ಭಜನ ತಂಡಕ್ಕೇ ನನ್ನ ಹೆಸರು ಶಿವ ಶಿವ ಶಂಕರ ಎಂದೇ ಗುರುತು. ಕೊನೆಗೆ ಮಂಗಳಾರತಿಯ ನಂತರ ಅರ್ಚಕರು ಬಿಸಿಬಿಸಿ ಚಕ್ಕರ ಪೊಂಗಲಿಯನ್ನು  ಚಿಕ್ಕ ಚಿಕ್ಕ  ದೊನ್ನೆಗಳಲ್ಲೋ , ಎಲೆಗಳಲ್ಲೋ  ಹಂಚುವವರು.  ಅಂದು ರಾತ್ರಿ ಆರತಿ ಮುಗಿಸಿದ ಮೇಲೆ ತಿನ್ನುವ ಆ ಪ್ರಸಾದ ಅದ್ಬುತವಾದ ರುಚಿಯಿಂದ, ಆಹಾ… ಅನ್ನಿಸುವಷ್ಟು ರುಚಿಯಾಗಿ ಇರುತ್ತಿತ್ತು. ಬಹಳಷ್ಟು ಬಾರಿ  ಆ ಪ್ರಸಾದದ ಮೇಲೆ ಅನುರಕ್ತಿಯಿಂದ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ ಎಂದರೆ  ಅದರಲ್ಲಿ ಸ್ವಲ್ಪವಾದರೂ ಸುಳ್ಳು ಇಲ್ಲ..ಹಾಗೆ ಆದಿವಾರದ ಬೆಳಿಗ್ಗೆ ತಮ್ಮ ತಮ್ಮ ಮನೆಗಳಲ್ಲಿ ತಾವು ತಿಂಡಿ ಮುಗಿಸಿಕೊಂಡು ಎಲ್ಲಿ ಆಟ ಆಡಬಹುದು, ಏನು ಆಡಬೇಕು ಎಂದು ಚರ್ಚಿಸಿತ್ತಿದ್ದೆವು. ಹಾಗೆ ನಾವು ಚರ್ಚಿಸಲು ಹೋಗುವ ಮೊತ್ತ ಮೊದಲಿನ ಪ್ರದೇಶ ಅಯ್ಯಪ್ಪಸ್ವಾಮಿ ದೇವಸ್ಥಾನವು.  ಆ ದಿನವೂ ಎಂದಿನಂತೆ ಎಲ್ಲರೂ ಗುಂಪು ಸೇರಿ ಯಾವಾವು ಆಟಗಳು ಆಡಬೇಕೋ ಚರ್ಚಿಕೊಳ್ಳುತ್ತಿದ್ದರೆ ಸಾಧುವು ನನ್ನನು ಆತ್ತ ಇತ್ತ  ನೋಡಿ  ಇಲ್ಲಿಬಾ ಎಂಬಂತೆ ಕೈ ಸನ್ನೆ ಮಾಡಿದ.  ನನ್ನೇ ಎಂದು ನಿರ್ಧರಿಸಿಕೊಂಡು ನಾನೇ ಅವಾರ ಕಡೆಗೆ ಹೋದ. ಅವರು ನನ್ನನ್ನು ದೇವಸ್ಥಾನದ ಹಿಂಭಾಗಕ್ಕೆ ಕರೆದೊಯ್ದು, ಮೇಲಿನ ಜೇಬಿನಿಂದ ಒಂದು ರೂಪಾಯಿ ನೋಟು ತೆಗೆದು, ‘ಒಂದು ಗಣೇಶ್ ಬೀಡಿ ಕಟ್ಟು ತೆಗೆದುಕೊಂಡು ಬಾ ಮಗು. ಹಾಗೆ ನಿನಗೂ ಬೇಕಾದರೆ,  ಐದುಪೈಸೆಗೆ ಏನಾದರೂ  ಕೊಂಡುಕೋ’  ಎಂದು ಹೇಳಿ ಆ ರೂಪಾಯನ್ನು ಕೈಯಲ್ಲಿ ಇಟ್ಟ.ನಾನು ಏನೂ ಯೋಚಿಸದೆಯೇ  ಅಂಗಡಿಯ ಕಡೆಗೆ ಓಡಿದೆ. ಮಲ್ಲಿಕಾರ್ಜುನ ಟಾಕೀಸುಗೆ ತಿರುಗುವ ಮೂಲೆಯಲ್ಲಿ ಒಂದು ಅಂಗಡಿ ಇತ್ತು. ಅಲ್ಲೇ ನಾವು ರೂಢಿಯಾಗಿ ಸಾಮಾನುಗಳನ್ನು ತಂದುಕೊಳ್ಳುತ್ತಿದ್ದೆವು. ಆ ಅಂಗಡಿಯಲ್ಲಿ ಇಬ್ಬರು ಸಹೋದರರು ಇರುತ್ತಿದ್ದರು. ನಾವು ಅವರನ್ನು ಚಿಕ್ಕ ಶೆಟ್ಟಿ  ಮತ್ತು ದೊಡ್ಡ ಶೆಟ್ಟಿ ಎಂದು ಕರೆದುಕೊಳ್ಳುತಿದ್ದೆವು.   .ಚಿಕ್ಕ ಶೆಟ್ಟಿ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುತ್ತಾ, ಉತ್ತಮ ಗ್ರಾಹಕರ ಪ್ರಜ್ಞೆಯನ್ನು ತೋರಿಸುವವನು. ನಾನು ಬೀಡಿ ಕೇಳಿದೊಡನೆ ಒಂದು ಕಟ್ಟು ಕೊಟ್ಟು ಏನೋ ಕೇಳುತ್ತಿದ್ದಾಗ ನಾನು ಓಡುತ್ತಾ ಬಂದುಬಿಟ್ಟೆ. ದೇವಸ್ಥಾನದಲ್ಲಿ ಗಣೇಶ್ ಬೀಡಿಗಳ ಕಟ್ಟು, ಉಳಿದ ಚಿಲ್ಲರೆ, ಸಾಧುವಿಗೆ ನೀಡಿ, ನನ್ನ ಆಟಗಳಲ್ಲಿ ನಾನು ಮುಳುಗಿಹೋದೆ.ಒಂದು ವಾರದ ನಂತರ, ಅಪ್ಪ ಯಥಾಲಾಪವಾಗಿ  ಪಡಶಾಲೆಯಲ್ಲಿ ಇದ್ದ ನನ್ನನ್ನು ಕರೆದು “ಏನೋ ಬೀಡಿ ಸೇದುತ್ತಿದ್ದೀಯಾ?”  ಎಂದು ಸ್ವಲ್ಪ ಕಟುವಾಗಿಯೇ ಕೇಳಿದರು.  ನನ್ನ ಬಾಯಿಂದ ಮಾತು ಬರಲಿಲ್ಲ. ಅಷ್ಟರಲ್ಲಿ ಅಮ್ಮನೂ ಬಂದಳು. ವಿಷಯ ತಿಳಿದುಕೊಂಡು, “ಛ, ಚ ಅವನು ಏಕೆ ಸೇದುತ್ತಾನೆ? ” ಎಂದು ನನ್ನನ್ನು ಸಮರ್ಥಿಸಿದಳು.ಮತ್ತೆ ತಾನೇ “ಇಷ್ಟಕ್ಕೂ ನಿಮಗೆ ಯಾರು ಹೇಳಿದರು?” ಎಂದು ಕೇಳಿದಾಗ, ಅಪ್ಪ “ಯಾರೋ ಹೇಳಿದರೆ ನಾನೇಕೆ ನಂಬುತ್ತೇನೆ,  ಯಾರ ಹತ್ರ  ಇವನು ಖರೀದಿಸಿದನೋ  ಅವನೇ, ಚಿಕ್ಕಶೆಟ್ಟಿ ಹೇಳಿದ” ಎಂದ.ನನಗೆ ವಿಷಯವು ಅರ್ಥವಾಯಿತು. ನಾನು ಮುಗುಳ್ನಗುತ್ತಾ “ಓಹ್, ಅದಾ, ದೇವಸ್ಥಾನದಲ್ಲಿ ಸ್ವಾಮಿ ಇದ್ದಾನಲ್ಲ, ಕಳೆದ ಭಾನುವಾರ ಅವರು ಖರೀದಿಸಿಕೊಂಡು ಬಾ ಅಂತ ಹೇಳಿದರು. ಆಗ ನಾನು  ಖರೀದಿಸಿದೇ. ನಾನು ಕುಡಿಯಲು ಅಲ್ಲ.”ಎಂದೆ.ಅಪ್ಪ ನಂಬುವಂತೆ ಕಾಣಲಿಲ್ಲ. “ನೀವು ತಪ್ಪು ಮಾಡಿದ್ದು ಅಲ್ಲದೆ, ಅಪರಾಧವನ್ನು ಇನ್ನೊಬ್ಬರಿ ಮೇಲೆ ಹಾಕುವೇ ” ಎಂದು ಅವರು ಪ್ರತಿದಾಳಿ ನಡೆಸಿದರು.ಆ ಮಾತುಗಳಿಗೆ ನನ್ನ ಮುಖವು ಕೆಂಪಾಯಿತು. ದುಃಖವಾಯಿತು. ಕೀಚಲು ಧ್ವನಿಯಲ್ಲಿ ನಮ್ಮಮ್ಮಯೊಂದಿಗೆ, “ಬೇಕಾದರೆ ಈಗಲೇ ದೇವಸ್ಥಾನಕ್ಕೆ ಹೋಗೋಣ. ಅವರಿಂದಲೇ ಮಾತನಾಡಿಸುವೆ” ಎಂದೆ.ನನ್ನ  ನಿರಪರಾಧತ್ವ ಮೇಲೆ ನನಗಿಂತಲೂ ಜಾಸ್ತಿ ನಂಬಿಕೆ ಇರುವ ಅಮ್ಮ ತಕ್ಷಣ-“ಹೋಗಿ ಅವರನ್ನೇ ಕೇಳೋಣ” ಎಂದಳು.ನನ್ನ ತಂದೆಯೂ ಅಂಗಿ ಧರಿಸುತ್ತಾ-“ತಕ್ಷಣ ಹೋಗಿ ಮಹದೇವಪ್ಪ ಮಾಮನವರನ್ನು ಕರೆದುಕೊಂಡುಬಾ ಹೋಗು, ಇಲ್ಲಿ ಇದ್ದಂತೆ ಬರಬೇಕು. ಏಕೆ ಎಂದು ಕೇಳಿದರೆ ಬಂದಾಗಾ ಅಪ್ಪ ಹೇಳುತ್ತರಂತೆ ಎಂದು ಹೇಳು. ನಾವು ದೇವಸ್ಥಾನದ ಹೊರಗೆ ಇರುತ್ತೇವೆ” ಎಂದೆ.ನಾನು ಮಿಂಚಿನ ವೇಗದಿಂದ ಹೋಗಿ ಹತ್ತು ನಿಮಿಷದಲ್ಲಿ ಮಹದೇವಪ್ಪ ಮಾಮಾನ ಜೊತೆ ದೇವಸ್ಥಾನಕ್ಕೆ ಬಂದೆ. ಅಪ್ಪ ಮಾಮನೊಂದಿಗೆ ಏನೋ ಮಾತಾಡಿದರು. ಮಾಮ, ಹಿಂದೆ ಅಪ್ಪ, ಆ ಹಿಂದೆ ಅಮ್ಮ, ನಾನು ದೇವಸ್ಥಾನದ ಒಳಗೆ ಹೋಗಿ ಸ್ವಾಮಿ ಕುಳಿತಿದ್ದ ಜಾಗಕ್ಕೆ ಸೇರೀದೆವು .ನಮ್ಮ ಬರುವಿಕೆಯನ್ನು ನಿಜಕ್ಕೆ ಊಹಿಸದ ಅವರು, ‘ರಾತ್ರಿ ಊಟ ತೆಗೊಂಡು ಯಾರೋ ಭಕ್ತರು ಬರಬೇಕಾದ ಸಮಯದಲ್ಲಿ ಇವರು ಬಂದಿದ್ದರೇನು?’ ಎಂದು ಆಶ್ಚರ್ಯ ಹೋದ. ಸ್ವಲ್ಪ ತಬ್ಬಿಬ್ಬಾದ.ಮಹದೇವಪ್ಪ ಮಾಮ ಅವು ಇವು ಮಾತಾಡಿ-“ನೀವು ಈ ಹುಡುಗನೊಂದಿಗೆ ಹೋದ ವಾರ

ತೆಲುಗು ಕಥೆ “ಶೋಭನ್‌ ಬಾಬು-ಗಣೇಶ್‌ ಬೀಡಿ” ತೆಲುಗುಮೂಲ ಜಿ.ಉಮಾಮಹೇಶ್ವರ್‌ , ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು Read Post »

ಕಾವ್ಯಯಾನ

ಭಾರತಿ ರವೀಂದ್ರ ಅವರ ಹಾಯ್ಕುಗಳು

ಕಾವ್ಯ ಸಂಗಾತಿ ಭಾರತಿ ರವೀಂದ್ರ ಹಾಯ್ಕುಗಳು ಅನುದಿನವುನವ ನವೀನ ಕಂದನಲಿಯುವಾಗ ಆಟ ಚಂದವು,ತೋದಲ್ನುಡಿ ಸಂಗೀತಮಗು ಆಡಲು ಇರುವಂತಿಗೆಅರಳಿದಾಗ, ಮನಮನೆ ಸೌರಭ. ಈಶ ಗೌರೀಶರಕ್ಷಿಸು ಭಗವಂತಬಿಸಿಲ ಬೇಗೆ ಉತ್ತರ ಇದೆಪ್ರತಿ ಗೂಢ ಪ್ರಶ್ನೆಗೆಅರಿಸು ನೋಡು ಊಸರವಳ್ಳಿಬಣ್ಣವು ಕೆಲವರನಡೆ ನುಡಿಲಿ ಎದೆಯಾಳದಿದಾವನಲ, ನಯನನಗುತಿರಲು, ಏಕೆ ಮನಸ್ಸೆ?ನಿನ್ನದಲ್ಲದ ಸಿರಿಯುಎಂದೂ ಸಿಗದು ಐಶ್ವರ್ಯ ಅಂಧಕಾಣನು ಯಾವದನ್ನೂದೇವರೇ ಗತಿ ಒಲವೇ ಸಿರಿಅರಿತ ಮನಗಳುಜೊತೆ ಸಾಗಲು ಓರೆ ನೋಟಕೆಸೋತು ಶರಣು, ನವ್ಯಪ್ರೇಮ ಕವನ ಔಷಧ ನೋಡುನಿನ್ನ ನಗು ಕಂಡಾಗನೋವು ಶಮನ ಭಾರತಿ ರವೀಂದ್ರ

ಭಾರತಿ ರವೀಂದ್ರ ಅವರ ಹಾಯ್ಕುಗಳು Read Post »

ಕಾವ್ಯಯಾನ

ಸುಮನಾ ರಮಾನಂದ,ಕೊಯ್ಮತ್ತೂರು “ಮುಸ್ಸಂಜೆ ನೋಟ”

ಕಾವ್ಯ ಸಂಗಾತಿ ಸುಮನಾ ರಮಾನಂದ,ಕೊಯ್ಮತ್ತೂರು “ಮುಸ್ಸಂಜೆ ನೋಟ” ಅಂದದ ವರ್ಷಧಾರೆ ಬರುತಿದೆಚೆಂದದ ಈ ಮುಸ್ಸಂಜೆಯಲಿ!ನೊಂದ ಬುವಿಯದನಪ್ಪಿ..ಮಿಂದಂತಿದೆ ಮಣ್ಣ ಘಮಲಿನಲಿ!! ಬಂಗಾರ ಬಣ್ಣದ ಬೆಳಕಿಂದರಂಗಾಗಿದೆ ಧರೆ ಹಸಿರಿನಲಿ!ಹಿಂಗಾರಿನ ಮುಸಲಧಾರೆಯ..ಗುಂಗಿನಲಿದೆ ಇಳೆ ಹರುಷದಲಿ!! ತೆಂಗಿನ ಗರಿಗಳ ಓಲಾಟದಿರಂಗಿನ ಚಿತ್ತಾರ ಗಗನದಲಿ!ಭೃಂಗವದು ಹೂವನ್ನು ಕಾಡುವಂತೆ..ತಂಗಾಳಿ ತೀಡಿದೆ ಸಂಜೆಯಲಿ!! ಬೆರಗಿನ ಚಟಪಟ ಮಳೆಹನಿಯುಮೆರುಗಿನಿಂದಾಗಮಿಸಿ ಅವನಿಯಲಿ!ಮೂಡಿಸಿ ಚಿತ್ತಾರವನಾಗಸದಿ..ಸೊಬಗು ತಂದಿದೆ ಬೈಗಿನಲಿ!! ಸುಮನಾ ರಮಾನಂದ,ಕೊಯ್ಮತ್ತೂರು

ಸುಮನಾ ರಮಾನಂದ,ಕೊಯ್ಮತ್ತೂರು “ಮುಸ್ಸಂಜೆ ನೋಟ” Read Post »

ಕಾವ್ಯಯಾನ

ಶಂಕರರಾವ ಉಭಾಳೆ ದೇವದುರ್ಗ ” ಯಾರದು?”

ಕಾವ್ಯ ಸಂಗಾತಿ ಶಂಕರರಾವ ಉಭಾಳೆ ದೇವದುರ್ಗ ” ಯಾರದು?” ಒಲೆ ಮಣ್ಣಿನದುಮಣ್ಣು ಕೆರೆಸಾಲಿನದುಕೆರೆ ಗೌಡನದು ಹಸಿವಿಗಾಗಿ ರೊಟ್ಟಿರೊಟ್ಟಿಗಾಗಿ ಜೋಳಜೋಳಕ್ಕಾಗಿ ಹೊಲಹೊಲ ಗೌಡನದು ಎತ್ತು ಗೌಡನದುಬಂಡಿ ಗೌಡನದುಉತ್ತಿ ಬಿತ್ತಿದ ಹೊಲದ ಶ್ರಮ ನನ್ನದುಬೆಳೆಯ ಅಧಿಕಾರ ಗೌಡನದು ಬಾವಿ ಗೌಡನದುನೀರು ಗೌಡನದುಹೊಲ ಗದ್ದೆ ಗೌಡನದುಓಣಿ ಕೇರಿಗಳೆಲ್ಲ ಗೌಡನದುಗ್ರಾಮಹೋಬಳಿತಾಲೂಕುಜಿಲ್ಲೆರಾಜ್ಯಗೌಡನದುಹಾಗಾದರೆನನ್ನದೇನಿದೆ…? ಶಂಕರರಾವ ಉಭಾಳೆ ದೇವದುರ್ಗ

ಶಂಕರರಾವ ಉಭಾಳೆ ದೇವದುರ್ಗ ” ಯಾರದು?” Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ “ಅಲ್ಲೆಲ್ಲೊ ನೀನೇ!”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ “ಅಲ್ಲೆಲ್ಲೊ ನೀನೇ!” ಅಂದೊಮ್ಮೆ ನನಗೆ ನಿನ್ನನ್ನು ಕಂಡುಮಾತಾಡೋ ಬಯಕೆ ಬಂದಿತ್ತು ಅಂದುಅಲ್ಲೆಲ್ಲೋ ನೀನು ಕಣ್ಮರೆಯಾಗಿ,ಸುಳಿವೊಂದು ಸಿಗದೆ ಕಣ್ಣೀರು ತಂದೆ ನಾ ನಿನ್ನ ಕರೆದು ಬಳಿ ಬಂದು ನಿಂದುನಿನ್ನ ಖುಷಿಯ ತಂದೆ ನಿನಗಾಗಿ ಇಂದುನಿನ್ನನ್ನು ಕರೆದು ಮಾತನಾಡೋ ಬಯಕೆ ನನಗಿತ್ತು ಅಂದು ಭಯವೆಲ್ಲ ಎಂದು ಆರೋಪ ಇರದ ಈ ರೂಪ ನಿನಗೆ ಕೊಡಬೇಕು ನಾನು ನಾನಿರುವವರೆಗೆಆ ನಿನ್ನ ನಗುವು ನನಗಾಗೆ ಇರಲು  ಸವಿಯುವೆ ನಾನು ಹಗಲು ಇರುಳು ನಗುವಲ್ಲಿ ಇರುವಂತ ಆ ನಿನ್ನ ಕನಸುಮಲ್ಲಿಗೆ ಹೂವಂತೆ ಅರಳುವ  ಸೊಗಸುಕೋಗಿಲೆ ಹಾಡು ನಾವಿರುವ ನಾಡುಇಂಪಾಗಿ ಕೇಳು ಈ ನನ್ನ ಹಾಡು ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ “ಅಲ್ಲೆಲ್ಲೊ ನೀನೇ!” Read Post »

ಕಾವ್ಯಯಾನ

ಹಮೀದ್ ಹಸನ್‌ ಮಾಡೂರು ” ಜಿರಳೆ ದಂಗೆ ಸಾರಿದೆ”

ಕಾವ್ಯ ಸಂಗಾತಿ ಹಮೀದ್ ಹಸನ್‌ ಮಾಡೂರು “ಜಿರಳೆ ದಂಗೆ ಸಾರಿದೆ” ಜಿರಳೆ ಬಂತಯ್ಯ ಜಿರಳೆಎಲ್ಲೆಡೆಯು ಗದ್ದಲ ಎಬ್ಬಿಸಿದುಷ್ಟ ಸ್ವಾರ್ಥಿಗಳ ನಿದ್ದೆಗೆಡಿಸಿಅತ್ತಿತ್ತ ವಾಟ್ಸಾಪ್ ತುಂಬ ಹರಿದಾಡಿಸಿ,! ದುಷ್ಟ ರಾಜಕೀಯ ನೀತಿಗೆಧರ್ಮ ರಾಜಕೀಯ ಕ್ರಾಂತಿಗೆಕೊಳಕು ಬಾಯಿಯ ಮತಿಭ್ರಾಂತಿಗೆಗೆದ್ದಲು ಸಾಮ್ರಾಜ್ಯಶಾಹಿ ಅವನತಿಗೆ,! ಯುವ ಜನಾಂಗದಶೋಷಿತ, ತುಳಿತಕ್ಕೊಳಗಾದಅಲ್ಪಸಂಖ್ಯಾತ,ನೊಂದವರಿಗಾದನ್ಯಾಯದ ಪರ ಹೋರಾಡ ಬಂದಿದೆ,! ಸರ್ವಾಧಿಕಾರಿಗಳ ಮಸ್ತಕನುಸುಳಿ ಮೆದಳಿಗೆ ನೋಯಿಸಿಸತ್ತಂತಿಹರನು ಇದೀಗ ಬಡಿದೆಬ್ಬಿಸಿನ್ಯಾಯಕ್ಕಾಗಿ ಜಿರಳೆ ಧಂಗೆಯ ಸಾರಿದೆ,! ಕುರ್ಚಿಯಾಸೆಗೆಆಡಳಿತೆಯ ದುರಾಸೆಗೆಮನುಜ ಮನಸುಗಳ ಕೊಳಚೆಗೆದೂಡಿ ಬಿಟ್ಟವರ ಬೆನ್ನಟ್ಟುತ್ತ ಬಂದಿದೆ.! ಹಮೀದ್ ಹಸನ್ ಮಾಡೂರು

ಹಮೀದ್ ಹಸನ್‌ ಮಾಡೂರು ” ಜಿರಳೆ ದಂಗೆ ಸಾರಿದೆ” Read Post »

ಇತರೆ

“ಹಂಚುವ ಗುಣವನ್ನು ಕಾಗೆಯಿಂದ ಕಲಿಯಿರಿ”ಲೇಖನ ಕವಿತಾ ಶ್ರೀನಿವಾಸ್ ನಾಯಕ್ 

ವಿಶೇಷ ಸಂಗಾತಿ “ಹಂಚುವ ಗುಣವನ್ನು ಕಾಗೆಯಿಂದ ಕಲಿಯಿರಿ” ಕವಿತಾ ಶ್ರೀನಿವಾಸ್ ನಾಯಕ್  ​ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿನ ಪ್ರತಿ ಜೀವಿಯೂ ನಮಗೆ ಒಂದಲ್ಲ ಒಂದು ಜೀವನ ಪಾಠವನ್ನು ಕಲಿಸುತ್ತಿರುತ್ತದೆ. ಅತೀ ಸಾಮಾನ್ಯ ಪಕ್ಷಿ ಎಂದು ನಾವು ಕಡೆಗಣಿಸುವ ‘ಕಾಗೆ’ಯ ಜೀವನಶೈಲಿಯಲ್ಲೇ ಮನುಷ್ಯನಿಗೆ ಅಗತ್ಯವಾದ ಅತಿ ದೊಡ್ಡ ಗುಣಗಳಿವೆ. ಕಾಗೆ ಎಂದರೆ ಕೇವಲ ಅಶುಭದ ಸಂಕೇತವಲ್ಲ, ಅದು ‘ಸಹಬಾಳ್ವೆ ಮತ್ತು ಹಂಚಿಣ್ಣುವಿಕೆ’ಯ ಸಾಕಾರ ಮೂರ್ತಿ.​ಒಗ್ಗಟ್ಟಿನಲ್ಲಿ ಬಲವಿದೆಕಾಗೆಗಳದ್ದು ಅದ್ಭುತವಾದ ಸಂಘಟನಾ ಶಕ್ತಿ. ಯಾವುದಾದರೂ ಕಾಗೆಗೆ ಆಹಾರ ಸಿಕ್ಕಾಗ, ಅದು ಎಂದಿಗೂ ಒಬ್ಬಂಟಿಯಾಗಿ ತಿಂದು ತೇಗಲು ಬಯಸುವುದಿಲ್ಲ. ಬದಲಾಗಿ, ಆಹಾರ ಕಂಡ ತಕ್ಷಣ ಜೋರಾಗಿ ‘ಕಾವ್ ಕಾವ್’ ಎಂದು ಕೂಗಿ ತನ್ನೆಲ್ಲಾ ಬಳಗವನ್ನು ಕರೆಯುತ್ತದೆ. ತನಗೆ ಸಿಕ್ಕಿದ್ದನ್ನು ತನ್ನವರಿಗೂ ಹಂಚಬೇಕು ಎಂಬ ಅದರ ಈ ಔದಾರ್ಯ, ಸ್ವಾರ್ಥದ ಸುಳಿಗೆ ಸಿಲುಕಿರುವ ಇಂದಿನ ಮನುಕುಲಕ್ಕೆ ನಿಜಕ್ಕೂ ಮಾದರಿ. “ನಾನು ಮತ್ತು ನನ್ನ ಕುಟುಂಬ” ಎಂಬ ಸಂಕುಚಿತ ಮನೋಭಾವದಿಂದ ಹೊರಬಂದು, “ನಮ್ಮವರು” ಎಂಬ ವಿಶಾಲ ಭಾವನೆಯನ್ನು ಬೆಳೆಸಿಕೊಳ್ಳಲು ಕಾಗೆ ನಮಗೆ ಕಲಿಸುತ್ತದೆ.​ಸಂಕಟದಲ್ಲಿ ಜೊತೆಗೂಡುವ ಮನಸ್ಸುಕಾಗೆಗಳ ಸಾಮಾಜಿಕ ಕಳಕಳಿ ಅತಿ ಹೆಚ್ಚು. ಯಾವುದಾದರೂ ಒಂದು ಕಾಗೆಗೆ ತೊಂದರೆಯಾದರೆ ಅಥವಾ ಅದು ಮೃತಪಟ್ಟರೆ, ನೂರಾರು ಕಾಗೆಗಳು ಒಂದೆಡೆ ಸೇರಿ ಕೂಗಾಡುವುದನ್ನು ನಾವು ಗಮನಿಸಿರಬಹುದು. ಇದು ಕೇವಲ ಶಬ್ದವಲ್ಲ, ಅವರ ನಡುವಿನ ಬಲವಾದ ಬಾಂಧವ್ಯದ ಪ್ರತೀಕ. ದುಃಖವನ್ನು ಹಂಚಿಕೊಳ್ಳುವ ಮೂಲಕ ನೋವನ್ನು ಕಡಿಮೆ ಮಾಡುವ ಗುಣ ಅವುಗಳಲ್ಲಿದೆ. ಇಂದು ಮನುಷ್ಯ ತನ್ನ ನೆರೆಯವರ ಕಷ್ಟವನ್ನೂ ಕೇಳದಷ್ಟು ತಂತ್ರಜ್ಞಾನದ ಜಾಲದಲ್ಲಿ ಸಿಲುಕಿದ್ದಾನೆ. ಅಂತಹ ಸಂದರ್ಭದಲ್ಲಿ, ಕಾಗೆಗಳ ಈ ಸಾಮಾಜಿಕ ಬದ್ಧತೆ ನಿಜಕ್ಕೂ ಶ್ಲಾಘನೀಯ.​ತಾನುಂಡು ಇತರರಿಗೂ ಉಣಬಡಿಸುವುದುಭಾರತೀಯ ಸಂಸ್ಕೃತಿಯಲ್ಲಿ “ತಾನುಂಡು ಇತರರಿಗೂ ಉಣಬಡಿಸುವವನೇ ನಿಜವಾದ ಮನುಷ್ಯ” ಎಂದು ಹೇಳಲಾಗಿದೆ. ಕಾಗೆಗಳು ಯಾವುದೇ ಭೇದವಿಲ್ಲದೆ ಎಲ್ಲವನ್ನೂ ಹಂಚಿಕೊಳ್ಳುತ್ತವೆ. ಸ್ವಾರ್ಥದ ಈ ಲೋಕದಲ್ಲಿ, ನಮ್ಮಲ್ಲಿರುವ ಜ್ಞಾನ, ಸಂಪತ್ತು ಅಥವಾ ಪ್ರೀತಿಯನ್ನು ನಾಲ್ಕು ಜನರೊಂದಿಗೆ ಹಂಚಿಕೊಂಡರೆ ಸಮಾಜ ಎಷ್ಟು ಸುಂದರವಾಗಿರುತ್ತದೆ ಎಂಬುದನ್ನು ಕಾಗೆಗಳು ಪ್ರತಿಕ್ಷಣವೂ ಸಾಬೀತುಪಡಿಸುತ್ತಿವೆ. ನಾವು ಕೇವಲ ಭೌತಿಕ ವಸ್ತುಗಳನ್ನು ಹಂಚಿಕೊಳ್ಳುವುದು ಮಾತ್ರವಲ್ಲದೆ, ಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವ ಮೂಲಕವೂ ‘ಹಂಚುವಿಕೆ’ಯನ್ನು ಚಾಲ್ತಿಯಲ್ಲಿಡಬಹುದು.​ಕಾಗೆಯ ಗುಣ ನಮ್ಮ ಬದುಕಿನ ಭಾಗವಾಗಲಿನಾವು ಕಾಗೆಯನ್ನು ಕೇವಲ ಒಂದು ಪಕ್ಷಿಯೆಂದು ನೋಡದೆ, ಅದರ ‘ಹಂಚಿಣ್ಣುವ’ ಸಂಸ್ಕೃತಿಯನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಧಾವಂತದ ಬದುಕಿನಲ್ಲಿ ನಾವು ಸಣ್ಣ ಸಣ್ಣ ಸಂತೋಷಗಳನ್ನು ಹಂಚಿಕೊಳ್ಳುವುದನ್ನೇ ಮರೆತಿದ್ದೇವೆ. ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ನೆರೆಹೊರೆಯವರಿಗೆ ನೀಡುವುದಿರಲಿ, ಕನಿಷ್ಠಪಕ್ಷ ನಮ್ಮ ಹತ್ತಿರವಿರುವ ಸಕಾರಾತ್ಮಕ ವಿಚಾರಗಳನ್ನಾದರೂ ಹಂಚಿಕೊಳ್ಳೋಣ. ಸಣ್ಣ ಆಹಾರದ ತುತ್ತನ್ನು ಹಂಚುವ ಕಾಗೆಯ ಗುಣ ನಮ್ಮಲ್ಲಿದ್ದರೆ, ಖಂಡಿತವಾಗಿಯೂ ಹಸಿವು ಮತ್ತು ಒಂಟಿತನವಿಲ್ಲದ ಒಂದು ಸುಂದರ ಸಮಾಜವನ್ನು ನಿರ್ಮಿಸಬಹುದು.​ಕಾಗೆಗಳು ಎಂದಿಗೂ ತನ್ನ ಆಹಾರಕ್ಕಾಗಿ ಜಗಳವಾಡುವುದಿಲ್ಲ, ಅವು ಸಮುದಾಯದ ಪಕ್ಷಿಗಳಾಗಿ ಬದುಕುತ್ತವೆ. “ಕಾಗೆ ಒಂದೇ ಗೂಡಿನ ಪಕ್ಷಿಯಲ್ಲ, ಅದು ಸಮುದಾಯದ ಪಕ್ಷಿ.” ನಾವು ಕೂಡ ಹಾಗೆಯೇ ಆಗೋಣ. ನಾವು ಗಳಿಸುವ ಸಂಪತ್ತು, ಗಳಿಸುವ ಕೀರ್ತಿ ಅಥವಾ ನಾವು ಪಡೆಯುವ ಜ್ಞಾನ—ಯಾವುದೂ ನಾವು ಸತ್ತಾಗ ಜೊತೆಗೆ ಬರುವುದಿಲ್ಲ. ಆದರೆ, ನಾವು ಸಮಾಜಕ್ಕೆ ನೀಡಿದ ಪ್ರೀತಿ ಮತ್ತು ಸಹಕಾರ ಶಾಶ್ವತವಾಗಿ ಉಳಿಯುತ್ತದೆ.​ನಮ್ಮ ಬದುಕು ಕಾಗೆಯಂತಿರಲಿ. ಸದ್ದು ಮಾಡಿ ಬದುಕೋಣ, ಎಲ್ಲರನ್ನೂ ಸೇರಿಸಿಕೊಳ್ಳೋಣ ಮತ್ತು ಬದುಕನ್ನು ಹಂಚಿಕೊಂಡು ಆನಂದಿಸೋಣ. ಈ ಪ್ರಕೃತಿಯಲ್ಲಿ ಪ್ರತಿ ಜೀವಿಯಲ್ಲೂ ಒಂದು ಅರ್ಥವಿದೆ. ಆ ಅರ್ಥವನ್ನು ಅರಿತು ಬದುಕಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ. ಇಂದಿನ ದಿನಗಳಲ್ಲಿ ಪರಸ್ಪರ ದ್ವೇಷ, ಅಸೂಯೆಗಳನ್ನು ಬದಿಗಿಟ್ಟು, ಸಹಬಾಳ್ವೆಯ ಪಾಠವನ್ನು ಕಾಗೆಯಿಂದ ಕಲಿತು, ಒಂದು ಸಾಮರಸ್ಯದ ಸಮಾಜಕ್ಕೆ ನಾಂದಿ ಹಾಡೋಣ.​————— ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

“ಹಂಚುವ ಗುಣವನ್ನು ಕಾಗೆಯಿಂದ ಕಲಿಯಿರಿ”ಲೇಖನ ಕವಿತಾ ಶ್ರೀನಿವಾಸ್ ನಾಯಕ್  Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ -28 ಅರ್ಜುನ ಉವಾಚ ಡಾ.ವಿಶ್ವನಾಥ್‌ ಎನ್‌ ನೇರಳಕಟ್ಟೆ ಶಾಪದ ಕಥೆಗಳನ್ನು ತಿಳಿದು ಮುನ್ಡೆನದದ್ದು ಸ್ತ್ರೀ ರಾಜ್ಯದೆಡೆಗೆ           ಗುರುಗಳನ್ನು ಹಿರಿಯರನ್ನು ದೇವತೆಯರನ್ನು ಕಂಡಾಗ ಪ್ರಣಾಮ ಮಾಡುವುದು ರೂಢಿ. ಪಾರ್ವತಿಯೆದುರಿಗೆ ಬಂದ, ದುಷ್ಟದೃಷ್ಟಿ ಬೀರುತ ನಿಂದ ಆ ದೈತ್ಯ ಶಿವಸತಿಗೆ ನಮಿಸಲಿಲ್ಲ. ಅವಳನ್ನು ಬಯಸಿದ. ಮನ್ಮಥನ ಹೂಬಾಣ ಅವನನ್ನು ಬಾಧಿಸಿತು. ಕಾಮಾತುರಕ್ಕೆ ಒಳಗಾದ ದಾನವ. ಜಗದ ಮಾತೆಯೊಡನೆ ಮದನಕೇಳಿಯಾಡುವ ಕೆಡುಬಯಕೆ ಅವನಲ್ಲಿ ಮೂಡಿತು. ಪಾರ್ವತಿಯನ್ನು ಮಾತನಾಡಿಸಲು ಮುಂದಾದ.    ಮಹಾದೈತ್ಯನ ಮನದಿಂಗಿತ ಅರ್ಥವಾಯಿತು ಅವಳಿಗೆ. ಕಡುಕೋಪದಿಂದ ಕೆಡುಕಿನ ಕಾಯವನ್ನು ದಿಟ್ಟಿಸಿದಳು. ಉರಿಉರಿದು ಬೂದಿಯಾಗಿ ಹೋದ ಆ ರಾಕ್ಷಸ.  ಬಳಿಕ ಪಾರ್ವತಿದೇವಿ ಶಾಪರೂಪದ ಮಾತೊಂದನ್ನು ಆಡಿದಳು. “ಇಂದಿನಿಂದ ಈ ವನಕ್ಕೆ ಕಾಲಿಡುವ ಪುರುಷ ರೂಪದ ಪ್ರಾಣಿಗಳೆಲ್ಲವೂ ಹೆಣ್ಣಾಗಿ ಹೋಗಲಿ” ಎಂಬ ನುಡಿಯದು ಅವಳಿಂದ ಹೊರಬಂತು. ತನ್ನನ್ನೇ ಬಯಸಿದ ಅಸುರನ ಹೀನ ಗಂಡಸ್ತನದ ಬಗೆಗೆ ಆಕ್ರೋಶ ಹುಟ್ಟಿದ್ದು ಖಚಿತ ಅವಳಲ್ಲಿ. ಗಂಡಸ್ತನದ ಬಗೆಗಿನ ತಿರಸ್ಕಾರ ತುರೀಯಾವಸ್ಥೆಯನ್ನು ತಲುಪಿದಾಗ ಹೆಂಗಳೆಯರೇ ತುಂಬಿಹೋದರೆ ಒಳಿತು ಈ ಲೋಕದಲ್ಲಿ ಎಂಬ ಭಾವವೇ ಮೂಡುತ್ತದೋ ಏನೋ! ಆ ಕಾರಣಕ್ಕೇ ಇಂಥದ್ದೊಂದು ಘನಶಾಪ ಇತ್ತಳು ಎನಿಸುತ್ತದೆ, ಮುಂದಣ ಕಾಲಕ್ಕೂ ಸಲ್ಲುವಂತೆ.  ಆ ಬಳಿಕವೂ ಅವಳ ತಪಸ್ಸು ಮುಂದುವರಿಯಿತು. ಯಾವ ತಾಪತ್ರಯವೂ ಎದುರಾಗಲಿಲ್ಲ ಅವಳಿಗೆ ಪುರುಷವರ್ಗದವರಿಂದ. ಶಂಕರವಲ್ಲಭೆಯ ಶಾಪದ ಬಲದಿಂದಲೇ ನಮ್ಮ ಯಾಗದ ಕುದುರೆ ಹೆಣ್ಣಾಗಿ ಬದಲಾದದ್ದು.    ಹುಲಿಯ ರೂಪವನ್ನು ಪಡೆದದ್ದರ ಹಿಂದೆಯೂ ಒಂದು ಕಥಾನಕವಿತ್ತು. ಬಹಳ ಹಿಂದೆ ಅಕೃತವ್ರಣಾಖ್ಯ ಎಂಬ ಬ್ರಾಹ್ಮಣ ದಿವ್ಯಸ್ನಾನವನ್ನು ಮಾಡುವುದಕ್ಕಾಗಿ ಇಲ್ಲಿನ ಸರೋವರಕ್ಕೆ ಬಂದ. ಸಮಸ್ತ ಭೂಮಿಯ ಬಹುಕಡೆಗಳಲ್ಲಿ ತೀರ್ಥಸ್ನಾನವನ್ನು ಪೂರೈಸಿಯೇ ಬಂದಿದ್ದ ಆತ. ಸರೋವರದ ನೀರಿಗಿಳಿದಿದ್ದ ಆತ ವರುಣದೇವರ ಮಂತ್ರವನ್ನು ಜಪಿಸುತ್ತಿದ್ದ.    ಅದೇ ಸಮಯದಲ್ಲಿ ಮೊಸಳೆಯೊಂದು ಬಂದು ಅವನ ಪಾದವನ್ನು ಬಲವಾಗಿ ಕಚ್ಚಿತು. ಕಾಲನ್ನು ಹಿಡಿದು ರಭಸದಿಂದ ಎಳೆಯುತ್ತಿರುವ ಜೀವಿ ಯಾವುದದು ಎನ್ನುವುದು ಆತನ ಅರಿವಿಗೆ ಬರಲಿಲ್ಲ. ಜಲದ ಒಳಗಿದ್ದುದು ಅವನ ಹೊರನೋಟಕ್ಕೆ ದಕ್ಕಲಿಲ್ಲ. ಯಾವುದೋ ರಾಕ್ಷಸರ ಮಾಯೆಯೋ ಏನೋ! ಎಂಬ ಅಳುಕು ಮೂಡಿತು. ಹಾವು ಇರಬಹುದೇ! ಎಂಬ ಸಂಶಯ ಕಾಡಿತು. ದೈತ್ಯ ಗಾತ್ರದ ಮತ್ಸ್ಯವಿರಬೇಕಿದು ಎಂದುಕೊಂಡ. ಮಹಾಸುಳಿಯೆಂದು ಭಾವಿಸಿ ನೊಂದುಕೊಂಡ. ಮೊಸಳೆಯೇ ತನ್ನ ಕಾಲನ್ನು ಹಿಡಿದಿದೆ ಎಂಬ ಯೋಚನೆಯೇ ಬರಲಿಲ್ಲ ಅವನಲ್ಲಿ.  ಹಿಡಿತದಿಂದ ತಪ್ಪಿಸಿಕೊಂಡರೆ ಸಾಕು ಎಂದುಕೊAಡವನು ಬಲವಾಗಿ ಕಾಲನ್ನೊಮ್ಮೆ ಕೊಡವಿದ. ಅವನ ಆ ಬಿರುಸಿಗೆ ಮೊಸಳೆಯ ಬಲಿಷ್ಠ ದಂತಗಳು ಮುರಿದುಹೋದವು. ಹಿಡಿತವದು ಸಡಿಲವಾಯಿತು.    ತಕ್ಷಣವೇ ಸರೋವರದ ದಡವನ್ನು ಸೇರಿಕೊಂಡ ಆ ಬ್ರಾಹ್ಮಣ. ಅವನಿಗೆ ಕೋಪ ಬಂದಿತ್ತು. ನೀರಿನಲ್ಲಿರುವ ದೇವತೆಗಳು ಕೇಳಿಸಿಕೊಳ್ಳಲಿ ಎಂಬAತೆ ನುಡಿದ. “ಈ ಸರೋವರ ದುಷ್ಟಭಾವವನ್ನು ಹೊತ್ತುನಿಂತಿದೆ. ಅತಿಯಾದ ಭಯವನ್ನು ನನ್ನಲ್ಲಿ ಹುಟ್ಟುಹಾಕಿದೆ. ಆ ಕಾರಣಕ್ಕೆ ಇನ್ನುಮುಂದೆ ಈ ಸರೋವರದ ನೀರನ್ನು ಕುಡಿದ ಜೀವಿಗಳು ಭೂಮಿಗೆ ಅತೀ ಭೀತಿಯನ್ನು ಉಂಟುಮಾಡುವAತೆ ಹುಲಿಯಾಗಿ ಹೋಗಲಿ” ಎಂದು ಶಾಪವಿತ್ತ.  ಬೇರೆಲ್ಲಾ ಪ್ರದೇಶಗಳ ನದಿನೀರಿನಲ್ಲಿ ಮಿಂದೆದ್ದಿದ ಅವನಿಗೆ ಇಲ್ಲಿ ಮಾತ್ರ ಈ ಬಗೆಯ ಭಯಾನಕ ಅನುಭವ ಆದದ್ದು. ಆದ್ದರಿಂದಲೇ ಆ ಬಗೆಯ ಶಾಪವೊಂದನ್ನು ಕೊಟ್ಟ ಸರೋವರದ ನೀರಿಗೆ. ಹುಲಿಯಾಗಲು ಇಚ್ಛಿಸದೆ ಸರೋವರದ ಜಲವನ್ನು ಸರ್ವ ಜೀವಿಗಳೂ ತಿರಸ್ಕರಿಸುವಂತಾಗಲಿ ಎಂಬ ಉದ್ದೇಶ ಇದ್ದಿರಬಹುದು ಅವನಲ್ಲಿ. ಈ ಕಾರಣಕ್ಕೆ ನಮ್ಮ ಯಜ್ಞಾಶ್ವ ವ್ಯಾಘ್ರವಾಗಿ ಪರಿವರ್ತನೆಯಾದದ್ದು.    ಕುದುರೆಯ ಈ ಬಗೆಯ ರೂಪಾಂತರವನ್ನು ಆ ಕೃಷ್ಣನ ಸ್ಮರಣೆಯ ಬಲದಿಂದ ಸರಿಮಾಡಿದೆ. ನನ್ನ ಜೊತೆಗೆ ಇದ್ದ ಸೈನಿಕರು ನನ್ನ ಪ್ರಾರ್ಥನೆಗೆ ಶ್ರೀಕೃಷ್ಣ ಪ್ರತಿಸ್ಪಂದಿಸಿದ ಬಗೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದರು. “ಆಪತ್ತಿನ ಭೀತಿ ಈ ಪಾಂಡವರನ್ನು ಯಾವತ್ತಿಗೂ ಬಾಧಿಸಲಾರದು. ಇವರಿಗೆ ನೋವಾಗುವುದನ್ನು, ಭಯ ಎದುರಾಗುವುದನ್ನು ಆ ಕೃಷ್ಣ ಸಹಿಸಲಾರನು. ಅವನ ನೆರವು ಇವರಿಗೆ ಯಾವಾಗಲೂ ಇದೆ” ಎಂದು ಸೈನಿಕರು ಮಾತನಾಡುತ್ತಿದ್ದುದನ್ನು ಕೇಳಿ ಹೆಮ್ಮೆಯ ಭಾವ ಮೂಡಿತು. “ಶ್ರೀಕೃಷ್ಣ ತನ್ನ ಭಕ್ತರನ್ನು ಯಾವತ್ತೂ ಕಾಪಾಡುತ್ತಾನೆ ಎನ್ನುವುದು ಈ ಕ್ಷಣಕ್ಕೆ ಮತ್ತೊಮ್ಮೆ ಸಾಬೀತಾಯಿತು. ನಂಬಿದವರ ರಕ್ಷಣೆ ಮಾಡುವುದೇ ಮಹಾಸಂತೋಷ ಆ ಅಸುರಾರಿಗೆ. ಅಶ್ವಮೇಧ ಯಾಗಕ್ಕೆ ಅಡಿಗಡಿಗೆ ಎದುರಾದ ಅಡೆತಡೆಗಳನ್ನು ಮೀರಿ ಪಾಂಡುರಾಜನ ಸುತರನ್ನು ಅಪಾಯದಿಂದ ಪಾರುಮಾಡುವುದನ್ನೇ ಮಹಾಕಾರ್ಯವಾಗಿಸಿಕೊಂಡಿದ್ದಾನೆ ಆ ಮೋಹಕ ಮಾಧವ” ಎಂಬ ಮಾತೂ ಕೇಳಿಬಂತು. ಹೆಣ್ಣು ಕುದುರೆಯಾಗಿ ಹುಲಿಯಾಗಿ ಮತ್ತೆ ನಿಜರೂಪವನ್ನು ಕುದುರೆ ಪಡೆದುದನ್ನು ಬಗೆಬಗೆಯ ವಾದ್ಯಗಳ ಶಬ್ದವನ್ನೆಬ್ಬಿಸಿ ಸಂಭ್ರಮಿಸಿದರು ನಮ್ಮ ಪಾಳಯದ ಸೈನಿಕರು.  ಅತೀವವಾಗಿ ಹಿಗ್ಗಿದೆ ನಾನು. ಶ್ರೀಕೃಷ್ಣ ನಮಗಿತ್ತ ಉಪಕಾರವನ್ನು ನಮ್ಮ ಸೇನೆ ಅರಿತಿದೆಯಲ್ಲಾ ಎಂದು ಸಂಭ್ರಮಿಸಿದೆ. ಜಗವೆಲ್ಲಾ ಅರಿಯುವಂತೆ ಆ ಹರಿಯಿಂದ ಮಹದುಪಕಾರವನ್ನು ಪಡೆಯುತ್ತಿರುವ ನಾನೇ ಧನ್ಯ ಎಂಬ ಭಾವ ಮೂಡಿತು ನನ್ನಲ್ಲಿ.  ಪಾರಿಪ್ಲವ ದೇಶದಿಂದ ನಮ್ಮ ಕುದುರೆ ಮುಂದಕ್ಕೆ ಚಲಿಸಿತು. ಅತಿವೇಗ ಪಡೆಯಿತು ಅದರ ಚಲನೆ. ಬಹಳ ದೇಶಗಳು ಕಳೆದುಹೋದವು. ಈಗ ಕುದುರೆ ಸಾಗುತ್ತಿದ್ದುದು ರಾಜ್ಯದ ಒಳಸೀಮೆಯಲ್ಲಿ. ಅದಾವ ಪ್ರದೇಶ ಎನ್ನುವುದನ್ನು ವಿಚಾರಿಸಿ ತಿಳಿದುಕೊಂಡೆ. ಹೆಂಗಳೆಯರು ಮಾತ್ರವೇ ಇರುವ ಪ್ರದೇಶ ಅದೆನ್ನುವುದು ತಿಳಿದುಬಂತು…  ಡಾ. ವಿಶ್ವನಾಥ ಎನ್ ನೇರಳಕಟ್ಟೆ    

Read Post »

ಕಾವ್ಯಯಾನ

ರಘುಪ್ರಸಾದ ಮರಿಯಮ್ಮನಹಳ್ಳಿ  ಅವರ ಕವಿತೆ “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?”

ಕಾವ್ಯ ಸಂಗಾತಿ ರಘುಪ್ರಸಾದ ಮರಿಯಮ್ಮನಹಳ್ಳಿ   “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?” ಈ ಹೊತ್ತಿನ ದಿನಗಳಲ್ಲಿ ನಿನ್ನ ಹಾಗೆ ಬದುಕಲುಂಟೆ ಗಾಂಧಿಕ್ಷಣ ಕ್ಷಣಕೂ ಹೊರಳಿಸುವ ನಾಲಗೆಗಳ ನಡುವೆಸತ್ಯವನ್ನೆ ಉಸಿರಾಡಿದಂತೆ ಬದುಕಲುಂಟೆ?!ಶತಾಯ ಗತಾಯ ಗಳಿಸುವ ಉಳಿಸುವಯೋಚನೆ ಯೋಜನೆಗಳ ನಡುವೆ ತಡವರಿಸುವ ನಾವುನಿನ್ನ ಹಾಗೆ ಅರೆಫಕೀರನಂತೆ ಬದುಕಲುಂಟೆ ಗಾಂಧಿ?! ಧರ್ಮಗಳಿಗೆ ಬಣ್ಣಬಳಿದು,ಜಾತಿಗೊಂದು ಮಠ ಕಟ್ಟಿ ಹೆಮ್ಮೆಯಿಂದ ಬೀಗುತಿರುವವರು ನಾವುನಿನ್ನ ಹಾಗೆ ಶ್ವೇತ ಭಾವದಿ ಬದಕುಲುಂಟೆ ಗಾಂಧಿ?!ಬೆರಳುಮಾಡುವುದನ್ನೆ ಗುರಿಯಾಗಿಸಿಕೊಂಡವರುಲೋಪಗಳ ಹುಡುಕುವುದರಲ್ಲೇ ಕಳೆದು ಹೋದವರುನಿನ್ನ ಸತ್ಯ ಪ್ರಯೋಗಗಳ ಅರ್ಥವ ತಿಳಿಯದೆ ಫೋಟೋ ಫ್ರೇಮಿನಲ್ಲಿ ಬಂಧಿಸಿಟ್ಟು ಪೂಜೆಗೈಯುವವರುನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?! ಮೊದಲು ನೀನು ಬೆಲ್ಲವ ತ್ಯಜಿಸಿ ಆ ನಂತರಅದರ ವರ್ಜ್ಯದ ಬಗ್ಗೆ ಮಾತಾಡಿದೆ ಉಪನ್ಯಾಸ, ಭಾಷಣಗಳೆ ಇಂದು ಮುನ್ನೆಲೆಯಲ್ಲಿರುವಾಗನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?ಅನ್ಯರೆನಿಸಿದ ವಿದೇಶಿಗರಿಗೆ ಏಸುವಿನಂತೆ ಕಂಡನಿನ್ನ ನಿಲುವು ನಮಗಿನ್ನೂ ಅರ್ಥವಾಗದಿರುವಾಗ ನಾವು ನಿನ್ನ ಹಾಗೆ ಬದುಕಲುಂಟೆ ಗಾಂಧಿ?! ಗಾಂಧಿ ಎಂಬ ಹೆಸರೇ ಭಾರವಾದ ಈ ಹೊತ್ತಿನಲಿ“ಸರಳ ಜೀವನ ಉನ್ನತ ಚಿಂತನೆ”“ಸೇವೆಯ ಪ್ರತಿಫಲ ಸೇವೆಯೇ”ಎದೆಯೊಳಿಳಿಸಲಾಗದ ತತ್ವಗಳಾಗಿರುವಾಗ,ಈಶ್ವರ-ಅಲ್ಲಾ, ರಾಮ-ರಹೀಮ ಎಲ್ಲಾ ಒಂದೇಎಂದ ನಿನ್ನ ದೇಶದಲ್ಲಿ ಹೆಸರು, ಬಣ್ಣಗಳೇ ರಾರಾಜಿಸುತ್ತಿರುವಾಗನಿನ್ನ ಹಾಗೆ ಬದುಕಲುಂಟೆ ಗಾಂಧಿ?! ಆದರೂ ಹತಾಶೆಯ ಮೀರುವೆನಿನ್ನಂತೆ  ಬದುಕಲಾಗದಿದ್ದರೂ ಆತ್ಮ ವಂಚನೆಯಲಿ ಬಳಲದಂತೆ ಬದುಕುವ ಸರಳ ಮಾರ್ಗವನ್ನು ಕಲಿತಿದ್ದೇನೆ.ಮತ್ತೆ ಮತ್ತೆ ನನ್ನೊಳಗೆ ನಿನ್ನ ಕರಗಿಸಿಕೊಳ್ಳುತ್ತೇನೆ.ನೀ ತೋರಿದ ಬದುಕಿನ ಸಂತಸದ ಸರಳ ನಡೆಯ ಕಂಡು ಪುಳಕಿತನಾಗುತ್ತೇನೆ.ಜೀವಿಸುತ್ತೇನೆ, ಜೀವನವನ್ನು ಸಂಭ್ರಮಿಸುತ್ತೇನೆ.  ರಘುಪ್ರಸಾದ ಮರಿಯಮ್ಮನಹಳ್ಳಿ  

ರಘುಪ್ರಸಾದ ಮರಿಯಮ್ಮನಹಳ್ಳಿ  ಅವರ ಕವಿತೆ “ನಿನ್ನ ಹಾಗೆ ಬದುಕಲುಂಟೆ ಗಾಂಧಿ…?” Read Post »

ಅಂಕಣ ಸಂಗಾತಿ, ಮನದ ಮಾತುಗಳು

ಅಂಕಣ ಸಂಗಾತಿ ಮನದ ಮಾತುಗಳು ಜ್ಯೋತಿ ಡಿ.ಬೊಮ್ಮಾ ಸುಲಗ್ನ ಸಾವಧಾನ.. ಈ ವರ್ಷದ ಬ್ಯಾಸಗಿ ಧಗಿಗಿ ನಮ್ಮ ಉತ್ತರ ಕರ್ನಾಟಕ ದ ಮಂದಿ ಒಣಗಿದ ಹಪ್ಪಳಂಗ ಆಗಿಬಿಟ್ಟಿವಿ. ಸದಾ ಬಿಸಿಲು ಧಗಿದಾಗೆ ಇರೋ ನಮಗೂ ಈ ವರ್ಷ ಬಿಸಿಲಿನ ತಾಪ ಬಾಳ ಸಾಕಮಾಡ್ತು.ಮಳಿ ಬಂದ್ರೂ ನಮ್ಮ ಕಡಿ ಧಗಿ ಕಮ್ಮಿ ಆಗಲ್ಲ.ಇನ್ನೂ ಹೆಚ್ಚೆ ಆಗತದ.ಕಾದ ಹಂಚಿನ ಮ್ಯಾಲ್ ನೀರು ಸುರುದ ಮ್ಯಾಲ ಬರೋ ಉಗ ಹ್ಯಾಂಗ್ ಶಾಖ ಕೊಡತದ , ಆ ನಮೂನಿ ಮಳಿಗಾಲದ ಧಗಿ ಇರತದ. ಇದರೊಂದಿಗೆ ಬದುಕು ಸಾಗತಿರತದ.ಪ್ರಕೃತಿ ಅದರ ಕೆಲಸ ಮಾಡತಿರತದ.ಅದರೊಂದಿಗೆ ನಮ್ಮ  ಬದುಕು ಸಾಗತಿರತದ.ಈ ವರ್ಷ ಬ್ಯಾಸಗಿದಾಗ ಮದುವೆಗಳ ಭರಾಟಿ ಬಾಳ ಇತ್ತು.ವಯಸ್ಸಿಗಿ ಬಂದ ಮಕ್ಕಳಿಗಿ ಮದುವೆ ಮಾಡೊದು ಒಂದು ದೊಡ್ಡ ಜವಾಬ್ದಾರಿ ಹೆತ್ತವರಿಗಿ.ಮದುವಿ ಆದ ಮ್ಯಾಲ ಜವಾಬ್ದಾರಿ ಮುಗಿತು ಅಂದುಕೊಳ್ಳೊದೆ ತಪ್ಪು ಅನಸ್ತದ. ಮದುವೆ ಮಾಡ್ದ ಮ್ಯಾಲ್ ಜವಾಬ್ದಾರಿ ಹೆಚ್ಚಿಗೆ ಆಗ್ತಾವ ಹೊರತು ಕಮ್ಮಿ ಆಗಲ್ಲ. ನೌಕರಿ ಮಾಡೊ ಹೆಣ್ಣಮಕ್ಳು ಇದ್ರ ಅವರ ಮಕ್ಕಳಿಗೆ ನೊಡಕೊಂಡ್ರ ಅವರಿಗಿ ನೌಕರಿ ಮಾಡಲಕ್ಕ ಸಾದ್ಯ.ಇಲ್ಲಂದ್ರ ಮಕ್ಕಳು ಮನಿ ನೌಕರಿ ಇವೆಲ್ಲ ಹೊಂದಿಸಲಕ್ಕ ಬಡಿದಾಡಿ ಮಾನಸಿಕ ನೆಮ್ಮದಿ ಕಳಕೊಂಡು ಸಂಸಾರದಲ್ಲಿ ಜಗಳ ಸುರು ಆಗತವ. ಹಾಗಂತ ಹೆಣ್ಣುಮಕ್ಕಳು ಬರಿ ಮಕ್ಕಳು ಹಡ್ದು ಮಕ್ಕಳಿಗಿ ಆರೈಕೆ ಮಾಡಕ್ಕೊಂತ ಮನ್ಯಾಗೆ ಇರಬೆಕಂದ್ರೂ ಈಗಿನ ಕಾಲದಾಗ ಅದು ಸಮಂಜಸ ಅನಸಲ್ಲ.ಪ್ರತಿಯೊಬ್ಬ ಹೆಣ್ಣಮಗಳು ಸ್ವಾವಲಂಬಿ ಆಗಿರಬೇಕು.ಹಿಂದಿನ ಕಾಲದಾಗ ಗಂಡು ಹೊರಗ ದುಡಿಬೇಕು ಹೆಂಗಸು ಮನ್ಯಾಗ ದುಡಿಬೇಕು ಎಂಬ ನಿಯಮ ಇತ್ತು.ಈಗಿನ ಕಾಲದಾಗ ಗಂಡನ ದುಡಮೆ ಒಂದೇ ಸಾಕಾಗಲ್ಲ.ಇಬ್ಬರೂ ದುಡಿದ್ರ ಮಾತ್ರ ಆರ್ಥಿಕ ಹೊರೆ ಕಮ್ಮಿ ಆಗತದ. ಅದಕ್ಕ ಈಗಿನ ಜನರೇಷನ್ ನವ್ರು ಮದುವೆನು ಬ್ಯಾಡ ಮಕ್ಳು ಬ್ಯಾಡ ಎಂಬ ನಿರ್ಣಯಕ್ಕ ಬರತಿದ್ದಾರ. ಮದುವೆ ಮಾಡಿಕೊಂಡು ಅವರು ಗಂಡ ಹೆಂಡತಿಯಾಗಿ ಮಕ್ಳು ಹುಟ್ಟಿಸಿ ಅವರಿಗಿ ಬೇಕಾದ ಸವಲತ್ತುಗಳನ್ನು ಕೊಟ್ಟು ತಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವದು ಈಗಿನ ತಲೆಮಾರುಗಳಿಗೆ ಅಷ್ಟು ಸುಲಭ ಅಲ್ಲ. ಗಂಡ ಹೆಂಡತಿ ಎಂಬ ಹೊಂದಾಣಿಕೆ ಕೊರತೆ ಬಾಳ ಅದ.ಇಬ್ಬರೂ ಸ್ವಾವಲಂಬಿ ಗಳು ಇದ್ದರಂತೂ ನಡುವೆ ಸ್ವಾಭಿಮಾನ ತುಸು ಹೆಚ್ಚೆ ಇರತದ. ಹೆತ್ತವರ ಬುದ್ದಿಮಾತು ಕೇಳದಷ್ಟು ಸ್ವನಿರ್ಧಾರ ಮಕ್ಕಳು ತಗೊಳತಾರ. ಸಂಸಾರದಲ್ಲಿ ಎರುಪೇರು ಶುರುವಾದ್ರ ತಪ್ಪು ಯಾರ್ದುಎಂದು ನಿರ್ಣಯ ಕ್ಕ ಬರಲಾರದಂತ ನೆಪಗಳು ಇಬ್ಬರಲ್ಲೂ ಇರತಾವ.ಆಗ ಯಾರಿಗೆ ಬುದ್ದಿ ಹೇಳಬೇಕು..! ಇಂತಹ ಸಂದರ್ಭದಾಗ ಹೆಣ್ಣು ಮಕ್ಕಳಿಗೆ ಬುದ್ದಿ ಹೇಳೊದು ಸಹಜ.ಹೊಂದಿಕೊಂಡು ಹೋಗು , ತಾಳಕೊಂಡು ಹೋಗು , ಗಂಡ ಅಂದ್ರ ಅನಸ್ಕೋಬೇಕು..ಇವೆಲ್ಲವೂ ಹಿಂದಿನಿಂದ ಮಗಳಿಗಿ ಹೇಳೊ ಬುದ್ದಿವಾದಗಳು. ಅಂತಹ ಸಂದರ್ಭದಾಗ ಹೆಣ್ಣಮಗಳಿಗೆ ಬ್ಯಾರೆ ದಾರಿ ಇರಲ್ಲ.ಈ ಕಡಿ ಗಂಡನ ಮನ್ಯಾಗೂ ಇರಲಾರ್ಧ ತವರು ಮನಿಗೂ ಬರಲಾರ್ದ ಸಂದಿಗ್ಧ ಪರಿಸ್ಥಿತಿ ಯೊಳಗ ಆತ್ಮಹತ್ಯೆ ಅಂತಾ ನಿರ್ಧಾರಕ್ಕ ಬಂದು ಬಿಡತಾರ. ಒಬ್ಬ ಹೈಕೋರ್ಟ್ ಜಡ್ಜ ಹೇಳಿದ್ರು ಸಾಯೋ ಮಗಳಿಗಿಂತ ವಿಚ್ಚೇದಿತ ಮಗಳು ಇರಲಿ ಅಂತ.ಕೌಟುಂಬಿಕ ಕಲಹದಿಂದ ಹೆಣ್ಣಮಕ್ಳು ಯಾರ ಸಪೋರ್ಟ್ ಮಾನಸಿಕವಾಗಿ ನೊಂದು  ಸಾಯೊ ಅಂತಾ ನಿರ್ಧಾರ ತಗೊತಾರ.ಆ ನಿರ್ಧಾದ ಅವರ ಮನಸ್ಸಿನಾಗ ಗಟ್ಟಿ ಆಗಲಿಕ್ಕೆ ಬಿಡಲಾರ್ದೆ ತಂದೆ ತಾಯಿಗಳು ನಾವು ಇದ್ದೆವೆ ಎಂಬ ಧೈರ್ಯ ಆದ್ರು ಮಗಳಿಗಿ ಕೊಡಬೇಕು.ಕೊಟ್ಟ ಹೆಣ್ಣು ಕುಲಕ್ಕ ಹೊರಗ ಅಂತ ಅವಳಿಗಿ ಗಂಡನ ಆಸರೆ ಇಲ್ದೆ , ತವರಿನ ಆಸರೆ ಇಲ್ದೆ ಅವಳು ಸಾಯೋ ನಿರ್ಧಾರ ಮಾಡತಾಳ.ಈಗಿನ ಮಕ್ಕಳಿಗೆ ಸಾಯೊ ನಿರ್ಧಾರಕ್ಕ ಬರೊದು ಎಷ್ಟು ಸುಲಭ ಆಗಿಬಿಟ್ಟದ..! ಜೀವನದ ಒಂದಿಷ್ಟು ಕಷ್ಟಗಳು ಸಹಿಸಲಕ್ಕ ಆಗಲ್ಲ ಎಂಬ ಮನಸ್ಥಿತಿ ಗಿ ಬಂದ ಬಿಟ್ಟಾರ. ಸ್ವಲ್ಪ ಕೂಡ ಜೀವನದಾಗ ಏರುಪೇರಾದ್ರೂ ಆತ್ಮಹತ್ಯೆ ಮಾಡ್ಕೋತಾರ.ಈಗಿನ ಮಕ್ಕಳ ಮನಸ್ಥಿತಿ ಅಷ್ಯಾಕ ದುರ್ಬಲ ಆಗಬಿಟ್ಟದ. ಬರಿ ಹೆಣ್ಣಮಕ್ಖೆ ಅಲ್ಲ ಸಂಸಾರದ ಗಲಾಟೆದಾಗ ಗಂಡುಮಕ್ಳು ಕೂಡಾ ಆತ್ಮಹತ್ಯೆ ಮಾಡಕ್ಕೊಳ್ಳತಿದ್ದಾರ.ಹೆಂಡತಿ ಬಿಟ್ಟು ಹೋದ್ಳು ಅಂತಲೋ , ಮತ್ತೊಬ್ಬ್ರರ ಜೋತೆ ಸಂಭಂಧ ಅದ ಅಂತಲೋ  , ಜಗಳ ಆಡ್ತಾಳೆ ಅಂತಲೋ , ಪದೆ ಪದೇ ತವರ ಮನಿಗಿ ಹೋಗತಾಳ ಅಂತಲೋ..ಕ್ಷುಲ್ಲಕ ಕಾರಣಗಳಿಗಿ ಆತ್ಮಹತ್ಯ ಮಾಡಿಕೊಳ್ಳುವ ಗಂಡಸರ ಬಗ್ಗೆ ಕೆಳತಿರತೀವಿ. ಸಂಸಾರದಲ್ಲಿನ ಜಗಳ ಆತ್ಮಹತ್ಯೆ ಯಲ್ಲಿ ಕೊನೆಯಾಗಬೇಕಾ..! ಈಗಿನ ಮದುವೆಗಳು ಎಷ್ಟು ಜಲ್ದಿ ನಿರ್ಣಾಯಕ ಹಂತಕ್ಕ ಬರತಿದ್ದಾವ. ತಪ್ಪು ಯಾರದು ಎಂದು ನಿರ್ಧರಿಸೊದು ಹ್ಯಾಂಗ್. ಅವರವರ ಜಾಗಕ್ಕ ಅವರವರದೆ ಸರಿ .ಎಲ್ಲಿ ತಪ್ಪತಿದ್ದೆವೆ ಎಂದು ತಿಳಕೊಳ್ಳಕ್ಕ ಪ್ರಯತ್ನಿಸುವ ತಾಳ್ಮೆ ಇಬ್ಬರಿಗೂ ಇಬ್ಬರ ಕಡೆಯವರಿಗೂ ಇಲ್ಲ.ಸಾವು ಒಂದೇ ಪರಿಹಾರ ಎಂದು ನಿರ್ಣಯಿಸಿಕೊಂಡವರಿಗೆ ಯಾವ ಉಪದೇಶಗಳು ಕಿವಿಯೊಳಗ ಹೋಗಲ್ಲ. ಇನ್ನೂ ಮದುವೆ ಎನ್ನುವದು ಈಗಿನ ತಲೆಮಾರಿನವರಿಗೆ ಅವಶ್ಯಕ ವಿಷಯ ಅಲ್ಲ.ಹೆತ್ತವ್ರು ಕೂಡ ಮಕ್ಕಳು ಸ್ವಾವಲಂಬಿ ಆಗಿ ದುಡುದು ತಮ್ಮ ತಾವು ನೋಡಕೊಳ್ಳತಾರ ಅನ್ನೊ ಭರವಸೆ ಬರುವವರೆಗೂ ಮಕ್ಕಳ ಮದುವೆಗೆ ಒತ್ತಾಯ ಮಾಡ್ಲೆಬಾರ್ದು.ಹೆಣ್ಣು ಮಕ್ಕಳಿಗಂತೂ ಸ್ವಾವಲಂಬಿ ತನ ಇನ್ನೂ ಅಗತ್ಯ ಅದ. ಗಂಡ ಗಳಿಸಿ ತಂದು ತನ್ನ ಎಲ್ಲಾ ಆಸಿ ಆಕಾಂಕ್ಷೆ ಪೂರಾ ಮಾಡ್ಲಿ ಎಂದು ಬಯಸೋದು ನೀಚತನ.ತನ್ನ ಮತ್ತು ಮಕ್ಕಳ ಜವಾಬ್ದಾರಿ ಗಂಡ ಒಬ್ಬಂದೆ ಅಲ್ಲ.ಮಕ್ಕಳು ಹಡೆದು ಕೊಟ್ಟ ಮಾತ್ರಕ್ಜೆ ತಾನು ಮಹಾನ್ ಅಲ್ಲ ಎಂಬುದು ಪ್ರತಿಯೊಬ್ಬ ಹೆಣ್ಣಮಕ್ಳು ತಿಳಕೋಬೇಕು. ಮದುವೆ ಅಂದ್ರ ಅವಲಂಬನೆ ಅಲ್ಲ.ಒಬ್ಬರಿಗೊಬ್ಬರು ಸಹಕಾರ ನಿಡೋದು.ವರದಕ್ಷಿಣೆ ಎಂಬುದು ಅಂದಿಗೂ ಇಂದಿಗೂ ಚಲಾವಣೆಯಲ್ಲಿ ಇರುವ ವಿಷಯ.ಹೆಣ್ಣು ಕಲತು ನೌಕರಿ ಮಾಡತಿದ್ದರೂ ತವರಿನಿಂದ ಏನಾದ್ರೂ ತರಲಿ ಎಂಬ ಹಂಬಲ ಗಂಡಿನ ಕಡೆಯವ್ರಿಗಿ ಇದ್ದೆ ಇರತದ.ಇದು ಪರೋಕ್ಷವಾಗಿ ಮಾತಿನ ಮುಖಾಂತರ ಬರತಾವ. ಗಂಡ ಅತ್ತೆ ಮಾವ ಈ ವಿಷಯಗಳು ಪದೇ ಪದೇ ಅನ್ನುವದು ಸೊಸೆಗೆ ಸಹಿಸದೆ ಜಗಳ ಶುರು ಆಗತಾವ.ವರದಕ್ಷಿಣೆ ಕಿರುಕುಳದ ಸಾವುಗಳು ಸಾಮಾಜಿಕ ಪಿಡುಗು. ಇದು ದುಡ್ಡಿದ್ದವರಲ್ಲೆ ಹೆಚ್ಚು . ಎಷ್ಟಿದ್ದರೂ ಇನ್ನೂ ಬೇಕು ಎಂಬ ಆಸೆ. ಎಷ್ಟೊಂದು ಧುಮ್ ಧಾಮ್ ಖರ್ಚು ಮಾಡಿ ಮಕ್ಕಳ ಮದುವೆ ಮಾಡ್ತೆವೆ.ಮದುವಿ ಆದಮ್ಯಾಲ್ ಜವಾಬ್ದಾರಿ ಮುಗಿತು ಅಂದುಕೊಳ್ಳದೆ ಮಕ್ಕಳಿಗೆ ಒತ್ತಾಸೆಯಾಗಿ ಇರಬೇಕು.ನಿಮ್ಮ ಜೊತೆಗೆ ನಾವಿದ್ದೆವೆ , ಎಂತಾ ಸಂದರ್ಭದಾಗೂ ನಿಮ್ಮ ಹಿಂದ ನಾವಿದ್ದೆವೆ ಅಂತ ಗಂಡ ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ದೈರ್ಯ ತುಂಬಬೇಕು. ಈಗಿನ ಪಿಳಿಗೆ ಸ್ವತಂತ್ರ ವಾಗಿ ಇರಬೇಕು ಅಂತ ಅಪೇಕ್ಷೆ ಪಡತಾರ.ಇರಲಿ , ತಂದೆ ತಾಯಿ ಕೂಡ ಮಕ್ಕಳಿಗಿ ಒಜ್ಜಿ ಆಗಲಕ್ಕ ಇಷ್ಟ ಪಡಲ್ಲ. ಮನಿಯೊಳಗ ಅತ್ತಿ ನಾದನಿ ಮಾವ ಇದ್ರ ಅವರ ಜೋಡಿ ಹೊಂದಾಣಿಕಿ ಆಗ್ಧೆ ಜಗಳ ಬರತದ ಅಂದ್ರ ಒಂದು ಕಾರಣ ಅನ್ನಬಹುದು.ಇಷ್ಟ ಪಟ್ಟು ಒಪ್ಪಿ ಮದುವೆ ಮಾಡಿಕೊಂಡು ಗಂಡ ಹೆಂಡತಿ ಇಬ್ರೆ ಇದ್ರು ಜಗಳ ಆಡಿ ಡೈವೊರ್ಸ ಮಾಡ್ಕೋತಾರ..ಆತ್ಮಹತ್ಯೆ ಮಾಡ್ಕೋತಾರ ಅಂದ್ರ ಇದಕ್ಕೆ ಯಾವ ಕಾರಣ ಹುಡಕಬೇಕು..!ಇಲ್ಲಿ ಸಮಸ್ಯೆ ಇರೊದು ಈಗಿನ ಯುವ ಜನರ ವಿಚಾರದಲ್ಲಿ.ತಾಳ್ಮೆಯ ಕೊರತೆ.ಮಕ್ಕಳಿಗಿ ಯಾವ ಕೊರತೆ ಇಲ್ದಂಗ ಬೆಳಸ್ತಿರೊ ತಂದೆ ತಾಯಿಗಳ್ದು ತಪ್ಪು. ಬಿಸಲು ಮಳಿ ಗಾಳಿಗಿ ಹೊಇಗಲಾರದಂಗ ಅವ್ರಿಗಿ ಕಾಪಾಡಿ ಒಂದು ಸರಿ ಅವ್ರು ಇವೆಲ್ಲ ಅನುಭವಿಸೊ ಪರಿಸ್ಥಿತಿ ಬಂದ್ರ ಸಹಿಸಲ್ಲ. ನಾವು ತಂದೆ ತಾಯಿಗಳು ಮಕ್ಕಳ ವಿಷಯವಾಗಿ ಅತೀ (possessive)ಸ್ವಾಮಿತ್ವ ಭಾವನೆ ಹೊಂದತಿದ್ದಿವಿ. ಅವರಿಗಿ ಯಾವ ನಿರ್ಧಾರ ತಗೊಳಕ್ಕ ಬಿಡಲಾರದಂಗ ಅವರಿಗಿ ಕಣ್ಣರೆಪ್ಪೆ ಹಾಂಗ ನೋಡಕೊಂಡು ಅವಲಂಬಿಸಿ ಇರೊಹಂಗ ಮಾಡ್ತಿರೋದು ಕೂಡ ಅವ್ರು ಬದುಕು ಎದುರಿಸಲಿಕ್ಕ ಆಗ್ದೆ ಇರೊದಕ್ಕ ಒಂದು ಕಾರಣ. ಮಕ್ಕಳು ಅಂದ್ರ ನಮ್ಮ ಮೂಲಕ ಈ ಭೂಮಿಗೆ ಬಂದ ಮುಂದಿನ ಪಳೆಯುಳಿಕೆ ಗಳು.ಅವ್ರೆ ನಮ್ಮ ಇಡೀ ಜಗತ್ತು ಅನ್ನೊಹಂಗ ಅವ್ರನ್ನ ಬೆಳೆಸೋದು ಒಂದು ರೀತಿ ಮಕ್ಕಳನ್ನು ದುರ್ಬಲ ಮಾಡ್ಲಿಕ್ಕೆ ಕಾರಣ ಆಗತದ. ಎಷ್ಟೋ ಮಕ್ಳು ತಂದೆ ತಾಯಿಗಿ ಹೊರೆ ಆಗತಾರ.ತಮಗ ಆಸರೆ ಆಗಬೇಕಾದ ಮಕ್ಕಳಗಿ ಜೀವನ ಪರ್ಯಂತ ತಾವೆ ಆಸರೆ ಆಗಬೇಕಾದ ಸಂದರ್ಭಗಳು ಇದ್ದಾವ. ವ್ಯಸನಕ್ಕ ಅಂಟಿಕೊಂಡ ಮಕ್ಕಳಿಗಿ , ಬೇಜವಾಬ್ದಾರಿ ಹೊಂದಿರುವ ಮಕ್ಕಳಿಗಿ ಮದುವೆ ಮಾಡಿದ್ರ ಹಾದಿಗಿ ಬರತಾನ ಅಂತ ಒಂದು ಹೆಣ್ಣು ತಂದು ಕಟ್ಟಿದ್ರ ಒಬ್ಬರ ಜೊತೆ ಮತ್ತೊಬ್ರ ಬದುಕು ಹಾಳು ಮಾಡಿದಂಗ. ಮದುವೆ ಅನ್ನುವದು ಕೇವಲ ಹೊಂದಾಣಿಕೆ ಅಲ್ಲ.ಸಾಂಗತ್ಯ.ಇಬ್ಬರು ಒಬ್ಬರಿಗೊಬ್ಬರು ಆಸರೆ ಆಗಿ ಇರಬೇಕಾದ ಸಂಭಂಧ.ಇದನ್ನು ವಿಜೃಂಭಣೆಯಿಂದ ಹಣ ಖರ್ಚು ಮಾಡಿ ಮಾಡುವದು ಬಿಡುವದು ಅವರವರ ಆಸಕ್ತಿ ಗೆ ಮತ್ತು ಆರ್ಥಿಕ ಸ್ಥಿತಿ ಮ್ಯಾಲ ಅವಲಂಬಿಸ್ತದ. ಅಷ್ಟು ಖರ್ಚು ಮಾಡಿ ಮಾಡಿದ ಮದುವೆ ಗಳ ಜೋಡಿಗಳು ಎಷ್ಟು ಸುಖ ಸಂತೋಷ ದಿಂದ ಜೀವನ ಮಾಡತಿದ್ದಾರ ಅನ್ನೊದು ಇವತ್ತಿನ ಚಿಂತನೆ ವಿಷಯ. ಹಾಗಂತ ಮದುವೆ ಮಾಡೋಧ ಬ್ಯಾಡ ಅಂತಲ್ಲ.ಮೊದಲು ನಮ್ಮ ಮಕ್ಕಳ ಸ್ವಾವಲಂಬಿ ತನ ಮತ್ತು ಅವರು ಸಂಬಂಧಗಳನ್ನು ನಿಭಾಯಿಸುವ ರೀತಿಗಳನ್ನು ನಾವು ಪರಿಕ್ಷಿಸಬೇಕು.ಅದಕ್ಕಾಗಿ ತಯ್ಯಾರಿಸಬೇಕು.ಎಲ್ಲಕ್ಕಿಂತ ಮುಖ್ಯ ಇಬ್ಬರೂ ಆರ್ಥಿಕ ವಾಗಿ ಸ್ವಾವಲಂಬಿ ಗಳಾಗಿರಬೇಕು.ಇದು ಎಲ್ಲಕ್ಕಿಂತ ಮುಖ್ಯ. ಮಕ್ಕಳು ಹರೆಯಕ್ಕ ಬರುತ್ತಲೆ ಮದುವೆ ಮಾಡಲಕ್ಕ ಇಲ್ಲ ಮದುವೆ ಆಗಲಿಕ್ಕ ಒತ್ತಾಯಿಸುವ ಹೆತ್ತವರು ಮೊದಲು ಅರ್ಥ ಮಾಡಕೊಬೇಕು..ನಮ್ಮ ಮಕ್ಕಳು ಮದುವೆ ಅನ್ನೊ ಸಂಭಂಧ ನಿಭಾಯಿಸಲಕ್ಕ ಎಷ್ಟು ತಯ್ಯಾರಿದ್ದಾರ ಅನ್ನುವ ವಿಷಯ.ನಮ್ಮ ದೇಶದಲ್ಲಿ ಮದುವೆಗೆ ಇದ್ದಷ್ಟು ಪ್ರಾಮುಖ್ಯತೆ , ಮದುವೆ ನಂತರ ಬರುವ ಸಮಸ್ಯೆ ಗಳಿಗೆ ಇಲ್ಲ. ಗಂಡ ಹೆಂಡತಿ ಅಂದ ಮ್ಯಾಲ ಇವೆಲ್ಲ ಸಾಮಾನ್ಯ. ಮಕ್ಕಳು ಆದ ಮ್ಯಾಲ್ ಇನ್ನೆಂತ ಜಗಳ , ಅಂತ ಸಮಸ್ಯೆ ಗಳನ್ನು ದೂರ ಮಾಡಲು ನೊಇಡತೀವಿ.ಇವುಗಳನ್ನು ಚಿಕ್ಕ ಸಮಸ್ಯೆ ಅಂತ ನೋಡ್ದೆ ಇಂತಹ ಸಂದರ್ಭಗಳಲ್ಲಿ ಮಕ್ಕಳಿಗೆ ಆಸರೆ ಆಗಿ ನಿಲ್ಲಬೆಕಾದ್ದು ಹೆತ್ತವರ ಕರ್ತವ್ಯ. pic:AIcreated ಜ್ಯೋತಿ ಡಿ ಬೊಮ್ಮಾ ಅವರುಕಲಬುರ್ಗಿ ಜಿಲ್ಲೆಯವರು.ಇವರು ಇದುವರೆಗುನಾಲ್ಕು ಕವನ ಸಂಕಲನಗಳನ್ನು ಎರಡು ಪ್ರಬಂಧ ಸಂಕಲನಗಳನ್ನುಪ್ರಕಟಿಸಿದ್ದಾರೆ. ಸಂಗಾತಿಪತ್ರಿಕೆಗಾಗಿಯೇ ಇವರು ದೇಸಿ ನುಡಿಗಟ್ಟಿನಲ್ಲಿ ವಿಶಿಷ್ಠ, ವಿಶೇಷ ವಿಷಯಗಳ ಬಗ್ಗೆ ಪ್ರತಿ ತಿಂಗಳೂ ಬರೆಯುತ್ತಿದ್ದಾರೆ

Read Post »

You cannot copy content of this page

Scroll to Top