ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ೧೯೪೭ರ ಸಮಯ…

ದೇಶಕ್ಕೆ ಸ್ವಾತಂತ್ರ್ಯದ ಸುಳಿವು ಸಿಗುತ್ತಿದ್ದಂತೆಯೇ, ಜಯದೇವಿ ತಾಯಿಯವರು ಸ್ತ್ರೀಯರನ್ನು ಒಗ್ಗೂಡಿಸಿ ಸಭೆಗಳನ್ನು ನಡೆಸಲಾರಂಭಿಸಿದರು.
ಸ್ವಾಭಿಮಾನಿ ಸಮಾಜ, ಸ್ತ್ರೀಯರ ಕರ್ತವ್ಯ ಮತ್ತು ಸ್ವಾತಂತ್ರ ಭಾರತದ ಬದುಕಿನ ಬಗ್ಗೆ ಊರು-ಊರುಗಳಲ್ಲಿ ಜಾಗೃತಿ ಮೂಡಿಸಿದರು.

ಮನೆಯಲ್ಲಿ ಗಂಡನ ಆರೋಗ್ಯ ಸರಿಯಿಲ್ಲದಿದ್ದರೂ, ಕುಟುಂಬದ ಬೆಂಬಲದೊಂದಿಗೆ ಅವರು ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡರು.

ಕೊನೆಗೂ… ಆ ಮಹಾನ್ ಕ್ಷಣ ಬಂತು
 ಭಾರತ ಮಾತೆ ಬಿಡುಗಡೆ ಹೊಂದುವ ದಿನ ಬಂದೇಬಿಟ್ಟಿತು… ಭಾರತದ ಕೊನೆಯ ಬ್ರಿಟನ್  ವೈಸರಾಯ ಲೂಯಿಸ್ ಲಾರ್ಡ್ ಮೌಂಟ್ ಬೆಂಟನ್   ಭಾರತಕ್ಕೆ ಸ್ವಾತಂತ್ರ್ಯವನ್ನು ಘೋಷಿಸಿದ……

೧೪-೮-೧೯೪೭ ರಂದು ದೇಶ ಸ್ವಾತಂತ್ರ್ಯವಾಗುವ ಸಂತಸದ ಮುನ್ನಾ ದಿನ…. ಅಂದು ಸಂಜೆ ತಾಯಿ ಸಂಗವ್ವನವರು,  ಅಜ್ಜಿಯಂದಿರಾದ ಬಸವ್ವಬಾಯಿ ವಾರದ ಮತ್ತು ಗೌರವ್ವ ಬಾಯಿ ವಾರದ ಮುಂತಾದ ಹಿರಿಯರೊಡನೆ ಜಯದೇವಿ ತಾಯಿಯವರು ಶಿವಯೋಗಿ ಸಿದ್ದರಾಮೇಶ್ವರನ ಮಂದಿರದಲ್ಲಿ ಅವನ ಸನ್ನಿಧಿಗೆ ಬಂದರು …ಮೊಟ್ಟಮೊದಲ ಬಾರಿಗೆ ಸಿದ್ದರಾಮನ ದೇವಸ್ಥಾನದ ಗರ್ಭಗುಡಿಯನ್ನು ಪ್ರವೇಶಿಸಿದರು ‌.
ಇಡೀ ರಾತ್ರಿ ಅಲ್ಲಿಯೇ ಉಳಿದರು….
 ಆ ಕಡೆ ದೇಶ ಸ್ವಾತಂತ್ರವಾಗುತ್ತಿದ್ದರೆ ಈಕಡೆ ಎಲ್ಲ ತಾಯಿಯಂದಿರು ಮಂದಿರದಲ್ಲಿ ಪೂಜೆ ಪುನಸ್ಕಾರ ಸಲ್ಲಿಸುತ್ತಿದ್ದರು‌. ಧ್ಯಾನ ಭಜನೆ ಜಾಗರಣೆಯು ಪ್ರಾರಂಭವಾಗಿತ್ತು.

೧೫-೮-೧೯೪೭ ರ ಸುಪ್ರಭಾತದಲ್ಲಿ ಗೌರವ್ವಬಾಯಿ ವಾರದ ಧ್ವಜಾರೋಹಣ ಮಾಡಿದರು.  ಎಲ್ಲರೂ ಕೂಡಿ ಇಡೀ ಊರಿಗೆ ಊಟ ಕೊಟ್ಟರು .ಸ್ವಾತಂತ್ರದ ಸಂಭ್ರಮಾಚರಣೆ ಮಾಡಿದರು.
 ಸ್ವಾತಂತ್ರ್ಯ ಸಿಗುವ ಹಿಂದಿನ ದಿನದಿಂದ ಅಂದರೆ ೧೪ ರಿಂದ ೧೮ ತಾರೀಖಿನ ಮುಂಜಾನೆಯವರೆಗೂ  ಮೂರು ದಿನ ಮತ್ತು ನಾಲ್ಕು ರಾತ್ರಿಗಳು ಸತತವಾಗಿ ಎಲ್ಲ ತಾಯಂದಿರು ದೇವಾಲಯದ ಆವರಣದಲ್ಲಿಯೇ ಹಗಲು ಹೊತ್ತು ಚರಕದ ಮೂಲಕ ನೂಲ ತೆಗೆಯುವ ನೇಯ್ಗಗೆ ಕಾಯಕ ಮತ್ತು ಅನ್ನದಾಸೋಹ ಮಾಡಿದರು….ರಾತ್ರಿ ಹೊತ್ತು ಸಿದ್ದರಾಮನ ಸನ್ನಿಧಿಯಲ್ಲಿ ಕಾಲ ಕಳೆದರು.
ಊರಿನ ಎಲ್ಲರಿಗೂ ಅನ್ನದಾಸೋಹ ನಡೆಯಿತು.
ಮೂರು ದಿನಗಳ ಕಾಲ ಸೇವೆ, ಭಕ್ತಿ ಮತ್ತು ಕಾಯಕ ಒಂದಾಗಿ ಬೆಸೆದವು.

ಭಾರತಾಂಬೆಯ ಬಿಡುಗಡೆಯ ಸಂದರ್ಭವನ್ನು ಜಯದೇವಿ ತಾಯಿಯವರು ನಮ್ಮೆದುರಿಗೆ ಈ ರೀತಿಯಾಗಿ ವಿವರಿಸಿ ಹೇಳುತ್ತಿದ್ದರು…….

 ಭಾರತಭೂಮಿಯ ಇತಿಹಾಸದಲ್ಲಿ ಒಂದು ಹೊಸ ಬೆಳಗಿನ ಉದಯವಾಗಿತ್ತು. ಶತಮಾನಗಳ ದಾಸ್ಯದಿಂದ ಬಳಲಿದ ಜನರ ಹೃದಯಗಳಲ್ಲಿ, ಆ ದಿನ ಉದಯಿಸಿದ ಸೂರ್ಯ ಕೇವಲ ಬೆಳಕನ್ನ ಅಲ್ಲ
ಸ್ವಾತಂತ್ರ್ಯದ ಉಸಿರಾಟಕ್ಕೆ ಉಸಿರು ತಂದನು.

 “ಭಾರತ ದೇಶಕ್ಕೆ ಸ್ವಾತಂತ್ರ್ಯ”……ಘೋಷಣೆ ಆಗುತ್ತಿದ್ದಂತೆ, ದೇಶದಾದ್ಯಂತ ಒಂದು ಅದ್ಭುತ ಭಾವನಾತ್ಮಕ ಅಲೆ ಹರಡಿತು.
ಗ್ರಾಮದಿಂದ ನಗರವರೆಗೆ, ಶ್ರೀಮಂತರಿಂದ ಬಡವರವರೆಗೆ ಪ್ರತಿ ಹೃದಯದಲ್ಲೂ ಒಂದೇ ಮಾತು……“ನಾವು ಸ್ವತಂತ್ರರು!”
ರಾತ್ರಿಯ ಮಧ್ಯದಲ್ಲಿ ರೇಡಿಯೋಗಳ ಮುಂದೆ ಕುಳಿತು ಜನರ ಕಣ್ಣುಗಳು ಕಣ್ಣೀರಿನಿಂದ ತುಂಬಿಕೊಂಡವು……
ಆ ಕಣ್ಣೀರು… ಅನೇಕ ಶೂರರು ವೀರರ ತ್ಯಾಗ ಬಲಿದಾನದ ಕನಸು ನೆರವೇರಿದ ಸಂತಸದ ಕಣ್ಣೀರು……!!!
ಎಲ್ಲಿ ನೋಡಿದರಲ್ಲಿ ಹಬ್ಬದ ಸಂಭ್ರಮದ ವಾತಾವರಣ
ಮಕ್ಕಳು ಯುವಕರು ಹಿರಿಯರು ಓಡಾಡುತ್ತಾ “ವಂದೇ ಮಾತರಂ” ಎಂದು ಕೂಗುತ್ತಿದ್ದರು,

ಮಹಿಳೆಯರು ಮನೆ ಮುಂಭಾಗ ರಂಗೋಲಿ ಹಾಕಿ, ದೀಪ ಬೆಳಗಿಸಿ ಹಬ್ಬ ಆಚರಿಸುತ್ತಿದ್ದರು, ಎಲ್ಲ
ಹಳೆಯ ಕಷ್ಟಗಳನ್ನು ಮರೆತು ಎಲ್ಲರೂ ಪರಸ್ಪರ ಅಪ್ಪಿಕೊಂಡು ಹರ್ಷ ವ್ಯಕ್ತಪಡಿಸುತ್ತಿದ್ದರು.
 ರಸ್ತೆಗಳು ಜನಸಾಗರದಿಂದ ತುಂಬಿ ಹೋಗಿದ್ದವು.
ತ್ರಿವರ್ಣ ಧ್ವಜವು ಗಾಳಿಯಲ್ಲಿ ಹಾರಾಡುತ್ತಿತ್ತು……
 *ಜನರ ಹೃದಯದಲಿ ಗರ್ವದ ಬಾವುಟ ಹಾರಾಡುತಿತ್ತು..*
ಜನರು ನೃತ್ಯ ಮಾಡಿ, ಹಾಡಿ, ಸಿಹಿ ಹಂಚಿಕೊಂಡು ಉಲ್ಲಾಸದಲ್ಲಿ ಮುಳುಗಿದ್ದರು.

ಅಂದು ಕೆಲವರು ತಮ್ಮ ಜೀವವನ್ನು ತ್ಯಾಗ ಮಾಡಿದವರನ್ನು ನೆನೆದು ಮೌನವಾಗಿ ಕಣ್ಣೀರಿಟ್ಟರು.
ಸುಭಾಷ್ ಚಂದ್ರ ಬೋಸ್- ಭಗತ್ ಸಿಂಗ್ ಹೀಗೆ ಅನೇಕ ವೀರರ ಬಲಿದಾನವೇ ಈ ಸ್ವಾತಂತ್ರ್ಯದ ಬೆಲೆ ಎಂಬ ಅರಿವು ಜನರಲ್ಲಿ ಗಾಢವಾಗಿತ್ತು.
ಹೃದಯಗಳಲ್ಲಿ ಒಂದೇ ಭಾವನೆ….
“ಇದು ನಮ್ಮ ದೇಶ… ನಮ್ಮ ಸ್ವಾತಂತ್ರ್ಯ… ನಮ್ಮ ಭವಿಷ್ಯ!”
ಆ ದಿನದ ಹರುಷವನ್ನು ಪದಗಳಲ್ಲಿ ಸಂಪೂರ್ಣವಾಗಿ ಹಿಡಿಯಲು ಸಾಧ್ಯವಿಲ್ಲ.
ಅದು ನಮ್ಮ ದೇಶದ ಪುನರ್ಜನ್ಮ ಸಂದರ್ಭ….
ದೇಶದ ಆತ್ಮ ಪುನಃ ಹುಟ್ಟಿದ ಕ್ಷಣ…….ಆ ಕ್ಷಣದಲ್ಲೇ ಜನರು ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡರು….
ನಮ್ಮ ಭಾರತ ದೇಶವು ಅಂದಿನಿಂದ
ಬಡತನವಿಲ್ಲದ ದೇಶ, ಸಮಾನತೆಯ ಸಮಾಜ, ಶಾಂತಿಯ ಭಾರತ ಕಟ್ಟವ ಕನಸು ಕಂಡುಕೊಳ್ಳಲಾರಂಭಿಸಿದ್ದೇವು…
ಆದರೆ…
ಆ ಹರುಷದ ನಡುವೆಯೇ ವಿಭಜನೆಯ ನೋವು ಕೂಡ ಎಲ್ಲ ಹೃದಯಗಳನ್ನು ಕಾಡುತ್ತಿತ್ತು. ಆದರೂ, ಆ ದಿನದ ಸಂತೋಷದ ಹೊಳೆಯು ಆ ನೋವನ್ನು ಸಹ ಮಸುಕಾಗಿಸಿತು.
೧೯೪೭ ರ ಆ ದಿನ…
ಭಾರತದ ಪ್ರತಿಯೊಂದು ಹೃದಯವೂ ಒಂದೇ ಲಯದಲ್ಲಿ ಹಾಡುತಿತ್ತು…….*ಜೈ ಹಿಂದ*.. ಜೈ ಹಿಂದ್… ಭಾರತ ಮಾತೆಗೆ ಜಯವಾಗಲಿ…. ಭಾರತ ಮಾತಾ ಕಿ ಜೈ ಎನ್ನುವ ಕೂಗು ಎಲ್ಲಡೇಗೂ ಕೇಳುತ್ತಿತ್ತು…….!!!!

ಭಾರತೀಯರು ಸ್ವಾತಂತ್ರ್ಯದ ದಿನಗಳನ್ನು ಅನುಭವಿಸುವದ್ರಲ್ಲಿಯೇ ದೇಶಕ್ಕೆ ಒಂದು ದೊಡ್ಡ ಅಘಾತ ಕಾದಿತ್ತು ….ಸ್ವಾತಂತ್ರ ಲಭಿಸಿದ ಕೆಲವು ತಿಂಗಳೊಳಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹತ್ತೆ ಆಗಿತ್ತು……..ಈ ದುರಂತ ಜಯದೇವಿ ತಾಯಿಯವರನ್ನು ಬಹಳ ದುಃಖಕ್ಕೆ ಇಡುಮಾಡಿತ್ತು…

 ತಾಯಿಯವರು ಹೇಳುತ್ತಿದ್ದಂತೆ ಗಾಂಧೀಜಿಯವರು ತೀರಿಕೊಂಡಾಗ ಇಡೀ ದೇಶವೇ ಸ್ಮಶಾಣದ ಮೌನದಲಿ ಮುಳಗಿತ್ತು.. ಅಘಾತಕ್ಕೆ ಒಳಗಾಗಿತ್ತು…
ಗಾಂಧೀಜಿಯವರ ಹತ್ಯೆ (೧೯೪೮ ಜನವರಿ ೩0) ದೇಶದ ಇತಿಹಾಸದಲ್ಲಿ ಅತಿ ದುಃಖಭರಿತ ಕ್ಷಣವಾಗಿತ್ತು….. ಜನ- ಮನಗಳನ್ನು ತಲ್ಲಣಗೊಳಿಸಿತು.

ಜಯದೇವಿ ತಾಯಿಯವರು ಈ ಸುದ್ದಿಯನ್ನು ಕೇಳಿದಾಗ ಅವರ ಮನ ಕುಸಿದುಹೋಯಿತು. ….
“ದೇಶಕ್ಕೆ ಅಹಿಂಸೆಯ ದೀಪ ಹಚ್ಚಿದ ಮಹಾತ್ಮನನ್ನು ಕತ್ತಲೆಯು ನುಂಗಿದೆ. ಅಹಿಂಸೆಯ ಪಾಠ ಹೇಳಿಕೊಟ್ಟ ಮಹಾತ್ಮರು ಹಿಂಸೆಯ ಅಟ್ಟಹಾಸಕ್ಕೆ
ಬಲಿಯಾದರು….ಅವರು ಬದುಕಿದ್ದರೆ ನಮ್ಮ ಹಾದಿ ಬೆಳಗುತ್ತಿತ್ತು… ಈಗ ನಮ್ಮೊಳಗೆ ನಾವು ಬೆಳಕಾಗಬೇಕು.ಗಾಂಧೀಜಿಯವರ ದೇಹ ಹೋಗಿರಬಹುದು, ಆದರೆ ಅವರ ತತ್ತ್ವಗಳು ಸಾಯುವುದಿಲ್ಲ” ಎಂದು ಜನರಿಗೆ ಧೈರ್ಯ ತುಂಬಿದರು.
ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯಿತು.. ಜೊತೆಗೆ ಹೃದಯದಲ್ಲಿ ಒಂದು ದಿಟ್ಟ ಸಂಕಲ್ಪ ಹುಟ್ಟಿತು….. ಗಾಂಧೀಜಿಯ ಆಚಾರ ವಿಚಾರಗಳನ್ನು ಮುಂದುವರಿಸಿಕೊಂಡು ಹೋಗುವ ಪಣತೊಟ್ಟರು.

ದೇಶದಾದ್ಯಂತ .. ಜನರ ನೋವು ಆಕ್ರೋಶದಲಿ ಮೂಳಗಿರುವುದನ್ನು ನೋಡಿದಾಗ….. ಗಾಂಧೀಜಿಯವರು ಜನರ ಮೇಲೆ ಅದೆಷ್ಟು ಪ್ರಭಾವ ಬೀರಿದ್ದರು ಎನ್ನುವುದು ತೋರುತ್ತಿತ್ತು….
“ಇನ್ನು ಮುಂದೆ ದೇಶಕ್ಕೆ ದಾರಿ ತೋರುವರು ಯಾರು?! ಎಂಬ ಪ್ರಶ್ನೆ ಜನರನ್ನು ಕಾಡಿತು.
ಹೊಸತಾಗಿ ಸಿಕ್ಕ ಸ್ವಾತಂತ್ರ್ಯದ ಸ್ಥಿರತೆಗೆ ಬಗ್ಗೆ ಯೋಚಿಸಿ ಜನರಲ್ಲಿ ಭಯ ಉಂಟಾಯಿತು. ಜೊತೆ ಜೊತೆಗೆ ಧರ್ಮ, ಜಾತಿ ಭೇದಗಳಿಂದ ದೂರ ಇರಬೇಕು ಎಂಬ ಅರಿವು ಮೂಡಿಸುವ ಸಲುವಾಗಿ
ಗ್ರಾಮಗಳಲ್ಲಿ, ನಗರಗಳಲ್ಲಿ ಶೋಕ ಸಭೆಗಳು ನಡೆದಸಿದರು…..
 ಗಾಂಧೀಜಿಯವರು ಬೋಧಿಸಿದ ಅಹಿಂಸೆ, ಸತ್ಯದ ಮಾರ್ಗವನ್ನು ಮತ್ತೆ ನೆನಪಿಸಿಕೊಟ್ಟರು .ಜನರು ತಮ್ಮೊಳಗಿನ ನಾಯಕತ್ವವನ್ನು ಹುಡುಕಲು ಪ್ರೇರೇಪಿಸಿದರು.
“ನಾವು ಗಾಂಧೀಜಿಯವರಂತೆ ಬದುಕಬೇಕು” ಎಂಬ ಮನೋಭಾವನ್ನು ಬೆಳೆಸಲು ಸತತವಾಗಿ ಪ್ರಯತ್ನಿಸಿದರು .
ಜಯದೇವಿ ತಾಯಿಯವರು ಜನರನ್ನು ಉದ್ದೇಶಿಸಿ
“ಗಾಂಧೀಜಿಯವರ ರಕ್ತದ ಪ್ರತಿಯೊಂದು ಹನಿ ನಮ್ಮ ಹೃದಯದಲ್ಲಿ ದೇಶಭಕ್ತಿಯ ಬೀಜವಾಗಬೇಕು.
ಕೋಪದಿಂದ ಅಲ್ಲ, ಪ್ರೀತಿಯಿಂದ ಈ ದೇಶವನ್ನು ಕಟ್ಟೋಣ…..ಗಾಂಧೀಜಿಯವರ ಹತ್ಯೆ ಕೇವಲ ಒಬ್ಬ ಮಹಾನ್ ವ್ಯಕ್ತಿಯ ಮರಣವಲ್ಲ,
ಅದು ಒಂದು ಯುಗದ ಅಂತ ಆದರೆ ಮತ್ತೊಂದು ಯುಗದ ಆರಂಭವೂ ಹೌದು …. ಜನರು ಅವರ ಮಾರ್ಗವನ್ನು ಅನುಸರಿಸಲು ಪ್ರೇರೇಪಿತವಾಗು ಕ್ಷಣ ಬಂದೋದಗಿದೆ .ನಾವೆಲ್ಲರೂ ಸೇರಿ ಭಾರತ ಮಾತೆಯ ಸೇವೆ ಗ್ಯ್ಯೋಣ ಎಂದು ಸಾರಿದರು.

ಗಾಂಧೀಜಿಯವರ ಹತ್ಯೆಯಾದ ಸಮಯದಲ್ಲಿ ಜಾತಿ ಮತಗಳ ಮಧ್ಯೆ ಕಲಹ ಪ್ರಾರಂಭವಾಗಿತ್ತು ಸಾಮರಸ್ಯ ಕಳೆದು ಹೋಗಿದ್ದು ಬಹುತೇಕ ಜನರು ಜಾತಿಗಲಭೆ ನಡೆಯುತ್ತಿದ್ದವು ಅಲ್ಲಲ್ಲಿ ಭಾವಿಸಿ ತಾಯಿಯವರು ಸಹನೆ ಸಾಮರಸ್ಯದಂತ ವಿಚಾರಗಳನ್ನು ಜನರಿಗೆ ಮನದಟ್ಟು ಮಾಡಿಕೊಳ್ಳುವಲ್ಲಿ  ಪ್ರಯತ್ನ ಪಟ್ಟರು.

ಗಾಢ ದುಃಖ, ಆತಂಕ ಮತ್ತು ಜಾಗೃತಿ ತುಂಬಿದ ಒಂದು ಭಾಷಣವನ್ನು ಜತದೇವಿ ತಾಯಿಯವರು
“ಸಹೋದರ ಸಹೋದರಿಯರೇ…”
ಇಂದು ನಮ್ಮ ಹೃದಯಗಳು ಒಡೆದಿವೆ…
ನಮ್ಮ ದೇಶದ ಆತ್ಮವೇ ಆಗಿದ್ದ ಮಹಾತ್ಮ ಗಾಂಧೀಜಿ ಅವರು ನಮ್ಮನ್ನೆ ಬಿಟ್ಟು ಹೋಗಿದ್ದಾರೆ.
ಅವರ ದೇಹ ಕೊನೆಗೊಂಡಿರಬಹುದು… ಆದರೆ ಅವರ ಚಿಂತನೆ, ಅವರ ಅಹಿಂಸೆಯ ಮಾರ್ಗ ಯಾವತ್ತೂ ಸಾಯುವುದಿಲ್ಲ.
ಇಂತಹ ಸಮಯದಲ್ಲಿ, ಕೆಲವರು ಜಾತಿ-ಧರ್ಮದ ಹೆಸರಿನಲ್ಲಿ ಮತ್ತೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.
ಆದರೆ ನಾನು ಒಂದು ಪ್ರಶ್ನೆ ಕೇಳುತ್ತೇನೆ
ಗಾಂಧೀಜಿ ಅವರು ತಮ್ಮ ಪ್ರಾಣವನ್ನೇ ಕೊಟ್ಟದ್ದು ಏಕೆ?
ಅವರು ಹಿಂದು, ಮುಸ್ಲಿಂ, ದಲಿತ, ಬ್ರಾಹ್ಮಣ… ಎನ್ನದೇ“ನಾವು ಎಲ್ಲರೂ ಭಾರತೀಯರು” ಎಂದು ಬದುಕಿದರು…
ಅದೇ ಮಾತನ್ನು ಅವರು ಕೊನೆಯ ಉಸಿರಿನಲ್ಲೂ ಹೇಳಿ ಹೋಗಿದ್ದಾರೆ.ಇಂದು ನಾವು ಜಗಳ ಮಾಡಿದರೆ…ಅದು ಗಾಂಧೀಜಿಯವರ ಆತ್ಮಕ್ಕೆ ನೋವು ಕೊಡುತ್ತದೆ.
ಅವರು ನಮಗೆ ತೋರಿಸಿದ ದಾರಿ — ಪ್ರೀತಿ, ಸಹನೆ, ಸೌಹಾರ್ದ — ಅದನ್ನೇ ನಾವು ಅನುಸರಿಸಬೇಕು.
ಜಾತಿ ಎನ್ನುವುದು ನಮ್ಮ ನಡುವೆ ಗೋಡೆ ಕಟ್ಟಲು ಅಲ್ಲ…ಅದು ವೈವಿಧ್ಯದ ಸುಂದರತೆಯನ್ನು ಅರಿಯಲು.ಇಂದು ನಾನು ನಿಮಗೆ ವಿನಂತಿ ಮಾಡುತ್ತೇನೆ  ಕೋಪ ದ್ವೇಷ ಕಲಹವನ್ನು ಬಿಡಿ…
ಹೃದಯವನ್ನು ತೆರೆದುಕೊಳ್ಳಿ…
ಒಬ್ಬರನ್ನೊಬ್ಬರು ಅಪ್ಪಿಕೊಳ್ಳಿ…
ಗಾಂಧೀಜಿ ಜೀವಂತವಾಗಿರುವುದು ನಮ್ಮ ನಡೆ-ನುಡಿಯಲ್ಲಿ…
ನಮ್ಮ ಒಗ್ಗಟ್ಟಿನಲ್ಲಿ… ನಮ್ಮ ಮಾನವೀಯತೆಯಲ್ಲಿ…
ನಾವು ಒಟ್ಟಿಗೆ ನಿಂತರೆ… ಭಾರತ ಸದಾ ಶಕ್ತಿಶಾಲಿಯಾಗಿರುತ್ತದೆ.

“ಸಿದ್ದರಾಮ ಬಸವ| ಬುದ್ಧ ಗಾಂಧೀಜಿಯು
ತಿದ್ದಲು ಜನ ಮನ ದುಡದಾರ- ಲೋಕವೂ
ಶುದ್ಧ ಸದಾಚಾರಿ ಮಾಡಲು!!”


About The Author

3 thoughts on “”

Leave a Reply

You cannot copy content of this page

Scroll to Top