ಕಾವ್ಯಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಭೂಮಿಗೆ ನಮನ”


ಹಸಿರ ಉಸಿರ ಹೊತ್ತ ಭೂದೇವಿ ನೀನು,
ನಮ್ಮ ಬಾಳ ಹಾದಿಗೆ ದಿವ್ಯ ಬೆಳಕು ನೀನು.
ಕೋಟಿ ಜೀವ ರಾಶಿಗೆ ಆಸರೆಯ ಮಡಿಲು,
ನಿನ್ನ ಪ್ರೀತಿಗೆ ಸಾಟಿಯಿಲ್ಲ, ಕರುಣೆ ಕಡಲು.
ಬೆಟ್ಟ ಸಾಲುಗಳು ನಿನ್ನ ಮುಡಿಗೆ ಹೂವು,
ಹರಿಯುವ ನದಿಗಳು ನಿನ್ನ ಜೀವ ಸೆಲೆಯು.
ಗಾಳಿ, ಮಣ್ಣು, ನೀರು ಮರ ನಿನ್ನ ಕೊಡುಗೆ,
ಮರೆತ ಮಾನವನ ಎಂತ ಉಡುಗೆ ತೊಡುಗೆ
ನಮ್ಮ ಭೂಮಿ ನಾವು ಉಳಿಸ ಬೇಕು,
ಕಲುಷಿತವ ತೆಗೆದು ಹಸಿರ ಬೆಳೆಸ ಬೇಕು.
ಮರಗಿಡಗಳ ನಟ್ಟು ತಂಪ ಹರಡ ಬೇಕು,
ಭೂ ಮಾತೆಯ ಋಣ ತೀರಿಸಬೇಕು.
ಭೂಮಿ ದಿನ ಅಲ್ಲ ಬರಿ ಆಚರಣೆ,
ಧರೆಯ ಉಳಿಸುವ ಸಂಕಲ್ಪ ರಕ್ಷಣೆ.
ಇರುವುದೊಂದೇ ಭೂಮಿ, ಉಳಿಸ ಬನ್ನಿ,
ಭವ್ಯ ಭವಿಷ್ಯಕೆ ಹೆಜ್ಜೆ ಹಾಕ ಬನ್ನಿ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ




ಭೂಮಿಯನ್ನು ನಾವು ಹೇಗೆ ಉಳಿಸಬೇಕು,ಹಸಿರು ಬೆಳೆಸಬೇಕು ಎಂಬುದನ್ನು ವಿವರಣಾತ್ಮಕ ಮಾಹಿತಿಯನ್ನು ಕವನದಲ್ಲಿ ಸುಂದರವಾಗಿ ನಿರೂಪಿಸಿದ್ದೀರಿ. ಸರ್
Bhala channagide sir
ಹಸಿರುಟ್ಟ ಭೂಮಿ ಮನೆ ಮನಗಳನ್ನು ಬೆಳಗಿ, ಪೊರಕೃತಿಜೀವ ಸಂಕುಲವನ್ನು ಪೊರೆಯುವ ಬಗೆಯನ್ನು ವಿವರಿಸಿದ ಕವಿಗೆ ವಂದನೆಗಳು
Nice
Beautiful post https://sangaati.in/2026/04/%e0%b2%a1%e0%b2%be-%e0%b2%b6%e0%b2%b6%e0%b2%bf%e0%b2%95%e0%b2%be%e0%b2%82%e0%b2%a4-%e0%b2%aa%e0%b2%9f%e0%b3%8d%e0%b2%9f%e0%b2%a3-%e0%b2%b0%e0%b2%be%e0%b2%ae%e0%b2%a6%e0%b3%81%e0%b2%b0%e0%b3%8d-104/#comment-23070