ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಸಿರ ಉಸಿರ ಹೊತ್ತ  ಭೂದೇವಿ ನೀನು,
ನಮ್ಮ ಬಾಳ ಹಾದಿಗೆ ದಿವ್ಯ ಬೆಳಕು ನೀನು.
ಕೋಟಿ ಜೀವ ರಾಶಿಗೆ ಆಸರೆಯ ಮಡಿಲು,
ನಿನ್ನ ಪ್ರೀತಿಗೆ ಸಾಟಿಯಿಲ್ಲ, ಕರುಣೆ  ಕಡಲು.

ಬೆಟ್ಟ ಸಾಲುಗಳು ನಿನ್ನ  ಮುಡಿಗೆ ಹೂವು,
ಹರಿಯುವ ನದಿಗಳು ನಿನ್ನ ಜೀವ ಸೆಲೆಯು.
ಗಾಳಿ, ಮಣ್ಣು, ನೀರು ಮರ ನಿನ್ನ ಕೊಡುಗೆ,
ಮರೆತ ಮಾನವನ ಎಂತ ಉಡುಗೆ ತೊಡುಗೆ

  ನಮ್ಮ ಭೂಮಿ ನಾವು ಉಳಿಸ ಬೇಕು,
ಕಲುಷಿತವ ತೆಗೆದು ಹಸಿರ ಬೆಳೆಸ ಬೇಕು.
ಮರಗಿಡಗಳ ನಟ್ಟು ತಂಪ ಹರಡ ಬೇಕು,
ಭೂ ಮಾತೆಯ ಋಣ ತೀರಿಸಬೇಕು.

ಭೂಮಿ ದಿನ  ಅಲ್ಲ ಬರಿ ಆಚರಣೆ,
ಧರೆಯ ಉಳಿಸುವ ಸಂಕಲ್ಪ  ರಕ್ಷಣೆ.
ಇರುವುದೊಂದೇ  ಭೂಮಿ,  ಉಳಿಸ ಬನ್ನಿ,
ಭವ್ಯ ಭವಿಷ್ಯಕೆ  ಹೆಜ್ಜೆ ಹಾಕ ಬನ್ನಿ.


About The Author

5 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಭೂಮಿಗೆ ನಮನ””

  1. ಭೂಮಿಯನ್ನು ನಾವು ಹೇಗೆ ಉಳಿಸಬೇಕು,ಹಸಿರು ಬೆಳೆಸಬೇಕು ಎಂಬುದನ್ನು ವಿವರಣಾತ್ಮಕ ಮಾಹಿತಿಯನ್ನು ಕವನದಲ್ಲಿ ಸುಂದರವಾಗಿ ನಿರೂಪಿಸಿದ್ದೀರಿ. ಸರ್

  2. ಹಸಿರುಟ್ಟ ಭೂಮಿ ಮನೆ ಮನಗಳನ್ನು ಬೆಳಗಿ, ಪೊರಕೃತಿಜೀವ ಸಂಕುಲವನ್ನು ಪೊರೆಯುವ ಬಗೆಯನ್ನು ವಿವರಿಸಿದ ಕವಿಗೆ ವಂದನೆಗಳು

Leave a Reply

You cannot copy content of this page

Scroll to Top