ಜಂಜಿ ಡಪಾತಿ ಬೋ ಪಸಂದಾಗೈತಿ!

ಜಂಜಿ ಡಪಾತಿ ಬೋ ಪಸಂದಾಗೈತಿ!

ಪುಸ್ತಕಪರಿಚಯ ಜಂಜಿ ಡಪಾತಿ ಬೋ ಪಸಂದಾಗೈತಿ! ಚುಕ್ಕಿ ಬೆಳಕಿನ ಜಾಡುಕಾದಂಬರಿಕರ್ಕಿ ಕೃಷ್ಣಮೂರ್ತಿಛಂದ ಪುಸ್ತಕ. ಇದು ಕಥೆಗಾರ ಕರ್ಕಿ ಕೃಷ್ಣಮೂರ್ತಿ ಅವರ ಮೊದಲ ಕಾದಂಬರಿ. ‘ಮಳೆ ಮಾರುವ ಹುಡುಗ’ ‘ಗಾಳಿಗೆ ಮೆತ್ತಿದ ಬಣ್ಣ’ ಅವರ ಪ್ರಕಟಿತ ಕಥಾಸಂಕಲನಗಳು. ಅರಿಕೆಯಲ್ಲಿ ಕೃಷ್ಣಮೂರ್ತಿ ಅವರು ಹೇಳಿಕೊಂಡಂತೆ ‘ ಜಂಜಿ ಡಂಪಾತಿ’ ಎಂಬ ಅಪ್ರಕಟಿತ ಕಥೆಯೊಂದನ್ನು ಓದಿ ಅವರ ಗೆಳೆಯರು ಕಾದಂಬರಿ ಮಾಡಬಹುದು ಎಂದು ಹೊಳಹು ನೀಡಿದ್ದೇ ಈ ಕೃತಿಯ ಹುಟ್ಟಿಗೆ ಕಾರಣ. ಮಲಯೂ ಭಾಷೆಯ ಶಬ್ದ ಈ ಜಂಜಿ ಡಪಾತಿ. ಅಂದರೆ […]

ನಿಲ್ಲದಿರು ದೂರ

ಕವಿತೆ ನಿಲ್ಲದಿರು ದೂರ ಜಯಶ್ರೀ.ಭ.ಭಂಡಾರಿ ಉಸಿರ ಉಸಿರಲಿ ನಿನ್ನದೆ ಹೆಸರುನೆನಪ ಮೆರವಣಿಗೆಯದು ಹಸಿರುಅರಿತು ಬೆರೆತ ನವನೀತದ ಮೊಸರುಕನಸಕಂಗಳಲಿ ತುಂಬಿದೆ ಉಸಿರು ದೂರದಲಿ ನೀನಿದ್ದರೂ ಇಲ್ಲ ಅಂತರ..ಹುಚ್ಚು ಪ್ರೀತಿಯದು ತೀರದ ದಾಹಕಡಲ ಅಲೆಗಳಾಗಿವೆ ಆಸೆಗಳುಬಂದು ಬಿಡು ತಾಳಲಾರೆ ಈ ವಿರಹ ನೋವ ನಿನ್ನ ಸನಿಹ ಬೇಕೆನಗೆ ನಿರಂತರಬಯಕೆಗಳ ರಂಗೋಲಿಗೆ ರಂಗಾಗುಬಾ ಗೆಳೆಯನೆ ಸಹಿಸಲಾರೆ ಅಂತರಜೊನ್ನಮಳೆ ಜೇನಹೊಳೆ ನೀನಾಗು ಕತ್ತಲೆಯ ಸರಿಸು ಹರಸು ಬಾಬೆಳಕಾಗಿ ಹೃದಯ ಮೀಟು ಬಾಪ್ರೀತಿಯ ಮಹಲಿನ ಅರಸನೆ ಬಾಅಂತರ ಸಾಕು ನಿರಂತರವಾಗಿ ಬಾ ಮುದ್ದುಮಾತಿನ ಮೋಹಗಾರನೆಗೆಜ್ಜೆಸದ್ದಿಗೆ […]

ಸಂತೆಯಲಿ

ಕವಿತೆ ಸಂತೆಯಲಿ ವಿ.ಎಸ್.ಶಾನಬಾಗ್ ಸಂತೆಯಲಿಕೆಲವರು ಕೊಳ್ಳಲು ಬರುತ್ತಾರೆಕೆಲವರು ನೋಡಲು ಕೊಳ್ಳುತ್ತಾರೆಸಂತೆಗೆ ಗೋಡೆಗಳು ಇಲ್ಲ ಆದ್ದರಿಂದ ಎಲ್ಲಅಂಗಾಂಗಗಳ ಮಾತು ಖುಲ್ಲ ಮಹಿಳೆಯರು ಹಳೆಯಮಾತಿನಹೊಸ ಚರ್ಯೆ ಚರ್ಚೆ ಸ್ವಪಾಕಸುಕ್ಕುಗಳ ಅಡಗಿಸಿ ಮನೆಯಲಿ ಸ್ವಪಾತ್ರಗಂಡನ ಚಮತ್ಕಾರ ನೂಡಲ್‌ ನಂತಹಪರಿಹಾರಗರತಿಯರನ್ನು ತರಗತಿಗೆ ಕಳುಹಿಸಿಪಿಸುಮಾತಿನಲ್ಲಿ ದ್ವಿಪಾತ್ರಹೌಹಾರಿಸಿದ ಚಿತ್ರ ಪುರುಷರು ಸಂತೆಯಲ್ಲಿಹೆಂಡತಿ,ಬಡ್ತಿ,ಲೋನುಅನುಕಂಪಕ್ಕೆ ಕಾಯುವಶೋಷಿತರು ಪೆಗ್ ನಲ್ಲಿಮೀಟೂ ಕಥಾಸರಣಿ ಯುವಕರುಸಂಜೆ ಸಂತೆಯಲಿ ಸಂದವರು, ಪ್ರೀತಿಯಲಿ ದುಶ್ಯಂತರುಮಾತು ಬೇಡದ ಬರೀ ಸೂಚನೆವಿವರಣೆ, ಹಕ್ಕಿಯಂತೆ ಹಾರಿ ಮಾತು ಮತ್ತೇನೋ ಆದ ಬವಣೆಕೇಳದ ಕಿವಿಗೆ ಹೇಳದ ಬಾಯಿ ನೋಡದ ಕಣ್ಣುಮಾರುವವರ ಎದೆಯಿಂದ […]

ಪ್ರೇಕ್ಷಕ ಪರಂಪರೆಯ ಅನ್ನದಾತರು

ಲೇಖನ ಪ್ರೇಕ್ಷಕ ಪರಂಪರೆಯ ಅನ್ನದಾತರು ಮಲ್ಲಿಕಾರ್ಜುನ ಕಡಕೋಳ ಯಶಸ್ವಿ ನಾಟಕವೊಂದರ ಕುರಿತು ಮಾತಾಡುವಾಗ ಎಂಥವರಿಗೂ ಆಧುನಿಕ ರಂಗಭೂಮಿ ಸಂದರ್ಭದಲ್ಲಿ ನಿರ್ದೇಶಕ ಪರಂಪರೆಯತ್ತ ಆದ್ಯಗಮನ. ಹಾಗೇನೆ ವೃತ್ತಿರಂಗಭೂಮಿ ಸಂದರ್ಭದಲ್ಲಿ ನಟನ ಪರಂಪರೆಯದು ಧುತ್ತನೆ ನೆರವಿಗೆ ನಿಲ್ಲುವ ನಿಲುವು. ನಮ್ಮ ಪ್ರೊಸಿನಿಯಮ್ ಥಿಯೇಟರ್ ಪ್ರದರ್ಶನಗಳು ಪ್ರೇಕ್ಷಕರೆಂಬ ಐಕಾನ್ ಗಳ ಮೂಲಕವೇ ಸಾಂಸ್ಕೃತಿಕ ಮೌಲ್ಯ ಗಳಿಸಿವೆಯೆಂಬ ದ್ಯಾಸವೇ ಇರಲ್ಲ. ಅಷ್ಟು ಮಾತ್ರವಲ್ಲದೇ ರಂಗಸಂಸ್ಕೃತಿಯ ಅಭಿವೃದ್ಧಿ ಹಾಗೂ ವಿಕಾಸದ ಸಾಧ್ಯತೆಯ ಕ್ಷಿತಿಜ ವಿಸ್ತಾರಗೊಳ್ಳುವುದೇ ಪ್ರೇಕ್ಷಕ ಪ್ರಭುಗಳಿಂದ. ಇಂತಹ ಮಹತ್ತರ ಸಂಗತಿಗಳನ್ನೇ ನೇಪಥ್ಯಕ್ಕೆ ಜರುಗಿಸುವ […]

ಕಾಪಿಟ್ಟು ಕಾಯುತ್ತಾಳೆ

ಕವಿತೆ ಕಾಪಿಟ್ಟು ಕಾಯುತ್ತಾಳೆ ಶ್ರೀವಲ್ಲಿ ಶೇಷಾದ್ರಿ ಋತು ಋತುವಿಗೊಂದೊಂದು ಹೊಸತುಹೆಚ್ಚುಗಾರಿಕೆಯ ಬಿಚ್ಚಿಡುತ್ತಾಳೆ,ಅಚ್ಚರಿ ಹುಟ್ಟಿಸಿಬೆಚ್ಚಿಸುವ ಈಹುಚ್ಚಿಪೆಚ್ಚಾಗಿಸುತ್ತಾಳೆ ಹುಚ್ಚುಗಳ ಹೆಚ್ಚಿಸಿಮನದಿಚ್ಚೆಗಳ ಅಚ್ಚು ಹಾಕಿಸಿಟ್ಟುರಚ್ಚೆ ಹಿಡಿದು ಅಚ್ಚು ಮೆಚ್ಚಾಗಿಕೊಚ್ಚಿ ಹೋಗದ ಹಾಗೆ ಬಚ್ಚಿಟ್ಟುಕಾಪಿಟ್ಟು ಕಾಯುತ್ತಾಳೆ ಬೆಚ್ಚಗೆ ಕಳಚಿಟ್ಟ ಪೊರೆ ಮತ್ತೆ ಹಸಿರು ಕೊನರಿಹಸಿ ಕರಗ ಮಣ ಭಾರ ಹೊತ್ತುಚೀರಿ ಹಾರಿ ಮೇಲೆರಗೊ ಹನಿಯರಭಸ ಭರಿಸಿ ಝಾಡಿಸಿ ತೂರಿಎಲ್ಲೆ ಇರದೆಡೆ ಹರಿದು ಬರಿಯರಾಡಿಯನ್ನಪ್ಪಿ ಒಪ್ಪಿ ಮುತ್ತಿಕ್ಕಿ ದಿನ ರಾತ್ರಿಯಾಟಕ್ಕೆ ಅದರಿ ಬೆದರಿಗರಿ ಕೆದರಿ ಮತ್ತೊಮ್ಮೆ ಹೂವಾಗುತ್ತಾಳೆ ಬಟ್ಟ ಬಯಲಿನಲಿ ದೃಷ್ಟಿ ತಾಗುವ ಹಾಗೆಪರಿಪರಿಯ […]

ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ ಜೊಸೆಫ್ ಸಿದ್ದಕಟ್ಟೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಗ್ರಾಮದ ಶ್ರೀ ಜೊಸೆಫ್ ಸಿದ್ದಕಟ್ಟೆಯವರು ಮಂಗಳೂರಿನ ಕಾರ್ಮೆಲ್ ಚರ್ಚಿನ ಫಾದರ್ ಆಗಿ ಸೇವೆ ಸಲ್ಲಿಸುತಿದ್ದಾರೆ. ಬಹಳ ಚಿಕ್ಕ ವಯಸ್ಸಿನಿಂದಲೇ ಬರವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡು, ಕೊಂಕಣಿಯ ಯುವ ಕವಿ ಜೊಸಿ ಸಿದ್ದಕಟ್ಟೆ ಎಂಬ ಕಾವ್ಯನಾಮದಿಂದ ಅತ್ಯಂತ ಪ್ರಭಾವಶಾಲಿಯಾಗಿ ಹೊರಹೊಮ್ಮಿದ್ದಾರೆ. ಕಿಟಾಳ್ ಪತ್ರಿಕೆಯ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ “ಕಿಟಾಳ್ ಯುವ ಪರಸ್ಕಾರ್” 2011 ರಲ್ಲಿ, ಇನ್ನೊಂದು ಪ್ರತಿಷ್ಠಿತ ಪ್ರಶಸ್ತಿಯಾದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ್, 2013 […]

ರುಬಾಯಿಗಳು

ರುಬಾಯಿಗಳು ಪ.ನಾ.ಹಳ್ಳಿ.ಹರೀಶ್ ಕುಮಾರ್ ೧. ಮಂಕುತಿಮ್ಮನಾಗು ಕೂಡಿಡುವುದು ಬಿಡು ಜಿಪುಣನೆಂಬ ಹೆಸರು ತಪ್ಪೀತು.ಓದಿ ಜ್ಞಾನಿಯಾಗು, ಅಜ್ಞಾನಿಯೆಂಬ ಹಣೆಪಟ್ಟಿ ತಪ್ಪೀತು.ಎಲ್ಲರೊಡನೆ ಒಂದಾಗಿ ಡಿವಿಜಿಯ ಮಂಕುತಿಮ್ಮನಾಗು,ರೌರವ ನರಕ ಲೋಕದ ದರ್ಶನವಾದರೂ ತಪ್ಪೀತು. ೨.ಕರ್ಮ ಹುಲಿಯ ಹೊಟ್ಟೆಯೊಳಗುಟ್ಟಿ ಹುಲಿಯಾದೆವುಹಸುವಿನೊಟ್ಟೆಯೊಳಗುಟ್ಟಿ ಹಸುವಾದೆವುಮನುಷ್ಯನ ಹೊಟ್ಟೆಯೊಳಗುಟ್ಟಿದಾ ಕರ್ಮಕ್ಕೆ,ಹಿಂದೂ ಕ್ರೈಸ್ತ ಜೈನ ಮುಸಲ್ಮಾನರೆಂದಾದೆವು **************************

ಕೆಂಡದ ಕೋಡಿ

ಕೆಂಡದ ಕೋಡಿ ವಿಶಾಲಾ ಆರಾಧ್ಯ ಬೆಳದಿಂಗಳಿನ ರಂಗೋಲಿಯಲೂಚಿತ್ತದಲಿ ನೆತ್ತರಿನ ಚಿತ್ರಗಳು ಮೂಡಿಕತ್ತಲ ಗರ್ಭಕ್ಕಿಳಿದು ಬಸಿರಾಗುತ್ತವೆಸೂಜಿಯ ಮೊನೆಯಲ್ಲಿ ಹುಟ್ಟಿದಮತ್ಸರದ ಕನಸುಗಳುದ್ವೇಷದ ಕೋರೆಹಲ್ಲಿನೊಡನೆಕತ್ತಿಯ ಝಳಪಿನ ತಾಳದಲಿನರ್ತಿಸಲು ಹವಣಿಸುತ್ತವೆ!! ಪಕ್ಷಗಳ ದಾಟಿ ಮಾಸದಮಾಸಗಳಲಿ ಇಣುಕಿ ಕಣ್ಣಲ್ಲೇಕೆಂಡದ ಕೊಂಡ ನಿಗಿನಿಗಿಸಿಮಿನುಗಿ ಮನದ ರಸವನುಕೊತಕೊತನೆ ಕುದಿಸಿ ನಾನುನೀನಿನಮೇಲು ಕೀಳಿನ ಧರ್ಮಾಧರ್ಮದತುಪ್ಪವ ಸುರಿಸಿ ಅಗ್ನಿಗೊಂಡವಮತ್ತೆ ಬಾನ ಕೊನೆವರೆಗೂ ಉರಿಸಿಧಗಧಗಿಸುವ ಹುಚ್ಚು ಕೋಡಿಹರಿಯುತ್ತದೆ!! ಏರಿಯ ದಾಟಿದ ಮತ್ಸರದ ಝರಿಕೊರಳ ಸೀಳೆ ಕಿರುದನಿಗೂಎಡೆಗೊಡದೆ ನೆತ್ತರು ಹರಿದಾಡುತ್ತದೆಆ ನೆತ್ತರಲೇ ಕಾರ್ಕೋಟ ಬೀಜಗಳುಮೊಳಕೆಯೊಡೆಯುತ್ತವೆ ಮತ್ತೆ ಮತ್ತೆ

ಕರೋನಾ ಮತ್ತು ಭಯ ಜ್ಯೋತಿ ಡಿ.ಬೊಮ್ಮಾ ಭಯ ಬೇಡ ಎಚ್ಚರಿಕೆ ಇರಲಿ ಎಂದು ಹೇಳುತ್ತಲೆ ಈಗ ಪ್ರತಿಯೊಬ್ಬರ ಮನದಲ್ಲೂ ಕರೋನಾ ಬಗ್ಗೆ ಭಯ ಮನೆಮಾಡಿದೆ. ಮೇಲೆ ಇದೊಂದು ಸಾಮಾನ್ಯ ಕಾಯಿಲೆ ಎಂದುಕೊಂಡರೂ ಒಳಗೋಳಗೆ ಆತಂಕ ಪಡದವರಿಲ್ಲ.ರೋಗಕ್ಕಿಂತಲೂ ಅದರ ಸುತ್ತಲೂ ಇರುವ ಕ್ಲಿಷ್ಟಕರ ಕಾನೂನುಗಳು ಭಯವನ್ನು ಹೆಚ್ಚಿಸುತ್ತಿವೆ. ಸದ್ಯ ಕರೋನಾ ದಿಂದಾಗುವ ಸಾವಿನ ಪ್ರಮಾಣದಲ್ಲಿ ವಯಸ್ಸಾದವರೆ ಹೆಚ್ಚು. ಅವರಿಗೆ ಮತ್ತೆ ಬೇರೆ ಆರೋಗ್ಯ ಸಮಸ್ಯಗಳು ಇರಬಹುದು.ಬಹಳಷ್ಟು ಸಾವು ಆಸ್ಪತ್ರೆಯಲ್ಲಿ ಅಡ್ಮೀಟ್ ಆದ ಮೇಲೆ ಸಂಭವಿಸುತ್ತಿವೆ. ಅಡ್ಮಿಟ್ ಆದ ಮೇಲೆ […]

ಸಹಜ ನಡಿಗೆಯ ರುದ್ರ ನರ್ತನದ ಭಾವಗಳಂತೆ ಕುಮಾರ್ ಹೊನ್ನೇನಹಳ್ಳಿ‌ ಪದ್ಯಗಳು . ಕುಮಾರ್ ಹೊನ್ನೇನಹಳ್ಳಿ ವೃತ್ತಿಯಿಂದ ಶಿಕ್ಷಕ ಮತ್ತು ಶಿಕ್ಷಕರ ತರಬೇತುದಾರ ಅಂದರೆ ರಿಸೋರ್ಸ್ ಪರ್ಸನ್. ಅವರ ವೃತ್ತಿಯ ಕಾರಣ ಅಂದರೆ ಸಂಪನ್ಮೂಲ ವ್ಯಕ್ತಿಯಾಗಿರುವ ಕಾರಣ ಜಗತ್ತಿನ ಸಮಸ್ತ ಆಗು ಹೋಗುಗಳ ಅರಿವು ಮತ್ತು ಅಂಥ ಸಂಗತಿಗಳು ಒಟ್ಟೂ ಸಮಾಜದ ಮೇಲೆ ಬೀರುವ ಪರಿಣಾಮಗಳನ್ನೂ ಪ್ರಮಾಣಗಳನ್ನೂ ಆನುಷಂಗಿಕವಾಗಿ ಅವರು ಪ್ರಸ್ತಾಪಿಸದೇ ಅನ್ಯ ಮಾರ್ಗಗಳು ಇರುವುದಿಲ್ಲ. ಹಾಗಾಗಿಯೇ ಏನೋ ಇವರ ಕವಿತೆಗಳಲ್ಲಿ ಐತಿಹಾಸಿಕ ವ್ಯಕ್ತಿಗಳೂ ವರ್ತಮಾನದ ಸಂಗತಿಗಳೂ ಆಗೀಗ […]

Back To Top