ಕಾವ್ಯಯಾನ

ಕಾವ್ಯಯಾನ

ಅಪ್ಪ… ಸುಜಾತ ಲಕ್ಷ್ಮೀಪುರ. ಅಪ್ಪ ನೆನಪಿಗೆ ಬರುವುದು ಅಪರೂಪ… ಕಣ್ಣು ಬಿಟ್ಟಾಗಿನಿಂದ‌ ಕಂಡ‌ಅಮ್ಮನ ಮೊಗದಲ್ಲೇ ಅಪ್ಪನ‌ ಸುಳಿವು..ಅಮ್ಮನಲ್ಲಿ ಪ್ರೀತಿ ತುಂಬಿದ ಭಯ ಆತಂಕಆವಸರಿಸಿದರೆ ಗೊತ್ತಾಗುತ್ತಿತ್ತು ಅಪ್ಪ ಬಂದಾ! ಚಿಕ್ಕವಳಿರುವಾಗಲೇಮಧ್ಯ ರಾತ್ರಿ ಎಬ್ಬಿಸಿ ಕುಳ್ಳಿರಿಸುತ್ತಿದ್ದ ಓದು.. ಓದು..ತಾನು ಕಲಿತ ನಾಲ್ಕು ಅಕ್ಷರ ಸಾಲದೆಂದು ನಮ್ಮನ್ನು ಬಡಿದೆಚ್ಚರಿಸುತ್ತಿದ್ದ. ರಾತ್ರಿ ಎಷ್ಟೋ ಹೊತ್ತಿಗೆ ಕುಡಿದು ತೂರಾಡುತ್ತಾ ತಿಂಡಿ ಕಟ್ಟಿಸಿಕೊಂಡುಮನೆಗೆ ಬರುತ್ತಿದ್ದ ಅಪ್ಪ..ಹೊತ್ತು ಗೊತ್ತು ನೋಡದೆಯೇ ಎಬ್ಬಿಸಿ ತಿನ್ನಿಸುತ್ತಿದ್ದ. ಕುಡಿತ ದುಡಿಮೆಯಲ್ಲೇಜೀವ ಸವೆಸಿದ ಅಪ್ಪಮುದ್ದು ಮಾಡಿದ್ದು ನೆನಪೇ ಇಲ್ಲಾ..ಒದ್ದು ಎಬ್ಬಿಸಿ ನೀರಿಗೆಂದು ಕೊಡ […]

ಶಿಶುಗೀತೆ

ಇರುವೆ ತೇಜಾವತಿ ಹೆಚ್.ಡಿ. ಇರುವೆ ಇರುವೆ ಎಲ್ಲಿರುವೆಎಲ್ಲಾ ಕಡೆಯಲು ನೀನಿರುವೆಶಿಸ್ತಿಗೆ ನೀನೇ ಹೆಸರಾಗಿರುವೆಹೆಚ್ಚಿನ ಭಾರವ ನೀನೊರುವೆ ಇರುವೆ ಇರುವೆ ಕೆಂಬಿರುವೆಕೋಪದಿ ಏಕೆ ನೀನಿರುವೆಅರಿಯದೆ ನಿನ್ನ ಮುಟ್ಟಿದರೆಚುರುಚುರು ಅಂತ ಕಚ್ಚಿರುವೆ ಇರುವೆ ಇರುವೆ ಕಟ್ಟಿರುವೆದಾರಿಲಿ ಏಕೆ ನಡೆದಿರುವೆಅರಿಯದೆ ಪಾದವ ಮೆಟ್ಟಿದರೆಸಾಲನು ಬಿಟ್ಟೇ ಚುಚ್ಚಿರುವೆ ಇರುವೆ ಇರುವೆ ಚಗಳಿರುವೆಕೊಟ್ಟೆಯ ಎಲ್ಲಿ ಕಟ್ಟಿರುವೆಚಟ್ನಿಗೆ ನೀನು ಚಂದಿರುವೆಮಲ್ನಾಡ ಸೀಮೆಲಿ ನೀನಿರುವೆ ಇರುವೆ ಇರುವೆ ಕಪ್ಪಿರುವೆತತ್ತಿಯ ಎಲ್ಲಿ ಬಿಟ್ಟಿರುವೆಬೆಲ್ಲವ ನೀನು ಮುತ್ತಿರುವೆಹಿಡಿಯ ಹೋದ್ರೆ ಬುಳುಗುಡುವೆ ***********

ಲಹರಿ

ಮಳೆಗಾಲದ ಹಸಿ ಪ್ರೇಮಪತ್ರ… ಆಶಾಜಗದೀಶ್ ಯಾರೋ ಹುಡುಗ ಹೇಳಿದನಂತೆ ತನ್ನ ಹುಡುಗಿಗೆ, “ಹೋಗಿ ಮಳೆಯ ಹನಿಗಳನ್ನು ಎಣಿಸು.. ನಾ ನಿನ್ನನ್ನು ಅಷ್ಟು ಪ್ರೀತಿಸುತ್ತೇನೆ” ಎಂದು. ನನ್ನ ಅದೆಷ್ಟೋ ಸಂದರ್ಭಗಳ ಪ್ರೇಮದ ಉತ್ಕಟತೆಗೆ ಮಾತಾಗಿ ನಿಂತಿತ್ತು ಈ ಕಥೆ. ಏನೊಂದು ಹೇಳದೆಯೂ “ನನ್ನ ಪ್ರೀತಿ ಇದು” ಎಂದು ಹೇಳಿದ ಮೌನ ಮಾತಾಗಿತ್ತು ಈ ಕಥೆ. ಅರೆ… ಆ ಹೆದ್ದಾರಿಯ ಮಗ್ಗುಲ ಕಾಲುದಾರಿಯ ಪೊದೆಗೆ ಎಲ್ಲ ಗೊತ್ತಿದೆ. ನಾವು ಹೃದಯವನ್ನು  ಹಂಚಿಕೊಳ್ಳುತ್ತಾ ನಮ್ಮ ಆತ್ಮಗಳನ್ನು ಒಂದಾಗಿಸಿದ್ದನ್ನು ಕಂಡಿದೆ ಅದು. ನೋಯಿಸುವಷ್ಟು […]

ಕಾವ್ಯಯಾನ

ಮಳೆ ಪದ್ಯಗಳು ಜಿ.ಲೋಕೇಶ ಮತ್ತೆ ಮತ್ತೆ ಮಳೆ ಹುಯ್ದುನೆನೆದ ನೆನಪು ತರಿಸಿದೆ ಹಾರಿಹೋದ ಕೊಡೆಯು ಕೂಡಕಣ್ಣು ಸನ್ನೆ ಮಾಡಿದೆ ಮೊದಲ ಭೇಟಿಗೆ ಮರದ ನೆಳಲುಮಳೆಯು ಗುಡುಗು ಜೊತೆಗೆ ಸಿಡಿಲು ಎದೆಯ ತಬ್ಬಿ ಭಯದಿ ಹಿಡಿತ ಬಿಗಿದುತಬ್ಬಲೇನು ಅಡ್ಡಿ ಯಾಕೋ ಬೆರಳು ತಡೆದು ತೋಯ್ದ ದೇಹ ತಣ್ಣನೆ ಬಿಸಿಯ ಫಲವುಇರದು ಜೀವ ಮೆಲ್ಲ ಮುರಿದುನಿಯಮವು ಕಾಲ ಹೊತ್ತ ತಬ್ಬಿದೆದೆಗೆ ಅನ್ಯ ನಾದಹುಯ್ದು ಮರೆತ ಮಳೆಗೆ ಒಂದು ಧನ್ಯವಾದ ಮತ್ತೆ ಬರಲಿ ಕ್ಷಣವು ಅವಕಾಶದಂತೆಮತ್ತೆ ತೊಯ್ದು ತೆಪ್ಪೆಯಾಗುವಂತೆ ****

ಮತ್ತೆ ಮಳೆ ಬಂದಿದೆ.. ಹರಿವ ನೀರಲ್ಲಿ ತನ್ನ ಪುಟ್ಟ ಕೈಗಳಿಂದದೋಣಿಗಳ ಬಿಟ್ಟುಅವು ಚಲಿಸುವ ಚಂದಕ್ಕೆಬೆರಗಾಗಿ ನಕ್ಕು ಹಗುರಾಗಿದೆ ಅರಳಿದ ನೆಲಸಂಪಿಗೆಯ ಕೇಸರಗಳಮುಟ್ಟಿ ನೋಡುತ್ತಹನಿ ಮುತ್ತಿಕೊಂಡ ದಳಗಳಸವರಿ ಇನ್ನಷ್ಟು ನಯವಾಗಿಸುತ್ತದೆ ಬೀಸುವ ತಂಗಾಳಿ ಅಲೆಯುವಎಲೆಗಳ ಜೊತೆ ಗುಟ್ಟುಗಳನಿಟ್ಟುಹೂವಿಂದ ಹೂವಿಗೆ ಅಲೆದುಪರಿಮಳವ ಹೊತ್ತೊಯ್ಯುತ್ತದೆ ಸಂಜೆ ಬಂದ ಮಳೆಗೆ ಖಾಸಾನೆಂಟರ ಕರೆದುತಾಜಾ ಮೀನುಗಳ ಹಿಡಿದುಊಟ ಬಡಿಸುವ ಭೂಮಿರಾತ್ರಿ ಪಟ್ಟಾಂಗ ಹೊಡೆದುಬದುಕಿನ ಖುಷಿಯ ದ್ವಿಗುಣಗೊಳಿಸುತ್ತದೆ ರಾಶಿ ರಾಶಿ ರಾಶಿ ಮೋಡಗಳು ಜಗದ ತುಂಬೆಲ್ಲಾ ಕವಿಯುವಾಗನವಿಲಿನ ಹಜ್ಜೆಗೆ ಗೆಜ್ಜೆದನಿಮೂಡಿ ಮುಸ್ಸಂಜೆಯ ಆಲಾಪಕ್ಕೆಶೃತಿ ಕೊಡುತ್ತದೆ ಕತ್ತಲಾಗಲಿ,ಜೀರುಂಡೆಗಳ […]

ಕಾವ್ಯಯಾನ

ಮೂಲ ಬಿಂದು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅದ್ಯಾವ ರೂಪದಲ್ಲಿ ಬಂದು ಸೇರಿತ್ತೋ?ಸಣ್ಣ ಸುಳಿವೂ ಇರಲಿಲ್ಲ ನೋಡುಹೆಡೆಯೆತ್ತಿ ಬುಸುಗುಟ್ಟದ ಹೊರತುಇರುವು ತಿಳಿಯುವುದಾದರೂ ಹೇಗೆ?ಮತ್ತೆ ಹಾಗೆ ಗೊತ್ತಾಗುವುದಕ್ಕೂಅದ್ಯಾವತ್ತೂ ಪ್ರಕಟವಾಗಲೂ ಇಲ್ಲ ಬಿಡು. ಅದೂ ಅಲ್ಲದೇ,ಇನ್ಯಾವತ್ತೋ ಹಠತ್ತನೇ ಎದುರಿಗೆ ಬಂದುಹಲ್ಲುಕಿಸಿದು, ನೋಡು ನಾನಿದ್ದೇನೆ; ಅದೂ ನಿನ್ನಲ್ಲೇ!ಅಂತ ಹೆದರಿಸುತ್ತದೆ ಅನ್ನುವ ಕಲ್ಪನೆಯಾದರೂಆವತ್ತು ಯಾರಿಗಿತ್ತು ಹೇಳು? ಯಾವುದೂ ಸುದ್ದಿಯಾಗಲಿಲ್ಲ,ಹಗಲು ರಾತ್ರಿ ಕತ್ತಲು ಬೆಳಕುಮೊಗ್ಗರಳಿದ್ದು ಹೂವಾದದ್ದುಉತ್ತು ಬಿತ್ತ ಮಣ್ಣಲ್ಲಿ ತೆನೆ ತೂಗಿದ್ದುಹಕ್ಕಿ ಹಾರಿದ್ದು ಕಪ್ಪೆ ಕೂಗಿದ್ದುಯಾವುದು ಕೂಡಾ,“ಅವನ ಆಣತಿ ಇಲ್ಲದೇ ಹುಲ್ಲುಕಡ್ಡಿಯೂಅಲ್ಲಾಡುವುದಿಲ್ಲ ಇಲ್ಲಿ…”ಎಲ್ಲದಕ್ಕೂ ಲೆಕ್ಕಾಚಾರವಿದೆ! ಆದರೆ,ಹಗುರವಾಗಿ […]

ನನ್ನೊಳಗೂ ಮಳೆ ವರುಣ ನೀಡಿದ ಸಿಹಿ ಚುಂಬನದ ಮಳೆ,ನನ್ನೆದೆಯ ಅಂಗಳದಲಿ ನಾಚಿವೆತನುಮನದ ಹೂಗಳುನನ್ನೊಳಗೂ ಮುಂಗಾರು, ಮೌನದ ಪರದೆಯೊಳಗೆಅವಿತ ಮಾತುಗಳುಎದೆಯ ನೆಲದಲಿ ಒಣಗಿದ ನೆನಪುಗಳಿಗೆ,ಕತ್ತಲೆಯ ಬೇಲಿ ದಾಟಿ ಹರಿದು ಬಂದಳುನನ್ನೊಳಗೂ ಮುಂಗಾರು ಮೊಗೆ ಮೊಗೆದು ಸುರಿದಳು ವಿರಹದ ಕಣ್ಣೀರು,ಬಚ್ಚಿಟ್ಟುಕೊಂಡ ಮಾತು ಬಿಚ್ಚಿಡುವ ಸಂತಸನನ್ನೊಳಗೂ ಮುಂಗಾರು ಋತುಗಳ ಕನವರಿಕೆಯಲಿಮಿಲನದ ಲವಲವಿಕೆಮತ್ತೆ ಮೌನವೇ ನಾಚಿತುಬಾಚಿ ತಬ್ಬಿತು,ವಸಂತನಕುಂಚದಲಿ ಮತ್ತೆ ಬಣ್ಣ ಬಣ್ಣದ ಚಿತ್ತಾರಗಳುನನ್ನೊಳಗೂ ಮುಂಗಾರು ಕನಸುಗಳು ಗೂಡು ಕಟ್ಟಿವೆಮನದ ಕೂಜನದಲಿ ಇನಿದನಿ ಕೇಳಿಸುತಿದೆಎಳೆಬಿಸಿಲ ರಂಗು ಕಾಡಿದೆಕಾಮನಬಿಲ್ಲಿನ ವರ್ಣಗಳಲಿ ನನ್ನೊಳಗೂಮುಂಗಾರು ಸುರಿದಿದೆ ನನ್ನೊಳಗೂ ಕವಿತೆ […]

ಮಳೆ ಹುಯ್ಯಲಿ ಜಾರಿದವು ಮುತ್ತಿನ ಹನಿಗಳು ಅಂಜಿಕೆಯಿಲ್ಲದೆನಭದ ಗೇರೆಗಳ ದಾಟಿ ಅನಂತದೆಡೆಗೆಅವಕೊಂದೆ ಚಿಂತೆ ಹನಿದ ಹನಿಗಳೆಲ್ಲಹಸಿರಾಗಲು ಕಾತರಿಸಿದ ಭವದ ಒಡಲ ಸೇರಿಹಿಗ್ಗಿ ನುಲಿಯಲು,ಬೆಸೆಯಲು ಆತುರಯಾವ ಹನಿ ಮುತ್ತಾಗುವುದೋಯಾವ ಹನಿ ನತ್ತಾಗುವುದೋಇಳೆಯ ಮೈಸಿರಿಗೆ ಒನಪಾಗುವುದೋಸಿಡಿಲು ಗುಡುಗಿನ ಆರ್ಭಟಕೆಬೆಚ್ಚಿ ಬಿದ್ದು ಸದ್ದಿಲ್ಲದೆ ಸರಿದೂಗಿಸಲುಉಬ್ಬು ತಗ್ಗುಗಳೆಲ್ಲ ಕೊಂಚ ಸಾವರಿಸಿದಂತೆಮಳೆಯ ತುಂತುರು ಹನಿಗಳಿಗಾಗಿಮೆಲ್ಲುಸಿರಿನ ಪ್ರೇಮಕ್ಕೆ ಹಂಬಲಿಸಿದಂತೆಬೆಂದು ಬಸವಳಿದ ಮನಕಿಂದು ಆನಂದಮೈಮನಕೆಲ್ಲ ಸುಗ್ಗಿಯ ಹಬ್ಬದೂಟದಂತೆಕಾರ್ ಮೋಡಗಳು ಬಿಗಿದಪ್ಪಿ ಬೆವರ ಹರಿಸಿಉನ್ಮದಾದ ಬಿಸಿಗಾಳಿ ಧರೆಯ ನಡುಗಿಸಿದಾಗೆಲ್ಲಎಂಥ..! ಸುಮಧುರ ಮಳೆಗಾಳಿ ಹೊಳಪುಕಾಗದದ ದೋಣಿ ತೇಲಿ ಬಿಟ್ಟ ನೆನಪುಆಣಿ […]

ಆಮಂತ್ರಣ ಒಣಗಿದೆದೆಯ ಬೆಂಗಾಡಿನಲಿ,ಭ್ರಮೆಯ ದೂಳಡಗಿಸುವಂತೆ,ಬಾ ಮಳೆಯೇ, ದಣಿವಾರದ ಮೂಲೆಯಲಿ,ಜೇಡಭಾವ ಜಾಡಿಸುವಂತೆ,ಬಾ ಮಳೆಯೇ, ಮನದ ಬಯಕೆ ಕತ್ತಲಲಿ,ಕರುಡು ಕಳೆವ ಬೆಳಕಂತೆ,ಬಾ ಮಳೆಯೇ, ಗದ್ದಲಗಳ ಗದ್ದೆಯಲಿ,ಹಸಿರೂಡಲು ನೇಗಿಲಂತೆ,ಬಾ ಮಳೆಯೇ, ನನ್ನ ಮನದ ಮೌನದಲಿ,ಹನಿಯ ಶಬ್ದ ಉಳಿವಂತೆ,ಬಾ ಮಳೆಯೇ, ಬದುಕ ಬಟ್ಟಲ ಬವಣೆಗಳಲಿ,ಉಕ್ಕಿ ಹರಿವ ಕರುಣೆಯಂತೆ,ಬಾ ಮಳೆಯೇ, ಒಂಟಿಯಾದ ಮನದಲಿ,ತಂಪನೀವ ಎಲರಂತೆ,ಬಾ ಮಳೆಯೇ, ಹನಿ ಹನಿಗಳು ಕಾಡುವಂತೆ,ಬಂದಗಳಿಗೆಗಳಿಗೆಲ್ಲ ಬೇಡಿಯಂತೆ,ಬಾ ಮಳೆಯೇ, ಬಾಯಾರಿದ ಪಯಣದಲಿ,ಇನಿಯನ ಜೇನದನಿ ಹನಿಯಂತೆ,ಬಾ ಮಳೆಯೇ, ಬರಿದೆ ಬೊಗಸೆಯಲಿ,ಎದೆ ತುಂಬಿದಾ ಕನಸು ಸುರಿವಂತೆ,ಬಾ ಮಳೆಯೇ, ಸತ್ತ ಕನಸುಗಳ ಮಧ್ಯದಲಿ,ಸೂಚಿ ಮಲ್ಲೆ […]

ಲಹರಿ

ಒಂದು ಪತ್ರ ಜಯಶ್ರೀ ಜೆ.ಅಬ್ಬಿಗೇರಿ ಕಾಲೇಜಿನಂಗಳದಿ ಕಾಲಿಟ್ಟ ದಿನದಂದೇ ನೀ ಕಣ್ಣಿಗೆ ಬಿದ್ದೆ. ಸುರಿವ ಸೋನೆ ಮಳೆಗೆ ಹಾಡೊಂದ ಗುಣುಗುಣಿಸುತ ಕಣ್ಮುಂದೆ ನಿಂದೆ. ತುಸುವೇ ತುಸು ದೂರದ ರಸ್ತೆಯಂಚಿನಲ್ಲಿ ನಿಂತು ಹರಿವ ಸಿಹಿ ಝರಿಯಂತೆ ನನ್ನೆಡೆ ಕಣ್ಣೋಟ ಹರಿಸಿದೆ. ಬೀಸುವ ತಂಗಾಳಿಯ ಜತೆ ನಿನ್ನ ಮೈಯ ಸುಗಂಧ ತೇಲಿ ಬಂದು ನನ್ನ ಮೈಯ ಸವರಿದಂತೆನಿಸಿ ನಿಂತಲ್ಲೇ ಒಮ್ಮೆ ನಡುಗಿದೆ.ಒಮ್ಮಿಂದೊಮ್ಮೆಲೇ ಬೀಸಿದ ಜೋರಾದ ಗಾಳಿಗೆ ಬಲು ದೂರದ ತನಕ ಹಾರಿದ ನಿನ್ನೆದೆಯ ಅಂದದ ಆಕಾರ ಮುಚ್ಚಿದ್ದ ದುಪ್ಪಟ್ಟಾ ತಂದು […]

Back To Top