ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಜಗವ ಗೆದ್ದ ಜಾನಕಿ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಜಗವ ಗೆದ್ದ ಜಾನಕಿ” ವಸಂತ ಕಾಲದಲಿ ಹಸಿರಾದ ಕಾಡಿನಲಿ,ದಿನವೂ ಹಾಡುತಿದ್ದ ಕೋಗಿಲೆಯೊಂದು.ಇಂದು  ಮೌನವಾಗಿದೆ,ಸ್ವರ ಬಿಟ್ಟು ಮುಗಿಲುಸೇರಿತು ಮೆಲ್ಲಗೆ  ಯಾರ ದೃಷ್ಟಿ ಬಿತ್ತೋ ಚಂದದ ಧ್ವನಿಗೆ?ಯಾವ ಬೇಸರವಾಯಿತು ಮುಗ್ಧ ಮನಕೆ?ಹಾಡು ನಿಲ್ಲಿಸಿದ ಕೋಗಿಲೆಯ ಕಂಡು,ಕರೆದ ಕಾಗೆಯೂ ಮೂಕ ಪ್ರೇಕ್ಷಕ ದುಃಖದ ಕಡಲು . ಚಿಲಿಪಿಲಿ ಹಕ್ಕಿಗಳ ಕಲರವವೂ ನಿಂತಿದೆ,ತಂಗಾಳಿ ಬೀಸದೆಮಸಣ ಮೌನ.ಮರಗಿಡ ಕಾನನ ಕಣ್ಣೀರು ಇಡುತಿವೆ,ನಿನ್ನ ಗಾನ ಸುಧೆಗೆ  ಮತ್ತೆ ಕಾಯುತಿವೆ. ಕೋಗಿಲೆಯೇ ಏಕೆ  ಮೌನ?ಶಿಖರ ಬಾಗಿವುದು  ನಿನ್ನ ಸಾಧನ.ನಿನ್ನ  ಜಂಟಿ ಸ್ವರದ  ಕೂಗು,ಹಸಿರಾಗಿಸಲಿ ಒಣಗಿದ ತೋಟದಲಿ ಹೋಗಿ ಬಾ ತಾಯಿನಿನಗಿದೆ ಶೋಕದ ವಿದಾಯಜಗವ ಗೆದ್ದ ಜಾನಕಿನೀನಿಲ್ಲದೆ ಬಡವಾಯಿತುಸ್ವರ ಸಂಗೀತ ಮೂಕಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ಜಗವ ಗೆದ್ದ ಜಾನಕಿ” Read Post »

ನಿಮ್ಮೊಂದಿಗೆ

ಕನಕ -ಷರೀಫ್ ಕಾವ್ಯ ಪುರಸ್ಕಾರಕ್ಕೆ ಸಾಹಿತಿ, ಎ. ಎಸ್. ಮಕಾನದಾರ ಆಯ್ಕೆ

ಪ್ರಶಸ್ತಿ ಸಂಗಾತಿ ಕನಕ -ಷರೀಫ್ ಕಾವ್ಯ ಪುರಸ್ಕಾರಕ್ಕೆ ಸಾಹಿತಿ, ಎ. ಎಸ್. ಮಕಾನದಾರ ಆಯ್ಕೆ ಕನಕ -ಷರೀಫ್ ಕಾವ್ಯ ಪುರಸ್ಕಾರಕ್ಕೆ ಸಾಹಿತಿ, ಎ. ಎಸ್. ಮಕಾನದಾರ ಆಯ್ಕೆ      ಗದಗ -5- ಹಿರಿಯ ಸಾಹಿತಿ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ, ನಿರಂತರ ಪ್ರಕಾಶನದ ಸಂಚಾಲಕ ಎ. ಎಸ್. ಮಕಾನದಾರ ಅವರು 2024ನೇ ಸಾಲಿನ ರಾಜ್ಯ ಮಟ್ಟದ ಕನಕ -ಷರೀಫ್ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆಂದು  ಆಯ್ಕೆ ಸಮಿತಿಯ ಅಧ್ಯಕ್ಷ, ಹಿರಿಯ ಬಂಡಾಯ ಸಾಹಿತಿ  ಡಾ. ಸತೀಶ್ ಕುಲಕರ್ಣಿ ಕಾರ್ಯಕ್ರಮದ ಸಂಚಾಲಕ ಪ್ರೊ. ರಂಜಾನ್ ಹೆಬಸೂರ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.     ದೊಡ್ಡಟ ಕಲೆಗೆ ಹೊಸ ಸ್ಪರ್ಶ ನೀಡಿದ ಹಿರಿಯ ರಂಗಕರ್ಮಿ ಉತ್ಸವ ರಾಕ್ ಗಾರ್ಡನ್ ನ ಸಂಸ್ಥಾಪಕರಾದರಾದ ಕಲಾ ಗುರು ಡಾ. ಟಿ.ಬಿ.ಸೊಲಬಕ್ಕನವರ ಅವರ 79ನೇ ಹುಟ್ಟುಹಬ್ಬದ ಸ್ಮರಣಾರ್ಥ ಶಿಗ್ಗಾವಿ ತಾಲೂಕಿನ ಉತ್ಸವ ರಾಕ್ ಗಾರ್ಡನ್ ನಲ್ಲಿ ಧಾರವಾಡ ಜಿಲ್ಲೆಯ ಹೆಬಸೂರ್ ನ ಉತ್ತರ ಸಾಹಿತ್ಯ ವೇದಿಕೆ ಸಂಯುಕ್ತ ಆಶ್ರಯ ದಲ್ಲಿ ರಾಜ್ಯ ಮಟ್ಟದ ಕವಿ ಗೋಷ್ಠಿ. ಗಜಲ್ ಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವದುರಾಜ್ಯ ಮಟ್ಟದ ಕನಕ -ಷರೀಫ್ ಕಾವ್ಯ ಪ್ರಶಸ್ತಿ ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯ, ಹಿರಿಯ ಕವಿ ಡಾ. ಚನ್ನಪ್ಪ ಅಂಗಡಿ 2022ನೇ ಸಾಲಿಗೆ, ಶಿಂಧನೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಹಿರಿಯ ವಿಮರ್ಶಕ, ಡಾ. ಜಾಜಿ ದೇವೇಂದ್ರಪ್ಪ ಅವರು 2023ನೇ ಸಾಲಿಗೆ, ಕರ್ನಾಟಕ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪುರಸ್ಕಾರ ಪಡೆದ ನ್ಯಾಯಾಂಗ ಇಲಾಖೆಯ ನಿವೃತ್ತ ಉದ್ಯೋಗಿ ಹಿರಿಯ ಸಾಹಿತಿ ಎ ಎಸ್. ಮಕಾನದಾರ ಅವರು 2024ನೇ ಸಾಲಿಗೆ ಮತ್ತು ಹಿರಿಯ ಅನುವಾದಕಿ ಪತ್ರ ಕರ್ತೆ ಮಂಜುಳಾ ಕಿರುಗಾವಲು ಇವರು 2025 ನೇ ಸಾಲಿನ ಪುರಸ್ಕಾರ ಕ್ಕೆ ಭಾಜನರಾಗಿದ್ದಾಗಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ಸತೀಶ್ ಕುಲಕರ್ಣಿ, ಸದಸ್ಯರಾದ ಅಬ್ದುಲ್ ಹೈ ತೋರಣಗಲ್ಲು, ಶ್ರೀಶೈಲ ಮಾದಣ್ಣವರ, ರಂಜಾನ್ ಹೆಬಸೂರ, ದೀಪಾ ಗೋನಾಳ ಡಾ. ವೇದಾ ರಾಣಿ ದಾಸನೂರ ಮುಂತಾದವರು ಆಯ್ಕೆ ಸಮಿತಿಯಲ್ಲಿದ್ದರು ಈ ಪೂರ್ವ ಕನಕ -ಷರೀಫ್ ಪ್ರಶಸ್ತಿಗೆ  ಹಾವೇರಿ ಜಿಲ್ಲೆಯ ವಿಜಯ ಕಾಂತ್ ಪಾಟೀಲ್, ಗಜಲ್ ಕವಿ ಕೊಪ್ಪಳ ಜಿಲ್ಲೆಯ ಅಲ್ಲಾ ಗಿರಿರಾಜ್, ದಾವಣಗೆರೆ ಜಿಲ್ಲೆಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದ ಮುಖ್ಯ ಆಡಳಿತಾಧಿಕಾರಿ, ಕವಿ ಬಿ. ಶ್ರೀನಿವಾಸ್, ಆಕಾಶವಾಣಿ ಧಾರವಾಡ ಕೇಂದ್ರದ ನಿರ್ದೇಶಕ, ಕತೆಗಾರ ಬೆಳಗಾವಿ ಜಿಲ್ಲೆಯ ಡಾ. ಬಸು ಬೇವಿನ ಗಿಡದ ಅವರು ಭಾಜನರಾಗಿದ್ದನ್ನಿಲ್ಲಿ  ಸ್ಮರಿಸಬಹುದು.

ಕನಕ -ಷರೀಫ್ ಕಾವ್ಯ ಪುರಸ್ಕಾರಕ್ಕೆ ಸಾಹಿತಿ, ಎ. ಎಸ್. ಮಕಾನದಾರ ಆಯ್ಕೆ Read Post »

ನಿಮ್ಮೊಂದಿಗೆ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ( ಲಕ್ಷ್ಮಣ ಶರೆಗಾರ ಸರ್ ಅವರ ಮಿಸ್ರಾ ತೆಗೆದುಕೊಂಡು ಬರೆದದ್ದು.ಒಮ್ಮೆ ಹಿಂತಿರುಗಿ ನೋಡಿದ್ದರೆ ಮತ್ತೊಮ್ಮೆ ಪ್ರೀತಿ ಹುಟ್ಟುತ್ತಿತ್ತೇನೋ..) ಒಮ್ಮೆ ಹಿಂದಿರುಗಿ ನೋಡಿದ್ದರೆ ಮತ್ತೊಮ್ಮೆ ಪ್ರೀತಿ ಹುಟ್ಟುತ್ತಿತ್ತೇನೋಮರಣಿಸಿದ ನಿನ್ನ ಆ ಸ್ಮೃತಿಗೆ ಮರುಜನ್ಮ ಸಿಗುತ್ತಿತ್ತೇನೋ ಒಂದೇ ಕ್ಷಣ ನಿಂತು, ನನ್ನ ಬಿಂಬವ  ಕಣ್ತುಂಬಿಕೊಳ್ಳಬೇಕಿತ್ತು ಆರ್ದ್ರಗೊಂಡ ಮನವು ಮತ್ತೆ ಒಲವಿನೆಡೆಗೆ ವಾಲುತ್ತಿತ್ತೇನೋ ಚಂದ್ರ ತಾರೆಗಳೂ ಸೋತಿದ್ದವು ನಮ್ಮಿಬ್ಬರ  ಬಾಂಧವ್ಯಕೆನೀ ತಲೆ ಎತ್ತಿದ್ದರೆ ಆ ಬಾನು ಬಾಗಿ ಸಾಕ್ಷಿ ಹೇಳುತ್ತಿತ್ತೇನೋ ಬರಬರನೇ ಹಾಗೆಯೇ ನಡೆದು ಹೋದೆಯಲ್ಲ ನಲ್ಲನೇನಿಂತಿದ್ದರೆ ನನ್ನೂರಿನ ತಂಗಾಳಿ ನಿನ್ನೆದೆಗೆ ಸೋಕುತ್ತಿತ್ತೇನೋ ಕೆಲ ಮೈಲುಗಳಾದರೂ ವಾಣಿಯ ಕೈ ಹಿಡಿದು ಪಯಣಿಸಿದ್ದೆನಿನ್ನದೇ ಬೆರಳ ನಿಟ್ಟಿಸಿದ್ದರೆ ,ನಿನಗದರ ತವಕ ಕಾಣುತ್ತಿತ್ತೇನೋ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಅಂಕಣ ಸಂಗಾತಿ, ನಿಮ್ಮೊಂದಿಗೆ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮೌನ ಯೋಗಿ ಶ್ರೀ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ಕರ್ನಾಟಕದ ಶರಣ ಪರಂಪರೆಯ ಅತ್ಯಂತ ಶ್ರೇಷ್ಠ ಹಾಗೂ ಅವಿಸ್ಮರಣೀಯ ಮೌನಯೋಗಿಗಳಾಗಿದ್ದಾರೆ.  ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಬಳಗಾನೂರು ಗ್ರಾಮದ ಚಿಕ್ಕೇನಕೊಪ್ಪ ಮಠದಲ್ಲಿ ನೆಲೆಸಿ, ತಮ್ಮ ತಪಃಶಕ್ತಿಯಿಂದ ಜನಸಾಮಾನ್ಯರ ಉದ್ಧಾರಕ್ಕಾಗಿ ಶ್ರಮಿಸಿದ ಮಹಾಪುರುಷರಾಗಿದ್ದಾರೆ. ವ್ಯಕ್ತಿತ್ವ ಮತ್ತು ಜೀವನ  ಶೈಲಿಅವಧೂತ ಜೀವನ: ಚನ್ನವೀರ ಶರಣರು ತನುವಿನಲ್ಲಿ ನಿರ್ಮೋಹತ್ವ, ಮನದಲ್ಲಿ ನಿರಹಂಕಾರ ಮತ್ತು ಜ್ಞಾನದಲ್ಲಿ ಪರಮಾನಂದವನ್ನು ರೂಢಿಸಿಕೊಂಡು ಸರಳವಾಗಿ ಬದುಕಿದವರು. ಮೌನಯೋಗಿ: ಅವರು ಒಬ್ಬ ಅವಧೂತ ಫಕೀರನಂತೆ ಜೀವಿಸುತ್ತಾ, ಸಮಾಜಕ್ಕೆ ಶಾಂತಿ ಮತ್ತು ಸೌಹಾರ್ದತೆಯ ದಾರಿಯನ್ನು ತೋರಿಸಿದ ಮಹಾನ್ ತಪಸ್ವಿ. ಸಾಹಿತ್ಯ ಮತ್ತು ಇತಿಹಾಸಶರಣರ ಪುರಾಣ:  ಗದಗದ ವೀರೇಶ್ವರ ಪುಣ್ಯಾಶ್ರಮದ ಖ್ಯಾತ ಸಂಗೀತಜ್ಞರಾದ ಪಂ. ಪುಟ್ಟರಾಜ ಗವಾಯಿಗಳು ಇವರ ಜೀವನ ಚರಿತ್ರೆಯನ್ನು ಆಧರಿಸಿ ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ ಎಂಬ ಕೃತಿಯನ್ನು ರಚಿಸಿದ್ದಾರೆ. ಜಾತ್ರೆ ಮತ್ತು ಪುಣ್ಯಸ್ಮರಣೋತ್ಸವ ವಾರ್ಷಿಕ ಉತ್ಸವ: ಪ್ರತಿವರ್ಷ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಇವರ ಪುಣ್ಯಸ್ಮರಣೋತ್ಸವ ಮತ್ತು ಮಹಾ ರಥೋತ್ಸವವನ್ನು ಸಡಗರದಿಂದ ಆಚರಿಸಲಾಗುತ್ತದೆ. ಶರಣರ ಬುತ್ತಿ:  ಈ ಜಾತ್ರೆಯ ಒಂದು ವಿಶಿಷ್ಟ ಸಂಪ್ರದಾಯವೆಂದರೆ, ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರು ಭಕ್ತರಿಗಾಗಿ ಸಾವಿರಾರು ರೊಟ್ಟಿ, ಶೇಂಗಾ ಹೋಳಿಗೆ ಮತ್ತು ಕರ್ಜಿಕಾಯಿಗಳನ್ನು ತಯಾರಿಸಿ, ಬುತ್ತಿಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆಯ ಮೂಲಕ ಶ್ರೀಮಠಕ್ಕೆ ತರುತ್ತಾರೆ. ಸಾಮಾಜಿಕ ಸೇವೆಗಳು: ಜಾತ್ರೆಯ ಸಂದರ್ಭದಲ್ಲಿ ಉಚಿತ ಸಾಮೂಹಿಕ ವಿವಾಹಗಳು, ನೇತ್ರ ಚಿಕಿತ್ಸಾ ಶಿಬಿರಗಳು, ರಕ್ತದಾನ ಮತ್ತು ಆರೋಗ್ಯ ತಪಾಸಣೆಗಳನ್ನು ಹಮ್ಮಿಕೊಳ್ಳುವ ಮೂಲಕ ಶ್ರೀಮಠವು ಜನಪರ ಕಾರ್ಯಗಳನ್ನು ಮಾಡುತ್ತದೆ. ಶ್ರೀಮಠದ ಸಮಾಜ ಸೇವೆ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಶಿಕ್ಷಣ ಸಂಸ್ಥೆಗಳು, ಉಚಿತ ಪ್ರಸಾದ ನಿಲಯ (ದಾಸೋಹ) ಮತ್ತು ಸಾವಯವ ಕೃಷಿ ಹಾಗೂ ಗೋಶಾಲೆಯನ್ನು ನಡೆಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ   ನೀಡುತ್ತಿದೆ.    ಚಿಕ್ಕೇನಕೊಪ್ಪದ ಮೌನಯೋಗಿ, ಪೂಜ್ಯ ಶ್ರೀ ಚನ್ನವೀರ ಶರಣರ ವೈಯಕ್ತಿಕ ಲೌಕಿಕ ಜೀವನ ಮತ್ತು ಅವರ ತಂದೆ-ತಾಯಿಗಳ ನಿಖರವಾದ ಹೆಸರುಗಳ ಕುರಿತು ಇತಿಹಾಸದ ದಾಖಲೆಗಳಲ್ಲಾಗಲಿ ಅಥವಾ ಸಾರ್ವಜನಿಕ  ಮೂಲಗಳಲ್ಲಾಗಲಿ ಯಾವುದೇ ಸ್ಪಷ್ಟ ಮಾಹಿತಿಯು ಲಭ್ಯವಿಲ್ಲ. ಇದಕ್ಕೆ ಪ್ರಮುಖ ಕಾರಣಗಳು ಮತ್ತು ಅವರ ಹಿನ್ನೆಲೆಯ ಕುರಿತಾದ ಕೆಲವು ಮುಖ್ಯ ಸಂಗತಿಗಳು  ಅವಧೂತ ಹಾಗೂ ಮೌನ ಪರಂಪರೆ:  ಶ್ರೀ ಚನ್ನವೀರ ಶರಣರು ಒಬ್ಬ ಪರಮ ಅವಧೂತರಾಗಿ ಮತ್ತು ಮೌನಯೋಗಿಯಾಗಿ ಜೀವಿಸಿದರು. ಅವರು ತಮ್ಮ ಪೂರ್ವಾಶ್ರಮದ (ಸಂಸಾರದ ಅಥವಾ ಹುಟ್ಟಿನ) ವಿವರಗಳನ್ನು ಸಂಪೂರ್ಣವಾಗಿ ತೊರೆದು, ಕೇವಲ ಲೌಕಿಕ ಜಗತ್ತಿನ ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಬೆಳಕಿಗೆ ಬಾರದ ಹಿನ್ನೆಲೆ:  ಇತಿಹಾಸದ ಪ್ರಕಾರ, ಅವರು ಬಳಗಾನೂರಿನ ಚಿಕ್ಕೇನಕೊಪ್ಪ ಮಠಕ್ಕೆ ಬಂದು ನೆಲೆಸಿದ ನಂತರವೇ ಅವರ ದಿವ್ಯ ತಪಃಶಕ್ತಿ ಮತ್ತು ಪವಾಡಗಳು ಜನಸಾಮಾನ್ಯರಿಗೆ ತಿಳಿಯತೊಡಗಿದವು. ಹೀಗಾಗಿ ಅವರ ತಂದೆ, ತಾಯಿ ಅಥವಾ ಬಾಲ್ಯದ ಲೌಕಿಕ ವಿವರಗಳು ಮರೆಯಾಗಿ, ಅವರು ಕೇವಲ “ಚಿಕ್ಕೇನಕೊಪ್ಪದ ಶರಣರು” ಎಂದೇ ಪ್ರಸಿದ್ಧರಾದರು. ಸಾಹಿತ್ಯದಲ್ಲಿ ಉಲ್ಲೇಖ:  ಪಂ. ಪುಟ್ಟರಾಜ ಗವಾಯಿಗಳು ಬರೆದಿರುವ ಚಿಕೇನಕೊಪ್ಪದ ಚೆನ್ನವೀರ ಶರಣರ ಪುರಾಣ ಗ್ರಂಥದಲ್ಲಿಯೂ ಇವರ ಅಧ್ಯಾತ್ಮಿಕ ಸಾಧನೆ, ಪವಾಡಗಳು ಮತ್ತು ಸಮಾಜ  ಮುಖಿ ಸೇವೆ ಬಗ್ಗೆ ಹೇಳಿದ್ದಾರೆಯೇ ಹೊರತು ಅವರ ಪೂರ್ವಾಶ್ರಮದ ಬಗ್ಗೆ ಮಾಹಿತಿ ನೀಡಿಲ್ಲ. ಚಿಕ್ಕೇನಕೊಪ್ಪದ ಮಹಾನ್ ತಪಸ್ವಿ ಶ್ರೀ ಚನ್ನವೀರ ಶರಣರ ನಿಖರವಾದ ಹುಟ್ಟಿದ ದಿನಾಂಕ ಮತ್ತು ವರ್ಷ ಇತಿಹಾಸದ ದಾಖಲೆಗಳಲ್ಲಿ ಎಲ್ಲೂ ಲಭ್ಯವಿಲ್ಲ. ಅವರು ಒಬ್ಬ ಸಿದ್ಧ ಪುರುಷರಾಗಿದ್ದು, ಸಂಸಾರ ಹಾಗೂ ಕಾಲದ ಗಡಿಯಿಂದ ದೂರವಿದ್ದ ಕಾರಣ ಅವರ ಬಾಲ್ಯ ಮತ್ತು ಜನನದ ವಿವರಗಳು ಬೆಳಕಿಗೆ ಬಂದಿಲ್ಲ.  ಅವರ ಮಹಾಸಮಾಧಿ (ಮರಣ) ಹಾಗೂ ಪುಣ್ಯಸ್ಮರಣೆಯ   1. ಮರಣ / ಲಿಂಗೈಕ್ಯರಾದ ವಿವರ ಲಿಂಗೈಕ್ಯರಾದ ತಿಂಗಳು: ಶ್ರೀ ಚನ್ನವೀರ ಶರಣರು  1995 ಜನೆವರಿ ತಿಂಗಳ ಅವಧಿಯಲ್ಲಿ ಲಿಂಗೈಕ್ಯರಾದರು (ಮಹಾಸಮಾಧಿ ಹೊಂದಿದರು).:    ಘನಮೌನಿಗಳು:  ಶರಣರನ್ನು ಇತಿಹಾಸದಲ್ಲಿ “ಘನಮೌನಿ ಚಿಕ್ಕೇನಕೊಪ್ಪದ ಚನ್ನವೀರ ಶರಣರು” ಎಂದು ಕರೆಯಲಾಗುತ್ತದೆ. ಅವರು ಮೌನವ್ರತವನ್ನು ಆಚರಿಸುತ್ತಿದ್ದರಿಂದ ತಮ್ಮ ಜನ್ಮ ವೃತ್ತಾಂತವನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ದೈವೀಪುರುಷ: ಭಕ್ತರ ನಂಬಿಕೆಯ ಪ್ರಕಾರ, ಅವರು ಯಾವುದೇ ಸಾಮಾನ್ಯ ಮನುಷ್ಯನಂತೆ ಹುಟ್ಟು-ಸಾವಿನ ಬಂಧನಕ್ಕೆ ಒಳಗಾಗದೆ, ಕೇವಲ ಲೋಕ ಕಲ್ಯಾಣಕ್ಕಾಗಿ ಬಂದು ಮಠದಲ್ಲಿ ನೆಲೆಸಿದ ದೈವೀ ಸ್ವರೂಪಿಯಾಗಿದ್ದರು.ಪ್ರತಿ ವರ್ಷ ಜನೆವರಿ ತಿಂಗಳಲ್ಲಿ ನಡೆಯುವ ಅವರ ಪುಣ್ಯಸ್ಮರಣೆಯ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ಶರಣರ ಗದ್ದುಗೆಯ ದರ್ಶನ ಪಡೆಯುತ್ತಾರೆ. ಸಮಾಜಮುಖಿ ಕಾರ್ಯಕ್ರಮಗಳನ್ನು ನಿಯೋಜಿಸುವ ಮೂಲಕ ಬಸವ ತತ್ವ ಪ್ರಸಾರ ಮಾಡಿದರು. ಮೌನವೇ ತಪಸ್ಸು ಮಾತು ಬೆಳ್ಳಿ ಮೌನ ಬಂಗಾರ ಎಂದು ತಿಳಿದು ಭಕ್ತರಿಗೆ ಸಂದೇಶ ನೀಡುತ್ತಿದ್ದರು. ಒಬ್ಬ ಶ್ರೇಷ್ಠ ಶಿವಯೋಗ ಸಾಧಕರು. ಸಾವಿಲ್ಲದ ಶರಣರು. ಬಸವ ಮಾರ್ಗದ ರೂವಾರಿಗಳು ಚಿಕ್ಕೇನಕೊಪ್ಪದ ಶರಣರು. _______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

ನಿಮ್ಮೊಂದಿಗೆ

“ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು” ಗೊರೂರು ಅನಂತರಾಜು

ಚಿತ್ರಕಲಾ ಸಂಗಾತಿ ಗೊರೂರು ಅನಂತರಾಜು “ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು” ಹಾಸನ ನಗರ ಹಾಸನಾಂಬ ಕಲಾಕ್ಷೇತ್ರದ ಹೊರಾಂಗಣದಲ್ಲಿ ಚಿತ್ರಕಲಾ ಶಿಕ್ಷಕರು ಕಲಾವಿದರು ವಸಂತಕುಮಾರ್ ಅವರು   ತಮ್ಮ ಹೊಸ ರಚನೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದರು. ಕಳೆದ ಹತ್ತು ವರ್ಷಗಳಿಂದ ಸರ್ಕಾರದ ಆರ್ಥಿಕ ನೆರವಿಲ್ಲದೇ ಅವರು ಕಲಾ ಪ್ರದರ್ಶನ ಮಾಡುತ್ತಲೇ ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಫರ್ಧೆ ಏರ್ಪಡಿಸಿ ಬಹುಮಾನ ನೀಡುತ್ತಾ ಬಂದಿದ್ದಾರೆ. ಈ ಮೊದಲು  ಹಾಸನದ ಶಾಂತಲಾ ಚಿತ್ರಕಲಾ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಈಗ  ಆಲೂರಿನ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಲಾಸೇವೆ ಗುರುತಿಸಿ ಹಾಸನ ಜಿಲ್ಲಾಡಳಿತ  ಐದಾರು ವರ್ಷಗಳ ಹಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ವಸಂತ್ ಅವರು ಪ್ರತಿವರ್ಷ  ವಿಶ್ವ ಪರಿಸರ ದಿನ ಪ್ರಯುಕ್ತ ಮಕ್ಕಳಿಗೆ ಚಿತ್ರಕಲಾ ಸ್ಫರ್ಧೆ ಏರ್ಪಡಿಸುವುದು ಮಕ್ಕಳಿಗೆ ಸ್ಫರ್ಧೆ ಏರ್ಪಡಿಸಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡುವುದು ರೂಢಿಸಿಕೊಂಡಿದ್ದಾರೆ. ಇದು  ಹತ್ತು ವರ್ಷಗಳಿಂದ ನಿರಂತರ ನಡೆದು ಬಂದಿದೆ.  ಈ ವರ್ಷ ಇವರ ೩೫  ಸೃಜನಾತ್ಮಕ  ಕಲಾಕೃತಿಗಳು ವೀಕ್ಷಕರ ಮನ ಸೆಳೆದವು.  ಇವರ ಪರಿಸರ ಕಾಳಜಿಯ ಪ್ರಕೃತಿ ಚಿತ್ರಗಳು ಆಕರ್ಷಣೀಯವಾಗಿವೆ. ಅರಸೀಕೆರೆ ಹುಳಿಯಾರ್ ಮಾರ್ಗದಲ್ಲಿ ಸಿಗುವ ಮರಗಳು ರಸ್ತೆಯ ಪ್ರಕೃತಿ ಚಿತ್ರವು ಜಲವರ್ಣದಲ್ಲಿ ಹ್ಯಾಂಡ್ ಮೇಡ್ ಶೀಟ್‌ನಲ್ಲಿ ಅದ್ಭುತವಾಗಿ ಮರುಸೃಷ್ಟಿಗೊಂಡಿದೆ.  ಬರ್ಡ್ ಸೀರಿಸ್‌ನ ೧೫ ಪಕ್ಷಿ ಚಿತ್ರಗಳು ತೈಲವರ್ಣದಲ್ಲಿ ರೂಪು ತೆಳೆದು ಹಾರಾಡಿವೆ. ಐದು ವರ್ಷಗಳ ಹಿಂದೆ ಸಕಲೇಶಪುರ ಪರಿಸರದಲ್ಲಿ ಪೋಟೋಗ್ರಫಿ ಮಾಡಿದ್ದ ರಮ್ಯ ದೃಶ್ಯಾವಳಿಗಳು, ೧೫ವರ್ಷಗಳ ಹಿಂದೆ ಪ್ರವಾಸ ಮಾಡಿದ್ದ ಎರ್ನಾಕುಲಂನ ಪ್ರಕೃತಿ ದೃಶ್ಯಗಳು ಜಲವರ್ಣದಲ್ಲಿ ಹ್ಯಾಂಡ್ ಮೇಡ್ ಶೀಟ್ ನಲ್ಲಿ ಮರುಸೃಷ್ಟಿಯಾಗಿ  ಜೀವಂತಿಕೆ ತಾಳಿವೆ. ಬಹುಶ: ಈಗ ಆ ಸೀನ್ಸ್ ಕಣ್ಮರೆಯಾಗಿರಬಹುದು. ಆದರೆ ವಸಂತಕುಮಾರ್ ಅವರ ಕಣ್ಣುಗಳಿಂದ ಮರೆಯಾಗಿಲ್ಲ.   ತಮ್ಮ  ಪೋಟೋಗಪ್ರಿಯಲ್ಲಿ ಸೆರೆ ಹಿಡಿದು ಈಗ ಸೃಷ್ಟಿಸಿರುವುದು ವಿಶೇಷವಾಗಿದೆ. ನಾವು ಕತೆಗಾರರು  ಬಾಲ್ಯದ ಘಟನೆಗಳನ್ನು, ಪ್ರವಾಸಿ ಅನುಭವಗಳನ್ನು ನೆನಪಿಸಿಕೊಂಡು ಬರಹದಲ್ಲಿ ಬರೆದಂತೆ ವಸಂತಕುಮಾರ್ ಚಿತ್ರ ಜೀವಂತಿಕೆ ನೀಡಿದ್ದಾರೆ. ಬಾಗೇಶಪುರದ ಲೋಕೇಶನ್, ಹಾರುತ್ತಿರುವ ಗಿಡುಗ, ನೆಗೆಯುತ್ತಿರುವ ಕುದುರೆ ಎಲ್ಲವೂ ಕ್ರಿಯಾಶೀಲತೆ ಸಾಕ್ಷೀಕರಿಸಿವೆ. ದೇಶದ ಮಾಜಿ ಪ್ರಧಾನಿಗಳ ಬಾವಚಿತ್ರವು ಚಾರ್ಕೋಲ್ ಪೆನ್ಸಿಲ್ ವರ್ಕ್ ನಲ್ಲಿ ಅವರಿಗೆ ಸಲ್ಲಿಸದ ಗೌರವವಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಚಿತ್ರಗಳನ್ನು ವೀಕ್ಷಿಸಿ ಭೇಷ್ ಎಂದಿರುವುದು ವಸಂತಕುಮಾರ್ ಅವರಿಗೆ ಖುಷಿ ನೀಡಿದೆ.   ಕಲಾವಿದರಿಗೆ ಇಂತಹ ಮೆಚ್ಚುಗೆಯ  ಮಾತೇ  ಸ್ಫೂರ್ತಿ ತಾನೇ..!   -ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧,

“ಜಲವರ್ಣದಲ್ಲಿ ಸೃಷ್ಟಿಗೊಂಡ ವಸಂತಕುಮಾರ್ ಅವರ ಪ್ರಕೃತಿ ಚಿತ್ರಣಗಳು” ಗೊರೂರು ಅನಂತರಾಜು Read Post »

ನಿಮ್ಮೊಂದಿಗೆ

ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ “ದರ್ವೇಶಿ ಪದ್ಯ” ಕವನ ಸಂಕಲನ ಆಯ್ಕೆ

ಪುಸ್ತಕ ಸಂಗಾತಿ ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ ದರ್ವೇಶಿ ಪದ್ಯ ಆಯ್ಕೆ ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ ದರ್ವೇಶಿ ಪದ್ಯ ಆಯ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರುರವರು ಸನ್ 2025ನೇ ಸಾಲಿನ ಪುಸ್ತಕ ಸೊಗಸು ಮುದ್ರಣ ಸೊಗಸು ಯೋಜನೆ ಅಡಿಯಲ್ಲಿ ಪುಸ್ತಕ ಗಳನ್ನು ಆಯ್ಕೆ ಮಾಡಲಾಗಿದ್ದು. ಹಿರಿಯ ಕವಿ, ಪ್ರಕಾಶಕ ಎ.ಎಸ್. ಮಕಾನದಾರ ಅವರ ದರ್ವೇಶಿ ಪದ್ಯ ಕವನ ಸಂಕಲನದ ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ 10 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.               ನಿರಂತರ ಪ್ರಕಾಶನದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೃತಿ ಗಳನ್ನು ನೀಡಿದ ಮಕಾನದಾರ ಅವರ ಅಕ್ಕಡಿ ಸಾಲು ಮತ್ತು ಪ್ಯಾರಿ ಪದ್ಯ ಸಂಕಲನಗಳ ಕವಿತೆಗಳು  ಆರು ಭಾಷೆಗಳಿಗೆ ತರ್ಜುಮೆಗೊಂಡಿದ್ದು. ಕುವೆಂಪು ವಿಶ್ವ ವಿದ್ಯಾಲಯ, ವಿಜಯ ನಗರದ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯಗಳ ವಿವಿಧ ಪದವಿಗಳಿಗೆ ಮತ್ತು ಮಹಾರಾಷ್ಟ್ರ ರಾಜ್ಯದ ಶಿವಾಜಿ ವಿಶ್ವ ವಿದ್ಯಾಲಯ ಹಾಗೂ ಪುಣ್ಯ ಶ್ಲೋಕ ಅಹಲ್ಯಬಾಯಿ ಹೋಳ್ಕರ್ ವಿಶ್ವ ವಿದ್ಯಾಲಯಗಳಿಗೆ ಗಜಲ್ ಪಠ್ಯ ಪುಸ್ತಕ ದಲ್ಲಿ ಸೇರ್ಪಡೆಗೊಂಡಿವೆ.           ಬೀದರ್ ಜಿಲ್ಲೆ ಬೇಲೂರ್ ಉರಿಲಿಂಗ ಪೆದ್ದಿ ಸಂಸ್ಕೃತಿ ಕ ವೇದಿಕೆ ಯ ರಾಜ್ಯಮಟ್ಟದ ಅತ್ಯುತ್ತಮ ಪ್ರಕಾಶನ ಪುರಸ್ಕಾರ ನಿರಂತರ ಪ್ರಕಾಶನಕ್ಕೆ ಲಭಿಸಿದ್ದನ್ನಿಲ್ಲಿ ಸ್ಮರಿಸ ಬಹುದು ದರ್ವೇಶಿ ಪದ್ಯ ಒಡಲ ಸಂಕಟದ ಆಯ್ದ ಪದಗಳ ಕಟ್ಟು ಸಂಕಲನದ ಮುಖಪುಟ ಚಿತ್ರ ಕಲಾವಿದ ಈಶ್ವರ. ಬಡಿಗೇರ್ ಅವರು ರಚಿಸಿದ್ದು ನಿರಂತರ ಪ್ರಕಾಶನದಿಂದ ಪ್ರಕಟಣೆಯಾಗಿದೆ. ಸಾಹಿತಿ ಎ ಎಸ್. ಮಕಾನದಾರ ಮತ್ತು ಚಿತ್ರ ಕಲಾವಿದ ಈಶ್ವರ್ ಬಡಿಗೇರ್ ಅವರಿಗೆ ಗದಗ ಜಿಲ್ಲೆಯ ಸಾರಸ್ವತ ಲೋಕದ ಗೆಳೆಯರ ಬಳಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

ಪುಸ್ತಕ ಸೊಗಸು ಬಹುಮಾನಕ್ಕೆ ಕವಿ, ಮಕಾನದಾರ ಅವರ “ದರ್ವೇಶಿ ಪದ್ಯ” ಕವನ ಸಂಕಲನ ಆಯ್ಕೆ Read Post »

ನಿಮ್ಮೊಂದಿಗೆ

ಸವಿತಾ ಇನಾಮದಾರ್ “ಯೋಗ”

ಕಾವ್ಯ ಸಂಗಾತಿ ಸವಿತಾ ಇನಾಮದಾರ್ “ಯೋಗ” 12ನೆಯ ಅಂತರರಾಷ್ಟ್ರೀಯ ಯೋಗ ದಿನಾಚರಣೆ- 2026 ಯೋಗಮಯ ಜೀವನಆನಂದಮಯ ತನುಮನ…ಆರೋಗ್ಯಮಯ ತನುಮನ … ಸೂರ್ಯ ನಮಸ್ಕಾರದಿ ದಿನದಾರಂಭದೇಹದಲ್ಲಿ ಚೈತನ್ಯಾರಂಭ  ಸೂರ್ಯ ಕಿರಣದಂತೆ ಶಕ್ತಿ ಹರಿಯುವುದುಎಲ್ಲಾ ಅಂಗಗಳು ಚುರುಕಾಗುವುದು. ಜೀರ್ಣಕ್ರಿಯೆ ಸುಲಭವಾಗುವುದುಬೊಜ್ಜು ಕರಗಿ ದೇಹ ಹಗುರವಾಗುವುದುರೋಗನಿರೋಧಕ ಶಕ್ತಿ ಹೆಚ್ಚುವುದುತ್ವಚೆಯೂ ಫಳಫಳನೆ ಹೊಳೆಯುವುದು… ಬಾಲ್ಯದ ಸ್ಮರಣೆ ಬಾಲಾಸನದಿ,ಸ್ಥಿರತೆ ಬೆಳೆಯುವುದು ವೃಕ್ಷಾಸನದಿ,ವಿಶ್ರಾಂತಿ ಸಿಗುವುದು ಶವಾಸನದಿ,  ಶಾಂತಿ ನೆಲೆಸುವುದು ಧ್ಯಾನಾಸನದಿ.. ನಿತ್ಯ ಯೋಗಾಭ್ಯಾಸದಿಂದಲಿ…ಶಕ್ತಿ ಹರಿಯುವುದು ಉಸಿರಿನಲ್ಲಿ…ಚೈತನ್ಯ ತುಂಬುವುದು ದೇಹದಲ್ಲಿ ..ಶಾಂತಿ ನೆಲೆಸುವುದು ಮನದಲ್ಲಿ  ..ಯೋಗಮಯ ಜೀವನ…ಆರೋಗ್ಯಮಯ ತನುಮನ.. ಸವಿತಾ ಇನಾಮದಾರ್ 

ಸವಿತಾ ಇನಾಮದಾರ್ “ಯೋಗ” Read Post »

ನಿಮ್ಮೊಂದಿಗೆ

“ಇಂದಿರಾ ಲಂಕೇಶ್ ನಿಧನ”

ವ್ಯಕ್ತಿ ಸಂಗಾತಿ ಇಂದಿರಾ ಲಂಕೇಶ್ ನಿಧನ “ಹುಳಿ ಮಾವು ಮತ್ತು ನಾನು” ಕೃತಿಯ  ಲೇಖಕಿ ಮತ್ತು ಸಾಹಿತಿ ,ಪತ್ರಕರ್ತ  ಪಿ. ಲಂಕೇಶ್ ಅವರ ಧರ್ಮಪತ್ನಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ಇಂದು  ನಿಧನರಾಗಿದ್ದಾರೆ.  ‘ಲಂಕೇಶ್ ಪತ್ರಿಕೆ’ಯ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದ ಅವರು, ‘ಹುಳಿಮಾವು ಮತ್ತು ನಾನು’ ಕೃತಿಯ ಮೂಲಕವೂ ಗುರುತಿಸಿಕೊಂಡಿದ್ದರು. ಕನ್ನಡ ಸಾರಸ್ವತ ಲೋಕದ ಮಹತ್ವದ ಲೇಖಕ ,  ಹಿರಿಯ ಪತ್ರಕರ್ತ ಹಾಗೂ ಖ್ಯಾತ ಬರಹಗಾರ ಪಿ. ಲಂಕೇಶ್ ಅವರ ಧರ್ಮಪತ್ನಿ, ಲೇಖಕಿ ಶ್ರೀಮತಿ ಇಂದಿರಾ ಲಂಕೇಶ್ (84) ಅವರು ಸೋಮವಾರ (ಜೂನ್ 15, 2026) ಮುಂಜಾನೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.  ಬೆಂಗಳೂರಿನ ರಾಜಾಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದು, ಇವರ ನಿಧನದಿಂದ ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಒಂದು ಮಹತ್ವದ ಪರಂಪರೆಯ ಕೊಂಡಿ ಕಳಚಿದಂತಾಗಿದೆ.  ಗೌರಿ ಲಂಕೇಶ್ ( ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ) ,ಕವಿತಾ ಲಂಕೇಶ್ (ಚಿತ್ರನಿರ್ದೇಶಕಿ), ಇಂದ್ರಜಿತ್ ಲಂಕೇಶ್ (ಚಿತ್ರನಿರ್ದೇಶಕ ಹಾಗೂ ಪತ್ರಕರ್ತ) ಸೇರಿದಂತೆ ಅಪಾರ ಬಂಧು-ಮಿತ್ರರು ಹಾಗೂ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ತಾಯಿ ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ, ಸಾಹಿತ್ಯ ಹಾಗೂ ಚಲನಚಿತ್ರ ರಂಗದ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ಲಂಕೇಶ್ ಪತ್ರಿಕೆಯ ಯಶಸ್ಸಿನ ಹಿಂದಿನ ಮಹಾಶಕ್ತಿಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಲಂಕೇಶ್ ಪತ್ರಿಕೆ’ಯ ಆರಂಭದ ದಿನಗಳಿಂದಲೂ ಇಂದಿರಾ ಲಂಕೇಶ್ ಅವರು ಪತಿ ಪಿ. ಲಂಕೇಶ್ ಅವರಿಗೆ ಬೆನ್ನೆಲುಬಾಗಿ ನಿಂತಿದ್ದರು. ಕೇವಲ ವೈವಾಹಿಕ ಜೀವನದಲ್ಲಷ್ಟೇ ಅಲ್ಲದೆ, ಪತ್ರಿಕೆಯ ಆಡಳಿತ, ಮುನ್ನಡೆ ಹಾಗೂ ಪ್ರಕಾಶನದ ಜವಾಬ್ದಾರಿಯನ್ನು ತೆರೆಮರೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ಇವರದ್ದಾಗಿದೆ. 2000 ಇಸವಿಯಲ್ಲಿ ಪಿ. ಲಂಕೇಶ್ ಅವರ ನಿಧನದ ನಂತರ ಮತ್ತು ತದನಂತರದ ದಿನಗಳಲ್ಲಿ ಹಿರಿಯ ಪುತ್ರಿ, ದಿ. ಗೌರಿ ಲಂಕೇಶ್ ಅವರ ಅಗಲಿಕೆಯ ನಂತರವೂ ಧೃತಿಗೆಡದ ಇಂದಿರಾ ಅವರು, ಕುಟುಂಬ ನಿರ್ವಹಣೆ ಜೊತೆಗೆ,  ಸಾಹಿತ್ಯ  ಮತ್ತು ಪತ್ರಿಕೋದ್ಯಮದ ಪರಂಪರೆಯನ್ನು ಮುನ್ನಡೆಸಿದ್ದರು. ನಾಗರಾಜ್‌ ಹರಪನಹಳ್ಳಿ

“ಇಂದಿರಾ ಲಂಕೇಶ್ ನಿಧನ” Read Post »

ನಿಮ್ಮೊಂದಿಗೆ

ಅನಿತಾ ಕೃಷ್ಣಮೂರ್ತಿ ಕವಿತೆ “ನನ್ನ ಅಮ್ಮ”

ಕಾವ್ಯ ಸಂಗಾತಿ ಅನಿತಾ ಕೃಷ್ಣಮೂರ್ತಿ “ನನ್ನ ಅಮ್ಮ” ನನ್ನೆಲ್ಲಾ ಕನಸುಗಳಿಗೆ ರೆಕ್ಕೆ ಕಟ್ಟಿ,ರಾಶಿ ರಾಶಿ ಪ್ರಯತ್ನಗಳು ಫಲಿಸಲೆಂದು ದೇವರಲ್ಲಿ ಹರಕೆ ಹೊತ್ತು,ಉಪವಾಸ–ವ್ರತ ಮಾಡಿ ನನ್ನ ಬದುಕನ್ನು ಸಾರ್ಥಕತೆಯ ದಾರಿಯತ್ತ ದೂಡಿದಳು…ಅವಳು ನನ್ನ ಅಮ್ಮ  ಅವಳ ಪ್ರಾರ್ಥನೆಗಳಲ್ಲಿ ನನ್ನ ಭವಿಷ್ಯ ಇತ್ತು,ಅವಳ ತ್ಯಾಗಗಳಲ್ಲಿ ನನ್ನ ಯಶಸ್ಸು ಇತ್ತು,ಅವಳ ನಂಬಿಕೆಯಲ್ಲಿ ನನ್ನ ಜೀವನದ ಬೆಳಕು ಇತ್ತು… ಸೋತಾಗ ಸೋಲಿಗೆ ಹೆದರಿ,ಖಿನ್ನತೆಯತ್ತ ಮುಖ ಮಾಡಿ ನರಳಲುಬಾನೆತ್ತರ ಭರವಸೆ ತುಂಬಿ,ತೂಗಾಡುವ ಮಂಚದಲ್ಲಿರಿಸಿ,ತೊಡೆಯ ಮೇಲೆ ಮಲಗಿಸಿ,ಮಮತೆಯ ಸ್ಪರ್ಶದಿಂದ ಹುರಿದುಂಬಿಸಿದಳು…ಅಮ್ಮ.  ಹೇಗೆ ತೀರಿಸಲಿ ಋಣವ,ಮತ್ತೊಮ್ಮೆ ಮಗುವಾಗಿ ಜನ್ಮವೆತ್ತಲೇ…ಅವಳಿಗೇ ತಾಯಿಯಾಗಿ ಮಡಿಲಾಗಲೇ,ಅಕ್ಕನಾಗಿ ಅಪ್ಪುಗೆಯ ಕೊಡಲೇ,ತಂಗಿಯಾಗಿ ತುಂಟಾಟವಾಡಲೇ,ಯಾವ ಬಂಧವಾಗಿ ಬಂದರೂ ಸರಿ,ಅವಳ ಪ್ರೀತಿಯ ನೆರಳಲ್ಲಿ ಮತ್ತೆ ಬದುಕಲೇ…  ಸರಿ ಸಾಟಿ ಯಾರಿಹರು ಆ ಕರುಣೆಗೆ,ದೇವರಿಗಿಂತ ಹೆಚ್ಚಾದ ಜೀವಕೆ…ನೋವನ್ನೆಲ್ಲ ನಗುವಿನಲ್ಲಿ ಮರೆಮಾಚಿ,ತನ್ನ ಕನಸುಗಳನ್ನೇ ತ್ಯಾಗಮಾಡಿ,ನಮ್ಮ ಬದುಕಿಗೆ ಬೆಳಕಾದ ಮಹಾತಾಯಿಗೆ…ಈ ಜನ್ಮ ಸಾಲದು ಕೃತಜ್ಞತೆ ಸಲ್ಲಿಸಲು…  ಅನಿತಾ ಕೃಷ್ಣಮೂರ್ತಿ      

ಅನಿತಾ ಕೃಷ್ಣಮೂರ್ತಿ ಕವಿತೆ “ನನ್ನ ಅಮ್ಮ” Read Post »

ನಿಮ್ಮೊಂದಿಗೆ

ನಾಗರಾಜ್‌ ಹರಪನಹಳ್ಳಿ ಕವಿತೆ “ಭೂಮಿಗೆ ಆಕಳಿಕೆ ಸಮಯ”

ಕಾವ್ಯ ಸಂಗಾತಿ ನಾಗರಾಜ್‌ ಹರಪನಹಳ್ಳಿ “ಭೂಮಿಗೆ ಆಕಳಿಕೆ ಸಮಯ” ಸೀರೆ ಸೆರಗ ತಾಗಿದ ಗಾಳಿಪ್ರೇಮದ ನವಿರು ಹೊತ್ತುತಂತುಆಡಿದ  ಆಡದೇ ಉಳಿದ ಮಾತು ಮೌನಗಳ ಸಂಕಲನ ಮೋಡಗಳಲ್ಲಿಚಿತ್ರ ಬಿಡಿಸಿತುನೀನಿಡುವ ಪ್ರತಿ ಹೆಜ್ಜೆಯಲಿಕನಸು ಇಣುಕುತ್ತಿದೆ ಗೆಳತಿಮನಸುಗಳ ಅಗಣಿತ ತರಂಗಗಳುಎದೆತಾಕುತ್ತಲೇ ಇರುವ ಸೋಜಿಗಕ್ಕೆ ಏನೆನ್ನಲಿ ?*** ನಿನ್ನ ದನಿ ಕೇಳದ ಭೂಮಿಗೆಆಕಳಿಕೆ ಸಮಯಅದಕ್ಕೆ ಮಗ್ಗಲು ಬದಲಿಸುತ್ತಿದೆಮುಗಿಲಿಗೆ ದಿಗಿಲು ಬಡಿದಿದೆಎಲ್ಲಿ ಹೋದೆ ?ಗೆಜ್ಜೆ ಸದ್ದಿಗೆ ಅರಳುತ್ತಿದ್ದ ಹೂ ಸಹ ಮೌನವಾಗಿದೆ              ***                               ನಾನು ಸುಳಿದಾಡುವೆ  ಒಬ್ಬಳೇ ಇರುವೆ ಎಂದು ಭಾವಿಸಬೇಡಸುಳಿಯುವ ಗಾಳಿಯಲ್ಲಿಎರಡು ನಿಟ್ಟುಸಿರುಗಳಿವೆ ಅವು ಪ್ರೇಮದ ಪಲ್ಲವಿಗಳಾಗಿಬದಲಾಗಿ ಬಿಡಲಿಕಣ್ಣಲ್ಲಿ ನಕ್ಷತ್ರಗಳು ಹಾಡಲಿಕಾಲ್ಗೆಜ್ಜೆಗಳಲ್ಲಿ  ಏಳು ಸುತ್ತಿನ ಮಲ್ಲಿಗೆ ಅರಳಲಿ****ರುತುಗಳಿಗೆ ತಕ್ಕಂತೆಬಣ್ಣ ರೂಪ ಪಡೆಯುವ ಭೂಮಿಮನಸ್ಸಿನ ಏರಿಳಿತಕ್ಕೆ ತಕ್ಕಂತೆಬಣ್ಣಗಳ ಸೀರೆ ತೊಡುವ ಆಕೆಎಲ್ಲವೂ ಪ್ರಕೃತಿ ಕಲಿಸಿದ ಪಾಠಕ್ಕೆನಿಬ್ಬೆರಗಾಗುವುದು ಮಾತ್ರ ………**** ನೀನು ನಡೆದರೆಭೂಮಿ ಪಿಸುಗುಡುತ್ತದೆಮಣ್ಣ ಕಣ ಕಣವೂಜೀವಸೆಲೆಯಿಂದ ಪುಟಿದೇಳುತ್ತದೆ  ದಾರಿ ಪಕ್ಕದ ಗಿಡ ಮರಗಳುಕಣ್ಣು ಮಿಟುಕಿಸುತ್ತವೆಮುಂಗುರುಳ ಲಾಸ್ಯಕ್ಕೆಗಾಳಿ ರೋಮಾಂಚನಗೊಳ್ಳುತ್ತದೆ ನಾಗರಾಜ್ ಹರಪನಹಳ್ಳಿ

ನಾಗರಾಜ್‌ ಹರಪನಹಳ್ಳಿ ಕವಿತೆ “ಭೂಮಿಗೆ ಆಕಳಿಕೆ ಸಮಯ” Read Post »

You cannot copy content of this page

Scroll to Top